ಬೆಪ್ತಕ್ಕಡಿ ಬೋಳೇಶಂಕರ – Beppu Takkadi Bole Shankara

For tickets availability or advance booking please contact Rangayana office. Phone 0821-2512639

ರಂಗಾಯಣ ಅರ್ಪಿಸುವ ವಾರಾಂತ್ಯ ನಾಟಕ : ಬೆಪ್ತಕ್ಕಡಿ ಬೋಳೇಶಂಕರ
ಭಾಷೆ : ಕನ್ನಡ
ಕೃತಿ : ಡಾ. ಚಂದ್ರಶೇಖರ ಕಂಬಾರ

 

Event name: Beppu Takkadi Bole Shankara
Language : Kannada
Written by: Dr. Chandrashekhara Kambara

ನಾಟಕದ ಸಾರಂಶ :

ಪ್ರಸ್ತುತ ನಾಟಕದಲ್ಲಿ ಶಿವಾಪುರದ ಮೂರು ಜನ ಸಹೋದರರಾದ ಸೋಮಣ್ಣ, ಸಾವ್ಕಾರ ಕಾಮಣ್ಣ, ಬೋಳೇಶಂಕರ ಇವರುಗಳನ್ನು ತಮ್ಮ ಬಲೆಗೆ ಬೀಳಿಸಲು ಸೈತಾನ ಕಳುಹಿಸಿದ ಮೂರು ಪಿಶಾಚಿಗಳು ಬರುತ್ತವೆ. ಅಧಿಕಾರದ ಆಸೆ, ಧನದ ಮೋಹಕ್ಕೆ, ಬಲಿಯಾದ ಸರದಾರ, ಸಾವ್ಕಾರ ಕಾಮಣ್ಣ ಇವರುಗಳು ಪಿಶಾಚಿಗಳ ಬಲೆಗೆ ಬೀಳುತ್ತಾರೆ. ನಿಸ್ವಾರ್ಥಿಗ, ಶ್ರಮಜೀವಿ ನೇರ-ನಡೆ ನುಡಿಯವನಾದ ಬೋಳೇಶಂಕರನನ್ನು ಸೆಳೆಯಲು ಪ್ರಯತ್ನಿಸಿ ಪಿಶಾಚಿಗಳೇ ಸೋಲುವ ಪ್ರಸಂಗ ಈ ನಾಟಕದ ವಸ್ತುವಾಗಿದೆ.

ನಿರ್ದೇಶಕರ ಬಗ್ಗೆ : ರಂಗನಾಥ್.ವಿ

ಇವರು ಮೈಸೂರಿನವರು. ರಂಗಾಯಣದ ಭಾರತೀಯ ರಂಗಶಿಕ್ಷಣ ಕೇಂದ್ರದ ೨೦೧೨-೧೩ನೇ ಸಾಲಿನ ವಿದ್ಯಾರ್ಥಿಯಾಗಿ ರಂಗಶಿಕ್ಷಣದಲ್ಲಿ ಡಿಪ್ಲೊಮಾ ಪಡೆದಿದ್ದಾರೆ. ಚಿಕ್ಕದೇವಭೂಪ, ವಸಂತಯಾಮಿನೀ, ಸ್ವಪ್ನ ಚಮತ್ಕಾರ, ಹ್ಹ. . . ! ಶೈಲಾಕ್, ಸದಾರಮೆ, ಚಂದ್ರಹಾಸ, ರಂಗದೃಶ್ಯ ಗೀತಯಾನ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಹಲವಾರು ನಾಟಕಗಳಲ್ಲಿ ಸಹನಿರ್ದೇಶಕನಾಗಿ, ತಂತ್ರಜ್ಞನಾಗಿ ಕೆಲಸ ಮಾಡಿದ್ದಾರೆ. ಮಕ್ಕಳಿಗಾಗಿ ರಂಗತರಬೇತಿ ಶಿಬಿರಗಳನ್ನು ನಡೆಸಿಕೊಟ್ಟಿದ್ದಾರೆ. ಪ್ರಸ್ತುತ ರಂಗಾಯಣದಲ್ಲಿ ಕಿರಿಯಕಲಾವಿದರಾಗಿಸೇವೆ ಸಲ್ಲಿಸುತ್ತಿದ್ದಾರೆ.

