ಚಿಣ್ಣರ ಮೇಳ 2019

ಮಕ್ಕಳ ಬೇಸಿಗೆ ಶಿಬಿರ

ಚಿಣ್ಣರಮೇಳ-2019: ಮಕ್ಕಳ ರಂಗ ತರಬೇತಿ ಶಿಬಿರಕ್ಕೆ ಅರ್ಜಿ ವಿತರಣೆಯ ಬಗ್ಗೆ

ಮೈಸೂರು ರಂಗಾಯಣವು ಇಪ್ಪತ್ತನೇ ವರ್ಷದ ಚಿಣ್ಣರಮೇಳವನ್ನು ದಿನಾಂಕ:13-04-2019 ರಿಂದ 11-05-2019 ರವರೆಗೆ ಮೈಸೂರು ರಂಗಾಯಣದ ಆವರಣದಲ್ಲಿ ನಡೆಸಲು ಯೋಜಿಸಲಾಗಿದೆ. 2019 ಮಾರ್ಚ್ 31ಕ್ಕೆ 7 ವರ್ಷಗಳು ತುಂಬಿದ ಮತ್ತು ಈ ದಿನಾಂಕಕ್ಕೆ 14 ವರ್ಷ ತುಂಬಿರದ ಮಕ್ಕಳಿಗೆ ಮಾತ್ರ ಪ್ರವೇಶ.

ಈ ಭೂಮಿ ಮೇಲೆ ಜನಿಸುವ ಪ್ರತಿ ಮಗುವೂ ವಿಶ್ವ ಪ್ರಜೆಯಾಗಿ ಹುಟ್ಟುತ್ತದೆ. ಮಕ್ಕಳಿಗೆ ದೇಶ, ಭಾಷೆಗಳ ಗಡಿಯಿಲ್ಲ, ಮೇಲುಕೀಳು ಭಾವಗಳ ಬಂಧÀನವೂ ಇಲ್ಲ. ಅವರ ಕಲ್ಪನೆಗೆ, ಆಟಪಾಟಗಳಿಗೆ ಎಲ್ಲೆಯೆಂಬುದೇ ಇಲ್ಲ. ನೆನ್ನೆಗಳ ಕಾಟವಿಲ್ಲ, ನಾಳೆಗಳ ಚಿಂತೆಯಿಲ್ಲ. ಇಂಥ ನಿರ್ಮಲ ಮನಸ್ಸುಗಳು ತಮ್ಮ ಅಮೂಲ್ಯ ಬಾಲ್ಯವನ್ನು ಸಹಜ ಬಾಲ್ಯ ಚಟುವಟಿಕೆಗಳ ಮೂಲಕವೇ ಸವಿಯುತ್ತಾ ಬೆಳೆಯಲಿ ಎಂಬುದು ಈ ಚಿಣ್ಣರಮೇಳದ ಉದ್ದೇಶ. 29 ದಿನಗಳ ಈ ಮೇಳದಲ್ಲಿ ವಿಶೇಷ ಪರಿಣಿತರು ಮಕ್ಕಳೊಂದಿಗೆ ಕಲಾತ್ಮಕ ಸೃಜನಶೀಲ ರಂಗಪಯಣವನ್ನು ನಡೆಸಲಿದ್ದಾರೆ. ಮಕ್ಕಳು ಆಡುತ್ತಾ, ಕುಣಿಯುತ್ತಾ, ಬೀಳುತ್ತಾ ಏಳುತ್ತಾ ತಮ್ಮ ಕಲ್ಪನೆಯ ಬಣ್ಣ-ಬಣ್ಣದ ಚಿತ್ರಗಳನ್ನು ಬಿಡಿಸುತ್ತ, ಕರಕುಶಲವಸ್ತುಗಳನ್ನು ತಯಾರಿಸುತ್ತ, ಕಥೆಗಳನ್ನು ಕೇಳುತ್ತಾ, ಹೇಳುತ್ತಾ, ನಾಡಿನ ಹೆಸರಾಂತ ಮಕ್ಕಳ ಸಾಹಿತ್ಯ ಚಿಂತಕರೊಂದಿಗೆ ಮುಖಾ-ಮುಖಿ ನಡೆಸುತ್ತ, ಪಕ್ಷಿ, ಪ್ರಾಣಿ ಪರಿಸರವನ್ನು ವೀಕ್ಷಿಸುತ್ತ, ಗ್ರಾಮ ವೀಕ್ಷಣೆ ಮಾಡಿ ಸರಳ ಹಾಗೂ ಶ್ರಮದ ಬದುಕನ್ನು ಅರಿಯುತ್ತಾ, ಅಭಿನಯದ ಮೂಲಕ ನಾಟಕಗಳನ್ನು ಕಟ್ಟಿ ಪ್ರದರ್ಶಿಸುವತ್ತ ರಂಗಪಯಣವನ್ನು ನಡೆಸಲಿದ್ದಾರೆ. ಮಕ್ಕಳು ಕೂಡಿ, ಹಾಡಿ, ಊಟ ಮಾಡಿ ತಮ್ಮ ಮನಸ್ಸಿನಾಳದ ಮಾತುಗಳನ್ನು, ನಗು, ಆಶ್ಚರ್ಯ, ಭಯ, ಸಂತಸಗಳನ್ನು ಹಂಚಿಕೊಳ್ಳುತ್ತಾ ಬದುಕುವುದನ್ನು ಕಲಿಯಲೆಂಬುದು ಈ ಚಿಣ್ಣರಮೇಳದ ಉದ್ದೇಶ.

