ಭೀಮಾಯಣ – Bheemayana

For tickets availability or advance booking please contact Rangayana office. Phone 0821-2512639 or book your tickets online at www.bookmyshow.com

ರಂಗಾಯಣ ಅರ್ಪಿಸುವ ವಾರಾಂತ್ಯ ನಾಟಕ : ಭೀಮಾಯಣ
ಮೂಲ ಕೃತಿ : ಎಂ.ಟಿ.ವಾಸುದೇವ ನಾಯರ
ರಂಗ ರೂಪ : ಡಾ. ಸ್ಯಾಮಕುಟ್ಟಿ ಪಟ್ಟಾಂಕರಿ
ಕನ್ನಡಕ್ಕೆ : ಡಾ. ಪಾರ್ವತಿ ಐತಾಳ
ರಂಗಪಠ್ಯ ವಿನ್ಯಾಸ, ನಿರ್ದೇಶನ : ಡಾ. ಶ್ರೀಪಾದ ಭಟ್

ಸಹ ನಿರ್ದೇಶನ : ಉಮೇಶ ಸಾಲಿಯಾನ, ಗಣೇಶ ಎಂ.
ನಿರ್ವಹಣೆ : ಹುಲುಗಪ್ಪ ಕಟ್ಟಿಮನಿ
ನೆರವು : ನಂ. ಯತೀಶ ಕೊಳ್ಳೇಗಾಲ

Rangayana presents M.T. Vasudeva Nayar’s BHEEMAYANA
Stage Adoptation By Dr. Samkutti Pattankari
Translated to Kannada By Dr. Parvathi Ital
Script, Design & Direction By Dr.Shreepad Bhat

Associate Directors : Umesh Saliyana, Ganesh M.
Stage Management : Hulugappa Kattimani
Assistance : N. Yateesh Kollegal

ನಾಟಕದ ಕುರಿತು

ರಾಮಾಯಣ ಮತ್ತು ಮಹಾಭಾರತಗಳನ್ನು ದೇಶದ ಸಾಂಸ್ಕೃತಿಕ ಭಾಷೆ ಎನ್ನಲಾಗುತ್ತದೆ. ಈ ದೇಶದ ಬಹುಮುಖಿ ಸಂಸ್ಕೃತಿಯನ್ನು ಪ್ರತಿನಿಧಿಸುವ ಹಲವು ಬುಡಕಟ್ಟುಗಳ, ನೂರಾರು ಜನಾಂಗಗಳ ರಾಮಾಯಣ ಭಾರತಗಳು ನಮ್ಮೊಂದಿಗಿವೆ. ಪ್ರತಿ ಕಥನವೂ ಬದುಕಿನ ಬೇರೆ ಬೇರೆಯ ಗ್ರಹಿಕೆಗಳನ್ನೂ, ವಿವೇಕವನ್ನೂ ನಮ್ಮ ಮುಂದಿಡುತ್ತದೆ. ಭಾರತವನ್ನು ಕುರಿತ ಪ್ರತಿ ಆಖ್ಯಾನವೂ ವರ್ತಮಾನದ ಅಗತ್ಯ ವ್ಯಾಖ್ಯಾನವನ್ನು ದೊರಕಿಸಿಕೊಡುತ್ತದೆ. ಪ್ರಸ್ತುತ ಈ ನಾಟಕ ಜ್ಞನಾನಪೀಠ ಪ್ರಶಸ್ತಿ ಪುರಸ್ಖೃತ ಎಂ.ಟಿ.ವಾಸುದೇವ ನಾಯರರು ರಚಿಸಿದ ಭೀಮಾಯಣ ಕಾದಂಬರಿಯನ್ನು ಆಧರಿಸಿದ್ದು. ಭೀಮನ ಕಣ್ಣಿನಿಂದ ಮಹಾಭಾರತದ ಕಥನವನ್ನು ಪುನರ್ರಚಿಸುವ ಇದು, ಈ ಮಣ್ಣಿಗೆ ಆತುಕೊಂಡಿದ್ದ ಬದುಕನು, ನಗರದ ರಾಜಕೀಯವು ತ್ರಸ್ತಗೊಳಿಸುವ ರೀತಿಯನ್ನೂ , ನಾಡು ತನ್ನ ಕಬಂಧ ಬಾಹುವಿನಿಂದ ಕಾಡನ್ನು ಕಬಳಿಸುತ್ತಿರುವದರ ಕುರಿತು ಒಂದು ಸಾಂಸ್ಕೃತಿಕ ಎಚ್ಚರವನ್ನೂ ಮೂಡಿಸಲು ಪ್ರಯತ್ನಿಸುತ್ತದೆ. ವರ್ಗ ಮತ್ತು ವರ್ಣ ಸಂಘರ್ಷದ ವಿನ್ಯಾಸವನ್ನು ಚರ್ಚಿಸುತ್ತಲೇ, ನಾವು ಬದುಕಿ ಬಂದ ಬಗೆಯನ್ನು ಮರೆಯುತ್ತಿರುವ, ಹಿಂತಿರುಗಿ ನೋಡದಿರುವ ನಮ್ಮ ಕ್ರೌರ್ಯದ ಕುರಿತೂ ಚಿಂತನೆಗೆ ಹಚ್ಚುತ್ತದೆ.