ನಾಟಕಕಾರರ ಬಗ್ಗೆ : ಡಾ. ಚಂದ್ರಶೇಖರ ಕಂಬಾರ

ಇವರ ಹುಟ್ಟೂರು ಬೆಳಗಾವಿ ಜಿಲ್ಲೇಯ ಘೋಡಗೇರಿ. ತಮ್ಮ ವಿಶಿಷ್ಟ ಸಾಹಿತ್ಯ ರಚನೆ ಮೂಲಕ ಕನ್ನಡ ನಾಡಿನ ಗಮನ ಸೆಳೆದಿರುವ ಕಂಬಾರರು ದ.ರಾ.ಬೇಂದ್ರೆಯವರ ನಂತರ ಉತ್ತರ ಕರ್ನಾಟಕ ಭಾಗದ ಜಾನಪದ ಭಾಷೆಯ ಸೊಗಡನ್ನು ತಮ್ಮ ಕೃತಿಗಳ ಮೂಲಕ ಕನ್ನಡಿಗರಿಗೆ ಉಣಬಡಿಸಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿದ್ದ ಇವರು, ನವದೆಹಲಿಯ ರಾಷ್ಟ್ರೀಯ ನಾಟಕಶಾಲೆಯ ಅಧ್ಯಕ್ಷರಾಗಿ, ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದ ಮೊಟ್ಟಮೊದಲ ಕುಲಪತಿಗಳಾಗಿ ಸೇವೆಸಲ್ಲಿಸಿದ್ದಾರೆ. ಕನ್ನಡ ಸಾಹತ್ಯದ ಸ್ಥಿತ್ಯಂತರ ಹಾಗೂ ಚಳವಳಿಗಳ ದೃಷ್ಟಿ-ಧೋರಣೆಗಳನ್ನು ಕರಗತ ಮಾಡಿಕೊಂಡು ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಅಚ್ಚೋತ್ತಿದ್ದಾರೆ. ಕಂಬಾರರು ಕವಿ, ನಾಟಕಕಾರ, ಜಾನಪದ ತಜ್ಞ, ಅಧ್ಯಾಪಕ ಹಾಗೂ ಉತ್ತಮ ಆಡಳಿತಗಾರರಾಗಿದ್ದಾರೆ.
ಅಣ್ಣ-ತಂಗಿ, ಜೀಕೆ ಮಾಸ್ತರರ ಪ್ರಣಯ ಪ್ರಸಂಗ, ಶಿಖರ ಸೂರ್ಯ, ಸಿಂಗಾರವ್ವ ಮತ್ತು ಅರಮನೆ ಇವರ ಕಾದಂಬರಿಗಳು. ಮುಗುಳು, ಹೇಳತ್ತೇನ ಕೇಳಾ, ತಕರಾರಿನವರು, ಬೆಳ್ಳಿಮೀನು, ಅಕಕ್ಕು ಹಾಡುಗಳು ಇವರ ಕವನ-ಸಂಕಲನಗಳು. ಋಷ್ಯಶೃಂಗ, ಹರಕೆಯಕುರಿ, ಸಂಗ್ಯಾಬಾಳ್ಯಾ, ನಾರ್ಸಿಸಸ್, ಜೋಕುಮಾರ ಸ್ವಾಮಿ, ಪುಷ್ಪರಾಣಿ, ಸಿರಿಸಂಪಿಗೆ, ಜೈಸಿದನಾಯ್ಕ, ತುಕ್ರನ ಕನಸು, ಹುಲಿಯನೆರಳು ಮುಂತಾದ ನಾಟಕಗಳನ್ನು, ‘ಚಕೋರಿ’ ಎಂಬ ಮಹಾಕಾವ್ಯವನ್ನೂ ರಚಿಸಿದ್ದಾರೆ. ನಾಡೋಜ, ಪದ್ಮಶ್ರೀ, ಠಾಗೋರ್ ಮತ್ತು ಕಬೀರ್ ಸಮ್ಮಾನ್ ಪ್ರಶಸ್ತಿಗಳನ್ನು ಪಡೆದಿರುವ ಇವರು ಸಮಗ್ರ ಸಾಹಿತ್ಯಕ್ಕಾಗಿ ಜ್ಞಾನಪೀಠ ಪ್ರಶಸ್ತಿಯನ್ನು ೨೦೧೦ರಲ್ಲಿ ಪಡೆದಿರುತ್ತಾರೆ.

