ವಾರಾಂತ್ಯದ ಪ್ರದರ್ಶನ:ದಿನಾಂಕ 04/11/2018 ನಾಟಕ: ರೆಕ್ಸ್ ಅವರ್ಸ್ 

ಸಂಚಾರಿ ರಂಗಘಟಕದ ಕಲಾವಿದರು ಪ್ರಸ್ತುತಪಡಿಸುವ ಸಂಚಾರಿ ರಂಗಘಟಕದ ಕಲಾವಿದರು ಪ್ರಸ್ತುತಪಡಿಸುವ  
ರೆಕ್ಸ್ ಅವರ್ಸ್ (ಡೈನೋ ಏಕಾಂಗಿ ಪಯಣ) 

ಪಪೆಟ್ ತಯಾರಿಕೆ ಮತ್ತು ನಿರ್ದೇಶನ ಶ್ರವಣಕುಮಾರ್ ಹೆಗ್ಗೋಡು
ಸಂಜೆ 6:30ಕ್ಕೆ, ಸ್ಥಳ: ವನರಂಗ

ರೆಕ್ಸ್ ಅವರ್‍-ಡೈನೋ ಏಕಾಂಗಿ ಪಯಣ
ರೆಕ್ಸ್ ಅವರ್ಸ್  ಡೈನೋ ಏಕಾಂಗಿ ಪಯಣದ ಪಪೆಟ್ ಶೋನಲ್ಲಿ ಬಳಸುತ್ತಿರುವ ಗೊಂಬೆ ಮಾದರಿ ಜಪಾನಿನ ಪ್ರಸಿದ್ಧ ಸಾಂಪ್ರದಾಯಿಕ ಗೊಂಬೆಯಾಟ ಬುನ್ರಾಖುವನ್ನು ಅನುಸರಿಸುವ ಗೊಂಬೆ ಮಾದರಿಯಾಗಿದ್ದು, ಬುನ್ರಾಖು ಮಾನವನ ದೇಹರಚನೆಯ ಮೇಲೆ ರಚಿಸಲ್ಪಟ್ಟ ಗೊಂಬೆಯಾಗಿದೆ. ಬುನ್ರಾಖುವನ್ನು ಭಾರತದ ಕಥೆಗಳಿಗನುಸಾರವಾಗಿ ವಿನ್ಯಾಸಗೊಳಿಸಲಾಗಿದ್ದು, ಸಮಕಾಲೀನ ಶೈಲಿಗೆ ಮಾರ್ಪಾಡು ಮಾಡಲಾಗಿದೆ. ಅಲ್ಲದೆ ಪ್ರಸ್ತುತ ಪ್ರದರ್ಶನದಲ್ಲಿ ಮಾನವ ದೇಹರಚನೆಯ ಗೊಂಬೆಗಳ ಬದಲಾಗಿ ಪ್ರಾಣಿಗಳ ದೇಹರಚನೆಯ ಗೊಂಬೆಗಳನ್ನು ಬಳಸಲಾಗಿದೆ. ರೆಕ್ಸ್ ಅವರ್ಸ್ ಒಂದು ತಾಯಿಯಿಂದ ಬೇರ್ಪಟ್ಟ ಟಿ-ರೆಕ್ಸ್‌ನ ಮೊಟ್ಟೆಯ ಕಥೆ ಹಲವು ತೊಡಕುಗಳ ನಡುವೆ ಮೊಟ್ಟೆಯೊಡೆದು ಹೊರ ಬಂದ ಪುಟ್ಟ ಟಿ-ರೆಕ್ಸ್‌ನ ಮರಿ ಸಹಜವಾಗಿ ನಿಸರ್ಗದ ಅಚ್ಚರಿಯನ್ನು ಗಮನಿಸುತ್ತಾ, ಅದಕ್ಕೆ ಹೊಂದಿಕೊಳ್ಳುತ್ತಾ ಸಾಗುತ್ತದೆ. ಅದರ ಪ್ರಯಾಣ ತನ್ನನ್ನು ಪೋಷಿಸಬಲ್ಲ ತಾಯಿಯ ಹುಡುಕಾಟವಾಗುತ್ತದೆ. ಅದೇ ಸಂದರ್ಭದಲ್ಲಿ ಅದು ಹಸಿದ ರ್‍ಯಾಪ್ಟರ್‌ಗಳ ಕೈಗೆ ಸಿಕ್ಕು ಆ ರ್‍ಯಾಪ್ಟರನ್ನೇ ಅದು ತಾಯಿಯಾಗಿ ಕಾಣಲಾರಂಭಿಸುತ್ತದೆ. ಪುಟ್ಟ ಮರಿಯ ಮುಗ್ಧ ಪ್ರೀತಿಗೆ ಸೋತ ರ್‍ಯಾಪ್ಟರ್ ಸಾಕುತಾಯಿಯಾಗಿ ಅದಕ್ಕೆ ಪೋಷಣೆಯಿತ್ತು ಬೆಳೆಸಲಾರಂಭಿಸುತ್ತದೆ. ಜೊತೆಗೆ ಆ ಮರಿಗೆ ಅಗತ್ಯವಾದ ಬೇಟೆಯ ವಿದ್ಯೆಯನ್ನು, ಸಂರಕ್ಷಣೆಯ ತಂತ್ರಗಳನ್ನು ಕಲಿಸುತ್ತದೆ. ಕ್ರಮೇಣ ನೈಸರ್ಗಿಕ ಅಸಮತೋಲನಗಳು ಆರಂಭವಾಗಿ ಪ್ರಾಣಿಗಳೆಲ್ಲ ವಲಸೆ ಹೊರಡುವ ಸಂದರ್ಭ ಆ ಮರಿಯ ನಿಜವಾದ ತಾಯಿ ಟಿ-ರೆಕ್ಸ್ ಸಿಕ್ಕು ತಾಯಿ-ಮಗುವಿನ ಭೇಟಿಯಾಗುತ್ತದೆ. ಆದರೆ ಆ ಮರಿಗೆ ತನ್ನಂತೆಯೇ ದೇಹರಚನೆಯ ಅಪರಿಚಿತ ತಾಯಿಯನ್ನು ಕಂಡಾಗ ತನ್ನಂತಿಲ್ಲದಿದ್ದರೂ ಪೋಷಿಸಿದ ಸಾಕುತಾಯಿಯೇ ತಾಯಿ ಎಂದೆನ್ನಿಸಲಾರಂಭಿಸುತ್ತದೆ. ಆದರೆ ಆ ಮರಿಯ ರಕ್ಷಣೆ ಅದರ ಹೆತ್ತ ತಾಯಿ ಟಿ-ರೆಕ್ಸ್ ನಿಂದ ಮಾತ್ರ ಸಾಧ್ಯವಾಗಿರುವುದರಿಂದ ರ್‍ಯಾಪ್ಟರ್‍ಸ್‌ಗಳು ತಾಯಿಯೊಂದಿಗೆ ಆ ಮರಿಯನ್ನು ಕಳುಹಿಸಿಕೊಡುತ್ತದೆ. ಮಾಂಸಾಹಾರಿ ಪ್ರಾಣಿಗಳೆಲ್ಲ ದುಷ್ಟ ಪ್ರಾಣಿಗಳಲ್ಲ. ಅವು ಸಹಜವಾಗಿ ನೈಸರ್ಗಿಕ ಸಮತೋಲನ ಕಾಯ್ದುಕೊಳ್ಳುವಂತವುಗಳು. ನಿಸರ್ಗದಲ್ಲಿ ಬಲಿಷ್ಠವಾದವು ಉಳಿಯುತ್ತವೆ. ಅವು ದುರ್ಬಲ ಪ್ರಾಣಿಗಳನ್ನು ತಿಂದು ಬದುಕುತ್ತವೆ. ಇದೇ ವಾಸ್ತವ. ಡಾರ್ವಿನ್ ಸಿದ್ಧಾಂತವೂ ಇದನ್ನೇ ಹೇಳುತ್ತದೆ. ಆದರೆ ಮಾಂಸಾಹಾರಿ ಪ್ರಾಣಿಗಳೊಳಗೆ ಪ್ರೀತಿ, ತಾಯಿ ಮಮತೆ ಇದ್ದೇ ಇದೆ. ತಾಯಿ ಯಾರೆನ್ನುವ ಧ್ವಂದ್ವ, ನಿಸರ್ಗದ ವೈಚಿತ್ರ್ಯ, ಪ್ರೀತಿಯ ಹುಡುಕಾಟವೇ  ರೆಕ್ಸ್ ಅವರ್‍ಸ್-ಡೈನೋಸರ್ ಪಯಣದ ಮೂಲ ವಸ್ತು. ಈ ಸಂಗತಿಯನ್ನು ಮಕ್ಕಳಿಗೆ ತಿಳಿಸಿಕೊಡುವುದೇ ಈ ಪೊಪೆಟ್ ಶೋನ ಮೂಲ ಆಶಯ.