ನಿರುದ್ಧಿಶ್ಯ ರಸಸೃಷ್ಟಿಯ ಭರತನ ಕಥೆಯ ಬದಲಾಗಿ, ಕಳೆದ ದಿನಗಳ ಯಾತನೆಯನ್ನೂ ನೆನಪಿಸುವ, ಶಾಪಗ್ರಸ್ಥ ಭರತನ ಮಕ್ಕಳ ಗಾಥೆಯನ್ನು ಕೇಳಿಸಿಕೊಳ್ಳಲು ಒತ್ತಾಯಿಸುವ ಈ ರಂಗ ಪ್ರಯೋಗ, ಶೈಲೀಕೃತ ರಂಗ ನಡೆಯ ಜತೆ ರಾಜಕೀಯ ನಡೆಯನ್ನೂ ತನ್ನ ಚಲನೆಯಲ್ಲಿ ಒಳಗೊಳ್ಳಲು ಯತ್ನಿಸಿದೆ.

ABOUT THE PLAY

Ramayana and Mahabharata are called as the cultural languages of the country. There are numerous indigenous communal and tribal versions of Ramayana and Mahabharata which represents the multifaceted culture of this country. Each version unfolds different wisdom and perception of life before us. Every commentary about Mahabharata gets us the essential commentary on the present. The play is based on the novel ‘Bheemayana’ written by the Jnanapeetha awardee, Shri. M.T. Vasudeva Nayar. This version which reconstructs Mahabharatha through the vision of Bheema tries to create a cultural awareness about the life which is attached to this soil, the way the urban politics creates dissonance, the way township with its mighty palms encompassing the forest. The play discusses about the forgetfulness of our travelled path of our life and denial cruelty of not looking back towards the past simultaneously discussing about the design of racial and communal friction. The theatrical presentation which forces us to look towards the tales of cursed children of Bharata instead of aimless rasasrishti of Bharata’s tale, tries to inculcate stylized theatrical movements as well as political movements in its design.

ನಿರ್ದೇಶಕರ ಬಗ್ಗೆ :