ಪಾತ್ರ ವರ್ಗ

ಕೋಡಂಗಿ – ಬಸವರಾಜು ಕಾಂಬಳೆ.
ಭಾಗವತ – ಶಿವು ಯಾಚೇನಹಳ್ಳಿ.
ಬೋಳೇ ಶಂಕರ – ಕಾರ್ತಿಕ್ ಎಸ್
ಸರದಾರ ಸೋಮಣ್ಣ – ಮಹದೇವಸ್ವಾಮಿ ಎಂ
ಸರದಾರನ ಹೆಂಡತಿ – ರಾಧಾರಾಣಿ.ಬಿ.ಎಸ್
ಸಾವ್ಯಾರ ಕಾಮಣ್ಣ – ವಿಶಾಲ್ ಪಾಲಾಪುರೆ.
ಸಾವ್ಯಾರಣ್ಣನ ಹೆಂಡತಿ – ಶ್ರುತಿ.ಎ.ಎಸ್
ಪಿಶಾಚಿಗಳು – ಉದಯಕುಮಾರ್.ಎಸ್.ಎನ್, ಚಾಂದಿನಿ.ಪಿ, ಕವಿತಾ.ಎ.ಎಂ.
ರಾಜ – ರಂಗನಾಥ.ವಿ.
ಮಂತ್ರಿ – ಶಿವು ಯಾಚೇನಹಳ್ಳಿ.
ರಾಜಕುಮಾರಿ – ಮೀನಾಕ್ಷಿ
ಸೈತಾನ – ಮಹೇಶ ಕಲ್ಲತ್ತಿ.

ತಂತ್ರಜ್ಞರು

ವಸ್ತ್ರಗಳು : ಮೀನಾಕ್ಷಿ, ಶ್ರುತಿ.ಎಸ್
ಪ್ರಸಾದನ : ಕಾರ್ತಿಕ್ ಎಸ್, ಕವಿತಾ.ಎ.ಎಂ.
ಪರಿಕರಣಗಳು : ಬಸವರಾಜು ಕಾಂಬಳೆ, ಉದಯಕುಮಾರ್.ಎಸ್.ಎನ್.
ರಂಗಸಜ್ಜಿಕೆ : ರಂಗನಾಥ್.ವಿ, ವಿಶಾಲ್ ಪಾಲಾಪುರೆ.
ಬೆಳಕು : ಮಹೇಶ ಕಲ್ಲತ್ತಿ, ಮಹದೇವಸ್ವಾಮಿ.ಎಂ.
ಪರಿಚಯ ಪತ್ರ (ಪ್ರಕಾರ) : ವಿಶಾಲ್ ಪಾಲಾಪುರೆ, ಶಿವು ಯಾಚೇನಹಳ್ಳಿ, ಚಾಂದಿನಿ.ಪಿ.
ರಂಗನಿರ್ವಹಣೆ : ಮಹೇಶ ಕಲ್ಲತ್ತಿ.
ನಿರ್ದೇಶನ : ರಂಗನಾಥ್.ವಿ.
ಸಂಗೀತ : ಶ್ರೀನಿವಾಸ ಭಟ್ಟ
ಸಾಂಗತ್ಯ : ಶ್ರೀಕಂಠ ಸ್ವಾಮಿ, ರಾಧಾರಾಣಿ.ಬಿ.ಎಸ್.
ಸಂಚಾಲಕರು : ವಿನಾಯಕ ಭಟ್ಟ ಹಾಸಣಗಿ

 

ABOUT THE PLAY

About the play: Urbanization has reached to the peak in such a way that basic culture is losing its native values. We have become selfish, greedy, lazy and we don’t want to work hard but wants to lead a royal life in city. From generation to generation we are getting attracted to modern life. We forget the culture and tradition. This play will show the advantage of hard work and simple living.

It’s a story of three brothers who live in Shivapura. Sardhar Somanna, Sahukar Kamanna and Bhole Shankar are the names of three brothers. Saithan sends three ghosts to test these brothers. Somanna and Kamanna become easy target for the ghosts because of their greediness. Bhole Shankara does not get attracted to ghost’s offerings. He is a man of selflessness and believes in hard work. Ghost will not be able to do anything to Bhole Shankara because of his firm decisions and belief in himself.

Cast

Kodangi : Basavaraj kambale
Bhagavata : Shivu Yachenahalli
Bole shankara : Karthik.S
Sardar’s wife : Radharani.B.S
Sahukar kamanna : Vishal palapure
Sahukar’s wife: Shruthi.A.S
Ghosts,(Devils) : Udaykumar.S.N, Chandini.P Kavitha.A
King (Raja) : Ranganatha.V
Minister (Manthri) : Shivu Yachenahalli
Pricess (Rajkumari) : Meenakshi
Sythan : Mahesh Kallatthi

Technicians

Costume : Meenskshi, Shruthi.A.S
Make up : Karthik.S, Kavitha.A.M
Properties : Basavaraja Kambale, Udaykumar. S.N
Set : Ranganahta.V, Vishal Palapure
Music :Radharani.B.S
Lighting : Mahesh Kallatthi, Mahadevaswamy
Advertisement : Shivu Yachenahalli, Chandini.P
Stage Manager : Mahesh Kallatthi.V
Director : Ranganatha.V