ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ 2020 – Bahuroopi National Theatre Festival 2020

ಕರ್ನಾಟಕದ ರಂಗಾಯಣ ಮೈಸೂರು ಈ ನಾಡಿನ ಹೆಮ್ಮೆ. ಆಧುನಿಕ ರಂಗಭೂಮಿಯಲ್ಲಿ ನಾಡಿನಲ್ಲಿ ಅಲ್ಲದೇ ಹೊರನಾಡಿನಲ್ಲೂ ತನ್ನ ಛಾಪನ್ನು ಮೂಡಿಸಿರುವ ರಂಗಾಯಣದ ಬಹುಮುಖ್ಯ ಉತ್ಸವ ‘ಬಹುರೂಪಿ’. ನಮ್ಮ  ಸಂಸ್ಕೃತಿ ಮತ್ತು ಕಲೆಗಳನ್ನು ಮುಖಾ-ಮುಖಿಯಾಗಿಸುವ, ಬಹುಕಲಾರೂಪಗಳನ್ನು ಒಂದು ವಾರಗಳ ಕಾಲ ದರ್ಶನಗೊಳಿಸುವುದೇ ‘ರಾಷ್ಟ್ರೀಯ ನಾಟಕೋತ್ಸವ ಬಹುರೂಪಿ-೨೦೨೦’. ಇಂದು ಈ ಬಹುರೂಪಿ ರಾಷ್ಟ್ರೀಯವಲ್ಲ, ಅಂತರರಾಷ್ಟ್ರೀಯ ಮನ್ನಣೆಗಳಿಸಿರುವ ಶಿಸ್ತಿನ ನಾಟಕೋತ್ಸವ ಹಾಗಾಗಿ ಇದು ಕನ್ನಡ ನಾಡಿನ ಗರಿಮೆ. ಭಾರತೀಯ ರಂಗಭೂಮಿಯ ಪ್ರಯೋಗಶೀಲತೆ, ವೃತ್ತಿಪರ ಗುಣಮಟ್ಟವನ್ನು ಪರಿಶೀಲಿಸಿ, ಭಾರತದ ವಿವಿಧ ಭಾಷೆ, ಶೈಲಿಯ ನಾಟಕಗಳು ಬಹುರೂಪಿ-೨೦೨೦ರಲ್ಲಿ ಪ್ರದರ್ಶನಗೊಳ್ಳುತ್ತಿವೆ. ಇದರೊಂದಿಗೆ ಅಂತರರಾಷ್ಟ್ರಿಯ ಚಲನಚಿತ್ರೋತ್ಸವ, ರಾಷ್ಟ್ರೀಯ ವಿಚಾರ ಸಂಕಿರಣ, ವಸ್ತು, ಕರಕುಶಲಗಳು, ಪುಸ್ತಕ ಪ್ರದರ್ಶನ, ಜನಪದೋತ್ಸವ, ದೇಸಿ ಆಹಾರ ಮಳಿಗೆ ಹೀಗೆ ಹತ್ತು ಹಲವು ದೇಶಿ, ಕಲೆ-ಸಂಸ್ಕೃತಿ, ಸಂಗತಿಗಳು ಘಟಿಸುತ್ತವೆ. ಇಲ್ಲಿ ನಾನು ಹೇಳಲೇಬೇಕಾದದ್ದು, ಈ ಬಹುರೂಪಿ-೨೦೨೦ನ್ನು ನಾಡಿನ ಸಂತ, ಮಹಾತ್ಮ ಗಾಂಧೀಜಿಗೆ ಅರ್ಪಿಸುತ್ತಿದ್ದೇವೆ. ಮಹಾತ್ಮರ ೧೫೦ ವರ್ಷಾಚರಣೆಯು ನಡೆಯುವ ಈ ಸಂದರ್ಭದಲ್ಲಿ ಅರ್ಥಪೂರ್ಣವೂ ಹೌದು. ೨೦೨೦ ಫೆಬ್ರವರಿ ೧೩ ರಂದು ಜನಪದ ಉತ್ಸವ ಪ್ರಾರಂಭಗೊಂಡು ೧೪ ರಂದು ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಅಧಿಕೃತವಾಗಿ ಉದ್ಘಾಟನೆಗೊಂಡು, ೧೯ ರವರೆಗೆ ನಡೆಯುವ ಈ ಬಾರಿಯ ಉತ್ಸವ ‘ಗಾಂಧಿ ಪಥ’ ಎಂಬ ವಿಷಯವನ್ನು ಆಧರಿಸಿದೆ. ‘ಗಾಂಧೀಯೇ ಒಂದು ರೀತಿಯಲ್ಲಿ ಬಹುರೂಪಿ’. ಕರ್ನಾಟಕದ ರಂಗಾಯಣ ಮೈಸೂರು ಈ ನಾಡಿನ ಹೆಮ್ಮೆ. ಆಧುನಿಕ ರಂಗಭೂಮಿಯಲ್ಲಿ ನಾಡಿನಲ್ಲಿ ಅಲ್ಲದೇ ಹೊರನಾಡಿನಲ್ಲೂ ತನ್ನ ಛಾಪನ್ನು ಮೂಡಿಸಿರುವ ರಂಗಾಯಣದ ಬಹುಮುಖ್ಯ ಉತ್ಸವ ‘ಬಹುರೂಪಿ’. ನಮ್ಮ  ಸಂಸ್ಕೃತಿ ಮತ್ತು ಕಲೆಗಳನ್ನು ಮುಖಾ-ಮುಖಿಯಾಗಿಸುವ, ಬಹುಕಲಾರೂಪಗಳನ್ನು ಒಂದು ವಾರಗಳ ಕಾಲ ದರ್ಶನಗೊಳಿಸುವುದೇ ‘ರಾಷ್ಟ್ರೀಯ ನಾಟಕೋತ್ಸವ ಬಹುರೂಪಿ-೨೦೨೦’. ಇಂದು ಈ ಬಹುರೂಪಿ ರಾಷ್ಟ್ರೀಯವಲ್ಲ, ಅಂತರರಾಷ್ಟ್ರೀಯ ಮನ್ನಣೆಗಳಿಸಿರುವ ಶಿಸ್ತಿನ ನಾಟಕೋತ್ಸವ ಹಾಗಾಗಿ ಇದು ಕನ್ನಡ ನಾಡಿನ ಗರಿಮೆ. ಭಾರತೀಯ ರಂಗಭೂಮಿಯ ಪ್ರಯೋಗಶೀಲತೆ, ವೃತ್ತಿಪರ ಗುಣಮಟ್ಟವನ್ನು ಪರಿಶೀಲಿಸಿ, ಭಾರತದ ವಿವಿಧ ಭಾಷೆ, ಶೈಲಿಯ ನಾಟಕಗಳು ಬಹುರೂಪಿ-೨೦೨೦ರಲ್ಲಿ ಪ್ರದರ್ಶನಗೊಳ್ಳುತ್ತಿವೆ. ಇದರೊಂದಿಗೆ ಅಂತರರಾಷ್ಟ್ರಿಯ ಚಲನಚಿತ್ರೋತ್ಸವ, ರಾಷ್ಟ್ರೀಯ ವಿಚಾರ ಸಂಕಿರಣ, ವಸ್ತು, ಕರಕುಶಲಗಳು, ಪುಸ್ತಕ ಪ್ರದರ್ಶನ, ಜನಪದೋತ್ಸವ, ದೇಸಿ ಆಹಾರ ಮಳಿಗೆ ಹೀಗೆ ಹತ್ತು ಹಲವು ದೇಶಿ, ಕಲೆ-ಸಂಸ್ಕೃತಿ, ಸಂಗತಿಗಳು ಘಟಿಸುತ್ತವೆ. ಇಲ್ಲಿ ನಾನು ಹೇಳಲೇಬೇಕಾದದ್ದು, ಈ ಬಹುರೂಪಿ-೨೦೨೦ನ್ನು ನಾಡಿನ ಸಂತ, ಮಹಾತ್ಮ ಗಾಂಧೀಜಿಗೆ ಅರ್ಪಿಸುತ್ತಿದ್ದೇವೆ. ಮಹಾತ್ಮರ ೧೫೦ ವರ್ಷಾಚರಣೆಯು ನಡೆಯುವ ಈ ಸಂದರ್ಭದಲ್ಲಿ ಅರ್ಥಪೂರ್ಣವೂ ಹೌದು. ೨೦೨೦ ಫೆಬ್ರವರಿ ೧೩ ರಂದು ಜನಪದ ಉತ್ಸವ ಪ್ರಾರಂಭಗೊಂಡು ೧೪ ರಂದು ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಅಧಿಕೃತವಾಗಿ ಉದ್ಘಾಟನೆಗೊಂಡು, ೧೯ ರವರೆಗೆ ನಡೆಯುವ ಈ ಬಾರಿಯ ಉತ್ಸವ ‘ಗಾಂಧಿ ಪಥ’ ಎಂಬ ವಿಷಯವನ್ನು ಆಧರಿಸಿದೆ. ‘ಗಾಂಧೀಯೇ ಒಂದು ರೀತಿಯಲ್ಲಿ ಬಹುರೂಪಿ’. 

