ರಂಗಾಯಣ-ಮೈಸೂರು, ಭಾರತೀಯ ರಂಗಶಿಕ್ಷಣ ಕೇಂದ್ರ, ರಂಗಶಾಲೆ ಅಭಿನಯಿಸುವ

ಪ್ರಾತ್ಯಕ್ಷಿಕೆ-೧

ನಾಟಕದ ಬಗ್ಗೆ

ರಂಗಾಯಣದ ಭಾರತೀಯ ರಂಗಶಿಕ್ಷಣ ಕೇಂದ್ರದ 2015-16ನೇ ಸಾಲಿನ ವಿದ್ಯಾರ್ಥಿಗಳ ಮೊದಲ ಪ್ರಾತ್ಯಕ್ಷಿಕೆ ’ಆದಿಮರಂಗ’ ಹೆಸರನ್ನು ಸಾರ್ಥಕಪಡಿಸುವಂತೆ ಪ್ರಾತ್ಯಕ್ಷಿಕೆಯನ್ನು ಪರಿಣಾಮಕಾರಿಯಗಿ ಭೂಮಿಯ ಉಗಮ, ಸಸ್ತನಿಗಳ ಉಗಮ, ಆದಿಮರ ಹುಟ್ಟು, ಕಾಲದಲ್ಲಿ ಆದ ಅವರ ಬೆಳವಣಿಗೆ, ಆಹಾರ ಬೇಟೆ, ಬದಲಾಗುತ್ತ ಬಂದ ಅದರ ಜೀವನ ಕ್ರಮ, ಜೀವನ ಶೈಲಿ ಇಂತಹ ಹಲವಾರು ವಿಷಯಗಳ ಮೇಲೆ ಬೆಳಕು ಚೆಲ್ಲಿರುತ್ತದೆ.

ಈ ಪ್ರಾತ್ಯಕ್ಷಿಕೆಯು ಶಿವರಾಮ ಕಾರಂತರ ’ನಾಗರೀಕತೆಯ ಹೊಸ್ತಿಲಲ್ಲಿ’ ಎಂಬ ಪುಸ್ತಕದಿಂದ ಪ್ರೇರಿತವಾಗಿದ್ದು, ರಂಗಕ್ಕೆ ಸೂಕ್ತವಾಗಿ ಅಳವಡಿಸಲಾಗಿದೆ.

ಪ್ರಾತ್ಯಕ್ಷಿಕೆಯು ’ಮೂವಿಂಗ್ ಥಿಯೇಟರ್’ ಶೈಲಿಯಲ್ಲಿದ್ದು, ಪ್ರೇಕ್ಷಕರು ಪ್ರಾತ್ಯಕ್ಷಿಕೆಯು ನಡೆಯುವಾಗ ವಿದ್ಯಾರ್ಥಿಗಳೊಟ್ಟಿಗೆ ಸಂಚರಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ.