ಡಾ.ಶ್ರೀಪಾದ ಭಟ್ ಉತ್ತರಕನ್ನಡದ ಧಾರೇಶ್ವರದವರು. ಸಧ್ಯ ಶಿರಸಿಯ ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿದ್ದಾರೆ. ತಂದೆಯಿಂದ ದೊರಕಿದ ಯಕ್ಷಗಾನದ ತರಬೇತಿಯ ಮೂಲಕ ರೂಪುಗೊಂಡ ಕಲಾತ್ಮಕತೆ, ಮುಂದೆ ಸಾಹಿತ್ಯದ ಸಾಹಚರ್ಯದಲ್ಲಿ ಒಳಗೊಂಡ ಚಿಂತನೆಯ ನೆಲೆಗಳು, ಸಮುದಾಯ, ಸಾಕ್ಷರತೆ, ವಿಜ್ಞಾನ ಚಳುವಳಿಗಳಲ್ಲಿ ತೊಡಗಿಸಿಕೊಳ್ಳುತ್ತ ರೂಪಿಸಿಕೊಂಡ ಸಾಮಾಜಿಕ ಬದ್ಧತೆ ಇವೆಲ್ಲವೂ ಮುಪ್ಪುರಿಗೊಂಡು ಇವರ ರಂಗಚಟುವಟಿಕೆಯನ್ನು ನಿರ್ದೇಶಿಸಿದೆ. ಜನಪದ ರಂಗಭೂಮಿಯ ಅಧ್ಯಯನ, ಆಧುನಿಕ ರಂಗಭೂಮಿಯಲ್ಲಿ ಅವುಗಳ ಆನ್ವಯಿಕ ಸಾಧ್ಯತೆಕುರಿತು ಅಧ್ಯಯನ ನಡೆಸಿ ಕರ್ನಾಟಕ ವಿಶ್ವ ವಿದ್ಯಾನಿಲಯದಿಂದ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಮಕ್ಕಳರಂಗಭೂಮಿಯಲ್ಲಿ ಹಲವು ಪ್ರಯೋಗ ನಡೆಸಿದ್ದಾರೆ. ಪಾಠನಾಟಕ ರೆಪರ್ಟರಿ ಕಟ್ಟಿದ್ದಾರೆ. ಬೀದಿನಾಟಕ, ಮಕ್ಕಳ ನಾಟಕ, ಪ್ರೊಸೀನಿಯಂ ನಾಟಕಗಳು ಹೀಗೆ ಹಲವು ವಿನ್ಯಾಸಗಳಲ್ಲಿ ಇವರು ನೂರಾರು ನಾಟಕ ನಿರ್ದೇಸಿದ್ದಾರೆ. ಕರ್ನಾಟಕದಾದ್ಯಂತ ಮಾತ್ರವಲ್ಲದೇ ಹೈದರಾಬಾದ್, ಮುಂಬೈ, ದೆಹಲಿ ಮುಂತಾದ ಹಲವು ರಾಜ್ಯಗಳಲ್ಲಿಯೂ ಇವರ ನಾಟಕಗಳು ಪ್ರಯೋಗಗೊಂಡಿವೆ. ಎನ್.ಎಸ್.ಡಿಯ ಭಾರತ ರಂಗ ಮಹೋತ್ಸವ ಹಾಗೂ ಜಶ್ನೆ ಬಚಪನ್ ಉತ್ಸವದಲ್ಲಿ ಈಗಾಗಲೇ ಇವರ ೪ ನಾಟಕಗಳು ಈಗಾಗಲೇ ಪ್ರದರ್ಶನಕಂಡಿವೆ. ಇವರ ’ಬಹುಭೂಮಿಕೆ’, ’ಯಕ್ಷಗಾನ’, ’ಉತ್ತರಕನ್ನಡ ಜನಪದ ರಂಗಭೂಮಿ’ ಪುಸ್ತಕಗಳು ಪ್ರಕಟಗೊಂಡಿವೆ. ಕರ್ನಾಟಕ ನಾಟಕ ಅಕಾಡೆಮಿಯ ಸಿ.ಜಿ.ಕೆ.ಪ್ರಶಸ್ತಿ,ಉತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ,ಸದಾನಂದ ಸುವರ್ಣ ಪ್ರಶಸ್ತಿ,ಉದ್ಯಾವರ ಪ್ರಶಸ್ತಿ ಮುಂತಾದ ಹಲವು ಪ್ರಶಸ್ತಿಗಳಿಂದ ಇವರು ಪುರಸ್ಕೃತರಾಗಿದ್ದಾರೆ. ವಿಜ್ಞಾನ ನಾಟಕಗಳ ನಿರ್ದೇಶನಕ್ಕಾಗಿ ಎರಡು ಸಾರಿ ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆದಿದ್ದಾರೆ. ಹಾವೇರಿಯ ಶೇಷಗಿರಿ ಎಂಬ ಹಳ್ಳಿಯಲ್ಲಿ ರಂಗ ಮಂದಿರವೊಂದರ ಸ್ಥಾಪನೆಗೆ ಕಾರಣಕರ್ತರಾಗಿದ್ದಾರೆ. ರಾಜ್ಯದಾದ್ಯಂತ ರಂಗ ತಂಡಗಳಿಗೆ, ಶಿಕ್ಷಕರಿಗೆ, ಕಾರ್ಮಿಕರಿಗೆ ರಂಗ ಶಿಬಿರಗಳನ್ನು ನಡೆಸಿದ್ದಾರೆ. ಬಹುತೇಕ ಗ್ರಾಮೀಣ ಭಾಗದಲ್ಲಿ ಪರಿಧಿಯಲ್ಲೇ ನಿರಂತರವಾಗಿ ಕಳೆದ ೨೦ ವರ್ಷಗಳಿಂದ ರಂಗ ಕಾಯಕ ನಡೆಸಿಕೊಂಡು ಬಂದಿದ್ದಾರೆ. ಪ್ರಸ್ತುತ ಈ ವರ್ಷ ರಂಗ ಶಿಕ್ಷಣದ ವಿದ್ಯಾರ್ಥಿಗಳಿಗಾಗಿ ಅಭ್ಯಾಸ ಮಾಲಿಕೆಯ ಮೊದಲ ರಂಗ ಪ್ರಯೋಗವನ್ನು ಕಟ್ಟಿಕೊಟ್ಟಿದ್ದಾರೆ.

