ಸಿ.ಜಿ.ಕೆ ನೆನಪಿನ ಹವ್ಯಾಸಿ ನಾಟಕೋತ್ಸವ-2018: ಕಾರ್ಯಕ್ರಮಗಳ ವಿವರ

ಈ ಬಾರಿ ಹವ್ಯಾಸಿ ನಾಟಕೋತ್ಸವವನ್ನು ರಂಗಭೂಮಿಯನ್ನು ಜನಪರ ಚಳುವಳಿಯನ್ನಾಗಿ ರೂಪಿಸಿದ ರಂಗಚೇತನ ಪ್ರೊ. ಸಿ.ಜಿ. ಕೃಷ್ಣಸ್ವಾಮಿ (ಸಿ.ಜಿ.ಕೆ) ರವರ ಹೆಸರಿನಲ್ಲಿ ನಡೆಸಲಾಗುತ್ತಿದೆ. 2018 ಮೇ 26 ರಿಂದ ಜೂನ್ 25 ರವರೆಗೆ ಪ್ರತಿ ಶನಿವಾರ ಮತ್ತು ಭಾನುವಾರಗಳಂದು ನಾಡಿನ ಬೇರೆ ಬೇರೆ ಜಿಲ್ಲೆಗಳ ಹವ್ಯಾಸಿ ತಂಡಗಳು ಈ ರಂಗೋತ್ಸವದಲ್ಲಿ ನಾಟಕಗಳನ್ನು ಪ್ರದರ್ಶಿಸಲಿವೆ. ಈ ಹವ್ಯಾಸಿ ನಾಟಕೋತ್ಸವದ ಉದ್ಘಾಟನಾ ಸಮಾರಂಭವನ್ನು 2018 ಮೇ 26 ರಂದು ಸಂಜೆ 6.00ಕ್ಕೆ ಭೂಮಿಗೀತ ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ. ಈ ನಾಟಕೋತ್ಸವದ ಉದ್ಘಾಟನೆಯನ್ನು ಹಿರಿಯ ರಂಗಕರ್ಮಿಗಳಾದ ಶ್ರೀಮತಿ ಎಸ್. ಮಾಲತಿ ಸಾಗರ ಅವರು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೈಸೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಆದ ಶ್ರೀಮತಿ ಡಿ. ಭಾರತಿ ಅವರು ಆಗಮಿಸಲಿದ್ದಾರೆ. ರಂಗಾಯಣದ ಮಾನ್ಯ ನಿರ್ದೇಶಕರಾದ ಶ್ರೀಮತಿ ಭಾಗೀರಥಿಬಾಯಿ ಕದಂ ಈ ಕಾರ್ಯಕ್ರಮದ ಅಧ್ಯಕ್ಷ್ಯತೆಯನ್ನು ವಹಿಸಲಿದ್ದಾರೆ. ರಂಗಾಯಣದ ಜಂಟಿ ನಿರ್ದೇಶಕರಾದ 
ಶ್ರೀ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಹಾಗೂ ಹವ್ಯಾಸಿ ನಾಟಕೋತ್ಸವದ ಸಂಚಾಲಕರಾದ ಶ್ರೀ ಸಂತೋಷ್‍ಕುಮಾರ್ ಕುಸನೂರು ಅವರು ಉಪಸ್ಥಿತರಿರುವರು. ಉದ್ಘಾಟನಾ ಕಾರ್ಯಕ್ರಮದ ನಂತರ ಸಂಜೆ:6.30ಕ್ಕೆ ಭೂಮಿಗೀತ ರಂಗಮಂದಿರದಲ್ಲಿ ಇಂಡಿಯನ್ ಥಿಯೇಟರ್ ಮೈಸೂರು ಇವರಿಂದ ಪ್ರೊ. ಹೆಚ್.ಎಸ್. ಉಮೇಶ್ ಅವರ ನಿರ್ದೇಶನದ ‘ಭೀಮಣ್ಣನ ಮಗ’ ನಾಟಕವನ್ನು ಪ್ರದರ್ಶಿಸಲಿದ್ದಾರೆ ಹಾಗೂ ದಿನಾಂಕ:27-05-2018 ರಂದು ಭಾನುವಾರ ಥಿಯೇಟರ್ ಸಮುರಾಯ್ ತಂಡದಿಂದ ಶ್ರೀ ಪಬಿತ್ರರಾಭಾ ಅವರ ನಿರ್ದೇಶನದ, ಶ್ರೀ ಹೆಚ್.ಎಸ್. ಶಿವಪ್ರಕಾಶ್ ಅವರ ‘ಮದುವೆ ಹೆಣ್ಣು’ ನಾಟಕದ ಪ್ರದರ್ಶನವನ್ನು ಸಹ ಏರ್ಪಡಿಸಲಾಗಿದೆ.

