ವಿಲಿಯಂ ಶೇಕ್ಸ್‌ಪಿಯರ್‌ನ ಜೂಲಿಯಸ್ ಸೀಜರ್

ನಾಟಕದ ಬಗ್ಗೆ : ಜೂಲಿಯಸ್ ಸೀಜರ್

ಜೂಲಿಯಸ್ ಸೀಜರ್ ಸುಮಾರು ೧೫೯೯ ರಲ್ಲಿ ರಚನೆಯಾದ ನಾಟಕ ಎಂದು ಹೇಳಲಾಗಿದೆ. ಅಷ್ಟರೊಳಗಾಗಿಯೇ ಶೇಕ್ಸ್‌ಪಿಯರ್ ಎಂಟು ಐತಿಹಾಸಿಕ ನಾಟಕಗಳನ್ನು ರಚಿಸಿ ಆಗಿದ್ದಿತು. ಈ ಇಷ್ಟು ನಾಟಕಗಳು ಇಂಗ್ಲೇಂಡನ್ನು ಕುರಿತಾಗಿದ್ದವು. ಮೊದಲ ಬಾರಿಗೆ ಇತಿಹಾಸದ ವಸ್ತುವೊಂದನ್ನು ಇಂಗ್ಲೆಂಡಿನ ಹೊರಗಿನಿಂದ ಆರಿಸಿಕೊಂಡು ಶೇಕ್ಸ್‌ಪಿಯರ್ ಒಂದು ನಾಟಕ ರಚಿಸಿದ. ರೋಮ್ ಒಂದು ಗಣರಾಜ್ಯ ರಾಜಕೀಯ ವಿನ್ಯಾಸ ಇಂಗ್ಲೆಂಡಿಗಿಂತ ಭಿನ್ನವಾದದ್ದು. ಪ್ರಜಾ ರಾಜ್ಯವಾದದ್ದರಿಂದ ಇಲ್ಲಿ ರಾಜ ಮಹಾರಾಜರುಗಳಿಗೆ ಚಕ್ರವರ್ತಿಗಳಿಗೆ ಅವಕಾಶವಿಲ್ಲ. ನಿರಂಕುಶ ಸಾರ್ವಭೌಮತ್ವದ ಮಾತೆ ಇಲ್ಲಿ ಸಲ್ಲ.
೧೯೫೫ರ ಹಿಂದೆ ಆತ ಬರೆದ ಇಂಗ್ಲೀಷ್ ಇತಿಹಾಸ ಕುರಿತಾದ ನಾಟಕಗಳನ್ನು ಐತಿಹಾಸಿಕ ನಾಟಕಗಳೆಂದು ಗುರುತಿಸಿರುವುದರಿಂದ ಜೂಲಿಯಸ್ ಸೀಜರ್ ನಾಟಕವನ್ನು ಶೇಕ್ಸ್‌ಪಿಯರ್ ರಚಿಸಿದ ಪ್ರಪ್ರಥಮ ರಾಜಕೀಯ ನಾಟಕ ಎನ್ನಬಹುದಾಗಿದೆ. ಇದು ಕೇವಲ ರಾಜಕೀಯ ನಾಟಕವಷ್ಟೇ ಅಲ್ಲ, ಆ ವಿವರಣೆಗೆ ಸಲ್ಲಬಹುದಾದ ನಾಟಕಗಳಲ್ಲಿ ಅತ್ಯಂತ ಅಗ್ರಗಣ್ಯ ನಾಟಕವು ಹೌದು. ಜೂಲಿಯಸ್ ಸೀಜರ್ ನಾಟಕ ರೋಮ್ ರಾಜಕೀಯ ವ್ಯವಸ್ಥೆಯನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ಬರೆದ ರಾಜಕೀಯ ನಾಟಕವಾದರೂ ಇಂದಿಗೂ ಸರ್ವ ವಿಧದಲ್ಲೂ, ಸರ್ವ ದೇಶಕ್ಕೂ ಸಲ್ಲುವ ಅತ್ಯಂತ ಮಹತ್ವದ ರಾಜಕೀಯ ನಾಟಕವಾಗಿದೆ.