ABOUT THE DIRECTOR:

Dr. Shreepad Bhat is from Dhareshwar from Uttara Kannada district. At present he is teaching Kannada in a high school at Sirisi. His committed theatre activities are formulated by the artistry inherited from his father’s training given in Yakshagana, thereafter the wisdom piled up through the association of literary world, the movements like Samudaya, Saksharata, and Vijnana. He is honored a doctorate by the Karnatak University in ‘The study of theatre of folk art forms, and the possibilities of their application in modern theatre.’ He has done numerous experiments in children theatre and has built a repertory ‘Pathanataka’. He has directed hundreds of plays in the designs of street plays, children’s plays, proscenium plays. Apart from Karnataka his plays are performed in Hyderabad, Mumbai, Delhi and other states. His four plays are already being performed in Bharata Ranga Mahotsava of National School of Drama and the festival Jashne Bachpan. His books ‘Bahubhoomike’, ‘Yakshagaana’ and ‘Uttarakannadada Janapad Rangabhoomi’ are being published. He is awarded by C.G.K prashasti of Karnataka Nataka Academy, Best Teacher State Award, Sadananda Suvarna Award, Udyavar Award etc. He has also been awarded national award twice for the direction of science plays. He is being the instrument for the construction of a theatre hall in the village Sheshagiri of Haveri district. He has conducted theatre workshops for teachers, labourers and theatre troupes. For the last two decades he has been doing his theatre activities almost at the rural parts. Now he has directed the first play for the students of Rangashikshana Kendra, a part of their studies.

