ಸದಾರಮಾ ನಾಟಕಂ

ಗುಬ್ಬಿ ಕಂಪನಿಯ ಪ್ರಸಿದ್ಧ ನಾಟಕ, ಬೆಳ್ಳಾವೆ ನರಹರಿಶಾಸ್ತ್ರಿ ವಿರಚಿತ, ಸದಾರಮಾ ನಾಟಕಂ

ಸಂಗೀತ ಮತ್ತು ನಿರ್ದೇಶನ : ಶ್ರೀ ವೈ. ಎಂ. ಪುಟ್ಟಣ್ಣಯ್ಯ (ಪ್ರಸಿದ್ಧ ಗುಬ್ಬಿ ಕಂಪನಿಯ ಹಾರ್ಮೋನಿಯಂ ಮಾಸ್ಟರ್)

ಸದಾ ರಮ್ಯಂ ಸದಾರಮಂ

ಬೆಳ್ಳಾವೆ ನರಹರಿ ಶಾಸ್ತ್ರಿಗಳು ಯಾವ ಶುಭ ಮುಹೂರ್ತದಲ್ಲಿ ಈ ನಾಟಕ ಬರೆದರೋ? ಇಂದಿಗೂ, ಅದರ ರಮ್ಯತೆ ಕುಗ್ಗಿಲ್ಲ. ಶಾಸ್ತ್ರಿಗಳು ತಮ್ಮ ನಾಟಕದ ಪ್ರಥಮಾಂಕದ ವೃತ್ತ ಪದ್ಯದ ಕಡೆಯಲ್ಲಿ ದೇವಂಮಾಳ್ಕೆ ಕೃಪಾಕಟಾಕ್ಷದೆ ಸದಾರಾಮಂ ಸದಾನಂದಮಂ ಎಂದು ಬೇಡಿಕೊಂಡಿದ್ದಾರೆ. ದೇವರಿಗೆ ಅವರ ಮೊರೆ ಕೇಳಿತೋ ಏನೋ ಇಂದಿಗೂ ಅದು ಸದಾನಂದಮಂ ನೀಡುತ್ತಾ ಬಂದಿದೆ.

ಸದಾರಮೆ ಗುಬ್ಬಿ ಕಂಪನಿಯ ಪ್ರಸಿದ್ಧ ನಾಟಕ. ಹಾಗೆ ನೋಡಿದರೆ ಗುಬ್ಬಿ ಕಂಪನಿಯಿಂದ ಹೊರಮೂಡಿ ಬಂದ ಅನೇಕ ರಂಗರತ್ನಗಳಿವೆ. ಅವುಗಳಲ್ಲೆಲ್ಲಾ ಸದಾರಮಾ ನಾಟಕಕ್ಕೆ ಒಂದು ವಿಶಿಷ್ಟ ಸ್ಥಾನ ಇದೆ. ಇದಕ್ಕೆ ಮುಖ್ಯ ಕಾರಣ ಎರಡು. ಈ ನಾಟಕದ ವಸ್ತು ಪೂರ್ಣ ಪೌರಾಣಿಕ, ಐತಿಹಾಸಿಕ ಹಾಗೂ ಜನಪದ ಅಲ್ಲ. ಹಾಗೆಯೇ ಅತ್ಯಾಧುನಿಕವೂ ಅಲ್ಲ. ಆಧುನಿಕತೆಯತ್ತ ಮುಖಮಾಡಿದ ಸಂಕ್ರಮಣ ಸ್ಥಿತಿಯ ಪ್ರಾತಿನಿಧಿಕ ವಸ್ತುವಿನಂತಿದೆ. ಇಲ್ಲಿ ರಾಜ, ಮಂತ್ರಿ ಬರುತ್ತಾರೆ. ಹಾಗೆಯೇ ಇಂದಿನ ಕಾಲದಲ್ಲಿ ಕಾಣುವಂಥಾ ದುರಾಸೆಯ ಶೆಟ್ಟಿ, ಆದಿಮೂರ್ತಿ, ಕಳ್ಳ ಸಹ ಇದ್ದಾರೆ. ಸದಾರಮೆಯಂತೂ ಆಧುನಿಕ ಸಾಹಸಿ ಮಹಿಳೆಯ ಪ್ರತೀಕವೇ ಸರಿ. ಎಲ್ಲಾ ಗಂಡಾಂತರಗಳನ್ನೂ, ಕಷ್ಟ ಕೋಟಲೆಗಳನ್ನೂ ತನ್ನ ಚಾಣಾಕ್ಷತನದಿಂದ ನಿವಾರಿಸಿಕೊಂಡು ಕಡೆಯಲ್ಲಿ ಗೆಲ್ಲುತ್ತಾಳೆ. ಎರಡನೆಯ ಕಾರಣ, ಈ ಕತೆಗೆ ರಕ್ತಮಾಂಸ ತುಂಬಿ ದಷ್ಟಪುಷ್ಟವಾಗಿ ರಂಗದಲ್ಲಿ ಪ್ರದರ್ಶಿಸಿದ ಗುಬ್ಬಿ ವೀರಣ್ಣ ಮತ್ತವರ ತಂಡದ ಪ್ರಯತ್ನ. ಗುಬ್ಬಿ ವೀರಣ್ಣನವರು ಆದಿಮೂರ್ತಿಯಾಗಿ, ಕಳ್ಳನಾಗಿ ಈ ನಾಟಕದಲ್ಲಿ ಮಿಂಚಿದಷ್ಟು ಬೇರೆಲ್ಲಿಯೂ ಮಿಂಚಿದಂತಿಲ್ಲ. ಹಾಗಾಗಿ ಸದಾರಮಾ ನಾಟಕ ಅನೇಕ ನಾಟಕಗಳಂತೆ ಒಂದು ಕಾಲಘಟ್ಟದ ಕೌತುಕವಾಗಿ ನಿಲುಗಡೆಯಾಗದೆ ಮತ್ತೆ ಮತ್ತೆ ರಂಗಾಸಕ್ತರ ಕೈಯಲ್ಲಿ ಪ್ರದರ್ಶನಗೊಳ್ಳುತ್ತಲೇ ಇದೆ.

