ಡಾ. ಯು.ಆರ್. ಅನಂತಮೂರ್ತಿಯವರ ಕಾದಂಬರಿ ಆಧಾರಿತ ‘ಸಂಸ್ಕಾರ’

ಡಾ. ಯು.ಆರ್. ಅನಂತಮೂರ್ತಿಯವರ ಕಾದಂಬರಿಯಾಧಾರಿತ ’ಸಂಸ್ಕಾರ’ |  ಭಾಷೆ: ಕನ್ನಡ | ರಂಗರೂಪ : ಓ.ಎಲ್. ನಾಗಭೂಷಣಸ್ವಾಮಿ, ಎಂ.ಸಿ. ಕೃಷ್ಣಪ್ರಸಾದ್ | ನಿರ್ದೇಶನ: ಹೆಚ್. ಜನಾರ್ಧನ್ (ಜನ್ನಿ) | ತಂಡ: ರಂಗಾಯಣ ರೆಪರ್ಟರಿ, ಮೈಸೂರು.|

  Dr. U.R. Ananthamurthy’s Samskara | Language : Kannada  | Stage Adaptation : O.L. Nagabhushanaswamy,  | M.C. Krishnaprasad | Direction: H. Janardhan (Janni) | Troupe: Rangayana Repertory, Mysuru.

ಮೈಸೂರು ರಂಗಾಯಣವು ತನ್ನ 25ನೇ ವರ್ಷದ ಬೆಳ್ಳಿ ರಂಗಪಯಣದ ಅಂಗವಾಗಿ ಕನ್ನಡ ನವ್ಯ ಸಾಹಿತ್ಯದಲ್ಲೇ ಮೇರು ಕೃತಿ ಎನಿಸಿಕೊಂಡಿರುವ ಡಾ. ಯು.ಆರ್. ಅನಂತಮೂರ್ತಿಯವರ ‘ಸಂಸ್ಕಾರ’ ಕಾದಂಬರಿಯ ರಂಗರೂಪವನ್ನು ಸಂಭ್ರಮದಿಂದ ಲೋಕಾರ್ಪಣೆ ಮಾಡುತ್ತಿದೆ. ಸಂಸ್ಕಾರ ಕಾದಂಬರಿಗೆ 50 ವರ್ಷ ತುಂಬಿದೆ. ರಂಗಾಯಣಕ್ಕೆ 25 ವರ್ಷ ತುಂಬುತ್ತಿರುವ ಈ ಸಂದರ್ಭದಲ್ಲಿ ಡಾ. ಯು.ಆರ್. ಅನಂತಮೂರ್ತಿಯವರ ವಾರ್ಷಿಕ ಸ್ಮರಣೆಯಾಗಿಯೂ ಈ ಮಹತ್ವದ ಪ್ರಯೋಗವನ್ನು ಸಮಾಜಮುಖಿಯಾಗಿಸುತ್ತಿದೆ. ನಿಮ್ಮ ನಡುವೆ ಬೃಹತ್ತಾಗಿ ಬೆಳೆದ ರಂಗಾಯಣ ಕನ್ನಡ ರಂಗಭೂಮಿಗೆ ಈವರೆಗೂ ಮಹತ್ವದ ಪ್ರಯೋಗಶೀಲ ನಾಟಕಗಳನ್ನು ನೀಡುತ್ತಾ ಕನ್ನಡ ರಂಗಭೂಮಿಯ ಬೆಳವಣಿಗೆಗೆ ದೊಡ್ಡ ಕೊಡುಗೆಯನ್ನು ನೀಡಿದೆ. ಈಗ ಮತ್ತೊಂದು ಮಹತ್ವದ ರಂಗ ಕಾಣಿಕೆಯಾಗಿ ‘ಸಂಸ್ಕಾರ’ ನಾಟಕ ಸಿದ್ಧಗೊಂಡಿದೆ. ಈ ಕೃತಿ ಹಲವು ಬಗೆಯ ನೈತಿಕ ಹಾಗೂ ಸಾಮಾಜಿಕ ಕಾಳಜಿಯ ಆಯನವಾಗಿದೆ. ಕನ್ನಡ ನವ್ಯ ಪ್ರಜ್ಞೆಯು ವ್ಯಕ್ತಿ ಹಾಗೂ ಸಮಾಜಗಳೆರಡನ್ನು ಒಳಗೊಂಡು ತನ್ನ ಆಲೋಚನಾ ಕ್ರಮವನ್ನು ವಿಸ್ತರಿಸಿಕೊಂಡ ಪ್ರಮುಖ ಮಾದರಿಯಂತಿದೆ. ಧೈರ್ಯದಿಂದ, ಪ್ರಾಮಾಣಿಕತೆಯಿಂದ ಹೊಸ ಮೌಲ್ಯಗಳನ್ನು ಅನ್ವೇಷಿಸುವ ಪ್ರವೃತ್ತಿಯಿಂದ ಕೂಡಿದೆ. ತೀವ್ರ ಭಾವಗೀತಾತ್ಮಕತೆ ಹಾಗೂ ತೀಕ್ಷ್ಣ ವೈಚಾರಿಕತೆಗಳ ವಿಶಿಷ್ಟ ಬೆಸುಗೆಯಿಂದ ಹುಟ್ಟಿದ ‘ಸಂಸ್ಕಾರ’ ಸ್ವಾತಂತ್ರ್ಯ ಪೂರ್ವ ಭಾರತದ ಚರಿತ್ರೆಯ ಚಲನೆಗಳ ಜೊತೆಗೆ ಎಲ್ಲಾ ಕಾಲದ ತಲೆಮಾರುಗಳ ಮುಖಾ-ಮುಖಿಗಳನ್ನು ಸಾಂಕೇತಿಕವಾಗಿ ಹೇಳುತ್ತದೆ.

‘ಸಂಸ್ಕಾರ’ದಲ್ಲಿ ಕೇಂದ್ರ ಸಂಕೇತವಾಗಿರುವ ಪ್ಲೇಗ್ ರೋಗ ಭಾರತದ ಜಡ್ಡುಗಟ್ಟಿದ ಸಂಪ್ರದಾಯಗಳನ್ನು ಸಂಕೇತಿಸುತ್ತ, ಅದನ್ನು ನಿರ್ನಾಮಗೊಳಿಸುವ ಹೊಸದೊಂದು ಹುಟ್ಟುವುದರ ಸಂಕೇತವಾಗಿಯೂ ಬಳಕೆಯಾಗಿದೆ. ಮನುಷ್ಯನ ಬದುಕಿನ ಸಂಧಿಗ್ಧ ಸ್ಥಿತಿಯನ್ನು ಅನಾವರಣಗೊಳಿಸುತ್ತ ಪ್ರಕೃತಿ ಸ್ಪೂರ್ತಿತ ಹಾಗೂ ರೂಢಿಗತ ಸಂಪ್ರದಾಯದೊಳಗಿನ ಸಂಘರ್ಷಗಳನ್ನು, ವೈರುದ್ಯಗಳನ್ನು ಹಾಗೂ ತೀಕ್ಷ್ಣ ವೈಚಾರಿಕತೆಗಳ ಮುಖಾ-ಮುಖಿಯಾಗಿಸಲು ರಂಗಭೂಮಿಯ ಮೂಲಕ ಪ್ರೇರಿತಗೊಳಿಸುವಂತೆ ಮಾಡಲಾಗಿದೆ. ಇದು ಒಂದು ಅಗ್ರಹಾರದ ಕತೆಯಲ್ಲ, ಒಂದು ಸಮಾಜದ ಕೊಳೆಯುವಿಕೆ ಹಾಗೂ ಅಲ್ಲೇ ಹುಟ್ಟು ಪಡೆವ ಚಲನಶೀಲತೆ ಆ ಮೂಲಕ ಹೊಸದೊಂದು ಹುಟ್ಟಿನ ಸಂಕೇತಗಳನ್ನು ಮೂಡಿಸುತ್ತ ಜಾತಿ ವಿನಾಶದ ತುಡಿತಗಳ ಪಠ್ಯವಾಗಿದೆ. ಕಾಲ, ಕ್ರಿಯೆ, ಸ್ಥಳದ ಐಕ್ಯೆಗಳನ್ನು ಕಾಪಾಡಿಕೊಂಡು ನಾಟಕವಾಗಿ ರೂಪಗೊಳ್ಳಲು ಸಹಕಾರಿಯಾಗಿದೆ. ರಂಗಾಯಣವು ಸಾಮಾಜಿಕ ಪ್ರಜ್ಞೆಯ ನೆಲೆಯಿಂದ ಆಲೋಚನೆಗಳನ್ನು ರಂಗಭೂಮಿಯ ಮೂಲಕ ವಿಸ್ತರಿಸುವ ದೃಷ್ಠಿಯಿಂದ ‘ಸಂಸ್ಕಾರ’ ನಾಟಕವನ್ನು ಪ್ರಸ್ತುತ ಲೋಕಾರ್ಪಣೆಗೊಳಿಸುತ್ತಿದೆ.