ಭಾರತೀಯ ರಂಗಶಿಕ್ಷಣ ಕೇಂದ್ರ

ರಂಗಾಯಣದ ಅಂಗ ಸಂಸ್ಥೆ ಭಾರತೀಯ ರಂಗಶಿಕ್ಷಣ ಕೇಂದ್ರವು 2010-11ರ ಸಾಲಿಗೆ ರಂಗಶಾಲೆಯನ್ನು ಪ್ರಾರಂಭಿಸಿ ನಾಲ್ಕು ವರ್ಷವನ್ನು ಯಶಸ್ವಿಯಾಗಿ ಮುಗಿಸುತ್ತಿದ್ದು, ಈಗ ಆರನೇ ವರ್ಷಕ್ಕೆ ಕಾಲಿಡುತ್ತಿದೆ. ರಂಗಶಿಕ್ಷಣದಲ್ಲಿ ಒಂದು ವರ್ಷದ ಡಿಪ್ಲೋಮಾವನ್ನು ನೀಡಲಾಗುತ್ತದೆ. ಈ ರಂಗಶಿಕ್ಷಣ ಕೇಂದ್ರಕ್ಕೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮಾನ್ಯತೆಯನ್ನು ನೀಡಿದೆ. ಇದು ಪೂರ್ಣ ಪ್ರಮಾಣದ ರಂಗಶಾಲೆಯಾಗಿದ್ದು, ರಂಗಾಯಣವು ವಿದ್ಯಾರ್ಥಿಗಳಿಗೆ ಉಚಿತವಾಗಿ ವಸತಿಯನ್ನು ನೀಡಿ ಮಾಹೆಯಾನ ವಿದ್ಯಾರ್ಥಿ ವೇತನವನ್ನು ನೀಡುತ್ತದೆ. ಶಾಲೆಗಳಲ್ಲಿ ಪಠ್ಯಕ್ರಮದಂತೆ ತರಗತಿಗಳು ನಡೆಯುವುದರ ಜೊತೆಗೆ ಪ್ರಾಯೋಗಿಕತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. 2015-16ನೇ ಸಾಲಿನ ವಿದ್ಯಾರ್ಥಿಗಳು ರಂಗಶಿಕ್ಷಣ ಕೇಂದ್ರದ ಶಿಕ್ಷಕರಾದ ಶ್ರೀ ಸಂತೋಷ್ ದಿಂಡಗೂರು ರವರ ಮಾರ್ಗದರ್ಶನ ಹಾಗೂ ಶ್ರೀ ಶ್ರೀನಿವಾಸಭಟ್ (ಚೀನಿ) ರವರ ಸಂಗೀತ ನಿರ್ದೇಶನದಲ್ಲಿ ಆದಿಮರಂಗ ಎನ್ನುವ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಲು ಸಿದ್ಧರಾಗಿದ್ದಾರೆ.

ರಂಗಾಯಣದ ನಿರ್ದೇಶಕರ ನುಡಿ

ನಾಟಕ ಕರ್ನಾಟಕ ರಂಗಾಯಣವು ದೇಶದಲ್ಲೆ ಪ್ರತಿಷ್ಠಿತ ಪೂರ್ಣ ಪ್ರಮಾಣದ ಆಧುನಿಕ ರಂಗ ಸಂಸ್ಥೆಯಾಗಿದ್ದು, ೨೫ ವರ್ಷಗಳ ರಂಗಪಯಣದತ್ತ ಸಾಗಿದೆ. ನಿರಂತರ ತನ್ನ ರಂಗ ಪ್ರಕ್ರಿಯೆಯಲ್ಲಿ ಕನ್ನಡ ರಂಗಭೂಮಿಗೆ ಪ್ರಬುದ್ಧ ನಾಟಕ ಪ್ರಯೋಗಗಳನ್ನು ನೀಡಿದೆ. ನಾಡಿನ ಜನಗಳ ನಾಟಕಾಭಿರುಚಿಯನ್ನು ಬೆಳೆಸುತ್ತಾ ತನ್ನದೆ ಆದ ಬೃಹತ್ ಪ್ರೇಕ್ಷಕರನ್ನು ಸೃಷ್ಟಿಸಿದೆ. ರಾಷ್ಟ್ರೀಯ, ಅಂತರರಾಷ್ಟ್ರೀಯ ರಂಗತಜ್ಞರಿಂದ ತರಬೇತಿ ಪಡೆದ ನುರಿತ ಕಲಾವಿದರು ಪ್ರಖ್ಯಾತ ರಂಗ ನಿರ್ದೇಶಕರ ನಿರ್ದೇಶನದಲ್ಲಿ ರಂಗಾಯಣವನ್ನು ಬೆಳೆಸುತ್ತಾ ’ಚಿಣ್ಣರ ಮೇಳ’ ನಡೆಸುವ ಮೂಲಕ ಸಾವಿರಾರು ಮಕ್ಕಳು ರಂಗಚಟುವಟಿಕೆಗಳಲ್ಲಿ ತೊಡಗಿ ತಮ್ಮ ಪ್ರತಿಭಾವಲೋಕನಕ್ಕೆ ಸಾಕ್ಷಿಯಾಗುವಂತಹ ವೇದಿಕೆಗಳನ್ನು ರಂಗಾಯಣ ಸೃಷ್ಟಿಸಿದೆ. ಹವ್ಯಾಸಿ ರಂಗಭೂಮಿಗೆ ಸೇತುವೆಯಾಗಿ ರಂಗೋತ್ಸವಗಳನ್ನು ಆಯೋಜಿಸಿದೆ. ವಿದ್ಯಾರ್ಥಿ ಯುವಜನರಲ್ಲಿ ರಂಗಾಸಕ್ತಿ ಬೆಳೆಸುವ ನಿಟ್ಟಿನಲ್ಲಿ ರಂಗೋತ್ಸವಗಳನ್ನು ಆಯೋಜಿಸಿ ಸಹಸ್ರಾರು ಯುವಜನರಲ್ಲಿ ರಂಗಾಸಕ್ತಿ ತುಂಬುವಲ್ಲಿ ಯಶಸ್ವಿಯಾಗಿದೆ. ಅಕ್ಕ, ಬಹುರೂಪಿಯಂಥ ರಾಷ್ಟ್ರೀಯ ನಾಟಕೋತ್ಸವಗಳು ಲಕ್ಷಾಂತರ ಜನರ ಗಮನ ಸೆಳೆದು ನಮ್ಮ ಕನ್ನಡದ ಜನಪದ ಗಾಥೆ, ಗೀತೆ, ಪ್ರಕಾರಗಳ ಪ್ರದರ್ಶನ, ವೈವಿಧ್ಯತೆಯ ನಾಟಕ ಪ್ರಯೋಗಗಳಿಂದ ರಾಷ್ಟ್ರೀಯ ಹಬ್ಬದ ಆವರಣ ರೂಪಿಸಿ ಜನ ಸಾಗರದಲ್ಲಿ ರಂಗಪ್ರಕ್ರಿಯೆಗೆ ಜೀವ ತುಂಬುವ ಕಾರ್ಯ ಮಾಡುತ್ತಾ ಮುಂದುವರೆದಿದೆ. ಪ್ರಸ್ತುತ ತನ್ನ ಬೆಳ್ಳಿ ಹಬ್ಬವನ್ನು ಆಚರಿಸುವ ಸಂಭ್ರಮದಲ್ಲಿ ’ರಂಗಾಯಣ-ಬೆಳ್ಳಿರಂಗ ಪಯಣ’ದ ಸಿದ್ಧತೆಯಲ್ಲಿ ಪಯಣಿಸುತ್ತಿದೆ.

