ಯುದ್ದ ಬಂತು ಮನೆಯವರೆಗೆ

ಯುದ್ದ ಬಂತು ಮನೆಯವರೆಗೆ

ರಂಗಾಯಣ ಮೈಸೂರು ಮಿನಿ ರೆಪರ್ಟರಿ ಕಲಾವಿದರು ಅಭಿನಯಿಸುವ Shripad Bhat ಸರ್ ನಿರ್ದೇಶನ ದಲಿ ಕಟ್ಟಿದ ಆಟ. “ಯುದ್ದ ಬಂತು ಮನೆಯವರೆಗೆ”. 18 ಮತ್ತು 25 ತಾರೀಖಿನಂದು ರಂಗಾಯಣದ ಭೂಮಿಗೀತದಲ್ಲಿ ಪ್ರದರ್ಶನವಿದೆ ನೀವು ಬನ್ನಿ ನಿಮ್ಮ ಸ್ನೇಹಿತರನ್ನೂ...

Read More

ಹಸಿರು ದಸರಾ 2016 – ರಂಗಭೀಷ್ಮ ಬಿ.ವಿ.ಕಾರತ ಕಾಲೇಜು ರಂಗೋತ್ಸವ

ಹಸಿರು ದಸರಾ 2016 – ರಂಗಭೀಷ್ಮ ಬಿ.ವಿ.ಕಾರತ ಕಾಲೇಜು ರಂಗೋತ್ಸವ

ಹಸಿರು ದಸರಾ ಹಾಗೂ ರಂಗಭೀಷ್ಮ ಬಿ.ವಿ.ಕಾರತ ಕಾಲೇಜು ರಂಗೋತ್ಸವ 2016 ಮೈಸೂರು ವಿಶ್ವವಿಖ್ಯಾತ ಪಾರಂಪರಿಕ ದಸರಾ ಹಬ್ಬ ನಮ್ಮ ಜನರ ನಾಡಹಬ್ಬ. ಗ್ರಾಮೀಣ ಸಂಸ್ಕೃತಿಯ ಒಡಲಾಳದ ನಮ್ಮ ಹಬ್ಬ, ಉತ್ಸವ, ಆಚರಣೆಗಳು ಜನ ಸಾಮಾನ್ಯರ ದುಃಖ ದುಮ್ಮಾನಗಳ ನಿವಾರಣೆಯತ್ತ ಆತ್ಮಬಲವನ್ನು ತುಂಬುವ ಬದುಕಿನ ಹಾದಿಗೆ ವಿಶ್ವಾಸ ಮೂಡಿಸುವ ನಂಬಿಕೆಯನ್ನು ಸದೃಢಗೊಳಿಸುವ ಸಂಸ್ಕೃತಿಯಲ್ಲಿ ಬೆಳೆದಿದೆ. ಈ ಹಾದಿಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಮೈಸೂರು ರಂಗಾಯಣದಲ್ಲಿ ಜಿಲ್ಲಾಡಳಿತದ ಸಹಕಾರದೊಂದಿಗೆ ಆಡಂಭರವಿಲ್ಲದ ಪ್ರಕೃತಿ ಸಂರಕ್ಷಣೆಯ ಸಂದೇಶದಡಿಯಲ್ಲಿ ಹಸಿರು ದಸರಾವನ್ನು ಆಚರಿಸುವುದರ ಮೂಲಕ ಪ್ರಸ್ತುತ ಜನರನ್ನು ಕಾಡುತ್ತಿರುವ ನೀರಿನ ಸಮಸ್ಯೆ ಬಗೆಹರಿಯಬೇಕು. ಸಮೃದ್ಧ ಮಳೆಯಾಗಬೇಕು. ಫಲವತ್ತಾದ ಬೆಳೆಯಾಗಬೇಕು ಅದಕ್ಕಾಗಿ ನಾವೆಲ್ಲಾ ಐಕ್ಯತಾ ಭಾವದಿಂದ ಪ್ರಕೃತಿ ಸಂರಕ್ಷಣೆ ಮಾಡಬೇಕು. ಬದುಕಿನುದ್ದಕ್ಕೂ ಹಸಿರು ಮಾನವನ ಉಸಿರಾಗಿ ಸಮಾನತೆ, ಭಾವೈಕ್ಯತೆಯತ್ತ ಸಮಾಜ ಸದೃಢಗೊಳ್ಳಬೇಕೆಂಬ ಆಶಯ ಹೊತ್ತ ರಂಗಾಯಣವು ಈ ಬಾರಿ ವಿಶೇಷವಾಗಿ ಯುವಜನ ವಿದ್ಯಾರ್ಥಿಗಳಲ್ಲಿ ಪ್ರಾಕೃತಿಕ ಮನೋಭಾವ ಬೆಳೆಸಲೋಸುಗ ಅವರಿಗೆಂದೇ ಸಿದ್ಧಗೊಳಿಸಿದ ಅರ್ಥಪೂರ್ಣವಾದ ಹಸಿರು ದಸರಾ ರಂಗೋತ್ಸವವನ್ನು ಆಯೋಜಿಸಲಾಗಿದೆ. ಹೆಚ್ಚಿನ...

