ಶಿಕಾರಿ

ಶಿಕಾರಿ
ರಂಗಾಯಣ, ಮೈಸೂರು ಅಭಿನಯಿಸುವ ಯಶವಂತ ಚಿತ್ತಾಲರ ಕಾದಂಬರಿ ‘ಶಿಕಾರಿ’.. ವಿನ್ಯಾಸ : ಹೆಚ್.ಕೆ.ದ್ವಾರಕಾನಾಥ್ ಸಂಗೀತ : ಪವನ್.ಕೆ.ಜೆ. ರಂಗರೂಪ ಮತ್ತು ನಿರ್ದೇಶನ : ಪ್ರಕಾಶ್ ಬೆಳವಾಡಿ ವಾರಾಂತ್ಯದಲ್ಲಿ ದಿನಾಂಕ 19.11.2017 ರಿಂದ.. ಪ್ರತಿ ಭಾನುವಾರ.. ಸ್ಥಳ : ಭೂಮಿಗೀತ.. ಸಮಯ : ಸಂಜೆ 6.30 ಕ್ಕೆ.. ಮುಂಗಡ ಟಿಕೆಟ್‌ಗಳಿಗಾಗಿ ರಂಗಾಯಣ ಕಚೇರಿಯನ್ನು ಸಂಪರ್ಕಿಸಿ.. ಫೋನ್ ನಂಬರ್ – 08212512639 ಹೆಚ್ಚಿನ...

Read More

ಕೃಷ್ಣೇಗೌಡನ ಆನೆ

ಕೃಷ್ಣೇಗೌಡನ ಆನೆ
 ಜುಲೈ 16ನೇ  2017 – ಸಂಜೆ 6.30ಕ್ಕೆ | ಸ್ಥಳ : ಭೂಮಿಗೀತ | ನಿರ್ದೇಶನ : ಆರ್‍. ನಾಗೇಶ್| ರಂಗ ವಿನ್ಯಾಸ : ಹೆಚ್.ಕೆ. ದ್ವಾರಕಾನಾಥ್ | ವಸ್ತ್ರವಿನ್ಯಾಸ : ಮಹದೇವ್ | ರಂಗ ನಿರ್ವಹಣೆ : ಪ್ರಮಿಳಾ ಬೆಂಗ್ರೆ, ಶಶಿಕಲಾ ಬಿ.ಎನ್   ಟಿಕೆಟ್‌ಗಳಿಗಾಗಿ www.bloomtickets.com ಹೆಚ್ಚಿನ...

Read More

ಕೈಲಾಸಂ ಕಲ್ಪಿಸಿದ, ಜಿ.ಪಿ.ರಾಜರತ್ನಂ ರಚಿಸಿದ, “ಕೈಲಾಸಂ ಕೀಚಕ”

