ಪುಗಳೇಂದಿ ಪ್ರಹಸನ – PUGALENDI PRAHASANA

ರಚನೆ : ಎಸ್. ರಾಮನಾಥ
ಕಾರ್‍ಲೋ ಗೋಲ್ಡೋನಿಯ
ಸರ್ವಂಟ್ ಆಫ್ ಟೂ ಮಾಸ್ಟರ್‍ಸ್ ಆಧಾರಿತ
ನಿರ್ದೇಶನ : ಪ್ರಸನ್ನ

ನಾಟಕದ ಸಾರಂಶ :

ಜಗತ್ತಿನ ಶ್ರೇಷ್ಠ ನಾಟಕಕಾರನಾದ ಕಾರ್ಲೋ ಗೋಲ್ಡನಿಯ ಪ್ರಸಿದ್ಧ ಹಾಸ್ಯ ನಾಟಕ ’ಸರ್ವೆಂಟ್ ಆಫ್ ಟೂ ಮಾಸ್ಟರ್‍ಸ್’ ನಾಟಕದ ರೂಪಾಂತರವೇ ’ಪುಗಳೇಂದಿ ಪ್ರಹಸನ’. ಜಗತ್ತಿನ ಯಾವುದೇ ನಾಟಕವನ್ನೂ ಆಯಾ ಪ್ರಾದೇಶಿಕ ಸಂಸ್ಕೃತಿ ಒಗ್ಗಿಸಿಕೊಂಡು ನಾಟಕ ಅಭಿನಯಿಸಿದರೆ, ಅನ್ಯ ನಾಟಕವೂ ಕೂಡ ಆಯಾ ಪ್ರದೇಶದ ಸ್ವತಂತ್ರ ನಾಟಕವಾಗುತ್ತದೆ ಎಂಬುದಕ್ಕೆ ಸಾಕ್ಷಿ ಈ ಪುಗಳೇಂದಿ ಪ್ರಹಸನ. ಅಷ್ಟರ ಮಟ್ಟಿಗೆ ರಾಮನಾಥ್ರವರು ರೂಪಾಂತರಿಸಿದ್ದಾರೆ. ಪ್ರಾದೇಶಿಕ ರಂಗಸಂಸ್ಕೃತಿಯ ಹಿನ್ನೆಲೆಯಲ್ಲಿ ಈ ನಾಟಕವನ್ನು ಪ್ರಸನ್ನರವರು ನಿರ್ದೇಶಿಸಿದ್ದಾರೆ. ಈ ಅರ್ಥದಲ್ಲಿ ಕನ್ನಡದ ಸ್ವತಂತ್ರ ನಾಟಕವಾಗಿದೆ. ಈಗಾಗಲೇ ನೂರು ಪ್ರದರ್ಶನಗಳ ಗಡಿ ದಾಟಿರುವ ಈ ನಾಟಕ ರಂಗಾಯಣದ ಅತ್ಯಂತ ಜನಪ್ರಿಯ ನಾಟಕ.

ಪುಗಳೇಂದಿ, ಕರ್ನಾಟಕ ಮತ್ತು ತಮಿಳುನಾಡಿನ ಗಡಿ ಭಾಗದಲ್ಲಿ ವಾಸಿಸುವ ಒಬ್ಬ ಕೂಲಿಯಾಳು. ಅವನು ಮುಗ್ಧ. ಸಮಯಕ್ಕೊಂದು ಸುಳ್ಳು ಹೇಳುವವ. ಮಾಡಿದ ತಪ್ಪಿಗೆ ಮತ್ತೊಂದು ತಪ್ಪು, ಸುಳ್ಳು ಹೇಳುತ್ತಾನೆ.

ಹಸಿವು ಅವನನ್ನು ಕಾಡುವ ಸಮಸ್ಯೆ ತನ್ನ ಹಸಿವು ನೀಗಿಸಿಕೊಳ್ಳಲು ಅವರಿವರ ಬಳಿಯಲ್ಲಿ ಕೂಲಿಯಾಳಾಗಿ ದುಡಿಯುತ್ತಿರುತ್ತಾನೆ. ತಮಿಳು ನಾಡಿನ ತಂಜಾವೂರಿನಲ್ಲಿ ಮಾಳವಿಕಳ ಅಣ್ಣನಾದ ವಿದ್ಯಾಶಂಕರ ಆಕಸ್ಮಿಕವಾಗಿ ಸತ್ತು ಹೋಗುತ್ತಾನೆ. ಹೇಮಚಂದ್ರ ತಲೆತಪ್ಪಿಸಿಕೊಳ್ಳುತ್ತಾನೆ.

