ಶೂದ್ರ ತಪಸ್ವಿ – SHOODRA TAPASWI

ರಚನೆ : ಕುವೆಂಪು
ವಿನ್ಯಾಸ : ಹೆಚ್.ಕೆ. ದ್ವಾರಕಾನಾಥ್
ಸಂಗೀತ : ಶ್ರೀನಿವಾಸ್ ಭಟ್ ಮತ್ತು ಸಿ.ಬಸವಲಿಂಗಯ್ಯ
ನಿರ್ದೇಶನ : ಸಿ. ಬಸವಲಿಂಗಯ್ಯ

ನಾಟಕದ ಸಾರಂಶ :

ನಾಟಕ ಜೋಗತಿ ಮೇಳದ ನಿರೂಪಣಾ ವಿಧಾನದಲ್ಲಿದ್ದರೂ, ನೃತ್ಯಕ್ಕೆ ರೇಣುಕಾ ಎಲ್ಲಮ್ಮನ ಭಕ್ತರ ಕುಣಿತವನ್ನು ಅಳವಡಿಸಲಾಗಿದೆ. ಪ್ರಸ್ತುತ ನಾಟಕವು ಹಳೆಗನ್ನಡದಲ್ಲಿರುವ ಪ್ರಾಚೀನ ಕತೆಯೊಂದರ ಭಾಗವಾಗಿದ್ದು, ನಟನಾ ಶೈಲಿ ಮತ್ತು ರಂಗವಿನ್ಯಾಸಗಳು ಆಧುನಿಕ ಮೂಸೆಯಲ್ಲಿ ಎರಕ ಹೊಯ್ಯಲ್ಪಿಟ್ಟಿವೆ. ಹಾವಭಾವಗಳು ಮುಖ್ಯ ಭೂಮಿಕೆಗೆ ಬರುವುದರಿಂದ ಕುವೆಂಪು ಅವರ ’ಶೂದ್ರ ತಪಸ್ವಿ’ ದೃಶ್ಯ ಕಾವ್ಯವಾಗಿ ನಿರೂಪಿಸಲ್ಪಟ್ಟಿದೆ.

ನಾಟಕದ ಪರಿಕಲ್ಪನೆ ಮೂರು ದೃಶ್ಯಗಳಲ್ಲಿ ಮೂಡಿದೆ. ಮೊದಲ ದೃಶ್ಯದಲ್ಲಿ ವೃಕ್ಷಭೈರವ ಹೇಗೆ ತಪೋವನದಲ್ಲಿ ಅವತರಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾನೆ ಹಾಗೂ ಮೃತ್ಯು ಆಶ್ರಮವನ್ನು ಪ್ರವೇಶಕ್ಕೆ ತಡೆಯೊಡ್ಡುತ್ತಾನೆ (ಕವಿ ಮೃತ್ಯುವನ್ನು ಸ್ತ್ರೀ ತತ್ವವಾಗಿ ಕಂಡಿದ್ದಾರೆ) ಎಂಬುದರ ವಿವರವಿದೆ. ಧರ್ಮದೇವತೆಯಿಂದ ಅಪ್ಪಣೆಯನ್ನು ಪಡೆದವನಾಗಿ ಆಶ್ರಮದಲ್ಲಿ ತಪಸ್ಸು ಮಾಡುತ್ತಿರುವ ಶಂಭೂಕನನ್ನು ಕಾಪಾಡಬೇಕಾಗಿದೆ ಎಂಬುದನ್ನು ತಿಳಿಸುತ್ತಾನೆ. ತನ್ನ ಪುತ್ರನೊಂದಿಗೆ ಆಶ್ರಮ ಪ್ರವೇಶಿಸಿರುವ ಬ್ರಾಹ್ಮಣನ ಬಗ್ಗೆಯೂ ಮೃತ್ಯುವಿಗೆ ತಿಳಿದು, ತಪಸ್ಸು ಮಾಡುತ್ತಿರುವ ಶಂಭೂಕ ಮಹರ್ಷಿಗೆ ತಪಸ್ಸು ಮಾಡುವ ಹಕ್ಕಿಲ್ಲ ಎನ್ನುವ ಬ್ರಾಹ್ಮಣನ ಅಹಂಕಾರದ ಬಗ್ಗೆ ಅವಳು ಅಸಂತುಷ್ಟಳಾಗುತ್ತಾಳೆ. ಶ್ರೀರಾಮಚಂದ್ರ ಅಯೋಧ್ಯೆಯನ್ನು ಆಳುತ್ತಿದ್ದರೂ ಬ್ರಾಹ್ಮಣರಿಂದ ಇಂತಹ ವಿಚಾರಗಳು ನುಸುಳಿವೆ ಎಂದು ಭೈರವ ಯೋಚಿಸಿ ವ್ಯಥೆಪಡುತ್ತಾನೆ.

