ಬರ್ಟೋಲ್ಟ್ ಬ್ರೆಕ್ಟ್ ನ ಮೂರು ಕಾಸಿನ ಸಂಗೀತ  ನಾಟಕ

ದಿನಾಂಕ 15-01-2016 | ಭೂಮಿಗೀತ ರಂಗಮಂದಿರದಲ್ಲಿ ಮಧ್ಯಾಹ್ನ 3.30ಕ್ಕೆ | ಬರ್ಟೋಲ್ಟ್ ಬ್ರೆಕ್ಟ್ ನ ಮೂರು ಕಾಸಿನ ಸಂಗೀತ ನಾಟಕ | ಭಾಷೆ: ಕನ್ನಡ | ಕನ್ನಡಕ್ಕೆ : ಕೆ.ವಿ. ಸುಬ್ಬಣ್ಣ | ವಿನ್ಯಾಸ ಮತ್ತು ನಿರ್ದೇಶನ: ನಟರಾಜ್ ಹೊನ್ನವಳ್ಳಿ | ತಂಡ: ಸಂಸ್ಕೃತಿ ಕಾಲೇಜ್ ಆಫ್ ವಿಜುವಲ್ ಆಂಡ್ ಪರ್ಫಾಮಿಂಗ್ ಆರ್ಟ್ಸ್, ಹುಬ್ಬಳ್ಳಿ. Date 15-01-2016 | 3.30 PM | Bhoomigeetha | Bertolt Brecht’ s,  Mooru Kasina Sangeetha Nataka | Language : Kannada |Kannada Translation: K.V. Subbanna | Design/ Direction: Nataraj Honnavalli | Troupe: Samskruthi College of Visual & Performing Arts, Hubli |

ಟಿಕೆಟ್‌ಗಳಿಗಾಗಿ ರಂಗಾಯಣ ಕಛೇರಿಯನ್ನು ಸಂಪರ್ಕಿಸಿ. ದೂರವಾಣಿ ಸಂಖ್ಯೆ : 0821-2512639   ಅಥವಾ ಆನ್‌ಲೈನ್  ಟಿಕೆಟ್‌ಗಾಗಿ Filmy Sphere or  www.bookmyshow.com

ಜರ್ಮನಿ ಬರ್ಟೋಲ್ಟ್ ಬ್ರೆಕ್ಟ್ (February 10, 1898- August 14,1956) ಪ್ರಪಂಚದ ಪ್ರಸಿದ್ಧ ನಾಟಕಕಾರ ಕವಿ ಹಾಗೂ ರಂಗಮೀಮಾಂಸಕಾರ. ತನ್ನ ಕಾಲದಲ್ಲಿ ನಡೆದ ಹಿಟ್ಲರನ ನಿರಂಕುಶ ಆಡಳಿತವನ್ನು ಮತ್ತು ಅವನ ಜನಾಂಗೀಯ ರತ್ತಪಿಪಾಸುತನವನ್ನು ಬಹಳ ಹತ್ತಿರದಿಂದ ನೋಡಿ, ಅದನ್ನು ತನ್ನ ನಾಟಕದ ಮೂಲಕ ಖಾರವಾಗಿ ಪ್ರತಿಕ್ರಿಯಿಸಿದ ಬ್ರೆಕ್ಟ್ ಆ ವ್ಯವಸ್ಥೆಯ ಕೆಂಗಣ್ಣಿಗೆ ಗುರಿಯಾಗಿ ಹಲವಾರು ದೇಶಗಳನ್ನು ಸುತ್ತಬೇಕಾಯಿತು.