ರಂಗದ ಮೇಲೆ

ಜಗದೀಶ ಮನವಾರ್ತೆ – ಆಂಟನಿ, ಗುಂಪು
ಕೃಷ್ಣಕುಮಾರ ನಾರ್ಣಕಜೆ – ಆಂಟನಿ, ಗುಂಪು
ಹುಲುಗಪ್ಪ ಕಟ್ಟಿಮನಿ -ಬ್ರೂಟಸ್
ಪ್ರಶಾಂತ್ ಹಿರೇಮಠ – ಬ್ರೂಟಸ್, ಜೂಲಿಯಸ್ ಸೀಜರ್, ಗುಂಪು
ಕೆ.ಆರ್. ನಂದಿನಿ- ಪೋರ್ಷಿಯಾ, ಗುಂಪು
ನೂರ್ ಅಹ್ಮದ್ ಶೇಖ್-ಸಿನ್ನಾ, ಸತ್ಯವಾದಿ
ವಿನಾಯಕಭಟ್ ಹಾಸಣಗಿ-ಕ್ಯಾಸಿಯಸ್, ಗುಂಪು
ಎಸ್. ರಾಮನಾಥ -ಆಕ್ಟೇವಿಯಸ್, ಪಾಪಿಲಸ್, ಗುಂಪು
ಮೈಮ್ ರಮೇಶ್ -ಸತ್ಯವಾದಿ, ಸಿನ್ನಾ
ಎಸ್. ರಾಮು-ಆಕ್ಟೇವಿಯಸ್, ಪಾಪಿಲಸ್, ಗುಂಪು
ಸರೋಜ ಹೆಗಡೆ-ಕಾಲ್ಪೂರ್ನಿಯಾ
ಪ್ರಮೀಳಾ ಬೇಂಗ್ರೆ -ಕಾಲ್ಫೂರ್ನಿಯಾ
ಗೀತಾ ಎಂ.ಎಸ್. -ಪೋರ್ಷಿಯಾ, ಗುಂಪು
ಮಂಜುನಾಥ ಬೆಳಕೆರೆ-ಕ್ಯಾಸ್ಕ
ಸಂತೋಷಕುಮಾರ್ ಕುಸನೂರ್-ಡೀಸಿಯಸ್ ಬ್ರೂಟಸ್
ಮಹದೇವ್-ಜೂಲಿಯಸ್ ಸೀಜರ್, ಗುಂಪು
ಎಂ.ಸಿ. ಕೃಷ್ಣಪ್ರಸಾದ್-ಕ್ಯಾಸಿಯಸ್, ಗುಂಪು
ರಂಗನಾಥ್ .ವಿ- ಟ್ರಿಬೋನಿಯಸ್, ವಲ್ಯೂಮಿನಸ್
ವಿಶಾಲ್ ಪಾಲಾಪುರೆ-ಮೆಟಲಸ್ ಸಿಂಬರ್, ಲಿಪಿಡಸ್
ಕವಿತಾ ಎ.ಎಂ-ಲೂಸಿಯಸ್, ಗುಂಪು
ಸಂಜಯ್ ಕಿರಣ್-ಪಬ್ಲಿಯಸ್
ಮಹೇಶ್ ಕಲ್ಲತ್ತಿ -ಕವಿ ಸಿನ್ಹಾ
ಮಂಜು ಹೆಚ್ – ಆರ್ಟಿಮಿಡೋರಸ್, ಸೀಜರ್ ಸೇವಕ
ಶೃತಿ – ಗುಂಪು
ಪುಷ್ಪಾ ಆರ್ ಪಾಟೀಲ್ – ಆಂಟನಿ ಸೇವಕ, ಗುಂಪು

ಪ್ರೊ. ಜಿ. ಕೆ. ಗೋವಿಂದರಾವ್

ಪ್ರೊ. ಜಿ.ಕೆ. ಗೋವಿಂದರಾವ್ ನಿವೃತ್ತ ಇಂಗ್ಲೀಷ್ ಪ್ರಾಧ್ಯಾಪಕರು ಜೊತೆ ಜೊತೆಗೆ ರಂಗಭೂಮಿ, ಚಲನಚಿತ್ರ, ಕಿರುತೆರೆಯ ಪ್ರಖ್ಯಾತ ನಟರು. ಲೇಖಕರು, ಕವಿಗಳು, ಪ್ರಸ್ತುತ ರಂಗಸಮಾಜದ ಹಿರಿಯ ಸದಸ್ಯರು. ಮಹಾಕವಿ ವಿಲಿಯಂ ಶೇಕ್ಸ್‌ಪಿಯರ್‌ನ ನಾಟಕಗಳನ್ನು ಕುರಿತಂತೆ ಅಧಿಕೃತವಾಗಿ ಮಾತನಾಡಬಲ್ಲ ಕನ್ನಡದ ಕೆಲವೇ ಮಂದಿಯ ಪೈಕಿ ಒಬ್ಬರು. ರಾಷ್ಟ್ರಪ್ರಶಸ್ತಿ ವಿಜೇತ ಗ್ರಹಣ ಚಲನಚಿತ್ರವನ್ನು ಒಳಗೊಂಡಂತೆ ಹಲವಾರು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮಾಲ್ಗುಡಿ ಡೇಸ್, ಮಹಾಪರ್ವ ಧಾರವಾಹಿಗಳಲ್ಲಿ ಪ್ರಮುಖ ಭೂಮಿಕೆಯಲ್ಲಿ ನಟಿಸಿದ್ದಾರೆ.