ಆಧುನಿಕ ಸಾಹಿತ್ಯ-ರಂಗಭೂಮಿಯಲ್ಲಿ ಗಾಂಧಿಯ ನಿಜ ದಕ್ಕದೇ ಹೋಗಿದೆಯೇ ಎಂದು ಹಲುಬುವುದನ್ನು ಕೇಳುತ್ತಿದ್ದೇವೆ. ವರ್ಷ ಕಳೆದಂತೆ ಮಾಗುತ್ತಲೇ ಹೋಗುವ ಗಾಂಧಿಯ ಸತ್ಯ ನಮ್ಮ ಆಧುನಿಕ ನಾಟ್ಯ (ರಂಗಭೂಮಿ) ಪರಂಪರೆಗೆ ದಕ್ಕಬೇಕು. ಗಾಂಧಿಯ ಸತ್ಯ-ಅಹಿಂಸೆ ಇಂದು ವಿರೋಧ ಭಾಸವಾಗಿ ಕಂಡರೂ ಅದುವೇ ನಿಜವಲ್ಲ. ಉಪ್ಪು-ಚರಕ-ಪ್ರಾರ್ಥನೆ, ಬಡತನ-ಶ್ರಮ-ವಿನಯ ಕೂಡ ಆಗಬಹುದಲ್ಲವೆ?. ಗಾಂಧಿ ಎಂದಾಕ್ಷಣ ಸತ್ಯ, ಅಹಿಂಸೆ, ಸಹಿಷ್ಣುತೆ, ಸಮಾನತೆ, ಸ್ವಚ್ಚತೆ, ಶ್ರಮ, ಮಹಿಳಾ ಸಬಲೀಕರಣ, ರಾಜಕೀಯ, ಆಧ್ಯಾತ್ಮಿಕ ಎಲ್ಲವೂ ಕಣ್ಣ ಮುಂದೆ ಹಾದು ಹೋಗುತ್ತದೆ. ಇದರ ಜೊತೆ ಜೊತೆಗೆ ಇಂದಿನ ಯುವ ಪೀಳಿಗೆ ಗಾಂಧಿ ಅಪ್ರಸ್ತುತವೇ ಎಂಬ ಪ್ರಶ್ನೆಯನ್ನು ಮುಂದಿಡುತ್ತಿದೆ. ಈ ಎಲ್ಲ ಪ್ರಸ್ತುತೆ-ಅಪ್ರಸ್ತುತತೆ ಇದೂ ಕೂಡ ಚರ್ಚೆಯಾಗಲಿ. ಇದಕ್ಕಾಗಿ ನಾವು ನಮ್ಮ ವಿಚಾರ ಸಂಕಿರಣವನ್ನು ತೆರೆದಿಟ್ಟಿದ್ದೇವೆ. ಇಲ್ಲಿ ಪಂಥಗಳನ್ನು ಮೀರಿ ಪಥಗಳತ್ತ ಹೆಜ್ಜೆ ಹಾಕುವುದು ನಮ್ಮ ಗುರಿ ಮತ್ತು ಉದ್ದೇಶ. ರಾಷ್ಟ್ರಪಿತನಿಂದ ರಾಷ್ಟ್ರಪಥದತ್ತ ಒಂದು ಪುಟ್ಟ ಹೆಜ್ಜೆ.

