ಮೂವರು ಅಕ್ಕತಂಗಿಯರು

ನಿರ್ದೇಶನ : ಚಿದಂಬರರಾವ್ ಜಂಬೆ | ರಚನೆ : ಆಂಟೋನ್ ಚೆಕಾವ್ | ಅನುವಾದ : ವೈದೇಹಿ | ವಿನ್ಯಾಸ : ಹೆಚ್.ಕೆ. ದ್ವಾರಕಾನಾಥ್ | ಸಂಗೀತ : ಪ್ರಶಾಂತ್ ಹಿರೇಮಠ | ಬೆಳಕು : ಮಹೇಶ್ ಕಲ್ಲತ್ತಿ | ತಂಡ: ರಂಗಾಯಣ, ಮೈಸೂರು |
ನಾಟಕದ ಬಗ್ಗೆ
‘ಮಾಸ್ಕೊ’ ಎಂಬ ಕನಸಿನೆಡೆಗೆ ತುಡಿದು ದಣಿದ ಮನ – ಓಲ್ಗಾ, ಮಾಷಾ, ಇರೀನಾ ಮೂವರು ಅಕ್ಕ ತಂಗಿಯರು. ಆಂದ್ರೇಯಿ ಅವರ ತಮ್ಮ. ರಶಿಯಾದ ಸಣ್ಣ ಪಟ್ಟಣ ಒಂದರಲ್ಲಿ, ಸ್ಥಾನಿಕ ಸೈನ್ಯದ ಕಮಾಂಡರ್ ಆಗಿದ್ದ ತಂದೆ ಪ್ರೊಝೊರೋವ್‌ನ ಮರಣಾ ನಂತರ ಯಾವುದೇ ನಿರ್ದಿಷ್ಟ ಗುರಿ ಇಲ್ಲದ ನೀರಸವಾದ ಜೀವನವನ್ನು ನಡೆಸುತ್ತಿದ್ದಾರೆ. ಹಿಂದೊಮ್ಮೆ ವಾಸಿಸುತ್ತಿದ್ದ ಮಾಸ್ಕೋ ನಗರಕ್ಕೆ ಮರಳಿ ಹೋಗುವ ಕನಸನ್ನು ಪ್ರತಿನಿತ್ಯ ಕಾಣುತ್ತಿದ್ದಾರೆ. ಓಲ್ಗಾ, ಶಾಲೆಯಲ್ಲಿ ಮಕ್ಕಳಿಗೆ ಕಲಿಸುವುದರಲ್ಲಿ ತೃಪ್ತಿ ಕಾಣುವುದಕ್ಕೆ ಪ್ರಯತ್ನಿಸಿದರೂ ಆಂತರ್‍ಯದಲ್ಲಿ ಮನೆ, ಕುಟುಂಬಕ್ಕಾಗಿ ಹಂಬಲಿಸುತ್ತಿದ್ದಾಳೆ. ಮಾಷಾ, ನೀರಸ ಶಾಲಾ ಶಿಕ್ಷಕ ಕುಲಿಗಿನ್‌ನನ್ನು ಮದುವೆಯಾದ ಅಸುಖಿ ಬದುಕಿನಿಂದ ಬೇಸರಗೊಂಡಿದ್ದಾಳೆ. ಹೊಸದಾಗಿ ಬಂದ, ಹಳೆಯ ಪರಿಚಯದ, ಈಗಾಗಲೇ ಮದುವೆಯಾದ ಕರ್ನಲ್ ವರ್ಶಿನಿನ್‌ನನ್ನು ಪ್ರೀತಿಸತೊಡಗುತ್ತಾಳೆ. ಇರೀನಾ, ಸ್ಥಳೀಯ ಟೆಲಿಗ್ರಾಫ಼್ ಕಚೇರಿಯ ಏಕತಾನತೆಯ ಬದುಕಿಗೆ ಬೇಸತ್ತು ತನ್ನನ್ನು ಪ್ರೀತಿಸುವ ಬ್ಯಾರೆನ್ ಟುಷೆನ್‌ಬಾಕ್‌ನನ್ನು ಒಪ್ಪಿಕೊಳ್ಳಲೂ ಆಗದೆ ನಿಜವಾದ ಬದುಕಿನ ಉಲ್ಲಾಸ ಹಾಗೂ ಸಂತೋಷಕ್ಕಾಗಿ ತುಡಿಯುತ್ತಿದ್ದಾಳೆ. ಈ ಮೂವರು ಅಕ್ಕ ತಂಗಿಯರ ಅತೃಪ್ತಿ ಅವರ ತಮ್ಮ ಆಂದ್ರೇಯಿ ನಟಾಷಾಳನ್ನು ಮದುವೆಯಾದಾಗ ಇನ್ನೂ ಹೆಚ್ಚುತ್ತಾ ಹೋಗುತ್ತದೆ. ನಟಾಷಾ ನಿಧಾನವಾಗಿ ಮನೆಯಲ್ಲಿನ ವೈಯಕ್ತಿಕ ಸ್ಥಾನಗಳನ್ನು ಅತಿಕ್ರಮಿಸುವವರೆಗೆ ಮುಂದುವರೆಯುತ್ತದೆ. ಈ ಮಧ್ಯೆ ಅಲ್ಲಿಯವರೆಗೂ ಇದ್ದ ಸೈನಿಕ ತುಕಡಿ ಅಲ್ಲಿಂದ ಸ್ಥಳಾಂತರವಾಗಿ ಎಲ್ಲವೂ ಖಾಲಿಯಾಗತೊಡಗುತ್ತದೆ. ಬದುಕು ಇನ್ನೂ ಹೆಚ್ಚು ಖಾಲಿ ಖಾಲಿ ಎನಿಸತೊಡಗುತ್ತದೆ. ಉಲ್ಲಾಸದಿಂದ ಇರುವ ಹಾಗೂ ಆಶಾದಾಯಕ ಸ್ವಭಾವದ ಇರೀನಾ ಕೊನೆಗೊಮ್ಮೆ ದುರಂತ ಅಪ್ಪಳಿಸುವವರೆಗೆ ಮಾಸ್ಕೊಗಾಗಿ ಕನವರಿಸುತ್ತಲೇ ಇರುತ್ತಾಳೆ. ಈ ನೈರಾಶ್ಯದ ನಡುವೆಯೂ ಮೂವರು ಅಕ್ಕತಂಗಿಯರು ಹೊಸ ಬದುಕಿಗಾಗಿ, ಬದುಕಿನ ಹೊಸತನಕ್ಕಾಗಿ ಮತ್ತೆ ಕನಸುತ್ತಾರೆ.
About the play
HEART IS TIRED LEAPING UP FOR A DREAM CALLED ‘MASCOW’. Olga, Masha, and Irina lead lonely and purposeless lives following the death of their father prozorov who has commanded the local army post. They dream daily of their return to their former home in Moscow. Olga attempts to find satisfaction in teaching but secretly longs for a home and family. Masha, unhappy with her marriage to a timid school master, falls hopelessly in love with a married colonel. Irina works in the local telegraph office but longs for gaiety even though lieutenant Baron Tuzenbach is loving her. Their sense of futility is increased by their brother’s marriage to Natasha, till the private refuge of the sisters is destroyed. When the army post is withdrawn from the town the loneliness worsens. Irina, most optimistic of the sisters, begins to waver in her dreams for Moscow till tragedy strikes her. In the sorrowful depths Three Sisters dream for a fresh and better Life.
ನಾಟಕಕಾರರ ಬಗ್ಗೆ
ಆಂಟನ್ ಚೆಕೋವ್ (29, ಜನವರಿ 1860 15, ಜುಲೈ 1904) ರಷಿಯಾದ ಹೆಸರಾಂತ ನಾಟಕಕಾರ ಹಾಗೂ ಸಣ್ಣಕಥೆಗಾರ. ೧೮೯೬ ರಲ್ಲಿ ಬರೆದ ಸೀಗಲ್, ಸ್ಟ್ಯಾನಿಸ್ಲಾವಸ್ಕಿಯ ಮಾಸ್ಕೋ ಆರ್ಟ್ಸ್ ಥಿಯೇಟರ್ ಅದನ್ನು ಪ್ರದರ್ಶನ ಮಾಡುವವರೆಗೂ ಉತ್ತಮ ಪ್ರದರ್ಶನಗಳನ್ನು ಕಾಣಲಿಲ್ಲ. ನಂತರ ಬಂದ ಅಂಕಲ್ ವಾನ್ಯಾ ಹಾಗೂ ಅವನ ಕೊನೆಯ ಎರಡು ನಾಟಕಗಳಾದ ಥ್ರೀ ಸಿಸ್ಟರ್‍ಸ್ ಮತ್ತು ಚೆರ್ರಿ ಆರ್ಚರ್‍ಡ್ ನಾಟಕಗಳು ಅಪಾರ ಜನಮನ್ನಣೆ ಪಡೆದವು.
About the Playwright :
Anton Pavlovich Chekhov (29 January 1860 – 15 July 1904) was a Russian playwright and short story writer. The Seagull, Uncle Vanya, Three Sisters and the Cherry Orchard plays present a challenge to the acting ensemble as well as to the audience, because in place of conventional action Chekhov offers a “theatre of mood” and a “submerged life in the text”.
