ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ 2019 – Bahuroopi National Theatre Festival 2019

ಲಿಂಗ ಸಮಾನತೆ | Gender Equality

ಜನವರಿ ೧೨ ರಿಂದ ೧೮ ೨೦೧೯ ರವರೆಗೆ | Jan 12th to 18th, 2019

ರಂಗಾಯಣ ಮೈಸೂರು ತನ್ನ ೧೮ನೇ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವನ್ನು ೨೦೧೯ರ ಜನವರಿ ೧೨ ರಿಂದ ೧೮ ರವರೆಗೆ ಏಳು ದಿನಗಳ ಕಾಲ ಸಂಭ್ರಮದಿಂದ ಆಚರಿಸುತ್ತದೆ ಎಂದು ಸಂತೋಷದಿಂದ ತಿಳಿಸುತ್ತಿದ್ದೇವೆ. ಪ್ರಸ್ತುತ ಸಮಾಜವನ್ನು ಬಿಂಬಿಸಲು, ಭವಿಷ್ಯದ ಬಗ್ಗೆ ಚಿಂತಿಸುವ ಸಲುವಾಗಿ ಹಾಗು ಇತಿಹಾಸವನ್ನು ಅರ್ಥೈಸುವ ದೃಷ್ಟಿಯಿಂದ ಈ ಬಾರಿಯ ಉತ್ಸವವು ಚರ್ಚಿಸಲು ಹಾಗು ಅನ್ವೇಷಿಸಲು ಆಯ್ದುಕೊಂಡಿರುವ ವಿಷಯವು ಲಿಂಗ ಸಮಾನತೆ.

ಹುಟ್ಟಿನಿಂದಲೇ ಮಗುವಿನ ಲಿಂಗಕ್ಕೆ ಪೂರಕವಾದ ಸ್ವಬಾವಗಳನ್ನು ಹೇರಲಾಗುತ್ತದೆ. ಶೈಶವಾವಸ್ತೆಗೆ ಬರುವ ಮುನ್ನವೇ ಶಿಶುವೊಂದು ತನಗೆ ಗೊತ್ತಿಲ್ಲದಂತೆಯೇ ಪೂರ್ವನಿರ್ಧಾರಿತ ಲಿಂಗವೊಂದರ ಹಾವಭಾವಗಳನ್ನು ಪ್ರದರ್ಶಿಸುತ್ತಿರುತ್ತದೆ. ಸಮಾಜವು ಎಲ್ಲಾ ಸ್ತರಗಳಲ್ಲಿಯೂ ಸ್ವಭಾವಗಳನ್ನು ಲಿಂಗಾಧರಿತವಾಗಿ ನಮ್ಮ ಮೇಲೆ ಹೇರುತ್ತಲೇ, ಗಂಡು ಹಾಗು ಹೆನ್ಣು ಎಂಬ ಬಂಧಕ್ಕೆ ಒಳಪಡದವರನ್ನು ಶೋಷಿಸುತ್ತಲೇ ಇದೆ. ಇಂದಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಜನರ ಆಹಾರ ಪದ್ಧತಿ, ಲೈಂಗಿಕ ಆಸಕ್ತಿ ಹಾಗು ನಿರಾಸಕ್ತಿಗಳು, ಧಾರ್ಮಿಕ ಆಚರಣೆಗಳು ಮತ್ತು ವೇಷ ಭೂಷಣಗಳು ಖಾಸಗಿಯಾಗಿ ಉಳಿಯದೇ ಸಂಘ ಸಂಸ್ಥೆಗಳು ನಿರ್ಧರಿಸುವಂತಾಗಿದೆ.

 