‘ಗಾಂಧಿ ಪಥ’ಕ್ಕೆ ಪೂರಕವಾಗುವ ನಮ್ಮ ಹಿರಿಯ ರೆಪರ್ಟರಿ ಕಲಾವಿದರ ‘ಗಾಂಧಿ ವರ್ಸಸ್ ಗಾಂಧಿ’ ನಾಟಕ, ಮೈಸೂರು ಹವ್ಯಾಸಿ ಕಲಾವಿದರಿಂದ ‘ಮಹಾತ್ಮ’ ನಾಟಕವನ್ನು ಹವ್ಯಾಸಿ ನಿರ್ದೇಶಕರಿಂದಲೇ ರಂಗಾಯಣವೇ ಸಿದ್ಧಪಡಿಸುತ್ತಿದೆ.  ಗಾಂಧಿ ಲಾವಣಿ, ಭಜನೆಗಳು, ತತ್ವಪದ ಗಾಯನ, ಭಿತ್ತಿಚಿತ್ರ ಪ್ರದರ್ಶನ, ಚಲನಚಿತ್ರೋತ್ಸವ ಎಲ್ಲವೂ ಬಹುರೂಪಿಯಲ್ಲಿ ರಿಂಗಣಿಸಲಿದೆ. ಮೂಲತಃ ರಂಗಭೂಮಿ ಸಾಮರಸ್ಯ ಕಲೆ. ನಮ್ಮ ಯುವ ಮನಸುಗಳು ಇತ್ತೀಚಿನ ವಿದ್ಯಮಾನಗಳಿಂದ ತಲ್ಲಣಗೊಂಡಿರುವುದು ಕಾಣುತ್ತಿದ್ದೇವೆ. ಅವರ ಮನಸ್ಸುಗಳನ್ನು ರಾಷ್ಟ್ರೀಯತೆಯತ್ತ ಬೆಸೆಯುವ, ವಿನಯಗೊಳಿಸುವ ಪ್ರಾಮಾಣಿಕ ಪ್ರಯತ್ನ ಬಹುರೂಪಿಯದು.
ಅಡ್ಡಂಡ ಸಿ. ಕಾರ್ಯಪ್ಪ
ನಿರ್ದೇಶಕರು
ರಂಗಾಯಣ, ಮೈಸೂರು

ಬಹುರೂಪಿ-2020 ‘ಗಾಂಧಿ ಪಥ’

ಬಹುರೂಪಿ-2020 ‘ಗಾಂಧಿ ಪಥ’ ರಾಷ್ಟ್ರೀಯ ನಾಟಕೋತ್ಸವದಲ್ಲಿ ಹೊರ ರಾಜ್ಯದ ವಿವಿಧ ಭಾಷೆಗಳ 11 ನಾಟಕಗಳು, ಕನ್ನಡ ಭಾಷೆಯ 10 ನಾಟಕಗಳು, ಯಕ್ಷಗಾನ, ದೊಡ್ಡಾಟ, ಗೊಂಬೆಯಾಟ, ಗಾಂಧಿ ವಿಚಾರಧಾರೆಯ ಲಾವಣಿಗಳು, ಮೀರಾ ಭಜನ್, ರಂಗಗೀತೆಗಳು, ಬೀದಿನಾಟಕಗಳು, ಜನಪದ ಗಾಯನ, ನಾಟಕಗಳು, ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ಹಾಗೂ ದಕ್ಷಿಣ ಮಧ್ಯ ವಲಯ ಸಾಂಸ್ಕೃತಿಕ ಕೇಂದ್ರಗಳಿಂದ ವಿವಿಧ ರಾಜ್ಯಗಳ ಜಾನಪದ ಕಲೆಗಳ ಪ್ರದರ್ಶನ ಮತ್ತು ಉತ್ಸವದ ಆರೂ ದಿನ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಪ್ರದರ್ಶನ (ಗಾಂಧಿ ಕುರಿತ ಚಲನಚಿತ್ರಗಳನ್ನೊಳಗೊಂಡಂತೆ) ನಡೆಯಲಿದೆ.