ರಂಗದ ಹಿಂದೆ

ರಂಗ ಸಜ್ಜಿಕೆ : ಮಹದೇವ, ಕೃಷ್ಣಕುಮಾರ್ ನಾರ್ಣಕಜೆ, ಎಸ್. ರಾಮನಾಥ್, ನೂರ್ ಅಹ್ಮದ್ ಶೇಖ್
ಪರಿಕರ : ಸಂತೋಷ್‌ಕುಮಾರ್ ಕುಸನೂರು, ಚಾಂದಿನಿ
ವಸ್ತ್ರ ವಿನ್ಯಾಸ ಸಹಾಯ : ಜಗದೀಶ ಮನವಾರ್ತೆ, ಶೃತಿ, ರಂಗಸ್ವಾಮಿ, ಕವಿತಾ
ಪ್ರಸಾದನ : ಗೀತಾ ಎಂ.ಎಸ್, ಮೀನಾಕ್ಷಿ
ಬೆಳಕು ಸಹಾಯ : ಮಹದೇವಸ್ವಾಮಿ, ವಿಶಾಲ್ ಪಾಲಪುರೆ
ಪ್ರಚಾರ : ಪ್ರಶಾಂತ್ ಹಿರೇಮಠ್, ವಿನಾಯಕ್ ಭಟ್,
ಸಂಗೀತ ವಿಭಾಗ : ಎಸ್. ರಾಮು, ಪ್ರಮೀಳಾ ಬೇಂಗ್ರೆ
ಹಿನ್ನೆಲೆ ಸಂಗೀತ : ಶ್ರೀನಿವಾಸಭಟ್
ಸಾಂಗತ್ಯ : ಶ್ರೀಕಂಠಸ್ವಾಮಿ, ಕೃಷ್ಣಚೈತನ್ಯ
ಹಾಡುಗಾರಿಕೆ : ದೇವಾನಂದ ವರಪ್ರಸಾದ್
ನೃತ್ಯ ನಿರ್ವಹಣೆ : ಮೈಮ್ ರಮೇಶ್
ರಂಗನಿರ್ವಹಣೆ : ಸರೋಜಾ ಹೆಗಡೆ
ರಂಗ ವಿನ್ಯಾಸ : ಎಚ್.ಕೆ. ದ್ವಾರಕಾನಾಥ್
ವಸ್ತ್ರ ವಿನ್ಯಾಸ : ಹುಲುಗಪ್ಪ ಕಟ್ಟೀಮನಿ
ಪ್ರಸಾದನ ವಿನ್ಯಾಸ : ಮೇಕಪ್ ರಾಮಚಂದ್ರ
ಬೆಳಕಿನ ವಿನ್ಯಾಸ : ಸಗಾಯ್‌ರಾಜು, ಮಹೇಶ್ ಕಲ್ಲತ್ತಿ
ನೃತ್ಯ ಸಂಯೋಜನೆ : ಶ್ರೀಮತಿ ಉಮಾರಾವ್
ಹಾಡುಗಳು : ಮಂಜುನಾಥ ಬೆಳಕೆರೆ
ರಂಗರೂಪ : ಓ.ಎಲ್. ನಾಗಭೂಷಣ ಸ್ವಾಮಿ
ರಂಗರೂಪ – ಸಹ ನಿರ್ದೇಶನ : ಮಾಯಸಂದ್ರ ಕೃಷ್ಣಪ್ರಸಾದ್
ಸಂಗೀತ-ನಿರ್ದೇಶನ : ಹೆಚ್. ಜನಾರ್ಧನ್ (ಜನ್ನಿ)