ನಿರ್ದೇಶಕರ ಬಗ್ಗೆ
ಶ್ರೀ ಚಿದಂಬರರಾವ್ ಜಂಬೆ ಕನ್ನಡದ ಶ್ರೇಷ್ಠ ರಂಗ ತಜ್ಞ ಹಾಗೂ ನಿರ್ದೇಶಕರು. ಶ್ರೀಯುತರು ರಾಷ್ಟ್ರೀಯ ನಾಟಕ ಶಾಲೆಯ ಪದವೀಧರರು. ನೀನಾಸಂ ರಂಗಸಂಸ್ಥೆಯ ಪ್ರಾಂಶುಪಾಲರಾಗಿ, ಮೈಸೂರಿನ ರಂಗಾಯಣದ ನಿರ್ದೇಶಕರಾಗಿ, ಮೈಸೂರು ವಿಶ್ವವಿದ್ಯಾಲಯದ ಗುಬ್ಬಿವೀರಣ್ಣ ಪೀಠದ ಗೌರವಾನ್ವಿತ ಅಧ್ಯಕ್ಷರಾಗಿ, ಸಾಣೇಹಳ್ಳಿಯ ಶಿವಕುಮಾರ ರಂಗ ಪ್ರಯೋಗ ಶಾಲೆಯ ಗೌರವಾನ್ವಿತ ನಿರ್ದೇಶಕರಾಗಿ ಹಾಗೂ ರಾಷ್ಟ್ರೀಯ ನಾಟಕ ಶಾಲೆಯ ಬೆಂಗಳೂರು ವಿಭಾಗದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಸುಮಾರು ೭೦ ನಾಟಕಗಳನ್ನು ವೃತ್ತಿಕಲಾವಿದರಿಗೆ ಹಾಗೂ ಹವ್ಯಾಸಿ ಕಲಾವಿದರುಗಳಿಗೆ ನಿರ್ದೇಶಿಸಿರುವುದಲ್ಲದೆ ೫೦ಕ್ಕೂ ಹೆಚ್ಚು ನಾಟಕಗಳನ್ನು ಮಕ್ಕಳಿಗಾಗಿ ನಿರ್ದೇಶಿಸಿದ್ದಾರೆ. ಬೆಕ್ಕು ಬಾವಿ, ’ಆಷಾಢದ ಒಂದು ದಿನ, ಆಧೇ ಅಧೂರೆ, ಲೋವರ್ ಡೆಪ್ತ್ಸ್ ಅನುವಾದ ಈ ಕೆಳಗಿನವರು, ತುಘಲಕ್, ಗುಣಮುಖ ನಾಟಕದ ಅನುವಾದಿತ ಇಫಾಕತ್ ಇವರು ನಿರ್ದೇಶಿಸಿದ ಹಲವು ಪ್ರಮುಖ ನಾಟಕಗಳು. ಕಾಡಿನಲ್ಲಿ ಕಥೆ, ಹೆಡ್ಡಾಯಣ, ಎ ಮಿಡ್ ಸಮ್ಮರ್ ನೈಟ್ಸ್‌ಡ್ರೀಮ್ ಮತ್ತು ಲವ-ಕುಶ ಮುಂತಾದವುಗಳನ್ನು ಮಕ್ಕಳಿಗಾಗಿ ನಿರ್ದೇಶಿಸಿದ್ದಾರೆ. ೧೯೯೪ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ೨೦೧೪ ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳು ಇವರಿಗೆ ಸಂದಿವೆ.
About the Director
Chidambara Rao Jambe is an Indian Theatre director and trainer, who has conducted a lot of theatre workshops for childeren and adults across the country. He served as the Principal-Ninasam Theatre Institute, Director- Rangayana Mysore; Honorary Chairperson-Gubbi Veeranna chair, Honorary Director- Sanehalli Shivakumara Ranga Shale and Camp Director-NSD Bengaluru Chapter. He has conducted workshops for diverse groups like Fisherman, Siddi Tribals, Pratima Sabha and many more. He has directed more than 80 plays which include Ashadada ondu Dina, Aadeh Adhoore, Ee Kelaginavaru, Thugaluq, Loka Shakunthala, Gunamukha. He has honoured with Karnataka Nataka Academy Award in 1994, Sangeet Natak Akademi Award in 2014.
OFF STAGE
Set Design : H.K. Dwarakanath Costume Design : Baanee Sharad Music : Prashant Hiremath Music Assistance: Dhananjaya R.C Lighting Design : Mahesh Kallatthi
ON STAGE
Olga : Geetha M.S/Bhagirathi Bai Masha : Pramila Bengre/ Nandini K.R/Vanitha Irina : Nandini K.R/Shashikala B.N Andrei Prozorov : Hulagappa Kattimani Natasha : Saroja Hegade/ Pramila Bengre Vershinin : KrishnaKumar Narnakaje / Jagadeesh Manavarthe. Baron Tuzenbach : Prashanth Hirematt Kulygin : Noor Ahmed Shaik/Mahadev Solyony : S. Ramu Chebutykin : Vinayak Bhat Hasanagi Fedotik : Hoysala .J Rode : Pradeep B.M Ferapont : Krishnaprasad M.C Anfisa : Puttalakshmi