2020 ಫೆಬ್ರವರಿ 13 ರಂದು ಸಂಜೆ 5.00 ಗಂಟೆಗೆ ಕಿಂದರಿಜೋಗಿ ವೇದಿಕೆಯಲ್ಲಿ ಜಾನಪದ ಕಾರ್ಯಕ್ರಮವನ್ನು ಜಾನಪದ ಅಕಾಡೆಮಿ ಅಧ್ಯಕ್ಷರಾದ ಮಂಜಮ್ಮ ಜೋಗತಿಯವರೇ ಚಾಲನೆ ನೀಡುವ ಮೂಲಕ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ-೨೦೨೦ಕ್ಕೆ ನಾಂದಿ ಹಾಡಲಿದ್ದು, 14-02-2020 ರಂದು ಬೆಳಗ್ಗೆ 10.00 ಗಂಟೆಗೆ ಶ್ರೀರಂಗದಲ್ಲಿ ಖ್ಯಾತ ಚಲನಚಿತ್ರ ನಿರ್ದೇಶಕರಾದ ಶ್ರೀ ಗಿರೀಶ್ ಕಾಸರವಳ್ಳಿಯವರು ಬಹುರೂಪಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಅಂದು ಸಂಜೆ ೫.೩೦ಕ್ಕೆ ವನರಂಗ ವೇದಿಕೆಯಲ್ಲಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಉದ್ಘಾಟನೆಯನ್ನು ಹಿರಿಯ ರಂಗ ಕಲಾವಿದ, ಖ್ಯಾತ ಚಲನಚಿತ್ರ ನಟ ಶ್ರೀ ಅನಂತ್ ನಾಗ್ ಅವರು ನೆರವೇರಿಸಲಿದ್ದು, ಉತ್ಸವದ ಪರಿಚಯ ಪುಸ್ತಕವನ್ನು ಮಾನ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರಾದ ಶ್ರೀ ಸಿ.ಟಿ. ರವಿ ಅವರು ಬಿಡುಗಡೆ ಮಾಡಲಿದ್ದಾರೆ. ಬಹುರೂಪಿಯ ಪುಸ್ತಕ ಮೇಳ ಮತ್ತು ಕರಕುಶಲ ಮೇಳವನ್ನು ಮಾನ್ಯ ವಸತಿ ಸಚಿವರು, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಶ್ರೀ ವಿ. ಸೋಮಣ್ಣನವರು ಉದ್ಘಾಟಿಸಲಿದ್ದಾರೆ. ಮೈಸೂರು-ಕೊಡಗು ಮಾನ್ಯ ಲೋಕಸಭಾ ಸಂಸದರು ಆದ ಶ್ರೀ ಪ್ರತಾಪ್ ಸಿಂಹ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಚಾಮರಾಜ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ವಿ. ನಾಗೇಂದ್ರ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಉದ್ಘಾಟನೆಯ ನಂತರ ಅದೇ ವನರಂಗ ವೇದಿಕೆಯಲ್ಲಿ ನಾಡಿನ ಸುಪ್ರಸಿದ್ಧ ಗಾಯಕಿ ವಿದುಷಿ ಸಂಗೀತ ಕಟ್ಟಿ ಕುಲಕರ್ಣಿ ಅವರಿಂದ ಮೀರಾ ಭಜನ್ ಗಾಯನ ಕಾರ್ಯಕ್ರಮವಿದೆ. ನಂತರ ರಾತ್ರಿ 8.00ಕ್ಕೆ ಕರ್ನಾಟಕ ಬಯಲಾಟ ಅಕಾಡೆಮಿ ಪ್ರಾಯೋಜಿತ ದೊಡ್ಡಾಟ ಪ್ರದರ್ಶನಗೊಳ್ಳಲಿದೆ.

ಫೆಬ್ರವರಿ 16 ಮತ್ತು 17 ರಂದು ಗಾಂಧಿ ಪಥ ಶೀರ್ಷಿಕೆಯಡಿ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದ್ದು, ಫೆಬ್ರವರಿ 16 ರಂದು ಬೆಳಗ್ಗೆ 10.30ಕ್ಕೆ ವಿಚಾರ ಸಂಕಿರಣದ ಉದ್ಘಾಟನೆಯನ್ನು ಕನ್ನಡದ ಖ್ಯಾತ ಕವಿ, ಚಿಂತಕ ದಲಿತ ಕವಿ ಸಿದ್ಧಲಿಂಗಯ್ಯನವರು ನೆರವೇರಿಸಲಿದ್ದಾರೆ. ಎರಡು ದಿನಗಳ ಈ ಗೋಷ್ಠಿಯಲ್ಲಿ ನಾಡಿನ ಖ್ಯಾತ ಸಾಹಿತಿಗಳು, ಚಿಂತಕರು ಭಾಗವಹಿಸಲಿದ್ದಾರೆ.
ಈ ಉತ್ಸವದಲ್ಲಿ ಪ್ರದರ್ಶನಗೊಳ್ಳಲಿರುವ ಕನ್ನಡ ನಾಟಕಗಳ ಹಾಗೂ ಭಾರತೀಯ ಇತರೆ ಭಾಷೆಗಳ ನಾಟಕಗಳ ಆಯ್ಕೆ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಬಹುರೂಪಿಯ ವಿನ್ಯಾಸ ಮತ್ತು ನಾಟಕಗಳು, ಚಲನಚಿತ್ರಗಳ ಪೂರ್ಣ ವಿವರಗಳನ್ನು ಒಳಗೊಂಡ ಭಿತ್ತಿಚಿತ್ರವನ್ನು ದಿನಾಂಕ:29-01-2020 ರಂದು ಮಾನ್ಯ ಮೈಸೂರು ಜಿಲ್ಲಾಧಿಕಾರಿಗಳು ಬಿಡುಗಡೆಗೊಳಿಸಲಿದ್ದು, ಅದೇ ವೇದಿಕೆಯಲ್ಲಿ ಎಲ್ಲ ವಿವರಗಳನ್ನು ಮಾಧ್ಯಮಗಳಿಗೆ ವಿತರಿಸಲಾಗುವುದು.  ಈ ಬಾರಿ ಕನ್ನಡ ನಾಡಿನ ವಿವಿಧ ಭಾಗಗಳ ದೇಸಿ ಆಹಾರ ಮಳಿಗೆಗಳನ್ನು ಅಳವಡಿಸುವ ಚಿಂತನೆ ನಮ್ಮದು. ಇದರೊಂದಿಗೆ ‘ಗಾಂಧಿಪಥ’ದ ಚಿಂತನೆಗಳನ್ನು ಆಧರಿಸಿ ಕರಕುಶಲ ವಸ್ತು ಪ್ರದರ್ಶನ, ಪುಸ್ತಕ ಮಳಿಗೆಗಳು ಇರುತ್ತವೆ. ಬಹುರೂಪಿ-2020ಕ್ಕೆ ಮೈಸೂರಿನ ಹವ್ಯಾಸಿ ರಂಗ ಸಂಘಟನೆ ಮತ್ತು ಕಲಾವಿದರನ್ನು  ಉತ್ಸವದಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿದ್ದೇವೆ. ಹವ್ಯಾಸಿ ರಂಗ ನಿರ್ದೇಶಕರಿಂದಲೇ ಗಾಂಧಿ ಕುರಿತ ನಾಟಕವೊಂದನ್ನು ಹವ್ಯಾಸಿ ರಂಗಕಲಾವಿದರಿಗೆ ನಿರ್ದೇಶನ ಮಾಡಿಸುತ್ತಿದ್ದು, ಸ್ಥಳೀಯ ಹವ್ಯಾಸಿ ರಂಗತಂಡಗಳಿಗೆ ಆದ್ಯತೆ ನೀಡಿದ್ದೇವೆ. ಈ ಬಹುರೂಪಿ-೨೦೨೦ಕ್ಕೆ ವಿವಿಧ ಸಮಿತಿಗಳನ್ನು ರಚಿಸಿ, ನಾಟಕೋತ್ಸವ ಯಶಸ್ವಿಗೊಳಿಸಲು    ಎಲ್ಲ ಸಿದ್ಧತೆಗಳನ್ನು ನಡೆಸಿದ್ದೇವೆ.

