ಕೃಷ್ಣೇಗೌಡನ ಆನೆ

 ಜುಲೈ 16ನೇ  2017 – ಸಂಜೆ 6.30ಕ್ಕೆ | ಸ್ಥಳ : ಭೂಮಿಗೀತ | ನಿರ್ದೇಶನ : ಆರ್‍. ನಾಗೇಶ್| ರಂಗ ವಿನ್ಯಾಸ : ಹೆಚ್.ಕೆ. ದ್ವಾರಕಾನಾಥ್ | ವಸ್ತ್ರವಿನ್ಯಾಸ : ಮಹದೇವ್ | ರಂಗ ನಿರ್ವಹಣೆ : ಪ್ರಮಿಳಾ ಬೆಂಗ್ರೆ, ಶಶಿಕಲಾ ಬಿ.ಎನ್  

ನಿರ್ದೇಶಕರ ನುಡಿ
ರಂಗಾಯಣಕ್ಕಾಗಿ ಪೂರ್ಣಚಂದ್ರ ತೇಜಸ್ವಿಯವರ ಕಥೆ ಆಧರಿಸಿದ ನಾಟಕ ಒಂದನ್ನು
ಸಿದ್ಧಗೊಳಿಸಲು ಕರೆ ಬಂದಾಗ ಕೂಡಲೇ ಒಪ್ಪಿಕೊಂಡೆ. ರಂಗಾಯಣದ ಕಲಾವಿದರೊಟ್ಟಿಗೆ
ತೇಜಸ್ವಿಯವರ ಹಲವಾರು ಕಥೆಗಳನ್ನು ಸಾಮೂಹಿಕವಾಗಿ ಓದುತ್ತಾ ಬರುತ್ತಿದ್ದಂತೆ
‘ಕೃಷ್ಣೇಗೌಡನ ಆನೆ’ ಎಲ್ಲರ ಗಮನ ಸೆಳೆಯಿತು. ಪ್ರಸನ್ನರವರೂ ಉತ್ತಮ ಆಯ್ಕೆ ಎಂದ ಮೇಲೆ
‘ಆನೆ’ಯನ್ನು ಹಿಡಿದು ರಂಗಕ್ಕೆ ತರುವ ಖೆಡ್ಡಾ ಆಪರೇಷನ್ ಶುರುವಾಯಿತು.
ತೇಜಸ್ವಿ ಬರೆದದ್ದು ಒಂದೇ ಒಂದು ಕಿರು ನಾಟಕ ‘ಯಮಳ ಪ್ರಶ್ನೆ’. ಆದರೆ ಕಥೆಗಳಲ್ಲಿನ
ಘಟನಾವಳಿಗಳಲ್ಲಿ, ಪಾತ್ರಗಳಲ್ಲಿ, ಕಥೆಯ ಬೆಳವಣಿಗೆಯಲ್ಲಿ ಸಾಕಷ್ಟು ನಾಟಕೀಯ ಅಂಶಗಳನ್ನು
ಕಾಣಬಹುದಾಗಿದೆ. ತೇಜಸ್ವಿಯವರ ಕಥೆಗಳು ಯಾವುದೋ ಕಾಲಘಟ್ಟದಲ್ಲಿ ತೆರೆದುಕೊಂಡತೆ
ಕಂಡರೂ, ಅವು ಪ್ರಸ್ತುತವೆನಿಸಿಕೊಳ್ಳುತ್ತವೆ. ಅವರಕಥೆಗಳು ಸ್ಥಾನಿಕವಾಗಿ ಕಂಡರೂ,
ವರ್ತಮಾನ, ಭೂತ, ಭವಿಷ್ಯಗಳ ನಡುವೆ ಸರಿದಾಡುವ ವಸ್ತುವಿನ ಆಯ್ಕೆಯಿಂದಾಗಿ ತೇಜಸ್ವಿ
ಬಹುದೊಡ್ಡ ಸಣ್ಣ ಕಥೆಗಾರರೆನಿಸಿಕೊಂಡಿದ್ದಾರೆ. ಹೀಗಾಗಿಯೇ ಅವರ ಅನೇಕ ಕಥೆಗಳು ರಂಗದ