ಮಹಾಯುದ್ಧದ ನಂತರ ಬರ್ಲಿನ್‌ನಲ್ಲಿ ನೆಲೆಸಿ ‘ಬರ್ಲಿನರ ಅನ್ಸೆಂಬಲ್’ ಎಂಬ ರಂಗತಂಡವನ್ನು ಹುಟ್ಟುಹಾಕಿ ಹಲವಾರು ರಂಗಪ್ರಯೋಗಗಳನ್ನು ನಡೆಸುತ್ತಾನೆ. ತನ್ನ ಪ್ರಖರ ವೈಚಾರಿಕ ದೃಷ್ಟಿಯಿಂದ ಸಮಾಜ ಹಾಗೂ ಮನುಷ್ಯ ಬದಲಾಗಬೇಕಾದ ಮತ್ತು ಬದಲಾಗಬಹುದಾದ ಸಾಧ್ಯತೆಯನ್ನು ತನ್ನ ನಾಟಕಗಳ ಮೂಲಕ ಶೋಧಿಸುತ್ತಾನೆ. ತನ್ನ ನಾಟಕಗಳಲ್ಲಿ ರಾಜಕಾರಣ, ಸಮಾಜ ಹಾಗೂ ವ್ಯಕ್ತಿಗಳನ್ನು ಹಲವಾರು ಆಯಾಮಗಳಿಂದ ಶೋಧಿಸುತ್ತಾನೆ. ವಾಸ್ತವವಾದದ ಮಿತಿಗಳನ್ನು ತನ್ನ ರಂಗಭೂಮಿಯ ಮೂಲಕ ತೋರಿಸಿಕೊಡುತ್ತಾನೆ. ತನ್ನ ನಾಟಕಗಳಲ್ಲಿ ವ್ಯವಸ್ಥೆಯನ್ನು ಪ್ರಶ್ನಿಸುವ ಹಾಗೂ ಅದನ್ನು ಸರಿಪಡಿಸುವ ಪಾಠಗಳನ್ನು ತಿಳಿಸುತ್ತಾನೆ. ನಾಟಕ ಸಾಹಿತ್ಯದ ದೃಷ್ಟಿಯಿಂದ ಇವನ ನಾಟಕದ ರಚನೆ ಬಹಳ ಬೇರೆಯಾಗಿ ಮತ್ತು ವಿಶಿಷ್ಟವಾಗಿ ಕಾಣುತ್ತವೆ. ಅದಕ್ಕೆ ಕಾರಣ ಅವನೇ ಸೈದ್ಧಾಂತಿಕವಾಗಿ ರೂಪಿಸಿದ ‘ಎಪಿಕ್ ರಂಗಭೂಮಿ’ಯ ಪರಿಕಲ್ಪನೆಯೇ ಮುಂದೆ ರಂಗಭೂಮಿಯಲ್ಲಿ ಹೆಚ್ಚು ಪ್ರಚಲಿತವಾಯಿತು.

ಇವನ ಮೊದಲ ನಾಟಕ ‘ತ್ರೀ ಪೆನ್ನೀ ಅಪೆರಾ’ ನಾಟಕವನ್ನು ಗಮನಿಸಿದರೆ ಅದರಲ್ಲಿ ಯಥೇಚ್ಚವಾಗಿ ಹಾಡುಗಳನ್ನು ಬಳಸಿ, ನಾಟಕದ ಸಾಂಪ್ರದಾಯಿಕ ನಿರೂಪಣಾ ಕ್ರಮವನ್ನು ಮುರಿಯುತ್ತಾನೆ. ನಟ, ಅಭಿನಯ, ರಂಗತಂತ್ರಗಳು ಮತ್ತು ಪ್ರೇಕ್ಷಕ – ಈ ಎಲ್ಲದರಲ್ಲೂ ಅಮೂಲಾಗ್ರ ಬದಲಾವಣೆ ಮಾಡಿ, ವಾಸ್ತವವಾದೀ ರಂಗಭೂಮಿ ಹುಟ್ಟಿಸುವ ಭ್ರಮೆ ಮತ್ತು ಭಾವುಕ ಸ್ಥಿತಿಯಿಂದ ಆಚೆಗೆ ತರುತ್ತಾನೆ. ರಂಗಭೂಮಿ ಮತ್ತು ನಾಟಕ ರಚನೆಯನ್ನು ವಾಸ್ತವದಿಂದ ಎತ್ತಿ ಆಧುನಿಕ ಪುರಾಣವಾಗಿಸಿದ ಕೀರ್ತಿ ಆತನಿಗೆ ಸಲ್ಲುತ್ತದೆ.