2010-11ರಲ್ಲಿ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ರಂಗಾಯಣ ಒಂದು ವರ್ಷದ ಡಿಪ್ಲೋಮಾ ಕೋರ್ಸ್‌ನ್ನು ನಡೆಸುತ್ತಿದೆ, ಆಯ್ಕೆಯಾದ ವಿದ್ಯಾರ್ಥಿಗಳಿಗೆ ರಂಗಭೂಮಿಗೆ ಸಂಬಂಧಿಸಿದ ವಿವಿಧ ಆಯಾಮಗಳಲ್ಲಿ ರಂಗಪ್ರಯೋಗಕ್ಕೆ ಬೇಕಾದ ಅಂಶಗಳಲ್ಲಿ ತರಬೇತಿಗೊಳಿಸಲಾಗುತ್ತದೆ. ರಂಗಾಯಣದ ಈ ರಂಗಶಾಲೆಯಲ್ಲಿ ತರಬೇತಿ ಪಡೆದು ಕನ್ನಡ ರಂಗಭೂಮಿಗೆ ಕೊಡುಗೆಯಾಗಲಿ ಎಂಬ ಅಭಿಲಾಷೆ ನಮ್ಮದು. ತರಬೇತಿ ಹೊಂದಿದ ನಂತರ ಎರಡು ವರ್ಷಗಳ ಕಾಲ ಅವರನ್ನು ಕಿರಿಯ ಕಲಾವಿದರನ್ನಾಗಿ ರಂಗಾಯಣ ನೇಮಿಸಿಕೊಳ್ಳುತ್ತಾ ಬಂದಿದೆ. ಅವರು ರಂಗಾಯಣದಲ್ಲಿ ಕಿರಿಯ ಕಲಾವಿದರಾಗಿ ಹಿರಿಯ ಕಲಾವಿದರೊಡಗೂಡಿ ಪ್ರಬುದ್ಧ ನಾಟಕಗಳಲ್ಲಿ ಅಭಿನಯ-ತಾಂತ್ರಿಕತೆಯಲ್ಲಿ ತೊಡಗಿಸಿಕೊಂಡು ಅನುಭವಿ ಕಲಾವಿದರಾಗಿ ಹೊರ ಹೊಮ್ಮುತ್ತಿದ್ದಾರೆ. ಈಗ 2015-16ನೇ ಸಾಲಿನ ಭಾರತೀಯ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು ರಂಗಶಿಕ್ಷಣ ಕೇಂದ್ರದ ಶಿಕ್ಷಕರಾದ ಶ್ರೀ ಸಂತೋಷ್ ದಿಂಡಗೂರು ರವರ ಮಾರ್ಗದರ್ಶನ ಹಾಗೂ ಶ್ರೀನಿವಾಸಭಟ್ (ಚೀನಿ) ರವರ ಸಂಗೀತ ನಿರ್ದೇಶನದಲ್ಲಿ ’ಆದಿಮರಂಗ’ ಎನ್ನುವ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಲು ಸಿದ್ಧರಾಗಿದ್ದಾರೆ. ಈ ಪ್ರಾತ್ಯಕ್ಷಿಕೆಯು ಅಭೂತಪೂರ್ವ ಯಶಸ್ಸನ್ನು ಕಾಣಲಿ, ರಂಗಶಾಲೆ ವಿದ್ಯಾರ್ಥಿಗಳ ಈ ವಿನೂತನ ಪ್ರಾತ್ಯಕ್ಷಿಕೆಯು ಪ್ರೇಕಕ್ಷರಿಗೊಂದು ಹೊಸ ಅನುಭವ ನೀಡಲಿ ಎಂದು ಹಾರೈಸುತ್ತೇನೆ.

ರಂಗದ ಮೇಲೆ

ಅಮಿತ್ ಜೆ ರೆಡ್ಡಿ                                           ರವಿತೇಜ ಆರ್
ರವಿ ವಿ                                                     ರವಿ ವಿಭೂತಿಮಠ್
ಬೋಪಣ್ಣ                                                  ರಾಕೇಶ್
ಕುಮಾರ್                                                  ವಿನೋದ್
ಸಂಜಯ್                                                  ಕಾರ್ತಿಕ್
ಶ್ರೀಕಾಂತ್                                                 ವೆಂಕಟೇಶ್
ಭಾಗ್ಯಲಕ್ಷ್ಮಿ                                                 ಅಶ್ವಿನಿ
ಕಾತ್ಯಾಯಿನಿ

ಆದಿಮ ರಂಗ

ಮಾರ್ಗದರ್ಶನ : ಸಂತೋಷ್ ದಿಂಡಗೂರು
ಸಂಗೀತ : ಶ್ರೀನಿವಾಸ್‌ಭಟ್ (ಚೀನಿ)
ಸ್ಥಳ : ಬಿದಿರಂಗ, ರಂಗಾಯಣ
ದಿನಾಂಕ : 02-09-2015
ಸಂಜೆ : 6-45