ಅನೇಕ ಹವ್ಯಾಸಿ ತಂಡಗಳು ಈ ನಾಟಕ ಆಡಿವೆ. ಬೆಳ್ಳಾವೆ ನರಹರಿಶಾಸ್ತ್ರಿಗಳ ಮೂಲ ಪಠ್ಯ ಅನೇಕ ಬದಲಾವಣೆಗಳಿಗೆ ಪಕ್ಕಾಗಿದೆ. ಕೆ.ವಿ. ಸುಬ್ಬಣ್ಣ ಇದನ್ನು ಮಿಸ್ ಸದಾರಮೆ ಎಂದು ಆಧುನಿಕ ಪಠ್ಯವನ್ನಾಗಿಸಿ ನಾಟಕವಾಡಿಸಿದ್ದಾರೆ. ನಾವು ಬೆಳ್ಳಾವೆಯವರ ಮೂಲ ಪಠ್ಯವನ್ನೇ ಪ್ರದರ್ಶನಕ್ಕೆ ತರುತ್ತಿದ್ದೇವೆ.

ಈ ನಾಟಕವನ್ನು ಕಂಪನಿ ನಾಟಕದ ಶೈಲಿಯಲ್ಲೇ ಅಭಿನಯಿಸಬೇಕೆಂಬುದು ನಮ್ಮ ಆಸೆ. ಅದಕ್ಕಾಗಿ ಕಂಪನಿ ನಾಟಕದ ಸೀನರಿಗಳನ್ನು, ವಿಂಗ್ಸ್‌ಗಳನ್ನು, ಫ್ರಿಲ್‌ಗಳನ್ನು ಬರೆಸಿದ್ದೇವೆ. ಈ ನಾಟಕದ ಮತ್ತೊಂದು ವಿಶೇಷವೆಂದರೆ ನಾಟಕಕ್ಕೆ ಇಳಕಲ್ಲಿನ ಪ್ರಸಿದ್ಧ ಕಂಪನಿ ಚಿತ್ರ ಕಲಾವಿದರಾದ ಶ್ರೀ. ಅಮೀನ್ ಅವರು ಪರದೆಗಳನ್ನು ರಚಿಸಿದ್ದಾರೆ. ಈ ಪರದೆಗಳು ಪ್ರೇಕ್ಷಕರನ್ನು ಆ ಕಾಲಕ್ಕೇ ಕೊಂಡೊಯ್ಯುತ್ತವೆ. ಲೆಗ್ ಹಾರ್ಮೋನಿಯಂ ಧೂಳು ಒರೆಸಿ, ರೀಡ್ಸ್‌ಗಳನ್ನು ಸರಿಪಡಿಸಿ ನಾದ ಹೊಮ್ಮುವಂತೆ ಮಾಡಿಕೊಂಡಿದ್ದೇವೆ. ನಟರು ಲಯಬದ್ಧವಾಗಿ ಹಾಡುತ್ತಾ ಅಭಿನಯಕ್ಕೆ ಸಜ್ಜಾಗಿದ್ದಾರೆ.

