ರಂಗಾಯಣ ಮೈಸೂರು ಪ್ರಸ್ತುತಪಡಿಸುವ ವಾಚಿಕಾಭಿನಯ – ಬೊಮ್ಮನಹಳ್ಳಿಯ ಕಿಂದರಿಜೋಗಿ

ರಂಗಾಯಣವು ಪ್ರಸ್ತುತಪಡಿಸಿದ `ಬೊಮ್ಮನಹಳ್ಳಿಯ ಕಿಂದರಿಜೋಗಿ’ ವಾಚಿಕಾಭಿನಯವನ್ನು ಕೋವಿಡ್ ನಿಯಮಗಳಡಿ ಸಾಮಾಜಿಕ ಅಂತರ ಕಾಯ್ದುಕೊಂಡು ಸಂಪೂರ್ಣವಾಗಿ ವಾಚಿಕ ಅಭಿನಯದಲ್ಲಿ ಚಿತ್ರೀಕರಿಸಲಾಗಿದೆ. ದಿನಾಂಕ:07-09-2020ರಂದು ಬೆಳಗ್ಗೆ 11.15ಕ್ಕೆ ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ಮೈಸೂರಿನ ಅರಿವು ಶಿಕ್ಷಣ ಸಂಸ್ಥೆಯ ಕೆಲವು ಮಕ್ಕಳು ಈ ವಾಚಿಕಾಭಿನಯ ಚಿತ್ರಣವನ್ನು ಅನಾವರಣಗೊಳಿಸಲಿದ್ದಾರೆ. ಈ ವಾಚಿಕಾಭಿನಯವು ಅಂದು ಸಂಜೆ 6.30ಕ್ಕೆ ರಂಗಾಯಣ ಜಾಲತಾಣದಲ್ಲಿ ಹಾಗೂ ರಂಗಾಯಣದ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಸಾರಗೊಳ್ಳಲಿದೆ. ನಂತರ ರಾಜ್ಯದ ಎಲ್ಲಾ ಪ್ರಾಥಮಿಕ, ಪ್ರೌಢಶಿಕ್ಷಣ ಸಂಸ್ಥೆಗಳಲ್ಲಿ ಈ ವಾಚಿಕಾಭಿನಯ ವಿದ್ಯಾರ್ಥಿಗಳಿಗೆ ವೀಕ್ಷಣೆಗೆ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯ ಮೂಲಕ ಲಭ್ಯವಾಗಲಿದೆ.