ಅವನ ಮುಖ್ಯ ನಾಟಕಗಳೆಂದರೆ; ತ್ರೀಪೆನ್ನೀ ಅಪೆರಾ, ಗುಡ್ ವುಮನ್ ಆಫ್ ಸೆಜುವಾನ್, ಪುಂಟಿಲಾ, ಮದರ್‍ ಕರೇಜ್, ಎಕ್ಸ್‌ಸೆಪಕ್ಷನ್ ಅಂಡ್ ರೂಲ್, ಕಕೇಷಿಯನ್ ಚಾಕ್ ಸರ್ಕಲ್ ಮುಂತಾದವುಗಳು. ಪ್ರಸಿದ್ಧ ಕವಿಯು ಆಗಿರುವ ಬ್ರೆಕ್ಟ್ ನೂರಾರು ಕವಿತೆಗಳನ್ನೂ ಜೊತೆಗೆ ಎಪಿಕ್ ರಂಗ ಮೀಮಾಂಸೆಯನ್ನು ಮತ್ತು ರಂಗಭೂಮಿಯನ್ನು ಕುರಿತು ಹಲವಾರು ವೈಚಾರಿಕ ಲೇಖನಗಳನ್ನು ಕೂಡ ಬರೆದಿದ್ದಾನೆ.

ಪ್ರಸ್ತುತ ಈ ಮೂರು ಕಾಸಿನ ನಾಟಕ ಸಂಗೀತ ನಾಟಕ- ತ್ರಿಪೆನ್ನೀ ಅಪೆರಾ-ಬಂಡವಾಳ ಮತ್ತು ಅಪರಾಧವನ್ನು ಕುರಿತು ಹಲವಾರು ದಿಕ್ಕಿನಲ್ಲಿ ಚರ್ಚಿಸುತ್ತದೆ. ಅಪರಾಧವು ಬಂಡವಾಳಶಾಹಿಯ ಕೂಸು ಮತ್ತು ಅಪರಾಧಗಳೂ ಕೂಡ ಬಂಡವಾಳವಾಗುವ ಸಾಧ್ಯತೆಯನ್ನು ತೋರಿಸುತ್ತದೆ. ಹೆಚ್ಚುತ್ತಿರುವ ನಿರ್ಗತಿಕರು ಮತ್ತು ಬಡತನದ ಎದುರಿಗೆ ವ್ಯವಸ್ಥೆ ವರ್ತಿಸುವ ರೀತಿಯನ್ನು ಈ ನಾಟಕ ಕಾಣಿಸುತ್ತದೆ. ಇವತ್ತಿನ ಜಾಗತೀಕರಣ, ಖಾಸಗೀಕರಣ, ವಿದೇಶಿ ಬಂಢವಾಳದ ಸಂದರ್ಭದಲ್ಲಿ ಹೊಸ ಅರ್ಥ-ವ್ಯಾಖ್ಯಾನಗಳು ಈ ನಾಟಕದಿಂದ ಪ್ರಾಪ್ತವಾಗುತ್ತವೆ. ಜಗತ್ತಿನ ಹಲವಾರು ದೇಶಗಳು ತಮ್ಮತಮ್ಮ ಬಂಡವಾಳ ಮತ್ತು ಸಂಪತ್ತನ್ನು ಹೆಚ್ಚಿಸಿಕೊಳ್ಳಲು ಹೊರಡುತ್ತಿರುವ ಈ ಹೊತ್ತಿನ ಜಗತ್ತು ಕೂಡ ಈ ನಾಟಕದಲ್ಲಿ ಕಾಣಿಸಿಕೊಳ್ಳುತ್ತದೆ.