ಶೂದ್ರನ ತಪಸ್ಸಿಗಾಗಿ ಹೊಣೆ ಮಾಡಿ ರೋದಿಸುತ್ತಾ ಶ್ರೀರಾಮಚಂದ್ರನನ್ನು ತೆಗಳುತ್ತಿರುವ ಬ್ರಾಹ್ಮಣನೊಂದಿಗೆ ಎರಡನೆ ದೃಶ್ಯ ತೆರೆದುಕೊಳ್ಳುತ್ತದೆ. ತನ್ನ ಮಗ ಮಡಿದಿರುವುದು ಶೂದ್ರನ ತಪಸ್ಸಿನಿಂದಾಗಿಯೇ ಎಂದು ಶ್ರೀರಾಮನನ್ನು ಕಂಡ ಬ್ರಾಹ್ಮಣ ಅರಹುತ್ತಾನೆ. ಧರ್ಮವನ್ನು ಕಾಪಾಡಲು ಮತ್ತು ಅಧರ್ಮವನ್ನು ನಾಶಮಾಡಲು ಒತ್ತಾಯಿಸುವ ಬ್ರಾಹ್ಮಣನ ಈ ದುರಹಂಕಾರವನ್ನು ಕಂಡ ಶ್ರೀ ರಾಮ ಆಶ್ಚರ್ಯಚಕಿತನಾಗುತ್ತಾನೆ. ಬ್ರಾಹ್ಮಣ ಶ್ರೀರಾಮನಿಗೆ ಶಂಭೂಕನನ್ನು ತೋರಿಸಿ ಅಧರ್ಮದ ಮೂಲ ಅವನೆ ಎಂದು ಹೇಳುತ್ತಾನೆ. ಬ್ರಾಹ್ಮಣನತ್ತ ವ್ಯಂಗವಾಗಿ ನಗುತ್ತ ಶ್ರೀರಾಮನು ಬ್ರಹ್ಮಾಸ್ತ್ರವನ್ನು ಬಿಲ್ಲಿಗೆ ಹೆದೆಯೇರಿಸಿ ಪ್ರಯೋಗಿಸುತ್ತಾನೆ. ಆದರೆ ಬ್ರಹ್ಮಾಸ್ತ್ರ ಶಂಭೂಕನನ್ನು ಘಾಸಿಮಾಡುವ ಬದಲು ಅವನಿಗೆ ನಮಸ್ಕರಿಸುತ್ತದೆ. ಮಹಾಸ್ತ್ರ ನಿಷ್ಪ್ರಯೋಜಕವಾಯಿತು ಎಂದು ಬ್ರಾಹ್ಮಣ ಅಂದುಕೊಳ್ಳುತ್ತಾನೆ. ಆಗ ಶ್ರೀರಾಮನು ಬ್ರಹ್ಮಸ್ತ್ರ ತನ್ನ ಗುರಿಯನ್ನು ಮುಟ್ಟಿಯೇ ತೀರುತ್ತದೆ ಎಂದು ಅವನನ್ನು ಸಮಾಧಾನ ಮಾಡುತ್ತಾನೆ – ಇದರ ಅರ್ಥ ಬ್ರಾಹ್ಮಣನೇ ಗುರಿ ಎಂದು. ಆಗ ಬ್ರಾಹ್ಮಣನು ಶ್ರೀರಾಮನ ಪಾದಗಳಿಗೆ ಎರಗಿ ಕರುಣೆ ತೋರಲು ಕೇಳಿಕೊಂಡು ಕ್ಷಮಾಪಣೆ ಕೇಳಿಕೊಳ್ಳುತ್ತಾನೆ. ತನ್ನ ತಪ್ಪನ್ನರಿತ ಬ್ರಾಹ್ಮಣನು ಶಂಭೂಕ ಮಹರ್ಷಿಗೆ ನಮಸ್ಕರಿಸಿ ತನ್ನ ಮಗ ಮರಳಿ ಜೀವಂತವಾಗಿ ನಿದ್ದೆಯಿಂದ ಎಚ್ಚರಗೊಳ್ಳುವುದನ್ನು ಕಂಡು ಹೊಸ ತಿಳಿವನ್ನು ಪಡೆಯುತ್ತಾನೆ.