ದುರ್ವಾಸಪುರ ಅಗ್ರಹಾರದ ಪ್ರಾಣೇಶಾಚಾರ್ಯರು ಕಾಶಿಗೆ ಹೋಗಿ ಪುರಾಣ ಶಾಸ್ತ್ರಗಳಲ್ಲಿ ಪಾಂಡಿತ್ಯ ಪಡೆದು ಬಂದು ತಾನು ಬಲವಾಗಿ ನಂಬಿದ ಪುರಾಣ ಶಾಸ್ತ್ರ ಪುಣ್ಯ ಕತೆಗಳನ್ನು ಸಮರ್ಥವಾಗಿ ಜನರಿಗೆ ಬೋಧಿಸುತ್ತ ಜನಮಾನಸದಲ್ಲಿ ವೈಭವೀಕೃತ ಆಚಾರ್ಯರಾಗುತ್ತಾರೆ. ಜಾತಿ, ತಾರತಮ್ಯ, ಅಜ್ಞಾನ, ದ್ವೇಷ, ಸ್ವಾರ್ಥ, ದುರಾಸೆ, ಕೌಟುಂಬಿಕ ಜಗಳಗಳ ಮನೋವಿಕಾರ ಪ್ರವೃತ್ತಿಯ ಅಗ್ರಹಾರದ ಜನರು ಒಂದು ಕಡೆಯಾದರೆ ಇವೆಲ್ಲವನ್ನು ತೀಕ್ಷ್ಣವಾಗಿ ವಿರೋಧಿಸುವ, ಪ್ರತಿಭಟಿಸುವ ಶಾಸ್ತ್ರ, ಧರ್ಮ ನಿಬಂಧನೆಗಳನ್ನು ಅಗ್ರಹಾರದ ಅನಾಗರೀಕ ಪ್ರವೃತ್ತಿಗಳನ್ನು ಧಿಕ್ಕರಿಸಿ ಪ್ರತಿಭಟಿಸುವ ಜ್ಯಾತ್ಯಾತೀತ ಮನೋಭಾವದಿಂದ ಜಾತಿ ಜನಾಂಗವನ್ನು ಮೀರಿ ನಿಲ್ಲುವ ನಾರಾಣಪ್ಪ ಸಂಪ್ರದಾಯಸ್ಥ ಜನರಿಗೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತಾನೆ. ಊರಿಂದೂರಿಗೆ ಪಯಣಿಸಿ ಸರ್ವರಲ್ಲೂ ಬೆರತು ನಾಟಕ, ಯಕ್ಷಗಾನ, ಸಮಾಜವಾದಿ ಚಿಂತನೆಗಳನ್ನು ಯುವಕರಲ್ಲಿ ಪರಿಣಾಮಕಾರಿಯಾಗಿ ಬಿತ್ತುತ್ತ ಅಗ್ರಹಾರದ ಕಟ್ಟುಪಾಡುಗಳ ಕೋಟೆಯಿಂದ ಬಿಡುಗಡೆಗೊಳಿಸುತ್ತ ಸ್ವತಂತ್ರವಾಗಿ ಬದುಕುವ ಧೈರ್ಯವನ್ನು ರೂಢಿಸಿಕೊಂಡ ನಾರಾಣಪ್ಪ ಆಕಸ್ಮಿಕವಾಗಿ ಸಾಯುತ್ತಾನೆ. ನಾರಾಣಪ್ಪನ ಶವ ಸಂಸ್ಕಾರದ ಪ್ರಶ್ನೆ ಅಗ್ರಹಾರದ ಜನರಿಗೆ ಬಿಡಿಸಲಾರದ ಪ್ರಶ್ನೆಯಾಗಿ ಪರಿಹಾರಕ್ಕೆಂದು ಪ್ರಾಣೇಶಾಚಾರ್ಯರ ಆಶ್ರಯಕ್ಕೆ ಬಯಸುತ್ತಾರೆ. ಶಾಸ್ತ್ರ, ದೇವರುಗಳನ್ನು ಸಮಸ್ಯೆ ಪರಿಹಾರಕ್ಕಾಗಿ ನಂಬಿದ ಆಚಾರ್ಯರಿಗೆ ಉತ್ತರ ದೊರೆಯದಾಗಿ ಅವರು ದ್ವಂದ್ವದಲ್ಲಿ ಸಿಕ್ಕಿಬಿಟ್ಟು ಆಕಸ್ಮಿಕವಾಗಿ ಕಾಡಿನಲ್ಲಿ ನಾರಾಣಪ್ಪನ ಸೂಳೆ ಚಂದ್ರಿಯ ಸಂಪರ್ಕದಿಂದ ಸಮಾಗಮಗೊಳ್ಳುತ್ತಾರೆ. ಇಷ್ಟು ದಿನ ಶಾಸ್ತ್ರ, ನೀತಿ ನಿಯಮದೊಳಗೆ ಬದುಕಿದ ಆಚಾರ್ಯರಿಗೆ ಪ್ರಾಕೃತಿಕ ಮಾನವ ಸಹಜ ಪ್ರೇರಣೆಯಿಂದ ತನ್ನ ಹಿಂದಿನ ಕಟ್ಟು ಪಾಡುಗಳ ವೈಚಾರಿಕ ನೆಲೆಗಳು ಕುಸಿದು ಬಿದ್ದು ಮಾನವ ಸಹಜ ಅನುಭವಗಳ ಮೂಲಕ ಸಮಾಜದ ವಿವಿಧ ಸ್ಥರಗಳಲ್ಲಿ ಚಲಿಸುವ ಮೂಲಕ ತನ್ನನ್ನು ಸಾರ್ವತ್ರಿಕಗೊಳಿಸುವ ಮಾನವ ಪ್ರವೃತ್ತಿಯತ್ತ ನಡೆಯುತ್ತಾರೆ. ನಾಟಕದಲ್ಲಿ ಪ್ಲೇಗ್ ರೋಗ ಜಾತೀಯತೆಯ, ಮೂಡನಂಬಿಕೆಯ ತಾರಥಮ್ಯದ ಅಜ್ಞಾನದ, ದ್ವೇಷದ, ವಿನಾಶದ ಸಂಕೇತವಾಗಿ ಅನಾವರಣಗೊಂಡಿದ್ದು, ಅದಕ್ಕೆ ಪರಿಹಾರವಾಗಿ ಹಳೆ ಜಡ್ಡುಗಟ್ಟಿದ ಸಂಪ್ರದಾಯಗಳ ನಿರ್ನಾಮದ ನಿರ್ಣಾಯಕ ನೆಲೆಯಲ್ಲಿ ನಾಟಕ ನಡೆದು ಹೊಸ ವಿಚಾರದ ಮಾನವ ಸಂಬಂಧದ ಜಾತಿ ವಿನಾಶದ ಸಮಾನ ಗುಣಲಕ್ಷಣಗಳ ಅಪೇಕ್ಷೆಯೊಂದಿಗೆ ಮುಕ್ತಾಯಗೊಳ್ಳುತ್ತದೆ.