ಪಾತ್ರ ವರ್ಗ

ರಂಜಿತಾ ಎಸ್ – ದ್ರೌಪದಿ, ಕಾಡಿನ ಸ್ತ್ರೀ. ಪುಷ್ಪ ಆರ್– ನಟಿ, ಕುಂತಿ. ದಿವ್ಯ ಎನ್– ಹಿಡಿಂಬೆ, ಗಾಂಧಾರಿ. ಮಹೇಶ ಭೋವಿ – ನಟ, ವಿಕಟ, ದುಶ್ಯಾಸನ. ಸೋಮಶೇಖರ – ಕಾಡಿನ ದೈವ, ಯಜಮಾನ, ಕೃಪಾಚಾರ್ಯ. ಮಂಜು ಎಚ್. – ಕಾಡಿನ ಮಕ್ಕಳು, ಘಟೋತ್ಕಚ. ರಾಘವೇಂದ್ರ – ಕಾಡಿನ ಮಕ್ಕಳು, ವಿದುರ. ಬಿ. ರಂಜಿತ್ ಕುಮಾರ – ಕಾಡಿನಮಕ್ಕಳು, ಏಕವ್ಯ, ಕೃಷ್ಣ, ವಿಶೋಕ ವಿನೇಶ್ ಎಂ – ಧರ್ಮರಾಯ ಮುತ್ತ ಹನುಮಯ್ಯ ಎಂ – ಅರ್ಜುನ ಸಂಜಯ್ ಕಿರಣ್ – ನಕುಲ ನಂದೀಶ್ ಎಂ. – ಸಹದೇವ ರಂಗಸ್ವಾಮಿ ಕೆ – ದುರ್ಯೋಧನ, ಧೃತರಾಷ್ಟ್ರ. ಎಂ.ಎಸ್.ಶ್ರೀಮಂತ – ಕರ್ಣ, ಪುರೋಚನ, ಹಿಡಿಂಬ. ಸಂತೋಷ್ ಕೆ.ಎನ್  – ಬಾಲಕ ಭೀಮ, ಸಂಜಯ, ಕಾಡಿನ ಮಕ್ಕಳು ವಿಜಯ್ ಕುಮಾರ – ಭೀಮ.

Cast

Ranjita S – Droupadi, Forest woman Pushpa R – Nati, Kunti Divya. N – Hidimbe, Gandhari Mahesh Bhovi – Nata, Vikata, Dushyasana Somashekhar – Forest Deity, Leader, Kripacharya Manju H – Forest Kid, Ghatotkacha Raghavendra – Forest Kid, Vidura B. Ranjit kumar – Forest Kid, Krishna, Eakalavya, Vishoka Vinesh M – Dharmaraya Mutta Hanumaiah M – Arjuna Sanjay Kiran – Nakula Nandeesh M – Sahadeva Rangaswamy K – Duryodhana, Dhritarashtra M.S. Shreemantha – Karna, Purochana, Hidimba Santosh K.N – Kid Bheema, Sanjaya, Forest Kid Vijay kumar – Bheema

ತಂತ್ರಜ್ಞರು

ರಂಗ ವಿನ್ಯಾಸ : ಎಚ್.ಕೆ. ದ್ವಾರಕಾನಾಥ್ ವಸ್ತ್ರ ವಿನ್ಯಾಸ : ಪ್ರಮಿಳಾ ಬೇಂಗ್ರೆ ಪರಿಕರ : ಸಂತೋಷ ಕುಸನೂರು ಬೆಳಕು : ಉಮೇಶ ಸಾಲಿಯಾನ ಸಲಹೆ : ಸಗಾಯ ರಾಜು ಹಾಡುಗಳು : ಸುಧಾ ಆಡುಕಳ ಸಂಗೀತ ನಿರ್ವಹಣೆ: ಅನೂಷ್, ಗಣೇಶ ಎಂ., ರಾಧಾರಾಣಿ, ಕವಿತಾ ಸಲಹೆ : ಚೀನಿ ರಂಗಾಯಣ

Technicians

Stage Design : H.K. Dwarakanath Costume Design : Prameela Bengre Properties : Santosh Kusanur Lights : Umesh Saliyan Guidance : Sagai Raju Songs : Sudha Adukala Music : Anoosh, Ganesh M., Radharani, Kavita Guidance : Cheeni Rangayana