ರಂಗಾಯಣದ  ಬಗ್ಗೆ ಕರ್ನಾಟಕ ಸರ್ಕಾರವು ಆಧುನಿಕ ಕನ್ನಡ ರಂಗಭೂಮಿಯನ್ನು ಪ್ರೋತ್ಸಾಹಿಸುವ ದೃಷ್ಠಿಯಿಂದ 1989ರ ಜನವರಿ 14 ರಂದು ನಾಟಕ ಕರ್ನಾಟಕ ರಂಗಾಯಣ ಎಂಬ ಹೆಸರಿನಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಿ, ಆಧುನಿಕ ಕನ್ನಡ ರಂಗಭೀ?ರೆನಿಸಿದ್ದ ಶ್ರೀ ಬಿ.ವಿ. ಕಾರಂತರನ್ನು ನಿರ್ದೇಶಕರಾಗಿ ನೇಮಿಸಿತು. ಇದರ ಸಂಪೂರ್ಣ ಆಡಳಿತಾಂಗವಾಗಿ ರಂಗಸಮಾಜವನ್ನು ನೇಮಿಸಿತು. ಮೈಸೂರಿನ ಕಲಾಮಂದಿರದ ಆವರಣವೇ ಇದರ ಕಾರ್ಯಸ್ಥಾನವೆಂದು ಗುರುತಿಸಲಾಯಿತು. ರಾಜ್ಯಾದ್ಯಂತ ೨೫ ಕಲಾವಿದರು/ ತಂತ್ರಜ್ಞರನ್ನು ಆಯ್ಕೆ ಮಾಡಿ ರಂಗ ಚಟುವಟಿಕೆಗಳಲ್ಲಿ ತೊಡಗಿಸಲಾಯಿತು. ರಂಗ ತರಬೇತಿ, ರಂಗಕೃತಿಗಳ ಅಧ್ಯಯನ, ನಾಟಕಗಳ ಸಿದ್ಧತೆ ಮತ್ತು ಪ್ರದರ್ಶನ ಹೀಗೆ ಪರಿಪೂರ್ಣವಾಗಿ ಆಧುನಿಕ ಕನ್ನಡದ ಹವ್ಯಾಸಿ ರಂಗತಂಡವಾಗಿ ರಂಗಾಯಣವು ಕಳೆದ ಮೂವತ್ತು ವ?ಗಳಿಂದ ಕೆಲಸ ನಿರ್ವಹಿಸುತ್ತಿದೆ.  ಪ್ರಸ್ತುತ ಪ್ರಧಾನ ರೆಪರ್ಟರಿ, ಸಂಚಾರಿ ರಂಗಘಟಕ ಹಾಗೂ ಭಾರತೀಯ ರಂಗಶಿಕ್ಷಣ ಕೇಂದ್ರ ಎಂಬ ಮೂರು ವಿಭಾಗಗಳಿದ್ದು, ಪ್ರಧಾನ ನಾಟಕಗಳ ಸಿದ್ಧತೆ ಮತ್ತು ಪ್ರದರ್ಶನ, ಸಮಕಾಲೀನ ನಾಟಕಗಳ ಸಿದ್ಧತೆ ಮತ್ತು ತಿರುಗಾಟದ ಪ್ರದರ್ಶನಗಳು ಹಾಗೂ ಯುವ ಹವ್ಯಾಸಿ ಕಲಾವಿದರಿಗೆ ರಂಗ ತರಬೇತಿ. ಈ ಮೂರು ವಿಭಾಗಗಳಲ್ಲಿ ನಿರಂತರ ರಂಗ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ.
ಪುಣ್ಯಕೋಟಿ ಎಂಬ ಗೋವಿನ ಹಾಡನ್ನು ಸಂಗೀತಕ್ಕೆ ಅಳವಡಿಸಿ, ಅಭಿನಯಿಸುವ ಮೂಲಕ ಆರಂಭವಾದ ಮೈಸೂರು ರಂಗಾಯಣದ ರಂಗಯಾತ್ರೆ ಮುಂದೆ ರಾ?ಕವಿ ಕುವೆಂಪು ಅವರ ಕಿಂದರಿಜೋಗಿ ಕವನದ ರಂಗರೂಪದಿಂದ ಪೂರ್ಣ ಪ್ರಮಾಣದ ನಾಟಕಾಭಿನಯಕ್ಕೆ ತೆರೆದುಕೊಂಡಿತು. ಅಂದಿನಿಂದ ಇಂದಿನವರೆಗೆ ಸುಮಾರು ೩೦ ವ?ಗಳಲ್ಲಿ ಗೋಪಾಲಕೃ? ಅಡಿಗರ ಭೂಮಿಗೀತ, ಮುಪ್ಪಿನ ?ಡಕ್ಷರಿಯ ತಿರುಕನ ಕನಸು, ವೈದೇಹಿಯವರ ಮೂಕನ ಮಕ್ಕಳು, ರಘುನಂದನ್ ಅವರ ಎತ್ತ ಹಾರಿದೆ ಹಂಸ, ಶ್ರೀರಂಗರ ಅಶ್ವಮೇಧ, ಕತ್ತಲೆ ಬೆಳಕು, ಕುವೆಂಪು ಅವರ ಚಂದ್ರಹಾಸ, ಶೂದ್ರ ತಪಸ್ವಿ, ಗಿರೀಶ್ ಕಾರ್ನಡರ ತಲೆದಂಡ, ಟಿಪ್ಪುವಿನ ಕನಸುಗಳು, ತುಘಲಕ್, ಲಂಕೇಶರ ಗುಣಮುಖ, ಪೋಲಿಸರಿದ್ದಾರೆ ಎಚ್ಚರಿಕೆ, ಈಡಿಪಸ್, ಹೆಚ್.ಎಸ್. ವೆಂಕಟೇಶ್ ಮೂರ್ತಿ ಅವರ ಅಗ್ನಿವರ್ಣ, ಚಂದ್ರಶೇಖರ ಕಂಬಾರರ ಸಿರಿಸಂಪಿಗೆ, ಶಿಖರ ಸೂರ್ಯ, ಮಹಾಮಾಯಿ, ಡಿ.ಎಸ್ ಚೌಗಲೆ ಅವರ ಗಾಂಧಿ ವರ್ಸಸ್ ಗಾಂಧಿ, ಮಾಸ್ತಿ ಅವರ ಭಟ್ಟರ ಮಗಳು ಮಂಜುಳ, ಶಿವರಾಮಕಾರಂತರ ಸರಸಮ್ಮನ ಸಮಾಧಿ, ಪೂರ್ಣಚಂದ್ರ ತೇಜಸ್ವಿ ಅವರ ಕೃ?ಗೌಡನ ಆನೆ, ದೇವನೂರು ಮಹಾದೇವ ಅವರ ಕುಸುಮಬಾಲೆ, ಕಾಳಿದಾಸನ ಅಪ್ಸರೆ, ಬೀಚಿ ಅವರ ಬೀಚಿ ಬುಲೆಟ್ಸ್, ಬೆಳ್ಳಾವೆ ನರಹರಿ ಶಾಸ್ತ್ರಿಗಳ ಸದರಾಮೆ, ರವೀಂದ್ರ ನಾಥ ಟಾಗೋರರ ಗೋರ, ಯು.ಆರ್. ಅನಂತಮೂರ್ತಿ ಅವರ ಸಂಸ್ಕಾರ, ಯಶವಂತ ಚಿತ್ತಾಲರ ಶಿಕಾರಿ, ಪು.ತಿನ ಅವರ ಅಹಲ್ಯೆ, ಹೀಗೆ ಪೌರಾಣಿಕ ಐತಿಹಾಸಿಕ ಜಾನಪದೀಯ ಹಾಗೂ ಆಧುನಿಕ ಕನ್ನಡದ ಎಲ್ಲ ಮುಖ್ಯ ಲೇಖಕರ ನಾಟಕಗಳನ್ನು ಯಶಸ್ವಿಯಾಗಿ ಪ್ರಯೋಗಿಸಿರುವ ಮೈಸೂರು ರಂಗಾಯಣವು ಭಾರತೀಯ ಇತರ ಭಾ?ಗಳ ಹಾಗೂ ಜಗತ್ತಿನ ಬೇರೆ ಬೇರೆ ಭಾ?ಗಳ ಮಹತ್ವದ ನಾಟಕಗಳಾದ ಕಿಂಗ್ಲಿಯರ್, ಹ್ಯಾಮ್ಲೆಟ್, ಚೆರ್ರ್‍ಇತೋಟ, ಮಗ್ಗದವರು, ಖುಷಿ ದಿನಗಳು, ಕೊನೆಯಾಟ, ರೋಡ್, ರ?ಮನ್, ಜೂಲಿಯಸ್ ಸೀಜರ್, ಓಥೆಲೋ, ಸೀಗಲ್, ಚೆಕ್ಮೇಟ್, ಚಿರೇಬಂದಿವಾಡೆ ಮುಂತಾದ ನಾಟಕಗಳನ್ನು ಯಶಸ್ವಿಯಾಗಿ ಪ್ರದರ್ಶಿಸಿದೆ.  ರಂಗಾಯಣದ ನಾಟಕಗಳು ರಾಜಧಾನಿ ದೆಹಲಿಯನ್ನು ಒಳಗೊಂಡಂತೆ ಭಾರತದ ಎಲ್ಲ ರಾಜ್ಯಗಳಲ್ಲಿ ಪ್ರದರ್ಶನಗೊಂಡಿವೆ. ಅಲ್ಲದೆ ಜರ್ಮನಿಯ ವಿವಿಧ ರಾಜ್ಯಗಳಲ್ಲಿ ರಂಗಾಯಣದ ನಾಟಕಗಳು ಪ್ರದರ್ಶನಗೊಂಡಿವೆ. ಕಥೆ, ಕವಿತೆ, ಕಾದಂಬರಿ ಲೇಖನಗಳನ್ನೂ ರಂಗರೂಪಕ್ಕಳವಡಿಸಿ ಯಶಸ್ವಿಯಾಗಿ ಪ್ರದರ್ಶನ ನೀಡಲಾಗಿದೆ.