ಕೈಲಾಸಂ ಕಲ್ಪಿಸಿದ,  ಜಿ.ಪಿ.ರಾಜರತ್ನಂ ರಚಿಸಿದ, “ಕೈಲಾಸಂ ಕೀಚಕ”
ದಿನಾಂಕ : 31-07-2016 | ಸಮಯ ಸಂಜೆ : 6:30 ಗಂಟೆಗೆ | ಸ್ಥಳ : ಭೂಮಿಗೀತ | ಕಲ್ಪನೆ  :  ಕೈಲಾಸಂ  |  ರಚನೆ : ಜಿ.ಪಿ.ರಾಜರತ್ನಂ | ವಸ್ತ್ರವಿನ್ಯಾಸ – ಎನ್.ಮಂಗಳಾ | ಸಂಗೀತ ನಿರ್ದೇಶನ: ಗಜಾನನ.ಟಿ.ನಾಯ್ಕ | ರಂಗರೂಪ ಮತ್ತು ನಿರ್ದೇಶನ: ಎಸ್.ರಾಮನಾಥ, ರಂಗಾಯಣ |  ಬೆಳಕು-ವಿನಯ್ ಚಂದ್ರ   |  ಟಿಕೆಟ್‌ ದರ 50 ರೂಗಳು   ಕೈಲಾಸಂ ಕಲ್ಪಿಸಿರುವ ಕೀಚಕ ಮಹಾಭಾರತದ ಕಾಮಿ ಕೀಚಕನಲ್ಲ. ಇವನು ಮದುವೆಯಾಗಲು ಮನಸ್ಸಿಲ್ಲದವನು. ಅದಕ್ಕೆ ಕಾರಣ ವಿರಾಟಪರ್ವದ ಕಾಲಕ್ಕೆ ಇಪ್ಪತ್ತೈದು ವರುಷಗಳ ಹಿಂದೆ ದ್ರೌಪದಿಯ ಸ್ವಯಂವರ ನಡೆಯುತ್ತದೆ. ಆಗ ಕೀಚಕನು ಅಲ್ಲಿಗೆ ಹೋಗಿರುತ್ತಾನೆ. ದ್ರೌಪದಿಯನ್ನು ಕಂಡು ಅನುರಕ್ತನಾಗುತ್ತಾನೆ. ದ್ರೌಪದಿಯು ತನ್ನೆಡೆಗೆ ಒಲಿದಳೆಂದು ಕೇಳಿ ತಿಳಿಯುತ್ತಾನೆ. ಆದರೆ ಧನುರ್ವಿದ್ಯೆಯಲ್ಲಿ ಅಪ್ರತಿಮನಾದವನಿಗೆ ಮಾತ್ರ ಆ ಹೆಣ್ಣು ಎಂಬ ಪಣವಿದ್ದ ಕಾರಣ, ಗಧಾಯುದ್ಧದಲ್ಲಿ ನಿಪುಣನಾದ ಕೀಚಕನು ಭಗ್ನಮನೋರಥನಾಗಿ ಹಿಂದಿರುಗುತ್ತಾನೆ. ಅಂದಿನಿಂದ ಆ ಪ್ರಣಯಭಂಗದ ಯಾತನೆಯನ್ನು ಮರೆಯುವುದಕ್ಕಾಗಿ ಪ್ರತಿವರುಷವೂ ದಿಗ್ವಿಜಯ ಕೈಗೊಳ್ಳುತ್ತಿರುತ್ತಾನೆ. ಹೀಗೆ ಹಿಂದೆ ದ್ರೌಪದಿಗೆ ಒಲಿದ ಮನಸ್ಸು ಮತ್ಯಾವ ಹೆಣ್ಣಿನ ಕಡೆಗೂ ತಿರುಗದೆ ಹಾಗೆ ನಿಲ್ಲುತ್ತದೆ. ಅವಿಚಲವಾದ ಪ್ರಣಯಕ್ಕೆ ತನ್ನನ್ನು ಅರ್ಪಿಸಿಕೊಂಡ ಈ ಕೀಚಕ ಅಗ್ನಾತವೇಷದ ಸೈರಂಧ್ರಿಯನ್ನು ಕಂಡು ದ್ರೌಪದಿಯ ನೆನಪಾಗಿ ರೋಮಾಂಚನಗೊಳ್ಳುತ್ತಾನೆ. ಅನಾಥೆಯಾದ ಸೈರಂಧ್ರಿಯ ದುಸ್ಥಿತಿಗೆ ಮರುಕಗೊಂಡು ಅವಳಿಗೊಂದು ನೆಲೆ ಕಲ್ಪಿಸಬೇಕೆಂದು ಬಯಸುವ ಕೀಚಕ ತನ್ನ ತಂಗಿ ಸುದೇಷ್ಣೆಯ ಬಲವಂತಕ್ಕೆ ಮತ್ತು ತನ್ನಲ್ಲಿ ಸೈರಂಧ್ರಿ ಕೆರಳಿಸಿದ ದ್ರೌಪದಿಯ ನೆನಪಿಗೂ ಕಟ್ಟುಬಿದ್ದು ಒಪ್ಪಿ ಮಹಾಭಾರತದ ಕೀಚಕನಂತೆಯೇ ಭೀಮನ ಕೈಯಲ್ಲಿ ಹತನಾಗುತ್ತಾನೆ. ಮಹಾಭಾರತದ ಆ ಕೀಚಕ ದ್ರೌಪದಿಯ ಮೇಲಿನ ಕಾಮದಿಂದ ಹತನಾದರೆ ಕೈಲಾಸಂ ಕೀಚಕ ದ್ರೌಪದಿಯ ಮೇಲಿನ ಪ್ರೇಮದಿಂದ ಹತನಾಗುತ್ತಾನೆ. ಕೈಲಾಸಂ ಕಂಡ ವಿರಾಟನಗರದಲ್ಲಿ ಪರಪುರುಷ, ಪರಸ್ತ್ರೀ ಪರಸ್ಪರರಲ್ಲಿ ತಪ್ಪಿ ನಡೆದರೆ ತಲೆದಂಡ. ಇಂಥಹ ಶಾಸನವನ್ನು ಏರ್ಪಡಿಸಿದ ಪರದಾರ ಸಹೋದರನಾದ ಕೀಚಕನ ಕಣ್ಣಳತೆಯಲ್ಲೇ ಸೈರಂಧ್ರಿಯು ವಲಲನನ್ನು ಸಂಧಿಸಿದಾಗ ಕೀಚಕ ಅವರನ್ನು ಪರಸ್ತ್ರೀ, ಪರಪುರುಷ ಎಂದು ಭಾವಿಸಿದುದರಿಂದ ಇಬ್ಬರ ನಡುವೆಯೂ ಮಲ್ಲಯುದ್ಧ ವಾಗುತ್ತದೆ. ದಿಗ್ವಿಜಯದಿಂದ ಹಿಂದಿರುಗಿ ಬಂದ ಹೊತ್ತಿನಿಂದ ತಾನು ಭೀಮನ ಮೃತ್ಯುಬಂಧದಲ್ಲಿ ದೇಹವನ್ನು ಒಪ್ಪಿಸುವವರೆಗೂ ಹೆಜ್ಜೆ ಹೆಜ್ಜೆಗೂ ಕೀಚಕ ತಾನು ಪಡೆಯದೇ ಹೋದ ದ್ರೌಪದಿಯನ್ನು ನೆನಪಿಸಿಕೊಂಡು ವಿರಹದಿಂದ ಪರಿತಪಿಸುತ್ತಾನೆ. ಒಂದು ಕಡೆ ಸಹಿಸಲಾರದ ತನ್ನ ಪ್ರಣಯದ ನೆನಪು ಇನ್ನೊಂದೆಡೆ ತನಗೆ ನೆಮ್ಮದಿಕೊಡಲು ಬಾರದಿರುವ ಸಾವು – ಈ ಎರಡರ ನಡುವೆ ಚಿತ್ತವಿಫಲನಾದುದರಿಂದಲೇ. ಆಗ್ನಾತವೇಷದ ಪಾಂಡವರನ್ನು ಕಂಡು ಅವನಿಗೆ ಪಾಂಡವರ ನೆನಪಾದರೂ ಅವರನ್ನು ಪಾಂಡವರೆಂದು ಗುರುತಿಸಲಾಗದೆ ಅದನ್ನು ತನ್ನ ಚಿತ್ತ ವಿಭ್ರಮಣೆ ಎಂದುಕೊಳ್ಳುತ್ತಾನೆ. ಇಂಥಹ ಸ್ಥಿತಿಯಲ್ಲಿ ಅವನ ನೆರವಿಗೆ ಬರಬಹುದಾದದ್ದು ಒಂದೇ – ಸಾವು. ಅದು ಬಂದು ಕೀಚಕನ ಬದುಕಿಗೆ ಮುಕ್ತಾಯ ಹಾಡುತ್ತದೆ. ನಿರ್ದೇಶಕರ ಬಗ್ಗೆ; ಎಸ್.ರಾಮನಾಥ್ ಎಸ್.ರಾಮನಾಥ್ ಹುಟ್ಟಿದ್ದು ಕೊಳ್ಳೇಗಾಲದಲ್ಲಿಯಾದರೂ ತಮ್ಮ ವಿದ್ಯಾಭ್ಯಾಸ ಮುಗಿಸಿದ್ದು ಮೈಸೂರಿನಲ್ಲಿ. ರಸಾಯನಶಾಸ್ತ್ರದಲ್ಲಿ ಎಂ.ಎಸ್ಸಿ, ಮಾಡಿ ಸೇರಿದ್ದು ರಂಗಾಯಣವನ್ನು.ಅಲ್ಲಿ ಬಿ.ವಿ.ಕಾರಂತರ ಗರಡಿಯಲ್ಲಿ ನಾಟಕ ಕಲಿಕೆಯ ಹಲವು ಸಾಧ್ಯತೆಗಳ...