ಕಾರ್ಯಕ್ರಮಗಳ ಪಟ್ಟಿ

26th  ಮೇ 2018 ಭೀಮಣ್ಣನ ಮಗ 

ಭೀಮಣ್ಣನ ಮಗ ತಂಡ: ಇಂಡಿಯನ್ ಥಿಯೇಟರ್, ಮೈಸೂರು ಕನ್ನಡಕ್ಕೆ : ಶುಭದ ಅಮೀನಭಾವಿ ರಂಗರೂಪ, ನಿರ್ದೇಶನ : ಹೆಚ್.ಎಸ್. ಉಮೇಶ್

27th  ಮೇ 2018 ಮದುವೆ ಹೆಣ್ಣು  

ಮದುವೆ ಹೆಣ್ಣು ತಂಡ: ಥಿಯೇಟರ್ ಸಮುರಾಯ್, ಹೊಸನಗರ ರಚನೆ: ಪ್ರೊ. ಹೆಚ್.ಎಸ್. ಶಿವಪ್ರಕಾಶ್ ನಿರ್ದೇಶನ: ಪಬಿತ್ರರಾಭಾ

2nd  ಜೂನ್ 2018 ಕೊಂದವರಾರು  

ಕೊಂದವರಾರು ತಂಡ: ವಿಶ್ವರಂಗ, ಕಲಬುರಗಿ ರಚನೆ: ಪ್ರಸನ್ನ ನಿರ್ದೇಶನ : ವಿಶ್ವರಾಜ ಪಾಟೀಲ

3rd  ಜೂನ್ 2018 ಗತಿ  

ಗತಿ ತಂಡ: ರಂಗಸಂಪದ, ಬೆಳಗಾವಿ ರಚನೆ, ನಿರ್ದೇಶನ : ಶಿರೀಶ್ ಜೋಷಿ

9th   ಜೂನ್ 2018 ಕುರುಕ್ಷೇತ್ರ  

ಕುರುಕ್ಷೇತ್ರ ತಂಡ: ಜನಮನದಾಟ, ಹೆಗ್ಗೋಡು ವಿನ್ಯಾಸ, ಪರಿಕಲ್ಪನೆ, ನಿರ್ದೇಶನ : ಎಂ. ಗಣೇಶ್

10th   ಜೂನ್ 2018 ಗುಲಾಮನ ಸ್ವಾತಂತ್ರ್ಯ ಯಾತ್ರೆ  

ಗುಲಾಮನ ಸ್ವಾತಂತ್ರ್ಯ ಯಾತ್ರೆ ತಂಡ: ರಂಗ ಆರಾಧನ, ಸವದತ್ತಿ ರಚನೆ: ಎಂ.ಎಸ್.ಕೆ. ಪ್ರಭು ನಿರ್ದೇಶನ : ಜಯತೀರ್ಥ ಜೋಶಿ

16th   ಜೂನ್ 2018 ಕೆಂಪು ಕಣಗಿಲೆ  

ಕೆಂಪು ಕಣಗಿಲೆ ತಂಡ: ನಟನ, ಮೈಸೂರು ರಚನೆ: ರವೀಂದ್ರನಾಥ ಠಾಗೋರ್ ನಿರ್ದೇಶನ: ಡಾ. ಶ್ರೀಪಾದಭಟ್

17th   ಜೂನ್ 2018 ರಂಗಜಂಗಮ  

ರಂಗಜಂಗಮ ತಂಡ: ಸಂಚಾರಿ ರಂಗತಂಡ, ಬೆಂಗಳೂರು ರಚನೆ, ನಿರ್ದೇಶನ: ಎಸ್. ರಾಮನಾಥ

23rd   ಜೂನ್ 2018 ಕಿಚ್ಚಿಲ್ಲದ ಬೇಗೆ  

ಕಿಚ್ಚಿಲ್ಲದ ಬೇಗೆ ತಂಡ: ಹಸ್ಮಿ ಥಿಯೇಟರ್ ಪೋರಂ, ಬೆಂಗಳೂರು ರಚನೆ: ಲವಕುಮಾರ್ ಟಿ.ಹೆಚ್ ನಿರ್ದೇಶನ: ವಿಶಾಲ್‌ಪಾಟೀಲ್

24th   ಜೂನ್ 2018 ಒಂದು ಪ್ರೀತಿಯ ಕಥೆ  

ಒಂದು ಪ್ರೀತಿಯ ಕಥೆ ತಂಡ: ಬೆಂಗಳೂರು ಥಿಯೇಟರ್ ಕಲೆಕ್ಟೀವ್ ರೂಪಾಂತರ, ನಿರ್ದೇಶನ : ವೆಂಕಟೇಶ್ ಪ್ರಸಾದ್

ನಾಟಕಗಳು

ಭೀಮಣ್ಣನ ಮಗ
 

ಮದುವೆ ಹೆಣ್ಣು