ಮಹಾಕಾವ್ಯಗಳ ಯುಗ ಮುಗಿಯಿತು ಎಂಬ ಮಾತು ಜನಜನಿತವಾಗಿದ್ದಲೇ ‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯ ಬರೆದು ಕನ್ನಡಕ್ಕೆ ಮೊದಲ ಜ್ಞಾನಪೀಠ ತಂದು ಕವಿ ಕುವೆಂಪು ಅವರು ದಾಖಲೆಯನ್ನು ನಿರ್ಮಿಸಿದರು. ಅಂತೆಯೇ ಕನ್ನಡಕ್ಕೆ ಮೊದಲ ಜ್ಞಾನಪೀಠ ತಂದ ಮಹಾಕಾವ್ಯಕ್ಕೆ ೫೦ ವ?ಗಳು ತುಂಬಿದ ಸವಿನೆನಪಿಗೆ ಇಡೀ ಮಹಾಕಾವ್ಯವನ್ನು ರಂಗರೂಪಕ್ಕಳವಡಿಸಿ, ಸಂಪೂರ್ಣ ಕಾವ್ಯ ಭಾ?ಯಲ್ಲೇ, ಆದರೆ ಅನಕ್ಷರಸ್ಥರಿಂದ ವಿದ್ವತ್ಜನರ ವರೆಗೆ ಎಲ್ಲರಿಗೂ ಮನ ಮುಟ್ಟುವಂತೆ ಸತತ ೫ ಗಂಟೆಗಳ ಪ್ರದರ್ಶನವಾಗಿ ರಾಜ್ಯದಾದ್ಯಂತ ೪೦ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಪೌರಾಣಿಕ ನಾಟಕಗಳನ್ನು ಇಡೀ ರಾತ್ರಿ ನೋಡುತ್ತಿದ್ದ ಪರಂಪರೆಯೇ ಮರೆಯಾಗುತ್ತಿರುವ ಈ ದಿನಗಳಲ್ಲಿ ಮೈಸೂರು ರಂಗಾಯಣವು ಕನ್ನಡದ ಶೇ? ಕಾದಂಬರಿಗಳಲ್ಲಿ ಒಂದಾದ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಎಂಬ 800 ಪುಟಗಳ ಬೃಹತ್  ಕಾದಂಬರಿಯನ್ನು ಸಂಪೂರ್ಣವಾಗಿ ರಂಗರೂಪಕ್ಕಳವಡಿಸಿ, ಶ್ರೀ ಸಿ. ಬಸವಲಿಂಗಯ್ಯ ಅವರ ನಿರ್ದೇಶನದಲ್ಲಿ 9 ಗಂಟೆಗಳ ಅಹೋರಾತ್ರಿ ನಾಟಕವಾಗಿ ಸಮನಾಂತರ ನಾಲ್ಕು ವೇದಿಕೆಗಳಲ್ಲಿ  ಯಶಸ್ವಿಯಾಗಿ ಪ್ರದರ್ಶಿಸಿದ್ದು, ಭಾರತೀಯ ರಂಗಭೂಮಿ ಇತಿಹಾಸದಲ್ಲೇ ದಾಖಲೆಯೆನಿಸಿದೆ.