Read More

ಧರ್ಮಪುರಿಯ ಶ್ವೇತವೃತ್ತ

ಧರ್ಮಪುರಿಯ ಶ್ವೇತವೃತ್ತ
 ದಿನಾಂಕ : 17-07-2016 | ಸಮಯ ಸಂಜೆ :  6:30 ಗಂಟೆಗೆ | ಸ್ಥಳ : ಭೂಮಿಗೀತ | ರಚನೆ : ಬಟೋಲ್ಟ್ ಬ್ರೆಕ್ಟ್ |  ರೂಪಾಂತರ: ಗೋಪಾಲ ವಾಜಪೇಯಿ   |  ಸಂಗೀತ : ದೇವಾನಂದ್ ವರಪ್ರಸಾದ್ | ವಿನ್ಯಾಸ ಮತ್ತು ನಿರ್ದೇಶನ : ಮೈಮ್ ರಮೇಶ್ | ತಂಡ: ಬಿಪಿಐಇಆರ್ | ಟಿಕೆಟ್‌ ದರ 50 ರೂಗಳು     “ಬಟೋಲ್ಟ್ ಬ್ರೆಕ್ಟ್”ನ ದಿ ಕಕೇಶಿಯನ್ ಚಾಕ್ ಸರ್ಕಲ್‌ನಿಂದ ಪ್ರೇರೇಪಿತ ನಾಟಕ ” ಧರ್ಮಪುರಿಯ ಶ್ವೇತವೃತ್ತ ” ವಿನ್ಯಾಸ ಮತ್ತು ನಿರ್ದೇಶನ : ಮೈಮ್ ರಮೇಶ್ ರಂಗ ನಿರ್ವಹಣೆ : ಉಮೇಶ್ ಮತ್ತು ಹರಿದತ್ತ ಎಂ.ಪಿ. ಬಿಪಿಐಇಆರ್, ರಂಗತಂಡ, ಮೈಸೂರು ರೂಪಾಂತರ: ಗೋಪಾಲ ವಾಜಪೇಯಿ ಸಹ ನಿರ್ದೇಶನ : ಡಾ. ಹೆಚ್.ಎಂ. ಕುಮಾರಸ್ವಾಮಿ, ಚೇತನ್ ಕುಮಾರ್ ಕೆ.ಆರ್. ಸಂಗೀತ: ದೇವಾನಂದ್ ವರಪ್ರಸಾದ್ ರಂಗವಿನ್ಯಾಸ : ನಿತಿನ್ ಕುಮಾರ್ ಕೋಡಿಯಾಲ್ ಬೈಲ್, ಶ್ರೀಧರ್ ಕಾವಾ ಬೆಳಕು ವಿನ್ಯಾಸ: ರಾಜೇಶ್ ತಲಕಾಡು ಮೇಳದವರು: ಲಾಸ್ಯ, ಸುನೀಲ್, ದೀಪಕ್ ವಸ್ತ್ರ ವಿನ್ಯಾಸ: ಡಾ|| ನಂದಾ ಕುಮಾರಸ್ವಾಮಿ ಸಹಾಯ: ಶ್ರೀಧರ್ ಹೆಚ್.ಕೆ. ಚೇತನ್ ರಾವ್ ಪ್ರಸಾದನ: ರಾಣಿ ಚೇತನ್   ಬರ್ಟೋಲ್ಟ್ ಬ್ರೆಕ್ಟ್ ಬರ್ಟೋಲ್ಟ್ ಬ್ರೆಕ್ಟ್ (೧೮೯೮-೧೯೫೬) ರಂಗಭೂಮಿಯನ್ನು ಪ್ರವೇಶಿಸಿದ್ದು ಒಬ್ಬ ನಾಟಕಕಾರನಾಗಿ. ಈತನ ಹೆಸರಾಂತ ನಾಟಕ ತ್ರೀ ಪೆನ್ನಿ ಒಪೇರಾ, ಕಕೇಶಿಯನ್ ಚಾಕ್‌ಸರ್ಕಲ್, ಮದರ್, ಎಪಿಕ್ ರಂಗಭೂಮಿಯನ್ನು ಜಗತ್ತಿಗೆ ಪರಿಚಯಿಸಿದ ಮೊದಲ ವ್ಯಕ್ತಿ ಈತ. ಜರ್ಮನಿಯಲ್ಲಿ ಹುಟ್ಟಿ ಅಲ್ಲೇ ನೆಲಸಿ ತನ್ನದೇ ಆದ ರಂಗ ತಂಡ “ಬರ್ಲಿನರ್ ಎನ್‌ಸೆಂಬಲ್”ನ್ನು ಕಟ್ಟಿ ಬೆಳೆಸಿದ. ಅಲ್ಲಿ ಈತನ ರಂಗ-ಚಿಂತನೆಗಳು ಸಾಕಾರಗೊಂಡವು. ಭಾರತದೊಂದಿಗೆ ಈತನ ನಂಟು ಕಕೇಶಿಯನ್ ಚಾಕ್ ಸರ್ಕಲ್ ಮೂಲಕ ಬೆಸೆಯಿತು. ಬ್ರೆಕ್ಟ್ ಎಡಪಂಥೀಯ ಧೋರಣೆಯವನಾಗಿದ್ದು ಹಿಟ್ಲರ್‌ನ ವಿರುದ್ಧ ರಂಗಭೂಮಿಯ ಮುಖೇನ ಕ್ರಾಂತಿಯನ್ನು ಸಾರಿದ ಧೀಮಂತ. ನಾಟಕದ ಬಗ್ಗೆ : ಬ್ರೆಕ್ಟ್‌ನ ಅತ್ಯಂತ ಗಂಭೀರವಾದ ನಾಟಕ ಕಕೇಶಿಯನ್ ಚಾಕ್ ಸರ್ಕಲ್, ಸಮಾಜದ ಮತ್ತು ಮನುಷ್ಯ ಸಂಬಂಧದ ಬಗ್ಗೆ ಅರ್ಥಗರ್ಭಿತವಾದ ನಾಟಕ ಇದು. ರಕ್ತ ಸಂಬಂಧವೇ ಅತ್ಯಂತ ಗಾಢವೆಂದು ಈ ತನಕವೂ ಭಾವಿಸಿಕೊಂಡು ಬಂದ ಮನುಷ್ಯ ಈಗ ಇವತ್ತಿನ ಹೊಸ ಸಂದರ್ಭದಲ್ಲಿ ಸಾಹಚರ್‍ಯ. ಸಂಬಂಧ ಅಥವಾ ಸಮಾಜ ಸಂಬಂಧವೇ ರಕ್ತ ಸಂಬಂಧಕ್ಕಿಂತ ಗಾಢವಾದದ್ದು ಎಂಬ ಅರಿವು ಪಡೆದುಕೊಳ್ಳಬೇಕಾಗಿದೆ. ಚೀನಿ “ಚಾಕ್ ಸರ್ಕಲ್” ನಾಟಕದ ಸತ್ಯ ಹಳೇಯುಗದ ಸತ್ಯ. ಬ್ರೆಕ್ಟ್ ಅದನ್ನು ಬದಲಿಸಿ ಹೊಸಯುಗದ ಸತ್ಯವನ್ನು ಸೂಚಿಸುತ್ತಾನೆ – ಕಕೇಶಿಯನ್ ಚಾಕ್ ಸರ್ಕಲ್‌ನಲ್ಲಿ. ಮಹತ್ವದ ಕಾರಣಕ್ಕೆ ಮಾತ್ರವಲ್ಲದೆ ಹೊಸಯುಗದ ಹರಿಕಾರನೆಂಬ ವಿಶೇಷ ಕಾರಣಕ್ಕಾಗಿ ಬ್ರೆಕ್ಟ್ ಹೊಸ ವಿಶ್ವಕ್ಕೂ, ಹೊಸ ಇಂಡಿಯಾಕ್ಕೂ ವಿಶೇಷ ಗಣ್ಯ...