ಪುರುಶರು:

ನಿತಿನ್ ಕಳವೆ
ಪುನೀತ್ ಶೆಟ್ಟಿ
ರಕ್ಷಿತ ಅರಸ್ ಮೈಸೂರು
ಸಮುದ್ರಾ ಪಟ್ಟಣಶೆಟ್ಟಿ
ಕೋಮಲ್‌ಕುಮಾರ್ ಕೆ,
ವಿಶ್ವನಾಥ್ ಕೆ,
ಫಾರೋಕ್ ಕಲ್ಮನಿ,
ಹೇಮಂತಕುಮಾರ್ ಕೆ,
ಶಿವಕುಮಾರ್ ಕೆ ಟಿ,
ದರ್ಶನ್ ಥೋರತ್.
ಪ್ರಕಾಶ್ ಗಾಣಿಗೇರ್
ವಿಜಯಕುಮಾರ್
ಬಸವರಾಜ್ ಗುಡ್ಡಪ್ಪನವರ
ಆಕಾಶ್ ಮಹೇಂದ್ರಕರ
ಮಾರಪ್ಪ ಬಿ. ಆರ್
ಶಿವಯೋಗಿ ಕೆರೂಡಿ
ಶಶಿಧರ್ ಹೊನ್ನಾಳಿ
ಶಿವಪ್ರಕಾಶ್ ನಾಯಕ್
ಸಂದೇಶ್
ನಟರಾಜ್ ಹೊನ್ನವಳ್ಳಿ

ಮಹಿಳೆಯರು:

ಮ ಕವಿತಾ ಕೆ. ಎಸ್.
ಮಹಾಸತಿ ಎನ್. ಗೌಡ
ರಂಜಿತಾ ಜಾದವ್
ಶೃತಿ ಧಾರವಾಡ
ಸುನೀತಾ ಒಂಟೆ
ವನೀಶಾ ಬಂಗೇರ
ಮಂಜುಳಾ ಎಸ್

Nataraj Honnavali
An eminent personality in Kannada theatre, Nataraj is currently the principal of Sanskriti College of visual and performing Arts, Hubballi. He served seven years as a principal in Shivakumara Rangaprayoga Shale at Sanehalli in Karnataka.
With his journey in theatre for over three decades, he has acted, directed, written, adapted and translated many plays.

Nataraj’s participation in Raitha (farmers’) and Dalit movements in Karnataka for ten years motivated him to take up theatre as his medium of expression. After his graduation in Neenasam Theatre Institute, he started ‘Protheu’, a professional theatre troupe with young theatre aspirants. He experimented many plays and travelled all over Karnataka. His works and plays reflect rustic details of village lifestyle and also depict deep concern for pro-people issues. Thus he stands out in Kannada theatre as he is an amalgam of theatre, literature and social movements. Nataraj has conducted research with traditional puppetry practice and also has written and directed puppet shows for Gombe Mane in Dharwad.

He is known for his inter-textual experiments like adapting novels, short stories, poetry into theatre. Nataraj has directed plays for major theatre repertories Neenasam, Shivasanchara, and groups like Samudaya, Zen and Gombe Mane in Karnataka. He is a recipient of “Karnataka Nataka Academy Award’ and has been honored with the president ship of “Taluk Kannada Sahitya Sammelan’. Besides being a theatre personality, Nataraj Honnavalli is also a poet and a cultural theorist.

Production Manager – Samudra Pattanashetty
Sets – Vishwanath K. Prakash Ganiger, Shivukumar
K T, Farooq Kalmani, Samudra Pattanashetty
Props – Hemantha Kumar K, Akash Mahendrakar
Costume – Mahasati N. Gowda, Basavaraj
Guddappanavara
Lighting – Komalkumar K, Kavitha K S, Punith Shetty,
Vijayakumar K
Music Assists – Shekhar K Patil, Sunita Vante
Make-up – Nitin Kalave
Brochure – Rakshit Urs G, Darshan Thorath and
Basavaraj Guddappanavara
Music – Veeresh MPM
Singer – Ranjitha jadav
Assistant Director – Marappa B. R. Bejjihalli
Poster/Tickets/ – Shashidhar Honnalli
Brochure Designer – Umesh Patil
Photographs – Mahendra Sakin
Conductor – Shivayogi Kerudi
Office – Vanisha Bangera
Food, Tea, Biscuits – Smt. Siddamma and Smt. Rekha
Producer – Sanskriti college of Visual and performing Arts
Production Chief – Dr. Veena Daniel
Design, Performance text,
Concept and Direction – Nataraj Honnavalli