ಬಹುರೂಪಿ ರಾಷ್ಟ್ರೀಯ ವಿಚಾರ ಸಂಕಿರಣ-2020
‘ಗಾಂಧಿ ಪಥ’

 ಬಹುರೂಪಿ ನಾಟಕೋತ್ಸವದ ಇನ್ನೊಂದು ಮುಖ್ಯ ಅಂಗ ರಾಷ್ಟ್ರೀಯ ವಿಚಾರ ಸಂಕಿರಣ. ಈ ಬಾರಿ ಬಹುರೂಪಿಯ ಘೋಷ ವಾಕ್ಯ ‘ಗಾಂಧಿಪಥ’. ಈ ಶೀರ್ಷಿಕೆಯಡಿ ದಿನಾಂಕ:16-02-2020 ಮತ್ತು 17-02-2020 ರಂದು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿದೆ.

ಗಾಂಧಿ ಬರಿ ವ್ಯಕ್ತಿ ಅಲ್ಲ, ಒಂದು ಶಕ್ತಿ, ಚೈತನ್ಯ, ವಿಸ್ಮಯ. ಅವರವರ ಅನುಭವಕ್ಕೆ ಧಕ್ಕಿದಷ್ಟು ಅವರವರ ಮನದಲ್ಲಿ ಗಾಂಧಿ ಪ್ರತಿಫಲಿಸುವ ರೀತಿ ಹಲವು ಬಗೆ. ಇಂಥ ವ್ಯಕ್ತಿಯೊಬ್ಬ ನಮ್ಮ ನಡುವೆ ಹುಟ್ಟಿ ಬೆಳೆದು ನಡೆದಾಡಿದ್ದು ನಿಜವೇ ಎಂಬುದನ್ನು ಮುಂದಿನ ತಲೆಮಾರುಗಳು ನಂಬುವುದ ಕಷ್ಟ ಎಂದು ಐನ್‌ಸ್ಟೈನ್‌ರಂಥ ಬಹುದೊಡ್ಡ ವಿಜ್ಞಾನಿ ಉದ್ಗಾರವೆತ್ತಿದ್ದಾರೆ. ಆ ಮಹಾನ್ ವಿಜ್ಞಾನಿಯ ಮಾತು ಇಂದಿನ ತಲೆಮಾರನ್ನು ಕುರಿತು ನುಡಿದ ಭವಿಷ್ಯವೇನೋ ಎನ್ನುವ ಮಟ್ಟಿಗೆ ಪ್ರಸ್ತುತ ಯುವ ಜನಾಂಗ ಗಾಂಧಿ ಎಂಬುವ ಸಂತನ ಬಗೆಗೆ ತಮಗನ್ನಿಸಿದಂತೆ ಮಾತನಾಡುವ ಗೀಳು ಸರ್ವವ್ಯಾಪಿಯಾಗಿದೆ.