Read More

‘ಓದಿರಿ’

‘ಓದಿರಿ’
ದಿನಾಂಕ 10-07-2016 | ಭೂಮಿಗೀತ ರಂಗಮಂದಿರದಲ್ಲಿ ಸಂಜೆ 6.30ಕ್ಕೆ | ಭಾಷೆ: ಕನ್ನಡ  |ರಚನೆ : ಬೊಳುವಾರು ಮಹಮದ್ ಕುಂಞಿ | ಪರಿಕಲ್ಪನೆ, ವಿನ್ಯಾಸ, ನಿರ್ದೇಶನ: ಡಾ. ಎಂ ಗಣೇಶ ಹೆಗ್ಗೋಡು | ಸಂಗೀತ : ಡಿ. ಪುರುಷೋತ್ತಮ, ಸತೀಶ ಕುಮಾರ ಬಗ್ಗವಳ್ಳಿ, ಅರುಣ ಕುಮಾರ ಎಂ., ಸುಹಾನ ಎಂ.   ನಾಟಕದ ಬಗ್ಗೆ ‘ಯಾವುದೇ ದೃಶ್ಯದಲ್ಲೂ ಪ್ರವಾದಿ ಮುಹಮ್ಮದರ ಪಾತ್ರವನ್ನು ತೋರಿಸಲಾಗುವುದಿಲ್ಲ’ಎಂಬ ನಿರೀಕ್ಷಣಾ ಜಾಮೀನಿನೊಂದಿಗೇ, ಹೆಗ್ಗೋಡಿನ ಗೆಳೆಯ ಡಾ.ಎಂ. ಗಣೇಶ್ ನನ್ನ ‘ಓದಿರಿ’ ಕಾದಂಬರಿಯನ್ನು ನಾಟಕ ರೂಪದಲ್ಲಿ ಪ್ರದರ್ಶಿಸಲು ಅನುಮತಿ  ಕೇಳಿದಾಗ ‘ಇಲ್ಲ’ವೆನ್ನಲು ಕಾರಣಗಳೇ ಉಳಿದಿರಲಿಲ್ಲ. ಅಂತಿಮ ಪ್ರವಾದಿ ಮುಹಮ್ಮದರ ಜೀವನಾಧಾರಿತ ಮೊತ್ತಮೊದಲ ಐತಿಹಾಸಿಕ ಕಾದಂಬರಿಯಂತೆಯೇ ಸೀಮೆಗಳಿದ್ದರೂ ಸಾಂಸ್ಕೃತಿಕ ಸೀಮೆಗಳಿಲ್ಲ. ಭೌಗೋಳಿಕ ಸರಹದ್ದುಗಳ ಚರ್ಚೆ ರಾಜಕಾರಣಿಗಳಿಗಿರಲಿ, ನಾವು ಸಾಂಸ್ಕೃತಿಕ ಸರಹದ್ದುಗಳನ್ನು ಚಲನಶೀಲವಾಗಿಸೋಣ. ಹಲವು ಜಗತ್ತುಗಳನ್ನು ಅರ್ಥಮಾಡಿಕೊಳ್ಳುವ ದಾರಿಯಿದು. ಓದಿರಿ’ಯ ದಾರಿಯು ಅದೇ ಆಗಿದೆ. ಕಲಾವಿದರು: ಚಿದಂಬರ ಪೂಜಾರಿ ಡಿಂಗ್ರಿ ನರೇಶ ಜಗ್ಗು ಶಿವಜಾನು ಡಿ. ಪುರುಷೋತ್ತಮ ಪ್ರದೀಪ ಕೆ.ಪಿ ಸತೀಶ ಕುಮಾರ್‍ ಬಗ್ಗವಳ್ಳಿ ಸಂತೋಷ ಟೊಣಪೆ ಅಕ್ಷತ ನಾಯ್ಕ್ ಲಕ್ಕಿಮರದ ಶಾರದ...

Read More