ವೃತ್ತಿರಂಗಭೂಮಿಯ ನಾಟಕಗಳು ಒಂದು ಕಾಲದ ಸಾಂಸ್ಕೃತಿಕ ವೈಭವಗಳು. ಅವುಗಳು ಹಾಗೇ ಮುರುಟಿ ಮರೆಯಾಗದಂತೆ ನೋಡಿಕೊಳ್ಳಬೇಕಾದ್ದು ವೃತ್ತಿಪರ ರೆಪರ್ಟರಿಗಳ ಕರ್ತವ್ಯವೂ ಕೂಡಾ. ಇಂದು ಕಂಪನಿಗಳು ನಿಧಾನವಾಗಿ ಮರೆಯಾಗುತ್ತಿವೆ ನಿಜ. ಹಾಗೆಂದು ನಾಟಕಗಳೇಕೆ ಮರೆಯಾಗಬೇಕು?

ರಂಗಾಯಣದ ಕಲಾವಿದರಾದ ಶ್ರೀ ಹುಲುಗಪ್ಪ ಕಟ್ಟಿಮನಿ ನಾಟಕಕ್ಕೆ ಸಹನಿರ್ದೇಶನ ನೀಡಿದ್ದಾರೆ. ಪಕ್ಕ ವಾದ್ಯ ವಾದನ ಶ್ರೀ. ಡಿ. ರಾಮು (ಕ್ಲ್ಯಾರಿಯೋನೆಟ್), ಶ್ರೀ ಜಯರಾಮ್ (ತಬಲಾ) ಮತ್ತು ಸಂಗೀತ ಸಾಂಗತ್ಯವನ್ನು ಶ್ರೀನಿವಾಸ ಭಟ್ (ಚೀನಿ) ನೀಡಿದ್ದಾರೆ, ಪ್ರಸಾಧನಾ ವಿನ್ಯಾಸ ಮತ್ತು ವಸ್ತಾಲಂಕಾರವನ್ನು ದಿ. ಶ್ರೀ ಜಯರಾಮ್ ಬೆಳಕಿನ ವಿನ್ಯಾಸವನ್ನು ಶ್ರೀ ಮಹೇಶ ಕಲ್ಲತ್ತಿ, ರಂಗನಿರ್ವಹಣೆಯನ್ನು ಶ್ರೀ. ಹುಲುಗಪ್ಪ ಕಟ್ಟಿಮನಿ ಮಾಡಿದ್ದಾರೆ. ಹಿಂದಿನ ಒಂದು ಸಾಂಸ್ಕೃತಿಕ ವೈಭವದ ತುಣುಕನ್ನು ಮರುಪ್ರದರ್ಶನಕ್ಕೆ ತರುತ್ತಿರುವ ಹೆಮ್ಮೆ ಮತ್ತು ತೃಪ್ತಿ ರಂಗಾಯಣಕ್ಕಿದೆ.

ಬನ್ನಿ ಸದಾನಂದದ ಸದಾರಮೆ ನೋಡಿ ಆನಂದಿಸಿ.

ರಂಗದ ಮೇಲೆ

ರಾಜ ಕಂಠೀರವ / ಶಾಮಣ್ಣ : ಮಹದೇವ್
ರಾಜ ಮಾರ್ತಾಂಡ : ಕೃಷ್ಣಕುಮಾರ ನಾರ್ಣಕಜೆ
ಮಂತಿ / ಚಂದ್ರಸೇನ ಮಹಾರಾಜ : ಎಂ.ಸಿ. ಕೃಷ್ಣಪ್ರಸಾದ
ಸೈನ್ಯಾಧಿಪತಿ / ಬ್ರಾಹ್ಮಣ / ಸತ್ರಾಧಿಕಾರಿ : ನೂರ್ ಅಹಮದ್ ಶೇಖ್
ಪಾರ್ವತಿ / ಹುಡುಗಿ : ಶಶಿಕಲಾ ಬಿ. ಎನ್.
ಲಕ್ಷ್ಮಿ / ಚಂಚಲಕುಮಾರಿ : ನಂದಿನಿ ಕೆ. ಆರ್.
ಕಿವುಡು ಮಂಗಮ್ಮ / ಕುಂಟಿಣಿ : ಗೀತಾ ಎಂ. ಎಸ್.
ಸದಾರಮೆ : ಸರೋಜಾ ಹೆಗಡೆ
ಬಂಗಾರಶೆಟ್ಟಿ / ರಾಜಪುರೋಹಿತ : ಜಗದೀಶ ಮನವಾರ್ತೆ
ಆದಿಮೂರ್ತಿ / ಮಂತ್ರಿ : ಎಸ್. ರಾಮು.
ಡಂಗುರದವ / ಕಳ್ಳ : ಹುಲುಗಪ್ಪ ಕಟ್ಟೀಮನಿ
ಮಂತ್ರಿ : ಮೈಮ್ ರಮೇಶ್
ಕಲಹಂಸ : ಪ್ರಶಾಂತ್ ಹಿರೇಮಠ
ರಾಜಕುಮಾರ / ಬ್ರಾಹ್ಮಣ / ಸದಾಶಿವಶಾಸ್ತ್ರಿ : ವಿನಾಯಕ ಭಟ್ಟ
ಬ್ರಾಹ್ಮಣ / ಮಂತ್ರಿ ಕುಮಾರ : ರಾಮನಾಥ ಎಸ್.
ಎಂಗೈ ಭಾವ : ಮಂಜುನಾಥ ಬೆಳಕೆರೆ
ಮುದುಕ : ಮಹದೇವ್
ಸೈನಿಕರು ಮತ್ತು ಗುಂಪು : ಶೃತಿ, ಚಾಂದನಿ, ರಾಧಾರಾಣಿ, ಮೀನಾಕ್ಷಿ, ಕವಿತಾ, ಕಾರ್ತಿಕ್, ಉದಯ, ಮಹದೇವಸ್ವಾಮಿ, ಶಿವು, ಬಸವರಾಜ

