ವಾಚಿಕಾಭಿನಯ – ಕುಸುಮಬಾಲೆ
ರಚನೆ: ದೇವನೂರು ಮಹಾದೇವ. ಮೂಲ ನಾಟಕ ನಿರ್ದೇಶನ: ಸಿ. ಬಸವಲಿಂಗಯ್ಯ. ಸಂಗೀತ ನಿರ್ದೇಶನ: ಬಿ. ವಿ. ಕಾರಂತ. ರಂಗ ವಿನ್ಯಾಸ : ಹೆಚ್ ಕೆ. ದ್ವಾರಕಾನಾಥ್
ಮೈಸೂರು ರಂಗಾಯಣವು 26 ವರ್ಷಗಳ ಹಿಂದೆ ರಂಗರೂಪಕ್ಕಳವಡಿಸಿ, ಪ್ರದರ್ಶನ ನೀಡಿ ರಾಜ್ಯದಾದ್ಯಂತ ಮನೆಮಾತಾಗಿದ್ದ ಶ್ರೀ ದೇವನೂರು ಮಹದೇವರ ‘ಕುಸುಮಬಾಲೆ’ ಕಾದಂಬರಿಯ ರಂಗರೂಪ ರಂಗಾಯಣ ಮೈಸೂರಿನ ಮಹತ್ವದ ಮೈಲಿಗಲ್ಲು. ಇದೀಗ ಕೋವಿಡ್ ನಿಯಮಗಳಡಿ ಸಾಮಾಜಿಕ ಅಂತರ ಕಾಯ್ದುಕೊಂಡು ಸಂಪೂರ್ಣವಾಗಿ ವಾಚಿಕ ಅಭಿನಯದಲ್ಲಿ ಈ ರಂಗಕೃತಿಯನ್ನು ಚಿತ್ರೀಕರಿಸಿಕೊಂಡು 2020 ಆಗಸ್ಟ್ 26 ರಂದು ಮಧ್ಯಾಹ್ನ 2:30ಕ್ಕೆ ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ಆನಾವರಣಗೊಳಿಸಲಾಗಿದೆ.