ಆರ್.ಕೆ. ಲಕ್ಷ್ಮಣ್; ಒಂದು ನೆನಪು – ನುಡಿ ನಮನ ಸಮರ್ಪಣೆ

ದಿನಾಂಕ: ೦9-೦2-2೦15 ರಂದು ಸಂಜೆ 6.30 ಕ್ಕೆ. ಸ್ಥಳ: ರಂಗಾಯಣದ ಭೂಮಿಗೀತ

ಆರ್.ಕೆ. ಲಕ್ಷ್ಮಣ್
ಜನ ಸಾಮಾನ್ಯರ ಜತೆಗಾರ ವ್ಯಂಗ್ಯಗೆರೆ ಪ್ರಪಂಚದ ಚಕ್ರವರ್ತಿ ಆರ್.ಕೆ. ಲಕ್ಷ್ಮಣ್ ಈ ದೇಶ ಕಂಡ ಹೆಮ್ಮೆಯ ವ್ಯಂಗ್ಯಚಿತ್ರಕಾರರು ಇನ್ನಿಲ್ಲವಾಗಿದ್ದಾರೆ. ಜಗತ್ತಿನ ವ್ಯಂಗ್ಯ ಚಿತ್ರಕಾರರ ಸಾಲಿನಲ್ಲಿ ನಿಲ್ಲುವ ಇವರು ಜಗತ್ತು ಕೊನೆಯಾಗುವ ತನಕ ಇವರ ಕಾಮನ್ ಮ್ಯಾನ್ ಮೂಲಕ ಜೀವಂತವಾಗಿರುತ್ತಾರೆ. ನಮ್ಮ ಮೈಸೂರಿನವರೇ ಆದ ಆರ್.ಕೆ. ಲಕ್ಷ್ಮಣ್‌ರಿಗೆ ನಮ್ಮ ಹೃದಯಪೂರ್ವಕ ನುಡಿ ನಮನವನ್ನು ಸಲ್ಲಿಸುವುದು ಕಾಲದ ಕರ್ತವ್ಯವೆಂದು ಭಾವಿಸಿದ್ದೇವೆ. ವ್ಯಂಗ್ಯ ಚಿತ್ರಗಳನ್ನು ರಚಿಸಿ, ನಗಿಸಿ, ವಿಡಂಭನಾತ್ಮಕವಾಗಿ ಎಚ್ಚರ ಮತ್ತು ಅರಿವಿನ ಹಾದಿಯಲ್ಲಿ ಚಿತ್ರಗಳನ್ನು ಸಂಯೋಜನೆ ಮಾಡಿ ಸಮಾಜ ಮತ್ತು ವ್ಯಕ್ತಿಗಳ ಮಾನಸಿಕ ವಕ್ರತೆಗಳ ವಿಕಾರಗಳನ್ನು ತಿದ್ದಿ ಆಕಾರಗೊಳಿಸುವ ಹಾಗೂ ಜನ ಸಾಮಾನ್ಯನ ಒಡನಾಡಿಯಾಗಿ ತನ್ನ ಕಲಾಕೃತಿಗಳೊಡನೆ ವರ್ತಿಸಿದ ವ್ಯಂಗ್ಯಚಿತ್ರ ಕಲೆಯನ್ನು ದಿವ್ಯವಾಗಿ ಬೆಳೆಸಿದ ನಿಷ್ಠೂರ ಪ್ರಜ್ಞೆಗೆ ಸಾಕ್ಷಿಯಾದಂತಹ ಆರ್.ಕೆ. ಲಕ್ಷ್ಮಣ್‌ರವರಿಗೆ ನುಡಿ ನಮನ ಸಲ್ಲಿಸುವುದು ರಂಗಭೂಮಿಯ ಕರ್ತವ್ಯವೆಂದರಿತ ರಂಗಾಯಣವು ದಿನಾಂಕ: ೦೯-೦೨-೨೦೧೫ ರಂದು ಸಂಜೆ ೬.೩೦ಕ್ಕೆ ರಂಗಾಯಣದ ಭೂಮಿಗೀತದಲ್ಲಿ ‘ಆರ್.ಕೆ. ಲಕ್ಷ್ಮಣ್; ಒಂದು ನೆನಪು – ನುಡಿ ನಮನ ಸಮರ್ಪಣೆ‘ ಕಾರ್ಯಕ್ರಮವನ್ನು ಆಯೋಜಿಸಿದೆ. ನಾಡಿನ ಪ್ರತಿಭಾವಂತ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಆರ್.ಕೆ. ಲಕ್ಷ್ಮಣ್‌ರವರು ರಚಿಸಿದ ವ್ಯಂಗ್ಯಚಿತ್ರಗಳ ಪ್ರದರ್ಶನ ಹಾಗೂ ಭಾರತ ಸರ್ಕಾರದ ವಾರ್ತಾ ಮತ್ತು ಪ್ರಚಾರ ಮಂತ್ರಾಲಯದ ಚಲನಚಿತ್ರ ವಿಭಾಗ, ಬೆಂಗಳೂರು ಇವರ ಸಹಯೋಗದೊಂದಿಗೆ ಆರ್.ಕೆ. ಲಕ್ಷ್ಮಣ್ ಜೀವನ ಮತ್ತು ಸಾಧನೆಯನ್ನು ಕುರಿತ ಸಾಕ್ಷ್ಯಚಿತ್ರ (ನಿರ್ಮಾಣ : ಚಲನಚಿತ್ರ ವಿಭಾಗ, ಬೆಂಗಳೂರು) ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಎಲ್ಲ್ಲರಿಗೂ ರಂಗಾಯಣ ಪ್ರೀತಿಯ ಸ್ವಾಗತವನ್ನು ಕೋರುತ್ತದೆ.

On 09-02-2015 @ 6.30pm. Place: Bhoomigeetha, Rangayana

R.K. LAXMAN
The King of the Cartoon Lines, companion of common people, cartoonist, and the pride of this nation is no more. Being one among the great cartoonists of the world, R.K. Laxman lives eternally through his ‘COMMON MAN’ till the end of this world. We feel it is the duty of the Time to express our heartfelt condolence to R.K. Laxman’s demise who was from Mysore. As felt it is also the duty of Theatre to remember the man who by drawing cartoons, made us laugh, travel through the road of caution and knowledge by composing his cartoons with wit and irony, which in turn corrected the society and mental deformities of people, who was the companion of common people, who took cartoon art to a divine state and who was a witness to the sense of straightforwardness – Rangayana is organizing the program ‘R.K. Laxman – Ondu Nenapu; Nudi Namana Samarpane’ at Bhoomigeetha on 09.02.2015 @ 6.30pm.

Acclaimed artists of this country are participating. Exhibition of R.K. Laxman’s cartoons and projection of documentary films about the life and achievements of R.K. Laxman are also being organized. Rangayana heartily welcomes you all.