ತಮ್ಮ ನೇರ ನಿಷ್ಠೂರ ಹರಿತ ನಾಲಿಗೆಯ ನುಡಿಯಿಂದಾಗಿ ನಮ್ಮ ಸಮಾಜದ ಗಮನ ಸೆಳೆದಿರುವ ಶ್ರೀ ಗೋವಿಂದರಾವ್ ಅಂಧಶ್ರದ್ಧೆ, ಮೂಢನಂಬಿಕೆಯನ್ನು ಮೊದಲಿನಿಂದಲೂ ವಿರೋಧಿಸುತ್ತಾ ಬಂದಿದ್ದಾರೆ. ಈ ಕುರಿತಂತೆ ರಾಜ್ಯದ ಹಲವೆಡೆ ಉಪನ್ಯಾಸಗಳನ್ನೂ ನೀಡಿದ್ದಾರೆ. ಪುಸ್ತಕಗಳನ್ನು ಬರೆದಿದ್ದಾರೆ. ’ಶೇಕ್ಸ್‌ಪಿಯರ್-ಎರಡು ನಾಟಕಗಳ ಅಧ್ಯಯನ’ ಇತ್ತೀಚೆಗೆ ನಾಟಕ ರಚನೆಯ ಸಂಗ್ರಹಯೋಗ್ಯ ಮೌಲ್ವಿಕ ಹೊತ್ತಿಗೆ.
ಶೇಕ್ಸ್‌ಪಿಯರ್‌ನ ಹಲವಾರು ನಾಟಕಗಳನ್ನು ನಿರ್ದೇಶಿಸಿರುವ, ನಟಿಸಿರುವ ಶ್ರೀಯುತರು ಪ್ರಸ್ತುತ ರಂಗಾಯಣಕ್ಕಾಗಿ ’ಜೂಲಿಯಸ್ ಸೀಜರ್’ ನಾಟಕವನ್ನು ನಿರ್ದೇಶಿಸಿದ್ದಾರೆ.

ಭಾರತೀಯ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು

ರವಿತೇಜ .ಆರ್, ಬಿ.ಬಿ. ಆಶ್ವಿನಿ, ಕುಮಾರ್ .ಬಿ.ಜಿ, ಭಾಗ್ಯಲಕ್ಷ್ಮಿ .ಎಂ.ಪಿ, ಶ್ರೀಕಾಂತ ಪವಾಡಪ್ಪ ನವಲಗರಿ, ರಾಕೇಶ್ .ಪಿ, ವಿನೋದ ಕುಮಾರ, ವೆಂಕಟೇಶ್‌ಪ್ರಸಾದ್ .ಎಚ್.ಡಿ, ಸಂಜಯ್‌ಕುಮಾರ್ .ಟಿ.ಪಿ, ರವಿ ಅಲಿಯಾಸ್ ರಾಜಶೇಖರಯ್ಯ ವಿ.ಎಸ್, ಬೋಪಣ್ಣ ಎಂ.ಹೆಚ್, ಅಮಿತ್ ಜೆ ರೆಡ್ಡಿ, ಕಾರ್ತಿಕ್ .ಬಿ.ಎನ್, ರವಿ. ವಿ, ಸೂರ್ಯಕುಮಾರಿ

ರಂಗದ ಹಿಂದೆ

ರಂಗ ನಿರ್ವಹಣೆ – ನಂದಿನಿ ಕೆ.ಆರ್
ರಂಗವಿನ್ಯಾಸ – ಹೆಚ್.ಕೆ. ದ್ವಾರಕಾನಾಥ್
ರಂಗಸಜ್ಜಿಕೆ – ವಿನಾಯಕಭಟ್, ಗೀತಾ ಎಂ.ಎಸ್, ವಿ.ರಂಗನಾಥ್
ರಂಗಪರಿಕರ – ಸಂತೋಷ್‌ಕುಮಾರ್ ಕುಸನೂರ್, ಮಂಜುನಾಥ ಬೆಳಕೆರೆ. ಜಗದೀಶ್ ಮನವಾರ್ತೆ, ಸಂಜಯ್‌ಕಿರಣ್
ಪ್ರಸಾದನ – ಬಿ.ಎನ್. ಶಶಿಕಲಾ, ಕವಿತಾ
ವಸ್ತ್ರವಿನ್ಯಾಸ – ಪ್ರಮೀಳಾ ಬೇಂಗ್ರೆ,
ಸಹಾಯ – ಎಂ.ಸಿ. ಕೃಷ್ಣಪ್ರಸಾದ್, ಹುಲುಗಪ್ಪ ಕಟ್ಟೀಮನಿ, ಶೃತಿ, ದಿವ್ಯಾ
ಬೆಳಕಿನ ವಿನ್ಯಾಸ – ಕೃಷ್ಣಕುಮಾರ್ ನಾರ್ಣಕಜೆ,
ಸಹಾಯ – ಮಹೇಶ್ ಕಲ್ಲತ್ತಿ, ವಿಶಾಲ್‌ಪಾಲಾಪುರೆ
ಪರಿಚಯ ಪತ್ರ – ರಾಮನಾಥ ಎಸ್, ಪುಷ್ಪಾ ಆರ್ ಪಾಟೀಲ್
ಸಂಗೀತ – ಶ್ರೀನಿವಾಸಭಟ್, ಪ್ರಶಾಂತ ಹಿರೇಮಠ
ಸಾಂಗತ್ಯ – ಧನಂಜಯ ಆರ್.ಸಿ ರಂಗಸಮುದ್ರ, ಮಂಜು .ಹೆಚ್