ಕವಿ ಕುವೆಂಪು ಅವರು ಪುರಾಣಗಳನ್ನು ಅವುಗಳ ರೂಪಕ ಗುಣಗಳ ಮೂಲಕ ಅರ್ಥಮಾಡಿಕೊಳ್ಳಬೇಕೆ ಹೊರತು ಅವುಗಳ ವ್ಯತಿರಿಕ್ತ ಅರ್ಥಗಳಿಗೆ ಪ್ರಾಮುಖ್ಯತೆ ಕೊಡುವುದು ಕೇವಲ ಅನರ್ಥಕ್ಕೆ ದಾರಿಯಾಗುವುದಲ್ಲದೆ ಕಾಲದ ನಡೆಗೆ ಘೋರ ಅನ್ಯಾಯ ಮಾಡಿದಂತಾಗುತ್ತದೆ ಎಂದು ಬಿನ್ನಹ ಮಾಡಿಕೊಳ್ಳುತ್ತಾರೆ. ನಾವು ಈ ತೆರನ ದೃಷ್ಟಿಕೊಂಡಲ್ಲಿ ಅನೇಕ ಸ್ತರಗಳಿರುವ ಈ ದೇಶದಲ್ಲಿ ಈ ನಾಟಕವು ನಿರಂತರವಾಗಿ ಪ್ರಸ್ತುತವಾಗುತ್ತದೆ.

By: Kuvempu
Design : H.K. Dwarakanath
Music: Shreenivas Bhat & C. Basavalingiah
Direction : C. Basavalingiah

ABOUT THE PLAY :

All though the narration of the play follows the pattern of the ‘Jogatheeya Mela’, a folklore tradition of south India, the rhythm of the dance by the devotees (Renuka Yellamma) has been incorporated. The play is a part of an ancient story in old Kannada, but it has been poured into a modern mould as far as its acting style and scenic design are concerned. As the gestures receive the prominent emphasis SHOODRA TAPASWI written by Kuvempu has been narrated as a visual poetry.

The play is conceived in three scenes. The first scene describes how Vrikshabhairava manifests in the tapovana and takes charge of the guard. Death encounters Bhairava and expresses her (The poet visualizes Death as a female principle) wish to enter the Ashrama. Death learns that Shambuka is observing penance in the Ashram and hence he admits that he has to safeguard the breath of the ascetic as ordained by the presiding deity of Dharma. She further learns about the entry of a Brahmin along with his son into the Ashram and expresses her displeasure that in his arrogance the Brahmin thinks that Shambuka, being a Shoodra had no right to observe penance. Bhairava also thinks sadly that such thoughts are entrained by Brahmins although it’s Sri Ramachandra who is ruling Ayodhaya.

The second scene reveals the wailing Brahmin who even berates Sri Ramachandra as he woo was responsible, in a way, for the penance of the Shoodra. When Srirama appears he explains to him that he lost his son because of the penance of the Shoodra. Srirama is shocked at the arrogance of the Brahmin implores that the source of adharma must be eliminated in order to restore the balance. He points towards Shambuka suggesting that he was the source of adharma. Smiling at him ironically Srirama sets his Brahmastra to the bow anggd releases it. The arrow instead of hitting the target seems to salute him. The Brahmin feels sad that the great weapon has proved to be futile; but Sriram consoles him that it is sure to find its target, meaning the Brahmin himself. Then the Brahmin prostrates at Srirama’s feet and begs him to show mercy. Realising his mistake he salutes Shambuka and acquires a new radiance as found by his own son who regains his life as though he is waking up from his sleep. The play ends with Srirama’s assurance to the Brahmin that he was a real Brahmin now as he was blessed by Shambuka.

The poet Kuvemu made a plea that the myths should be recovered for their metaphoric value and any attempt to make their denotative meaning more prominent is not only counter-productive, but would amount to doing terrible disservice to the spirit of the time. If we keep this end in view this play will be relevant almost eternally in this land of mind-boggling stratification.

