ರೊನಾಲ್ಡ್ ರಾಂಡ್ ಅವರ ಏಕವ್ಯಕ್ತಿ ಪ್ರದರ್ಶನ ಮತ್ತು ಶಿಬಿರ

ಜಾಗತಿಕ ಮಟ್ಟದಲ್ಲಿ ಏಕವ್ಯಕ್ತಿ ಪ್ರದರ್ಶನ ಹಾಗೂ ರಂಗತರಬೇತುದಾರರಾಗಿ ಹೆಸರು ಮಾಡಿರುವ ರೊನಾಲ್ಡ್ ರಾಂಡ್ 2015 ಫೆಬ್ರವರಿ 20 ರಂದು ರಂಗಾಯಣದ ಭೂಮಿಗೀತದಲ್ಲಿ ’ಲೆಟ್ ಇಟ್ ಬಿ ಆರ್ಟ್’ ಏಕವ್ಯಕ್ತಿ ಪ್ರದರ್ಶನ ನೀಡಿದ್ದು ನಮಗೆಲ್ಲರಿಗೂ ಒಂದು ರಂಗಾನುಭವವಾಯಿತು. ತಮ್ಮ ಕಲಿಕೆಯ ಶುರುವಾಗಿದ್ದ ಹೆರಾಲ್ಡ್ ಕ್ಲಾರಮನ್ ನೆರಳಿನ ನಟನೆಯ ಸಾಮರ್ಥ್ಯವನ್ನು ಬೆಳೆಸಿಕೊಂಡು ಅವರ ಗುರುವಿನ ಬದುಕು ಮತ್ತು ಅವರ ವೈವಿಧ್ಯಮಯ ಆಸಕ್ತಿಗಳನ್ನು ಯಥಾವತ್ತಾಗಿ ಅನುಕರಿಸುವ ಮೂಲಕ ಗುರುಕಾಣಿಕೆ ಸಲ್ಲಿಸುವ ಪರಿಯಲ್ಲಿ ‘ಕ್ಲಾರಮನ್’ ರನ್ನು ಪ್ರಸ್ತುತದಲ್ಲಿ ಜೀವಂತಗೊಳಿಸುವ ಸಾಧಕ ನಟ ರೊನಾಲ್ಡ್ ಒಬ್ಬ ಶಿಸ್ತಿನ ಬದ್ದತೆಯ ರಂಗದ ಮೇಲೆ ರಂಗಕರ್ಮಿಯಾಗಿ ಜಗತ್ ಪರ್ಯಟನೆ ಮಾಡುತ್ತಾ ‘ಎನಗಿಂತ ಕಿರಿಯರಿಲ್ಲ’ ಎಂಬಂತೆ ಯಾವುದೇ ಹಮ್ಮು ಬಿಮ್ಮುಗಳಿಲ್ಲದೆ ಸರಳವಾಗಿ ಎಲ್ಲರೊಡನೆ ಹಸನ್ಮುಖಿಯಾಗಿ ಬೆರೆಯುತ್ತಾ, ಬೆಸೆದುಕೊಳ್ಳುತ್ತಾ, ಕಲಿಯುತ್ತಾ, ಕಲಿಸುತ್ತಾ ಬೆರಗುಗಣ್ಣಿನಿಂದ ಮುಗ್ಧ ಮನಸ್ಸಿನಿಂದ ಎಲ್ಲರ ಮನ ಮುದಗೊಳಿಸುತ್ತಾ ನಿರಂತರ ರಂಗಯಾತ್ರೆಯಲ್ಲಿ ಪಯಣಿಸುತ್ತಿರುವ ಪ್ರೀತಿಯ ನಟ ರೊನಾಲ್ಡ್ ರಂಗಾರ್ಥಿಗಳಿಗೆ ಮಾದರಿಯಾಗಿ ನಮ್ಮ ನೆನಪಿನಂಗಳದಲ್ಲಿ ಉಳಿಯುವ ವಿಶಿಷ್ಟ ರಂಗವ್ಯಕ್ತಿತ್ವ.

Ronald Rand, a world class actor of one man show and a well known theatre trainer performed his ‘LET IT BE ART’, one man show which was a great theatre experience for all of us.  Starting from his learning from his ‘Guru’ Herald Clarman he developed the ability of acting imitating exactly like his Teacher’s life and vivid interests thus has given a great salutation to ‘Clarman’ and made him come alive. Ronald Rand is a disciplined, committed, theatre person on stage travelling throughout the world with a humble attitude of ‘There is no smaller person than me’ and without any ego. Mingling with everybody with a hearty smile, learning while teaching, looking the world with a child’s greatest amazement, making everyone merry and being an eternal traveler in the journey of theatre with utmost simplicity Ronald Rand with such a personality is a model and remarkable theatre personality for sincere disciples of theatre who ever remains in our fond memory.