ಮಾನವನು ಅನೇಕ ಪ್ರಬೇಧಗಳ ಸುಳಿಯಲ್ಲಿ ಸಿಲುಕಿದ್ದರೆ, ಪ್ರಕೃತಿಯಲ್ಲಿ ಕೂಡ ಎಲ್ಲವೂ ಸಮನಾಗಿಲ್ಲ. ಸಮನಾಗಿದ್ದರೆ ಎಷ್ಟು ನೀರಸವಾಗುತ್ತಿತ್ತು ಈ ಜೀವನ? ಪ್ರಬೇಧವು ಪ್ರಕೃತಿಯ ಜೀವಾಳವೇ ಆಗಿದೆ. ಯೂಜೀನ್ ಐಯಾನೆಸ್ಕೊನ ದಿ ಲೆಸ್ಸನ್ ನಾಟಕದ ಸಾರವೇ ಹೇಳುವಂತೆ ಭಾಷೆಯಲ್ಲಿ ವೈವಿದ್ಯತೆ ಇಲ್ಲದಿದ್ದರೆ ಸಂಸ್ಕೃತಿಯೇ ಇಲ್ಲವಾಗುತ್ತಿತ್ತು. ಈಗಿನ ನಗರಗಳೂ ಸಹ ತಮ್ಮ ಆಂತರಿಕ ಮೌಲ್ಯಗಳನ್ನು ಕಳೆದುಕೊಂಡು ಏಕತಾನತೆಯತ್ತಾ ಸಾಗುವುದು ಗಮನಿಸಿದರೆ ವೈವಿದ್ಯತೆಯೇ ಇಲ್ಲದೆ ನೀರಸವಾಗುವುದರಲ್ಲಿ ಅಚ್ಚರಿಯಿಲ್ಲ. ಪ್ರಕೃತಿಯು ಅನೇಕ ಪ್ರಬೇಧಗಳನ್ನು ಒಳಗೊಂಡೂ ಸಹ ಹೇಗೆ ನಿರಾಕಾರದೆಡೆಗೆ ಸಾಗುತ್ತದೆಯೋ ಹಾಗೆಯೇ ಮನುಷ್ಯನಿಗೆ ಏಕೆ ಸಾಧ್ಯವಾಗುವುದಿಲ್ಲ.

ಪ್ರಸ್ತುತ ಸಂದರ್ಭದಲ್ಲಿ, ವಿರೋಧಾಭಾಸವೊಂದು ಸಮಾಜವನ್ನು ಕಾಡುತ್ತಿದೆ. ಒಂದೆಡೆ ಪ್ರೇಮ ಹಾಗು ವಿವಾಹದ ಅರ್ಥ ಬದಲಾಗುವ ಹಾದಿಯಲ್ಲಿ ಇದೆ. ಇನ್ನೊಂದೆಡೆ, ಸಮಾಜವು ಹಲವು ಮಾಧ್ಯಮಗಳ ಮೂಲಕ ದೇಹವನ್ನು ಮೂರ್ತೀಕರಿಸುವತ್ತಾ ಸಾಗಿದೆ. ಇದರ ಭಾಗವಾಗಿಯೇ, ಶಿಕ್ಷೆಯ ಹೆಸರಿನಲ್ಲಿ ದಮನಿತರನ್ನು ದೈಹಿಕವಾಗಿ ಹಿಂಸಿಸುವ ಪ್ರತೀತಿ ಬೆಳದಿದ್ದು ಹಾಗು ತೃತೀಯ ಲಿಂಗಿಗಳ ಆಯ್ಕೆಯನ್ನು ತುಚ್ಛೀಕರಿಸುವ ಘಟನೆಗಳು ನಿತ್ಯ ಜೀವನದ ಭಾಗವಾಗಿದೆ. ಈ ಸಮಸ್ಯೆಗಳ ನಡುವೆಯೂ ದೇಶದ ಕಾನೂನನ್ನು ಕಾಪಾಡುವ ಸಂಸ್ಥೆಗಳು ಹಾಗು ಎಲ್ಲಕ್ಕಿಂತ ಮುಖ್ಯವಾಗಿ ಭಾರತೀಯ ಸಂವಿಧಾನ ನಮ್ಮ ಸಮಾಜದ ಬಹುತ್ವವನ್ನು ಕಾಪಾಡುತ್ತಲ್ಲೇ ಸಾಗಿದೆ.