ರಂಗದ ಮೇಲೆ :

ಜೋಗತಿಯರು : ನಂದಿನಿ ಕೆ.ಆರ್., ಗೀತಾ ಎಂ.ಎಸ್., ಸರೋಜ ಹೆಗಡೆ, ಶಶಿಕಲಾ ಬಿ.ಎನ್., ಪ್ರಮೀಳಾ ಬೆಂಗ್ರೆ, ಹುಲುಗಪ್ಪ ಕಟ್ಟೀಮನಿ
ಭೈರವ : ಮಹದೇವ್, ಮೈಮ್ ರಮೇಶ್, ರಾಮು. ಎಸ್., ಜಗದೀಶ್ ಮನವಾರ್ತೆ., ವಿನಾಯಕ ಭಟ್ ಹಾಸಣಗಿ
ಮೃತ್ಯು : ಮಂಜುನಾಥ ಬೆಳಕೆರೆ, ನೂರ್ ಅಹ್ಮದ್ ಶೇಖ್, ರಾಮನಾಥ್ ಎಸ್., ಸಂತೋಷಕುಮಾರ್ ಕುಸನೂರ್
ಶ್ರೀರಾಮ : ಕೃಷ್ಣಕುಮಾರ್ ನಾರ್ಣಕಜೆ
ಬ್ರಾಹ್ಮಣ : ಕೃಷ್ಣಪ್ರಸಾದ್ ಎಂ.ಸಿ., ಪ್ರಶಾಂತ್ ಹಿರೇಮಠ
ಶಂಭೂಕ : ರಾಮು. ಎಸ್.
ಬ್ರಹ್ಮಾಸ್ತ್ರ : ಮೈಮ್ ರಮೇಶ್

ON THE STAGE :

Jogatis : Nandini K.R., Geetha M.S., Saroja Hegde., Shashikal B.N., Prameela Bengre., Hulugappa Kattimani
Bhairava : Mahadev., Mime Ramesh., Ramu.S., Jagadeesh Manavarte., Vinayak Bhat Hasanagi
Mrithyu : Manjunath Belkere., Noor Ahmed Shaikh., Ramanath S., Santoshkumar Kusanur
Shrirama : Krishnakumar Narnakaje
Brahmin : M.C. Krishnaprasad, Prashanth Hiremath
Shambhooka : S. Ramu
Brahmastra : Mime Ramesh

ರಂಗದ ಹಿಂದೆ :

ವಸ್ತ್ರಾಲಂಕಾರ ವಿನ್ಯಾಸ : ರಘುನಂದನ
ಬೆಳಕಿನ ವಿನ್ಯಾಸ : ಪಿ. ಗಂಗಾಧರಸ್ವಾಮಿ
ಸಂಗೀತ ಸಾಂಗತ್ಯ : ಅಂಜುಸಿಂಗ್
ರಂಗ ನಿರ್ವಹಣೆ : ಹುಲುಗಪ್ಪ ಕಟ್ಟೀಮನಿ
ರಂಗಸಜ್ಜಿಕೆ : ಗೀತಾ ಎಂ.ಎಸ್., ಕೃಷ್ಣಕುಮಾರ್., ಎಸ್. ರಾಮು., ಜಗದೀಶ್ ಮನೆವಾರ್ತೆ
ವಸ್ತ್ರಾಲಂಕಾರ : ಮಹದೇವ್., ಪ್ರಮೀಳಾ ಬೆಂಗ್ರೆ., ನೂರ್ ಅಹ್ಮದ್ ಶೇಖ್
ಪರಿಕರ : ಸರೋಜ ಹೆಗಡೆ., ಮೈಮ್ ರಮೇಶ್
ಪ್ರಸಾಧನ : ವಿನಾಯಕ ಭಟ್ ಹಾಸಣಗಿ., ಕೃಷ್ಣಪ್ರಸಾದ್ ಎಂ.ಸಿ.
ಮುಖವಾಡಗಳು : ನಂದಿನಿ ಕೆ.ಆರ್., ಶಶಿಕಲಾ ಬಿ.ಎನ್.
ಸಂಗೀತ ಸಹಾಯ : ಮಂಜುನಾಥ ಬೆಳಕೆರೆ., ಪ್ರಶಾಂತ್ ಹಿರೇಮಠ
ಪ್ರಚಾರ : ಸಂತೋಷಕುಮಾರ್ ಕುಸನೂರ್., ರಾಮನಾಥ. ಎಸ್.

BEHIND THE STAGE :

Costumes : Raghunandan
Lighting Design : P.Gangadharaswamy & Sagai Raju
Musical Assistance : Anjusingh
Stage Management : Hulugappa Kattimani
Sets : Geetha M.S., Krishnakumar., S.Ramu., Jagadeesh Manavarte
Costumes : Mahadev., Prameela Bengre., Noor Ahmed Shaikh
Properties : Saroja Hegde., Mime Ramesh
Makeup : Vinayak Bhat Hasanagi., Krishnaprasad M.C.
Masks : Nandini K.R., Shashikala B.N.
Music : Manjunath Belkere., Prashanth Hiremath
Publicity : Santoshkumar Kusanur., Ramanath S.