ರೊನಾಲ್ಡ್ ರಾಂಡ್  ಅವರ ಏಕವ್ಯಕ್ತಿ ಪ್ರದರ್ಶನ

ಅಂತರಾಷ್ಟ್ರೀಯ ಸಾಂಸ್ಕೃತಿಕ ರಾಯಭಾರಿ ಎಂದೇ ಖ್ಯಾತರಾಗಿರುವ ಪ್ರಖ್ಯಾತ ಅಮೇರಿಕನ್ ರಂಗನಟ ರೊನಾಲ್ಡ್ ರಾಂಡ್  ಮೈಸೂರಿಗೆ ಭೇಟಿನೀಡಲಿದ್ದಾರೆ. ತಮ್ಮ ಲೆಟ್ ಇಟ್ ಬಿ ಆರ್ಟ್ ಏಕವ್ಯಕ್ತಿ ಪ್ರದರ್ಶನವನ್ನು ಜಗತ್ತಿನಾದ್ಯಂತ ಪ್ರದರ್ಶಿಸಿ ಯಶಸ್ವಿಯಾಗಿರುವ  ರೊನಾಲ್ಡ್ ರಾಂಡ್  ಫೆಬ್ರುವರಿ 20 ಮತ್ತು 21 ರಂದು ರಂಗಾಯಣ ಹಾಗೂ ಮೈಸೂರು ವಿವಿಯ ಸಾಮರ್ಥ್ಯಾಭಿವೃದ್ಧಿ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಫೆಬ್ರುವರಿ 20 ರಂದು ಸಂಜೆ 7 ಗಂಟೆಗೆ ಭೂಮಿಗೀತದಲ್ಲಿ ರಾಂಡ್ ಅವರ ಲೆಟ್ ಇಟ್ ಬಿ ಆರ್ಟ್ ಏಕವ್ಯಕ್ತಿ ಪ್ರದರ್ಶನ ಹಾಗೂ ನಂತರ ಸಂವಾದ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ.

ರಂಗಾಯಣ ಪ್ರೀತಿಯಿಂದ ತಮ್ಮೆಲ್ಲರಿಗೂ ಸ್ವಾಗತ ಕೋರುತ್ತದೆ.

Mr. Ronald Rand, world known American theatre artiste, who is considered as ‘International Cultural Ambassador ‘will be performing in Mysore on Feb 20th. The event is being jointly organised by CPDPS of University of Mysore and Rangayana.

Mr. Ronald Rand who has taken his one man show ‘Let it be Art’ worldwide, will be performing the play for the first time in Mysore on Feb 20th at 6.30 pm at Bhoomigeetha Rangayana Mysore. It will be followed by a discussion with the audience. Entry is free for this program.

Rangayana cordially welcomes you all.