ಪಂಡಿತ್ ರಾಜೀವ್ ತಾರಾನಾಥರ ಸಂಗೀತವನ್ನು ಕುರಿತು ಚಿಂತನೆ-ಸಂವಾದ

ರಂಗಾಯಣದ ಭೂಮಿಗೀತ ಸಭಾಂಗಣದಲ್ಲಿ ರಾಜೀವ್ ತಾರಾನಾಥ್ ಅವರ ಸಂಗೀತ ಕುರಿತ ಆಲೋಚನೆಗಳ ಬಗ್ಗೆ ನಡೆದ ಚಿಂತನೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಸಾಹಿತಿ ಶ್ರೀ ಚಂದ್ರಶೇಖರ ಕಂಬಾರರು ರಾಗಮಾಲಾ ಪ್ರಕಾಶನದ ವಾದಿ ಸಂವಾದಿ ಪುಸ್ತಕವನ್ನು ಬಿಡುಗಡೆ ಮಾಡಿ, ಮಾತನಾಡಿದರು. ಈ ಸಂದರ್ಭದಲ್ಲಿ ಕಂಬಾರರು ರಾಜೀವ್ ತಾರಾನಾಥರನ್ನು ತಮ್ಮೆಲ್ಲ ಪ್ರಯತ್ನಗಳ ಹಿಂದಿನ ಪೋಷಕ ಶಕ್ತಿ ಎಂದು ಹೇಳಿದರು. ಮುಂದುವರೆದು ಹಲವಾರು ಘಟನೆಗಳನ್ನು ಉಲ್ಲೇಖಿಸುತ್ತಾ ತಮಗವರು ಅಕ್ಷರಶಃ ಗುರು ಎಂದು ಗೌರವದಿಂದ ನುಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ಐ.ಎ.ಎಸ್ ಅಧಿಕಾರಿಗಳಾದ ಶ್ರೀ ಚಿರಂಜೀವಿ ಸಿಂಗ್ ಅವರು ರಾಜೀವರನ್ನು ಸಂಗೀತದಲ್ಲಿ ಪರಿಪೂರ್ಣತೆ ತಲುಪಿದ ಕಲಾವಿದ ಎಂದು ಬಣ್ಣಿಸಿದರು. ರಾಜೀವ್ ಅವರ ಜೀವನದಲ್ಲಿ ಮಡಿವಂತಿಕೆ ಇಲ್ಲ. ಅವರ ಮನಸ್ಸು ಹಾಗೂ ಕಲಾ ಪ್ರಪಂಚ ಎರಡೂ ತುಂಬಾ ವಿಶಾಲವಾದದ್ದು. ಎಷ್ಟೋ ಜನ ಅವರನ್ನು ಏಣಿಯಂತೆ ಬಳಸಿಕೊಂಡು ಮೇಲೆ ಹೋಗಿದ್ದಾರೆ. ಆದರೆ ಅವರು ಸದಾ ಕೈಚಾಚಿ ಎಲ್ಲರನ್ನೂ ಬನ್ನಿ ಎಂದು ಕರೆಯುತ್ತಲೇ ಇದ್ದಾರೆ ಎಂದು ಅವರ ಹೃದಯವೈಶಾಲ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಿವೃತ್ತ ಪೋಲಿಸ್ ಅಧಿಕಾರಿಗಳಾದ ಶ್ರೀ ಸಿ. ಚಂದ್ರಶೇಖರ್ ಅವರು ಶ್ರೀ ತಾರಾನಾಥರ ಸಂಗೀತಾತ್ಮಕ ಚಿಂತನೆಗಳನ್ನು ಪರಿಚಯಿಸುತ್ತಾ ಸಂವಾದಕ್ಕೆ ಚಾಲನೆ ನೀಡಿದರು. ಸಂವಾದದಲ್ಲಿ ಮಾತನಾಡುತ್ತಾ ರಾಜೀವ ತಾರಾನಾಥರು ಸಂಗೀತದ ಬಗ್ಗೆ ಮಾತನಾಡುವುದಕ್ಕಿಂತ ಅದನ್ನು ಕೇಳಿ ಆಸ್ವಾದಿಸಬೇಕು ಎಂದು ಅಭಿಪ್ರಾಯಪಟ್ಟರು. ವ್ಯವಧಾನ ಮತ್ತು ನಿಧಾನವಿದ್ದರೆ ಸಂಗೀತವನ್ನು ಕೇಳಿ ಆಸ್ವಾದಿಸಬಹುದು ಎಂದರು. ಸಂವಾದದಲ್ಲಿ ರಂಗಾಯಣದ ನಿರ್ದೇಶಕರಾದ ಶ್ರೀ ಜನಾರ್ದನ್ ಅವರು ಪಾಲ್ಗೊಂಡಿದ್ದರು.

Ragamala Publications in association with the Rangayana, Mysore had organized the release of “Vadi Samvadi” a book on Pandit Rajeev Taranath’s thoughts on music. Jnanapeeth awardee Chandrashekar Kambar released the book and told that Taranath was in fact the driving force behind all his literary endeavors. He was in fact his ‘Guru’ and ‘Guide.’ Rtd IAS officer Chiranjeevi Singh spoke on the book and told it was unique as it was not just an autobiography but a valuable collection of his thoughts on music. He described Rajeev as a complete artiste. His vision both in life and music is very broad. He is not parochial. He told that he has known many a people, who have risen to great heights because of Taranath but seldom acknowledge that. He is extremely magnanimous.

Rtd. Commissioner of Police, Government of Karnataka C, Chandrashekhar initiated the discussion through his brief talk on the musical thoughts of Taranath. During discussion Taranath told that one should listen to music and enjoy it, rather than talk about it. He told that one needs patience and perseverance to enjoy and appreciate music. Janardhan the Director of Rangayana participated in the discussion.