ಮೇಲೆ ಯಶಸ್ವಿಯಾಗಿ ಮೂಡಿಬಂದಿವೆ.
ಆನೆಯನ್ನು ಮುಟ್ಟದ ಕುರುಡರಿಗೆ ಅದು ಬಗೆ ಬಗೆಯಲ್ಲಿ ಕಂಡ ಕಥೆಯನ್ನು ಓದಿದ್ದೇವೆ. ಹಾಗೆಯೇ
‘ಕೃಷ್ಣೇಗೌಡನ ಆನೆ’ಯನ್ನು ಓದಿದ ಬುದ್ಧಿವಂತರಿಗೆ ಅದು ಅನೇಕ ರೀತಿಯಲ್ಲಿ ಕಾಣುತ್ತದೆ.
ಕುರುಡರ ಕಲ್ಪನೆಯ ಆನೆ ಅವರೇನನ್ನು ಮುಟ್ಟಿದ್ದರೆಂಬುದನ್ನು ಅವಲಂಬಿಸಿದಂತೆ, ಇಲ್ಲಿನ
‘ಆನೆ’ಯೂ ನೋಡುಗರ ಕಲ್ಪನೆ, ಭಾವನೆ, ಅನುಭವಗಳ ಹಿನ್ನೆಲೆಯಲ್ಲಿ ತೆರೆದುಕೊಳ್ಳುತ್ತಾ
ಹೋಗುತ್ತದೆ. ಅದಕ್ಕಾಗಿಯೇ ನಿಮ್ಮ ಕಾಣ್ಕೆಯ ದಿಕ್ಕನ್ನು ನಿರ್ದೇಶಿಸುವ ನುಡಿಗಳನ್ನು
ಹೇಳಹೊರಟಿಲ್ಲ ನಾವು.
ತೇಜಸ್ವಿಯವರ ಕಥೆಗೆ ರಂಗರೂಪ ಕೊಡಲು ಹೊರಟ ನಮಗೆ, ಪ್ರತಿ ಹಂತವೂ
ಸಮಸ್ಯೆಯಾಗಿ, ಸವಾಲಾಗಿ ಎದುರಾಗುತ್ತಿತ್ತಾದರೂ ‘ಆನೆ ನಡೆದದ್ದೇ ದಾರಿ’ ಎಂಬಂತೆ ರಂಗ
ಪ್ರಯೋಗ ಸಿದ್ಧವಾಗುತ್ತ ಬಂದಿದೆ, ಒಂದು ಕೊಲಾಜ್ ಮಾದರಿಯಲ್ಲಿ.
ಕೊನೆಯ ನುಡಿಗೆ ಮುನ್ನ ಈ ‘ಆನೆ’ಯನ್ನು ರಂಗಕ್ಕೆ ತರುವ ಸಾಹಸದಲ್ಲಿ ನೆರವಾದ
ರಂಗಾಯಣದ ಎಲ್ಲ ಕಲಾವಿದರಿಗೂ-ರಂಗ ಕಲಾವಿದರಾದ ತಂತ್ರಜ್ಞರಾಗಿ ದುಡಿದ
ಕಲಾವಿದರನ್ನು ವಿಶೇಷವಾಗಿ ನೆನಪಿಸಿಕೊಳ್ಳುತ್ತ ಈ ಎಲ್ಲ ಪ್ರಯೋಗಕ್ಕೆ ಅವಕಾಶ ಕಲ್ಪಸಿಕೊಟ್ಟ
ರಂಗಾಯಣದ ನಿರ್ದೇಶಕ ಪ್ರಸನ್ನ ಅವರಿಗೆ ನಮನಗಳು, ಇನ್ನು ಕೊನೆಯದಾಗಿ ‘ಆನೆ’ಯನ್ನು
ನೀವು ಹೇಗೆ ಸ್ವೀಕರಿಸಿದರೆಂಬ ಕೂತೂಹಲ ನನ್ನದು. ಕೃಷ್‌ಏಗೌಡನ ಆನೆಯನ್ನು ಪಳಗಿಸಲು
ಹೊರಟ ಎಲ್ಲ ಮಾವುತರ ಪರವಾಗಿ.
-ಆರ್‍. ನಾಗೇಶ್

