ರಂಗಮಂದಿರಗಳು

ಭೂಮಿಗೀತ

ಸ್ಥಳಾವಕಾಶ: 210 ಆಸನಗಳು

ಗೋಪಾಲಕೃಷ್ಣ ಅಡಿಗರ ‘ಭೂಮಿಗೀತ’ ಪದ್ಯವನ್ನು ದೃಶ್ಯಕಾವ್ಯವಾಗಿ ಪ್ರದರ್ಶಿಸಿದ ಕಾರಣದಿಂದ ಅದು ಪ್ರದರ್ಶಿತವಾದ ರಂಗಮಂದಿರವನ್ನು ‘ಭೂಮಿಗೀತ’ ಎಂದು ಕರೆಯಲಾಗಿದೆ. ದಿವಂಗತ ಜಯತೀರ್ಥ ಜೋಶಿಯವರು ಈ ದೃಶ್ಯಕಾವ್ಯವನ್ನು ದಿಗ್ದರ್ಶಿಸಿದರು. ಡಾ. ಶಶಿಭೂಷಣ್ ನಮ್ಮ ನಡುವಿನ ವಿಖ್ಯಾತ ವಾಸ್ತುಶಿಲ್ಪಿ; ಭೂಮಿಗೀತದ ವಿನ್ಯಾಸ ಅವರದು. ‘ಅಕ್ಕ’ ರಾಷ್ಟ್ರೀಯ ನಾಟಕೋತ್ಸವದ ಸಂದರ್ಭದಲ್ಲಿ ಭೂಮಿಗೀತ ಗರಿಗೆದರಿತು. ಅಲ್ಲಿಂದ ಮುಂದೆ ಭೂಮಿಗೀತ ರಂಗಮಂದಿರ ರಂಗಭೂಮಿಯ ಹಲವು ಮಹತ್ವದ, ಚಾರಿತ್ರಿಕ ಪ್ರದರ್ಶನಗಳಿಗೆ ವೇದಿಕೆಯಾಗಿದೆ.

ಭೂಮಿಗೀತ

ವನರಂಗ

ಸ್ಥಳಾವಕಾಶ: 600 ಆಸನಗಳು 

ರಂಗಾಯಣ ಆವಿರ್ಭವಿಸುವುದಕ್ಕೂ ಮೊದಲು ಬಿ.ವಿ. ಕಾರಂತರು ‘ಕಿಂಗ್ ಲಿಯರ್’ ನಾಟಕವನ್ನು ನಿರ್ದೇಶಿಸಿ ಈ ಬಯಲು ರಂಗಮಂದಿರದಲ್ಲಿ ಪ್ರದರ್ಶಿಸಿದರು. ಕೆರೆ ಮತ್ತು ಬನದ ಹಿನ್ನೆಲೆಯಿರುವ ಸಹಜ ರಂಗಮಂದಿರವಿದು. ಈ ರಂಗಮಂದಿರದಲ್ಲಿ ೬೦೦ ಜನ ಪ್ರೇಕ್ಷಕರು ಕುಳಿತುಕೊಳ್ಳಬಹುದು. ‘ಕಿಂದರಿ ಜೋಗಿ’ಯ ಮೊದಲ ಪ್ರದರ್ಶನದಿಂದ ಹಿಡಿದು ರಂಗಭೂಮಿಯಲ್ಲಿನ ಹಲವಾರು ಮಹತ್ವದ ನಾಟಕಗಳು ಇಲ್ಲಿ ಪ್ರದರ್ಶನಗೊಂಡಿವೆ.

ವನರಂಗ

ಶ್ರೀರಂಗ

ಸ್ಥಳಾವಕಾಶ: 100 ಆಸನಗಳು

100 ಮಂದಿ ಕೂರಬಹುದಾದ ಒಂದು ಪುಟ್ಟ ಸುಂದರ ಪ್ರೇಕ್ಷಕಾಂಗಣವಿದು. ಪುಟ್ಟ ಸಭೆಗಳಿಗೆ, ಸಂಗೀತ/ನೃತ್ಯ ಪ್ರದರ್ಶನಗಳಿಗೆ, ವಿಚಾರ ಸಂಕಿರಣಗಳಿಗೆ ಹೇಳಿ ಮಾಡಿಸಿದಂಥ ಅಡಕವಾದ ಆವರಣ. ಇಲ್ಲಿ ಪುಸ್ತಕಗಳ ಬಿಡುಗಡೆ ಸಮಾರಂಭ, ಚರ್ಚಾಕೂಟಗಳು, ಸಂವಾದಗಳು ಏರ್ಪಡುತ್ತಿರುತ್ತವೆ.