ಈ ವಿಷಯಗಳಿಗೆ ಸ್ಪಂದಿಸಲು, ಬಹುರೂಪಿ ರಾಷ್ಟ್ರೀಯ ಬಹುಭಾಷಾ ನಾಟಕೋತ್ಸವ-೨೦೧೯ಕ್ಕೆ ರಂಗಾಯಣವು ಭಾರತದಾದ್ಯಂತ ನಾಟಕಗಳನ್ನು ಆಹ್ವಾನಿಸಿದೆ. ಲಿಂಗ ಸಮಾನತೆ ವಿಷಯಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ವಿಚಾರ ಸಂಕಿರಣವನ್ನೂ ನಾಟಕೋತ್ಸವದ ಅಂಗವಾಗಿ ಏರ್ಪಡಿಸಿದ್ದು, ದೇಶದ ಹಲವು ಭಾಗಗಳಿಂದ ತಜ್ಞರು ಆಗಮಿಸಲ್ಲಿದ್ದು ಅರ್ಥಪೂರ್ಣ ಚರ್ಚೆಗೆ ವೇದಿಕೆಯನ್ನು ಸಿದ್ಧಮಾಡಲಾಗಿದೆ. ವಿಚಾರ ಸಂಕಿರಣದ ಜೊತೆಜೊತೆಗೆ ಚಲನಚಿತ್ರ ಪ್ರದರ್ಶನ, ಆಹಾರ ಮೇಳ, ಪುಸ್ತಕ ಪ್ರದರ್ಶನ ಮತ್ತು ಮಾರಾಟ ಹಾಗು ಕರಕುಶಲ ವಸ್ತುಗಳ ಜಾತ್ರೆಯೂ ನಡೆಯಲಿದೆ. ರಂಗಾಯಣದ ರಂಗಸಮಾಜ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರಿನ ಉಸ್ತುವಾರಿ ಸಚಿವರು ಹಾಗು ಜಿಲ್ಲಾಡಳಿತಗಳ ಸಹಕಾರದಿಂದ ನಡೆಸುತ್ತಿರುವ ಈ ರಂಗೋತ್ಸವದಲ್ಲಿ ಮೈಸೂರಿನ ಮತ್ತು ನಾಡಿನ ರಂಗಕರ್ಮಿಗಳು, ಪತ್ರಕರ್ತರು, ಸಾಹಿತಿಗಳು, ಕಲಾವಿದರು, ಚಿಂತಕರು ಹಾಗು ನಾಡಿನ ಎಲ್ಲಾ ಕಲಾಭಿಮಾನಿಗಳು ಭಾಗವಹಿಸಿ ಉತ್ಸವದ ಯಶಸ್ಸಿಗೆ ಸಹಕರಿಸಬೇಕೆಂದು ಬಹುರೂಪಿ-೨೦೧೯ ಆಶಿಸುತ್ತದೆ.

We are happy to inform you that Rangayana, Mysore is celebrating its 18th Bahuroopi National Theatre Festival from 12th January to 18th January 2019. Our festival theme this year is Gender Equality in order to reflect on present times, contemplate a better future and to collectively understand our past.

Gender norms are imposed on human beings as soon as they are born. Even before a child becomes an adolescent, they strictly embody only one of either gender. Those who do not conform to these expectations are ridiculed or threatened. In our complex times, pressure groups and institutions also have a say in deciding what we eat, our sexual preferences, religious choice and attire.

 

 

We might pause to ask: Would life not be boring if everyone looks similar? Difference is the core principle of nature. Eugene Ionsco in The Lesson declares that without different languages, cultures would not survive. Nature survives through differences and celebrates the idea of formlessness.It is intriguing that man cannot follow nature’s neutrality in dealing with differences.
 
Recent years have seen a hardening paradox. On the one hand, definitions of love and social institutions like marriage and family have evolved. At the same time, the body has emerged as an object: through the violent access to women’s bodies, or the refusal to respect the choices of the third gender. It has fallen to legal institutions to interpret and protect Constitutional ideals for a heterogenous society.
 
Bahuroopi-2019 has invited plays from all over the country on a variety of social issues. A two-day symposium has been organized as part of this theatre festival, which will host scholars to discuss gender, performance and equality. Film screenings, a Book Exhibition and Sale, Handicrafts and Food courts will also be hosted. Rangayana is organizing Bahuroopi-2019 with the cooperation of RangaSamaja, the Department of Kannada and Culture, the District In-Charge Minister of Mysore and the District Commissioner. As an institution, we request the participation of thinkers, playwrights and journalists of Karnataka to realize the intent of this festival.

ಚಲನಚಿತ್ರ ಪ್ರದರ್ಶನ
ಕಾರ್ಯಕ್ರಮಗಳ ವಿವರಗಳು / program details

ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ 2019 
ಕಾರ್ಯಕ್ರಮಗಳ ವಿವರಗಳು / program details

ರಾಷ್ಟ್ರೀಯ ವಿಚಾರಸಂಕಿರಣ
ಕಾರ್ಯಕ್ರಮಗಳ ವಿವರಗಳು /program details