ಸುದ್ದಿ ಸಮಾಚಾರಗಳು

ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ-2019 ಕ್ಕೆ
ಆಯ್ಕೆಗಾಗಿ ನಾಟಕಗಳ ಆಹ್ವಾನ.

 > ಹೆಚ್ಚಿನ ಮಾಹಿತಿಗಾಗಿ

Bahuroopi National Theatre Festival -2019
Invitation of plays for selection

> For more details

ರಂಗಾಯಣದ ಭಾರತೀಯ ರಂಗಶಿಕ್ಷಣ ಕೇಂದ್ರದ 2018-19ನೇ ಸಾಲಿನ ವಿದ್ಯಾರ್ಥಿಗಳು ಅಭಿನಯಿಸಿದ ‘ಆದಿರಂಗ – ಕ್ರಿಯಾವಿಧಿ ರಂಗಭೂಮಿ ಕುರಿತ ಪ್ರಾತ್ಯಕ್ಷಿಕೆ’ ಪ್ರದರ್ಶಿಸಲಾಯಿತು.

‘ಮನ್ನಥ ವಿಜಯ’ ಶಾಸ್ತ್ರೀಯ ಸಂಗೀತ ಪ್ರಧಾನ ಪೌರಾಣಿಕ ಕಂಪನಿ ನಾಟಕದ ಪ್ರಚಾರಕ್ಕಾಗಿ ಸಜ್ಜಾಗಿ ನಿಂತಿರುವ ಬೈಸಿಕಲ್ ಗಳು..