ವ್ಯಾಪಾರಿಯಾದ ವಿದ್ಯಾಶಂಕರ, ಮೈಸೂರಿನ ವ್ಯಾಪಾರಿ ಅರ್ಧನಾರೀ ಶೆಟ್ಟರ ಬಳಿಯಲ್ಲಿ ವ್ಯಾಪಾರ ಮಾಡುತ್ತಿರುತ್ತಾನೆ. ವಿದ್ಯಾಶಂಕರ ಸತ್ತ ನಂತರ ಮಾಳವಿಕ ವಿದ್ಯಾಶಂಕರನ ವೇಷದಲ್ಲಿ ಅರ್ಧನಾರೀ ಶೆಟ್ಟರ ಮನೆಗೆ ಬರುತ್ತಾಳೆ. ಮಾಳವಿಕಳ ಆಳಾಗಿ ಪುಗಳೇಂದಿ ಬರುತ್ತಾನೆ. ಮಾರುವೇಷದ ಮಾಳವಿಕ ಬರುವ ಕಾಲಕ್ಕೆ ಅರ್ಧನಾರೀ ಶೆಟ್ಟಿ ತನ್ನ ಮಗಳಾದ ಕಲಾವತಿಯನ್ನು ಸ್ನೇಹಿತ ಲಂಬೋದರ ಭಟ್ಟರ ಮಗನಾದ ವಿನಯಶೀಲನಿಗೆ ಮದುವೆ ಮಾಡಿಕೊಡುವ ನಿಶ್ಚಿತಾರ್ಥ ಕಾರ್ಯಕ್ರಮ ಏರ್ಪಡಿಸಿರುತ್ತಾನೆ. ಅಲ್ಲಿಗೆ ಬಂದ ಗಂಡು ವೇಷದ ಮಾಳವಿಕ ತನ್ನ ವೃತ್ತಾಂತವನ್ನು ತಿಳಿಸುತ್ತಾ ತಾನೇ ವಿದ್ಯಾಶಂಕರ ಎಂದು ನಂಬಿಸಿ ಎಲ್ಲರನ್ನೂ ಗಂದಲಕ್ಕೆ ಸಿಲುಕಿಸುತ್ತಾಳೆ. ಪರಿಸ್ಥಿತಿಯ ಲಾಭ ಪಡೆದುಕೊಳ್ಳುತ್ತಾಳೆ. ಇತ್ತ ಹೇಮಚಂದ್ರ ತನ್ನ ಪ್ರಿಯಕರಳನ್ನು ಹುಡುಕಿಕೊಂಡು ಮೈಸೂರಿಗೆ ಬರುತ್ತಾನೆ. ಪುಗಳೇಂದಿ ಸುಳ್ಳು ಹೇಳಿಕೊಂಡು ಹೇಮಚಂದ್ರನ ಬಳಿಯಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಮಾಳವಿಕ ಮತ್ತು ಹೇಮಚಂದ್ರ ಪರಸ್ಪರ ಗೊತ್ತಿರದೇ ಒಂದೇ ಲಾಡ್ಜ್ನಲ್ಲಿ ಉಳಿದುಕೊಂಡಿರುತ್ತಾರೆ. ಪುಗಳೇಂದಿ ತನ್ನ ಸುಳ್ಳಿನ ಚಾಕಚಕ್ಯತೆಯಿಂದ ಪರಿಸ್ಥಿತಿಯನ್ನು ನಿಭಾಯಿಸಿಕೊಳ್ಳುತ್ತಾನೆ. ಮುಂದೆ ಪುಗಳೇಂದಿಯ ಸುಳ್ಳಿನಿಂದಾಗಿ ಹೇಮಚಂದ್ರ ಮತ್ತು ಮಾಳವಿಕ ಒಂದಾಗುತ್ತಾರೆ. ಮಾಳವಿಕ ವಿದ್ಯಾಶಂಕರ ಅಲ್ಲ ಎಂಬ ಸತ್ಯ ತಿಳಿಯುತ್ತದೆ. ಇಬ್ಬರ ಬಳಿಯಲ್ಲಿ ಒಬ್ಬನೇ ಆಳಾಗಿ ಪುಗಳೇಂದಿ ದುಡಿಯುತ್ತಿದ್ದುದರ ರಹಸ್ಯ ಬಯಲಾಗುತ್ತದೆ. ಈ ವಿಷಯ ಅರ್ಧನಾರೀ ಶೆಟ್ಟರಿಗೂ ತಿಳಿದು ವಿನಯಶೀಲನಿಗೆ ತನ್ನ ಮಗನನ್ನು ಮದುವೆ ಮಾಡಿಕೊಡುವ ಏರ್ಪಾಡು ಮಾಡುತ್ತಾರೆ. ಈ ಕಥಾನಕ ಮುಗಿಯುವಷ್ಟರಲ್ಲಿ ಪುಗಳೇಂದಿ ಅರ್ಧನಾರೀ ಶೆಟ್ಟರ ಮನೆಯ ಕೆಲಸದಾಕೆ ವಿಲಾಸಿನಿಯನ್ನು ಪ್ರೇಮಿಸಿರುತ್ತಾನೆ. ಅವನಿಗೂ ಕೂಡ ಮದುವೆ ಏರ್ಪಾಡು ಮಾಡಿಸುತ್ತಾರೆ.