Read More

ಚಕಾವ್ ಟು ಶಾಂಪೇನ್

ಚಕಾವ್ ಟು ಶಾಂಪೇನ್

ದಿನಾಂಕ : 03-09-2016 | ಸಮಯ ಸಂಜೆ : 6:30 ಗಂಟೆಗೆ | ಸ್ಥಳ : ಭೂಮಿಗೀತ | ರೂಪಾನುವಾದ: ಡಾ. ಹೇಮಾ ಪಟ್ಟಣಶೆಟ್ಟಿ |ನಿರ್ದೇಶನ : ಚಿದಂಬರ ರಾವ್ ಜಂಬೆ | ವೇಷಭೂಷಣ: ರಾಮಚಂದ್ರ ಶೇರಿಗಾರ, ಬಸವರಾಜು ಅಜ್ಜಣ್ಣವರ್‍, ಸುನಂದಾ ನಿಂಬನಗೌಡರ್‍| ಸಂಗೀತ : ಶ್ರೀನಿವಾಸಭಟ್ (ಚೀನಿ) | ಬೆಳಕು : ನಾಗರಾಜು ಪಾಟೀಲ್ |ಪ್ರಸಾಧನ : ಸಂತೋಷ ಮಹಾಲೆ |  ಟಿಕೆಟ್‌ಗಳಿಗಾಗಿ ರಂಗಾಯಣ ಕಛೇರಿಯನ್ನು ಸಂಪರ್ಕಿಸಿ. ದೂರವಾಣಿ ಸಂಖ್ಯೆ : 0821-2512639 ನಾಟಕದ ಬಗ್ಗೆ ‘ರಶಿಯನ್ ಇದ್ದಾನಲ್ಲ ಅವನು ವಿಚಿತ್ರ ಜೀವಿ, ಜರಡಿಯ ಥರ. ಏನೂ ನಿಲ್ಲುವುದಿಲ್ಲ ಅವನೊಳಗೆ, ಜರಡಿಯೊಳಕ್ಕೆ ಬಿದ್ದದ್ದೆಲ್ಲ ಜಾರಿಹೋಗುವ ಹಾಗೆ, ಯೌವ್ವನದಲ್ಲಿ ತನ್ನೆದುರಿಗೆ ಕಂಡದ್ದನ್ನೆಲ್ಲ ಆಸೆಬುರುಕನ ಹಾಗೆ ತುಂಬಿಕೊಳ್ಳುತ್ತಾನೆ. ಮೂವತ್ತು ವರ್ಷವಾದ ಮೇಲೆ ಬರಿಯ ಗಸಿಯಲ್ಲದೆ ಇನ್ನೇನೂ ಉಳಿದಿರುವುದಿಲ್ಲ. ಮನುಷ್ಯರ ಹಾಗೆ ಬದುಕುವುದಕ್ಕೆ ದುಡಿಯಬೇಕು. ಪ್ರೀತಿ-ವಿಶ್ವಾಸ ಇಟ್ಟುಕೊಂಡು ದುಡಿಯಬೇಕು. ನಮ್ಮ ಕೈಯಲ್ಲಿ ಅದು ಆಗುವುದಿಲ್ಲ. ಒಂದೆರಡು ಕಟ್ಟಡ ಕಟ್ಟಿದ ತಕ್ಷಣ ವಾಸ್ತುಶಿಲ್ಪಿ ಇಸ್ಪೀಟು ಆಟದಲ್ಲಿ ಮುಳುಗುತ್ತಾನೆ ಅಥವಾ ಥಿಯೇಟರಿಗೆ ಹೋಗಿ ನಾಟಕ ನೋಡುತ್ತ ಕಾಲ ಕಳೆಯುತ್ತಾನೆ. ಡಾಕ್ಟರು, ಒಂದಿಷ್ಟು ಪ್ರಾಕ್ಟೀಸು ಕೈಗೆ ಹತ್ತಿದ ತಕ್ಷಣ ವಿಜ್ಙಾನದಲ್ಲಿ ಆಸಕ್ತಿ ಕಳೆದುಕೊಂಡು ಮೆಡಿಕಲ್ ಜರ್ನಲ್ ಬಿಟ್ಟರೆ ಇನ್ನೇನೂ ಓದುವುದೇ ಇಲ್ಲ. ನಲವತ್ತನೆಯ ವಯಸ್ಸು ತಲುಪುವ ಹೊತ್ತಿಗೆ ಎಲ್ಲ ರೋಗಗಳಿಗೂ ಗಂಟಲುರಿತ, ಕಫವೇ ಕಾರಣ ಎಂದು ನಂಬಿ ಬಿಟ್ಟಿರುತ್ತಾನೆ. ತಾನು ಮಾಡುತ್ತಿರುವ ಕೆಲಸದ ಅರ್ಥವನ್ನು ಒಂದಿಷ್ಟಾದರೂ ತಿಳಿದಿರುವ ಒಬ್ಬನೇ ಒಬ್ಬ ಗುಮಾಸ್ತನನ್ನೂ ಅಧಿಕಾರಿಯನ್ನೂ ನಾನು ಕಂಡಿಲ್ಲ. ಯಾವುದೋ ಪಟ್ಟಣದಲ್ಲೋ ರಾಜಧಾನಿಯಲ್ಲೋ ಕೂತಿರುತ್ತಾರೆ. ಪತ್ರಗಳನ್ನು ಬರೆದು ಹಿರಿಯ ಅಧಿಕಾರಿಗಳ ಅವಗಾಹನೆಗೆ ಸಲ್ಲಿಸುತ್ತಿರುತ್ತಾರೆ. ಆ ಪತ್ರಗಳಿಂದ ಯಾರೋ ಇನ್ನೊಬ್ಬರ ಸ್ವಾತಂತ್ರ್‍ಯವನ್ನೋ ಆಸ್ತಿಯನ್ನೋ ಕಸಿದುಕೊಳ್ಳುತ್ತದೆ. ನಾಸ್ತಿಕರು ಹೇಗೆ ನರಕದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲವೋ ಹಾಗೆ ಸರಕಾರಿ ಗುಮಾಸ್ತರು ತಮ್ಮ ಕಾರ್ಯದ ಪರಿಣಾಮದ ಬಗ್ಗೆ ಯೋಚನೆ ಮಾಡುವವರಲ್ಲ. ಹೆಸರು ಮಾಡಿರುವ ವಕೀಲರು ನ್ಯಾಯದ ಬಗ್ಗೆ ಕಿಂಚಿತ್ತೂ ಯೋಚನೆ ಮಾಡದೆ ಆಸ್ತಿಯ ಹಕ್ಕು, ಅಪರಾಧ ಎಲ್ಲವನ್ನು ಸಮರ್ಥಿಸಿರೇಸಿಗೆ ಹೋಗಿ ಖುಶಿಪಟ್ಟು ಮಹಾನ್ ರಸಿಕನ ಹಾಗೆ ನಿಶ್ಚಿಂತೆಯಿಂದ ಆಯಿಸ್ಟರ್‍ ಮೆಲ್ಲುತ್ತಾನೆ. ಎರಡು ಮೂರು ಪಾತ್ರಗಳನ್ನು ತಕ್ಕಮಟ್ಟಿಗೆ ನಿರ್ವಹಿಸಿದ ನಟ ಪಾತ್ರಗಳನ್ನು ಅಭ್ಯಾಸ ಮಾಡುವುದನ್ನು ಬಿಡುತ್ತಾನೆ. ಮಾತು ಕಲಿಯುವ ಶ್ರಮ ತೊರೆಯುತ್ತಾನೆ. ತಾನೇ ಮಹಾನ್ ಪ್ರತಿಭಾವಂತನೆಂದು ಭ್ರಮಿಸುತ್ತ ಓಡಾಡಿಕೊಂಡಿರುತ್ತಾನೆ. ರಶಿಯಾ ಅನ್ನುವುದು ಅತೃಪ್ತರೂ ಸೋಮಾರಿಗಳೂ ತುಂಬಿರುವ ನಾಡು. ಹೊಟ್ಟೆ ಬಿರಿಯುವ ಹಾಗೆ ರುಚಿಯಾಗಿ ಉಂಡು, ಕುಡಿದು ಹಗಲು ಹೊತ್ತಿನಲ್ಲೂ ಮಲಗಿ, ನಿದ್ರೆಮಾಡುವಾಗೆಲ್ಲ ಗೊರಕೆ ಹೊಡೆಯುತ್ತಿರುತ್ತಾರೆ. ಮನೆಯನ್ನು ನೊಡಿಕೊಳ್ಳವವರು ಬೇಕೆಂದು ಮದುವೆಯಾಗುತ್ತಾರೆ. ಜನ ತಮ್ಮನ್ನು ಮೆಚ್ಚಲೆಂದು ಪ್ರೇಯಿಸಿಯೊಬ್ಬಳನ್ನು ಇಟ್ಟುಕೊಳ್ಳುತ್ತಾರೆ. ಅವರದ್ದು ನಾಯಿಯ ಸೈಕಾಲಜಿ. ಪೆಟ್ಟು ಬಿದ್ದಾಗ ಕುಂಯ್‌ಗುಡುತ್ತ ಓಡಿ ಹೋಗಿ ಬಚ್ಚಿಟ್ಟುಕೊಳ್ಳುತ್ತಾರೆ. ಮುದ್ದು ಮಾಡಿದರೆ ಅಂಗಾತ ಮಲಗಿ ಕಾಲು ಜಾಡಿಸುತ್ತ, ಬಾಲ ಆಡಿಸುತ್ತಾರೆ.’...

Read More