ದಿನಾಂಕ:07-04-2019 ರಂದು ಬೆಳಿಗ್ಗೆ 10.00 ಗಂಟೆಗೆ ರಂಗಾಯಣದ ಕಛೇರಿಯಲ್ಲಿ ಒಬ್ಬರಿಗೆ ಒಂದರಂತೆ ಅರ್ಜಿ ವಿತರಿಸಲಾಗುವುದು. ಪ್ರತಿ ಅರ್ಜಿ ಶುಲ್ಕ ರೂ.100/-. 300 ಅರ್ಜಿಗಳನ್ನು ಮಾತ್ರ ವಿತರಿಸÀಲಾಗುವುದು. ಮೊದಲು ಬಂದವರಿಗೆ ಮೊದಲ ಆದ್ಯತೆ. ಭರ್ತಿ ಮಾಡಿದ ಅರ್ಜಿಗಳನ್ನು ದಿನಾಂಕ:10-04-2019ರ ಸಂಜೆ 5.00 ಗಂಟೆಯೊಳಗೆ ರಂಗಾಯಣದ ಕಚೇರಿಗೆ ಖುದ್ದಾಗಿ ಸಲ್ಲಿಸಬೇಕು. ಚಿಣ್ಣರಮೇಳದ ಪ್ರವೇಶ ಶುಲ್ಕ ಮಗುವೊಂದಕ್ಕೆ ರೂ.2,500/-ಗಳ ಈ ಮೊತ್ತವನ್ನು ಜಂಟಿ ನಿರ್ದೇಶಕರು, ರಂಗಾಯಣ ಮೈಸೂರು ಇವರ ಹೆಸರಿಗೆ ಡಿ.ಡಿ ತೆಗೆದು ಅರ್ಜಿ ಜೊತೆ ಲಗತ್ತಿಸುವುದು. ಮಗುವಿನ ಜನ್ಮದಿನದ ದೃಢೀಕರಣಕ್ಕಾಗಿ ಆಧಾರ್ ಕಾರ್ಡ್ ಪ್ರತಿ ಅಥವಾ ಮಗುವಿನ ಹೆಸರು ನಮೂದಿಸಿರುವ ಜನನ ಪ್ರಮಾಣಪತ್ರವನ್ನು ಅರ್ಜಿ ಜೊತೆ ಲಗತ್ತಿಸಬೇಕು. ಅರ್ಜಿಗಾಗಿ ಸಾಲಿನಲ್ಲಿ ನಿಂತವರು ಅರ್ಜಿಯಲ್ಲಿ ಮತ್ತು ರಸೀದಿಯಲ್ಲಿ ಕಡ್ಡಾಯವಾಗಿ ಮಗುವಿನ ಹೆಸರನ್ನು ಬರೆಸಿ ರೂ.100/-ಗಳನ್ನು ಪಾವತಿಸಿ ರಸೀದಿಯೊಂದಿಗೆ ಅರ್ಜಿಯನ್ನು ಪಡೆಯುವುದು ಹಾಗೂ ಭರ್ತಿ ಮಾಡಿದ ಅರ್ಜಿಯನ್ನು ರಸೀದಿಯೊಂದಿಗೆ ಮರಳಿ ಸಲ್ಲಿಸಬೇಕು.

 

ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ರಂಗಾಯಣ ಕಚೇರಿಯನ್ನು ಸಂಪರ್ಕಿಸಿ.. ಫೋನ್ : 0821 2512639