ಒಂದು ಆರೋಗ್ಯಪೂರ್ಣ ಸಮಾಜ ನಿರ್ಮಾಣದ ಆವರಣಕ್ಕೆ ಬೇಕಾದ ಪ್ರಕೃತಿ ಸಂಸ್ಕತಿಯ ಬಯಕೆಯಿಂದ ಈ ನಾಟಕವನ್ನು ರಂಗಾಯಣ ತನ್ನ 25ನೇ ವರ್ಷದ ಬೆಳ್ಳಿ ರಂಗಪಯಣದ ಕೊಡುಗೆಯಾಗಿ ನೀಡುತ್ತಿದೆ. ಚಲನಶೀಲ ಸಮಾಜದಲ್ಲಿ ಹೊಸ ವಿಚಾರಗಳನ್ನು ಹೊಸ ಆಶಯಗಳ ಮೂಲಕ ಮುಂದಿನ ಪರಂಪರೆಗೆ ದಿವ್ಯತೆಯನ್ನು ಬಯಸುವ ಎಲ್ಲರೂ ಈ ರಂಗಪಯಣದಲ್ಲಿ ಒಂದಾಗುತ್ತಾರೆ ಎಂಬುದು ನಮ್ಮ ನಂಬಿಕೆ.

ರಂಗದ ಮೇಲೆ

ಅನಸೂಯ, ವಿಧವೆ : ನಂದಿನಿ ಕೆ.ಆರ್
ಬೆಳ್ಳಿ, ವಿಧವೆ : ಶಶಿಕಲಾ
ವಿಧವೆ, ಅಗ್ರಹಾರದವಳು : ಶೃತಿ
ವಿಧವೆ, ಅಗ್ರಹಾರದವಳು : ಮೀನಾಕ್ಷಿ
ವಿಧವೆ, ಅಗ್ರಹಾರದವಳು : ಕವಿತಾ
ಪ್ರಾಣೇಶಾಚಾರ್ಯ : ಜಗದೀಶ ಮನವಾರ್ತೆ
ಗರುಡಾಚಾರ್ಯ : ವಿನಾಯಕ ಭಟ್ ಹಾಸಣಗಿ
ಲಕ್ಷ್ಮಣಾಚಾರ್ಯ : ನೂರ್ ಅಹ್ಮದ್ ಶೇಖ್
ದುರ್ಗಾಭಟ್ಟ : ಎಸ್. ರಾಮು
ದಾಸಾಚಾರ್ಯ, ಮಹ್ಮಮದ್ ಬ್ಯಾರಿ : ಸಂತೋಷ್‌ಕುಮಾರ್ ಕುಸನೂರು
ಪದ್ಮನಾಭಚಾರ್ಯ, ಮುಸ್ಲಿಂ ಭಾಂದವ : ಮಹದೇವಸ್ವಾಮಿ
ಲಕ್ಷ್ಮಿದೇವಮ್ಮ, ಸೀತಾ : ಗೀತಾ ಎಂ.ಎಸ್
ಚಂದ್ರಿ : ಸರೋಜಾ ಹೆಗಡೆ
ಮಂಜಯ್ಯ, ರಣಹದ್ದು : ಮೈಮ್ ರಮೇಶ್
ಶಂಕರಯ್ಯ, ಮುಸ್ಲಿಂ ಭಾಂದವ : ವಿಶಾಲ್ ಪಾಲಾಪುರೆ
ಊರ ಪ್ರಮುಖ, ಗೌಡ, ಮುಸ್ಲಿಂ ಭಾಂದವ : ರಂಗನಾಥ್ ವಿ.
ನಾರಣಪ್ಪ : ಹುಲುಗಪ್ಪ ಕಟ್ಟೀಮನಿ
ಶ್ರೀಪತಿ : ಕೃಷ್ಣಕುಮಾರ್ ನಾರ್ಣಕಜೆ
ಗಾಡಿ ಶೇಷಪ್ಪ, ಬ್ರಾಹ್ಮಣ : ಮಂಜುನಾಥ ಬೆಳಕೆರೆ
ಮಠದ ಗುರು, ಬ್ರಾಹ್ಮಣ, ಮಹಾಬಲ : ಮಹದೇವ
ಮಾಲೇರ ಪುಟ್ಟ : ಎಸ್. ರಾಮನಾಥ
ಪ್ರಾಣೇಶಾಚಾರ್ಯ : ಪ್ರಶಾಂತ್ ಹಿರೇಮಠ್
ಭಾಗೀರಥಿ, ಪದ್ಮಾವತಿ : ಪ್ರಮೀಳಾ ಬೇಂಗ್ರೆ