ರಂಗದ ಹಿಂದೆ
ರಂಗಸಜ್ಜಿಕೆ : ವಿನಾಯಕ ಭಟ್ ಹಾಸಣಗಿ, ಜಗದೀಶ ಮನವಾರ್ತೆ
ಪರಿಕರ : ಎಸ್. ರಾಮನಾಥ, ಕೃಷ್ಣಪ್ರಸಾದ್ ಎಂ.ಸಿ
ಸಂಗೀತ ನಿರ್ವಹಣೆ : ಅಂಜು ಸಿಂಗ್
ಪ್ರಸಾದನ/ಪರಿಚಯ ಪತ್ರ : ಶಶಿಕಲಾ ಬಿ.ಎನ್., ಪ್ರಮೀಳಾ ಬೆಂಗ್ರೆ
ಬೆಳಕು : ಕೃಷ್ಣಕುಮಾರ ನಾರ್ಣಕಜೆ, ಸಗಾಯ್‌ರಾಜು

ನಿರ್ದೇಶಕರ ಬಗ್ಗೆ

ಕನ್ನಡ ಹವ್ಯಾಸೀ ರಂಗಭೂಮಿಯಲ್ಲಿ ಹಲವು ಮೈಲಿಗಲ್ಲುಗಳನ್ನು ನೆಟ್ಟವರು ಆರ್‍. ನಾಗೇಶ್.
ರಂಗಭೂಮಿಯಲ್ಲಿ ತನ್ನದೇ ಆದ ನಿರೂಪಣಾ ಶೈಲಿ, ವಿನ್ಯಾಸಗಳನ್ನು ರೂಪಿಸುತ್ತ
ಹಂತಹಂತವಾಗಿ ಗುಣಗಳನ್ನು ಮೈಗೂಡಿಸಿಕೊಂಡು ಬೆಳೆದವರು. ನಾಟಕ ರಚನೆ
ಕುಂಠಿತವಾದ ದಿನಗಳಲ್ಲಿ ಉತ್ತಮ ಕಥಾವಸ್ತುವಿಗಾಗಿ ಎಡತಾಕಿ ಕನ್ನಡದ ಶ್ರೇಷ್ಠ
ಕಾದಂಬರಿಗಳನ್ನೇ ಆಯ್ದು ರಂಗರೂಪಕ ಕೊಟ್ಟವರು ನಾಗೇಶ್.
ರಂಗವಿನ್ಯಾಸ, ಬೆಳಕು ವಿನ್ಯಾಸ, ಉಡುಪು ವಿನ್ಯಾಸ ಮೊದಲಾದ ಎಲ್ಲ ವಿಭಾಗಗಳಲ್ಲೂ
ಸ್ವಯಂಸಿದ್ಧಿ ಪರಿಣತಿ ಉಳ್ಳ ನಾಗೇಶ್‌ಗೆ ಎಲ್ಲ ರಂಗತಂಡಗಳಲ್ಲೂ ಒಂದಲ್ಲ ಒಂದು ವಿಭಾಗದಲ್ಲಿ
ತೊಡಗಿಕೊಂಡಿರುತ್ತಿದ್ದರು. ನಾಗೇಶ್ ಕಿರುಚಿತ್ರ, ದೂರದರ್ಶನ ಧಾರವಾಹಿ ಸಿದ್ಧ ಮಾಡಿದ್ದಾರೆ.
ಚಲನಚಿತ್ರ, ದೂರದರ್ಶನಗಳಲ್ಲಿ ಅಭಿನಯಿಸಿದ್ದಾರೆ. ನಾಟಕ ರಚನೆ ಇತ್ಯಾದಿಗಳನ್ನು
ನಿರ್ವಹಿಸಿದ್ದಾರೆ. ಡಾ.ಶಿವರಾಮ ಕಾರಂತ ‘ಚೋಮನದುಡಿ’, ಪೂರ್ಣಚಂದ್ರ ತೇಜಸ್ವಿಯವರ
‘ತಬರನ ಕತೆ’, ಡಾ.ಅನಂತಮೂರ್ತಿಯವರ ‘ಭಾರತೀಪುರ’, ರಂ. ಶಾ ಅವರ ‘ಹತ್ತು ತಲೆ
ನೂರು ಕಾಲು’, ಶ್ರೀಕೃಷ್ಣ ಆಲನಹಳ್ಳಿ ಅವರ ‘ಭುಜಂಗಯ್ಯನ ದಶಾವತಾರ’ ಕಾದಂಬರಿಗಳನ್ನು
ರಂಗಕ್ಕೆ ಅಳವಡಿಸಿ ನಿರ್ದೇಶಿಸಿದ್ದಾರೆ. ಕೈಲಾಸಂ, ಪರ್ವತವಾಣಿ, ಶ್ರೀರಂಗ, ಲಂಕೇಶ್,
ಗಿರೀಶ್‌ಕಾರ್ನಾಡ್, ಚಂದ್ರಶೇಕರ ಕಂಬಾರ, ಟಿ.ಎನ್.ಸೀತಾರಾಂ, ಮೊದಲಾದ ಪ್ರಖ್ಯಾತ
ನಾಟಕಕಾರರ ಅನೇಕ ನಾಟಕಗಳನ್ನು ನಿರ್ದೇಶಿಸಿದ್ದಾರೆ.
ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ,
ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿಗಳು ಇವರಿಗೆ ಸಂದಿವೆ. ಇವರು ನಾಟಕ
ಅಕಾಡಮಿಯ ಅಧ್ಯಕ್ಷರಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದು ಯಶಸ್ವಿಯಾಗಿದ್ದಾರೆ.
ಪ್ರಸ್ತುತ ‘ಕೃಷ್‌ಏಗೌಡನ ಆನೆ’ಯನ್ನು ರಂಗಾಯಣ ರೆಪರ್ಟರಿ ತಂಡಕ್ಕೆ ೨೦೦೨ರಲ್ಲಿ
ನಿರ್ದೇಶಿಸಿದ್ದಾರೆ.
-ಸಂಗ್ರಹ : ಶ್ರೀಮತಿ ಡಾ.ವಿಜಯಾ

ರಂಗದಮೇಲೆ
ಎಸ್.ರಾಮನಾಥ
ನೂರ್‍ ಅಹಮ್ಮದ್ ಶೇಖ್
ಮೈಮ್ ರಮೇಶ್
ಎಂ.ಸಿ.ಕೃಷ್ಣಪ್ರಸಾದ್
ವಿನಾಯಕ ಭಟ್‌ ಹಾಸಣಗಿ
ಮಹದೇವ
ಜಗದೀಶ ಮನವಾರ್ತೆ
ಪ್ರಮೀಳಾ ಬೆಂಗ್ರೆ/ ಶಶಿಕಲಾ ಬಿ.ಎನ್.