ಈ ನಾಟಕದಲ್ಲಿ ವೃತ್ತಿ ರಂಗಭೂಮಿಯ ತಂತ್ರಗಾರಿಕೆ ಮತ್ತು ಅಭಿನಯ ಶೈಲಿಯನ್ನು ಅಳವಡಿಸಿಕೊಂಡು ಆಧುನಿಕ ಚೌಕಟ್ಟಿನಲ್ಲಿ ನಿರ್ದೇಶಿಸಲಾಗಿದೆ. ನವಿರಾದ ಹಾಸ್ಯದೊಂದಿಗೆ ಸಾಗುವ ಈ ನಾಟಕದಲ್ಲಿ ಬರುವ ಹಾಡುಗಳನ್ನು ನಟರೇ ಹಾಡುತ್ತಾ ಅಭಿನಯಿಸುತ್ತಾರೆ. ಕಂಪನಿ ನಾಟಕ ಸಂಗೀತವನ್ನು ನಾಟಕಕ್ಕೆ ಅಳವಡಿಸಿಕೊಳ್ಳಲಾಗಿದೆ. ಈ ಪ್ರಯೋಗ ಕನ್ನಡ ರಂಗಭೂಮಿಯಲ್ಲಿ ಹೊಸದು.

Written by S. Ramanath
Based on Carlo Goldoni’s
SERVENT OF TWO MASTERS
Direction : Prasanna

ABOUT THE PLAY

Pugalendi prahasana is th adaptation of world famous playwright Carlo Goldoni’s Servant of two masters. Plays from any part of the world, if adapted to the local culture and performed will come out as independent creation of that region and Pugalendi prahasana is a good example for that. Ramanatha has done precisely that and Prasanna has directed this play in the background of regional culture. In that context Pugalendi prahasana is an independent drama. This play which has already seen more than hundred shows is one of the most popular presentations of Rangayana.

Pugalendi is a laborer living in the border areas of Karnataka and Tamil Nadu. He is an innocent person but says lies left, right and centre as the situation demands. To cover one mistake he commits another. Hunger is his prime problem. To quench his hunger he works as a laborer here and there. Malavika’s elder brother Vidya Shankar fights with her lover Hemachandra. In that fight Vidya Shankar dies and Hemachandra absconds.

Vidya Shankar was a merchant who had business transactions with Ardhanari Shettar of Mysore. After Vidya Shankara’s death Malavika comes to Ardhanari Shettar in disguise of Vidya Shankar. Pugalendi also comes as Malavika’s servant. By the time Malavika comes, Ardhanari Shettar has arranged for the engagement ceremony to give his daughter Kalavathi in marriage to Vinayasheela the son of his friend Lambodaraa Shetty.

Malavika who arrives on the scene says many things about herself and puts everyone in confusion and takes advantage of the situation.

Hemachandra comes to Mysore in search of his lover. Pugalendi joins Hemachandra for work. Malavika and Hemachandra stay in the same lodge. Pugalendi manages the situation with his lies. Subsequently Malavika and Hemachandra unite due to Pugalendi’s lies. Everyone knows that was working as servant with both of them. Ardhanari Shettar also comes to know the truth and arranges the marriage of his daughter to Vinayasheela. By the time this episode ends Pugalendi would be in love with Vilasini – a servant in Ardhanari Shettar’s house. He also arranges his marriage with her.

This play uses the techniques and acting style of company theatre but is directed within a modern framework. The actors sing the songs in this play which as subtle humor, themselves and act. The music of company dramas has been adopted here. This is a novel experiment in Kannada theatre.