ರಂಗದ ಹಿಂದೆ

ರಂಗ ವಿನ್ಯಾಸ : ಹೆಚ್. ಕೆ. ದ್ವಾರಕಾನಾಥ್
ರಂಗ ಪರದೆಗಳು : ಕೆ. ಅಮೀನ್ ಇಲಕಲ್
ರಂಗ ಸಜ್ಜಿಕೆ : ನಂದಿನಿ ಕೆ.ಆರ್, ಕೃಷ್ಣಕುಮಾರ ನಾರ್ಣಕಜೆ, ಗೀತಾ ಎಂ.ಎಸ್
ರಂಗ ಪರಿಕರ : ಶಶಿಕಲಾ ಬಿ.ಎನ್, ಜಗದೀಶ ಮನವಾರ್ತೆ
ರಂಗ ಸಜ್ಜಿಕೆ ಸಹಾಯ : ಜನಾರ್ಧನ (ಬಡಗಿ), ರಾಜ
ಸಂಗೀತ ಸಾಂಗತ್ಯ : ಶ್ರೀನಿವಾಸ್ ಭಟ್ (ಚೀನಿ)
ಪಕ್ಕ ವಾದ್ಯಗಳು : ಡಿ. ರಾಮು (ಕ್ಲಾರಿಯೋನೆಟ್), ಜಯರಾಮ್ (ತಬಲಾ)
ಸಂಗೀತ : ಮೈಮ್ ರಮೇಶ್, ರಾಮನಾಥ. ಎಸ್
ಉಡುಪು ವಿನ್ಯಾಸ : ದಿ. ಮೈಸೂರು ಆರ್. ಜಯರಾಮ್, ನಾರಾಯಣ ಭೂತೆ
ಉಡುಪು : ಪ್ರಮೀಳಾ ಬೆಂಗ್ರೆ, ಮಹದೇವ್, ಸರೋಜ ಹೆಗಡೆ
ಉಡುಪು ಸಹಾಯ : ಮೋಹನ, ಮಹೇಶ್ ಕೆ.ಆರ್. ನಗರ, ಮಹೇಶ್ ಸಿಂಪಿಗ
ಪ್ರಚಾರ : ವಿನಾಯಕ ಭಟ್ಟ, ಮಾಯಸಂದ್ರ ಕೃಷ್ಣಪ್ರಸಾದ್, ಪ್ರಶಾಂತ್ ಹಿರೇಮಠ
ಪ್ರಸಾಧನ : ನೂರ್ ಅಹಮದ್ ಶೇಖ್, ರಾಮು. ಎಸ್
ಬೆಳಕಿನ ವಿನ್ಯಾಸ : ಮಹೇಶ ಕಲ್ಲತ್ತಿ
ಬೆಳಕು ಸಹಾಯ : ಎಂ. ಕೃಷ್ಣಪ್ರಸಾದ
ಧ್ವನಿ ವ್ಯವಸ್ಥೆ : ಅಂಜುಸಿಂಗ್
ಧ್ವನಿ ಸಹಾಯ : ಎಂ. ಕೃಷ್ಣಪ್ರಸಾದ
ರಂಗ ನಿರ್ವಹಣೆ : ಹುಲುಗಪ್ಪ ಕಟ್ಟೀಮನಿ

ಕೃತಜ್ಞತೆಗಳು

ಶ್ರೀಮತಿ ಎಸ್.ಕೆ. ಪದ್ಮಾದೇವಿ,
ಶ್ರೀಮತಿ ಇಂದಿರಮ್ಮ, ರಂಗನಟಿ, ಮೈಸೂರು
ಶ್ರೀಮತಿ ವಿಜಯ ಸಿಂಧುವಳ್ಳಿ
ಸುರುಚಿ ರಂಗಮನೆ ಎಲ್ಲ ಸದಸ್ಯರು