ಅಂತೆಯೇ ತಂತ್ರಜ್ಞಾನದ ಕ್ರಾಂತಿಕಾರಕ ಓಟದಿಂದಾಗಿ ಬಲು ಬಿರುಸಿನಿಂದ ಬದಲಾಗುತ್ತಿರುವ ಇಂದಿನ ಮನುಷ್ಯನ ಜೀವನ ಶೈಲಿ, ಜೀವನ ಮೌಲ್ಯಗಳು, ಸತ್ಯ, ಧರ್ಮ, ನ್ಯಾಯಗಳ ವ್ಯಾಖ್ಯಾನ. ಒಟ್ಟಾರೆಯಾಗಿ ನಮ್ಮ ನಾಗರೀಕತೆಯೇ ಗಂಭೀರ ಬದಲಾಣೆಗೆ ಒಳಪಡುತ್ತಿರುವ ಈ ಹೊತ್ತಲ್ಲಿ ಯೋಗಾಯೋಗವೆಂಬಂತೆ ಒದಗಿ ಬಂದಿರುವ ಗಾಂಧಿಜೀಯವರ ೧೫೦ನೇ ಜನ್ಮಶತಾಬ್ದಿ, ಹಲವು ಹತ್ತು ವಿಷಯಗಳಲ್ಲಿ ಆಳವಾದ ಪರಿಣಿತಿ ಪಡೆದು ನೇರವಾಗಿ, ಸ್ಪಷ್ಟವಾಗಿ, ನಿಷ್ಠೂರವಾಗಿ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಮತ್ತು ಅಂತೆಯೇ ಬಾಳಿ ಬದುಕಿದ ಬಹುರೂಪಿ ಗಾಂಧಿಯನ್ನು ಪುನರ್ ಪರಿಶೀಲಿಸುವ ಮತ್ತು ಜಿಜ್ಞಾಸೆಯ ಮೂಸೆಗೊಳಪಡಿಸುವ ಮೂಲಕ ಇಂದಿನ ಬದುಕಿನ ನಮ್ಮೆಲ್ಲಾ ತೊಳಲಾಟ, ತಾಕಲಾಟಗಳಿಗೆ ಪರಿಹಾರದ ಒಂದು ಮಾರ್ಗ ಕಂಡುಕೊಳ್ಳಬಹುದೇನೋ ಎಂಬ ಹಂಬಲ ನಮ್ಮದು.

ಈ ಕಾರಣದಿಂದಲೇ ಪ್ರಸ್ತುತ ವಿಚಾರ ಸಂಕಿರಣದಲ್ಲಿ ಎಲ್ಲವೂ ಮುಕ್ತವಾಗಿ ಚರ್ಚೆಯಾಗಲಿ, ಮಹಾತ್ಮ ಗಾಂಧಿಯೇ ನುಡಿದಂತೆ ಎಲ್ಲರ ಮನೆಯ ಎಲ್ಲ ಕಿಟಕಿಗಳು ಎಲ್ಲ ದಿಕ್ಕಿಗೂ ತೆರೆದಿರಲಿ ಎಂಬುದು ನಮ್ಮ ‘ಗಾಂಧಿ ಪಥ’ವಿಚಾರ ಸಂಕಿರಣದ ನಿಲುವು. ಮಹಾತ್ಮನ ಬದುಕು ಬರಹ, ನಡೆ, ಚಿಂತನೆಗಳನ್ನು ಕುರಿತು ಮುಕ್ತವಾಗಿ ನಮ್ಮೆಲ್ಲರ ಅನಿಸಿಕೆಗಳನ್ನು ಹಂಚಿಕೊಳ್ಳಲು ಇದೊಂದು ಸದಾವಕಾಶ.

 

ಬಹುರೂಪಿ ಚಲನಚಿತ್ರೋತ್ಸವ

ಬಹುರೂಪಿಯ ರೂಪಗಳಲ್ಲೊಂದಾದ ಬಹುರೂಪಿ ಚಲನಚಿತ್ರೋತ್ಸವ ಈವರೆಗೆ ಅಪಾರ ಜನಮನ್ನಣೆ ಗಳಿಸಿ, ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರತಿವರ್ಷವೂ ರಂಗಾಯಣವು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಚಲನಚಿತ್ರಗಳನ್ನು ಕಳೆದ 19 ವರ್ಷಗಳಿಂದ ನಿರಂತರವಾಗಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ಪ್ರದರ್ಶಿಸುತ್ತಾ ಬಂದಿದೆ. ಈ ವರ್ಷದ ಬಹುರೂಪಿ ಚಲನಚಿತ್ರೋತ್ಸವದಲ್ಲಿ ‘ಗಾಂಧಿ ಪಥ’ ವಸ್ತುವಿಷಯಕ್ಕೆ ಸಂಬಂಧಿಸಿದಂತೆ ಸುಮಾರು 7 ಚಲನಚಿತ್ರಗಳು ಹಾಗೂ 10 ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಲು ಸಿದ್ದತೆಗಳನ್ನು ನಡೆಸಲಾಗುತ್ತಿದೆ. ಗಾಂಧೀಜಿಯವರ ಜೀವನಾಧಾರಿತ ಶ್ರೇಷ್ಠ ಚಲನಚಿತ್ರಗಳು ಹಾಗೂ ಅಪರೂಪದ ಘಟನೆಗಳನ್ನೊಳಗೊಂಡ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಲು ಯೋಜಿಸಲಾಗಿದೆ. ಗಾಂಧೀಜಿಯವರ ಜೀವನ, ಬಾಲ್ಯ, ವ್ಯಕ್ತಿತ್ವ ವಿಕಸನ ಹಾಗೂ ಹೋರಾಟಗಳನ್ನು ಅವಲೋಕಿಸುವ, ಅವರಿಂದ ಹಾಗೂ ಅವರ ಜೀವನ ಮೌಲ್ಯಗಳಿಂದ ಪ್ರೇರಿತರಾದ ಚಾರಿತ್ರಿಕ ಹಾಗೂ ಸಮಕಾಲೀನ ಇತರ ದೇಶಗಳ ನಾಯಕರುಗಳ ಜೀವನ ಹಾಗೂ ಚಳುವಳಿಗಳನ್ನು ಬಿಂಬಿಸುವ ಚಲನಚಿತ್ರಗಳನ್ನು ಪ್ರದರ್ಶಿಸಲು ಯೋಜಿಸಲಾಗಿದೆ.