ರಂಗದ ಮೇಲೆ :

ಪುಗಳೇಂದಿ : ಮಂಜುನಾಥ ಬೆಳಕೆರೆ
ಮಾಳವಿಕ : ನಂದಿನಿ ಕೆ.ಆರ್. / ಪ್ರಮೀಳಾ ಬೇಂಗ್ರೆ
ವಿನಯಶೀಳ : ಎಸ್. ರಾಮು
ಅರ್ಧನಾರಿ ಶೇಟ್ಟರ್ : ಹುಲಗಪ್ಪ ಕಟ್ಟೀಮನಿ
ಸುಗಣೇಂದ್ರ ಕಾಮತ್ : ಕೃಷ್ಣಕುಮಾರ ನಾರ್ಣಕಜೆ
ಕೂಲಿ : ನೂರ್ ಅಹಮ್ಮದ್ ಶೇಖ್
ಲಂಬೋಧರ ಭಟ್ಟ : ಸಂತೋಷಕುಮಾರ ಕುಸನೂರು
ವಿಲಾಸಿನಿ : ಗೀತಾ ಎಂ.ಎಸ್. / ಶಶಿಕಲಾ ಬಿ.ಎನ್.
ಕಲಾವತಿ : ಸರೋಜ ಹೆಗಡೆ
ಹೇಮಚಂದ್ರ : ಪ್ರಶಾಂತ್ ಹಿರೇಮಠ್

ರಂಗದ ಹಿಂದೆ :

ವಸ್ತ್ರಗಳು : ಹುಲಗಪ್ಪ ಕಟ್ಟೀಮನಿ., ಜಗದೀಶ ಮನವಾರ್ತೆ., ಪ್ರಮೀಳಾ ಬೇಂಗ್ರೆ., ಗೀತಾ ಎಂ.ಎಸ್.
ರಂಗಸಜ್ಜಿಕೆ : ಪ್ರಶಾಂತ್ ಹಿರೇಮಠ್., ಕೃಷ್ಣಕುಮಾರ ನಾರ್ಣಕಜೆ., ಸರೋಜ ಹೆಗಡೆ
ಬಡಗಿ : ಜನಾರ್ಧನ
ಪರಿಕರ : ವಿನಾಯಕ ಭಟ್., ನಂದಿನಿ ಕೆ.ಆರ್., ಶಶಿಕಲಾ ಬಿ.ಎನ್., ಎಸ್. ರಾಮು
ಪ್ರಸಾಧನ : ಮಹದೇವ್., ಎಸ್. ರಾಮನಾಥ
ಪರಿಚಯ ಪತ್ರ : ಮಂಜುನಾಥ ಬೆಳಕೆರೆ., ಸಂತೋಷಕುಮಾರ ಕುಸನೂರು
ಬೆಳಕು ನಿರ್ವಹಣೆ : ಮಹೇಶ್ ಕಲ್ಲತ್ತಿ
ಸಂಗೀತ ಸಾಂಗತ್ಯ : ಅಂಜುಸಿಂಗ್
ಪ್ರಯೋಗ ನಿರ್ವಹಣೆ : ನೂರ್ ಅಹಮ್ಮದ್ ಶೇಖ್

ON THE STAGE

Pugalendi : Manjunath Belakere
Malavika : Nandini. K.R. / Pramila Bengre
Vinayasheela : S. Ramu
Ardhanari Shettar : Hulagappa Kattimani
Suganendra Kamath : Krishnakumar Narnakaje
Lambodara Bhatta : Santoshkumar Kusanur
Vilasini : Geetha M.S. / Shashikala B.N.
Kalavathi : Saroja Hegde
Hemachandra : Prashanth Hiremath
Coolie : Noor Ahmed Shaikh

BEHIND THE STAGE :

Costume Designing : Mangala.N.
Lighting Design : P. Gangadharaswamy
Music : Srinivas Bhat (Cheeni)
Costumes : Hulugappa Kattimani., Jagadish Manavarthe., Pramila Bengre., Geetha. M.S.
Sets : Prashanth Hiremath., Krishnakumar Narnakaje., Saroja Hegde
Carpenter : Janardhan
Props :Vinayak Bhat., Nandini.K.R., Shashikala.B.N., S.Ramu
Boucher : Manjunath Belakere., Santoshkumar Kusanur
Light management : Mahesh Kallatti
Music coordination : Anju Singh
Written by : S.Ramanatha
Show management : Noor Ahmad Shaikh
Direction : Prasanna