ಪ್ರದರ್ಶಿಸಿರುವ ನಾಟಕಗಳು

ರಂಗಾಯಣ ಬಹುತ್ವದಲ್ಲಿ ನಂಬಿಕೆಯುಳ್ಳ ಕಾರಣ ಏಕಮುಖಿ ಪ್ರದರ್ಶನಗಳಿಂದ ಹೊರಗೆ ಕೈಚಾಚಿ ಜಗತ್ತಿನ ಎಲ್ಲ ಖಂಡಗಳಿಂದ ಉದ್ಭವವಾದ ನಾಟಕಗಳನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಸಂಸ್ಕೃತ ನಾಟಕಗಳಿಂದ ಹಿಡಿದು ಸ್ವೀಡಿಷ್ ನಾಟಕಗಳವರೆಗೆ ಇದರ ವ್ಯಾಪ್ತಿ ಬಲು ದೊಡ್ಡದು. ಬ್ರೆಕ್ಟ್, ಚೆಕಾಫ್, ಶೇಕ್‌ಸ್ಪಿಯರ್, ಓಲೇಸೋಯಿಂಕಾ, ಬೆಕೆಟ್, ಅಯನೆಸ್ಕೊ ಮುಂತಾದ ನಾಟಕಕಾರರ ನಾಟಕಗಳು ರಂಗಾಯಣದ ರಂಗಮಂದಿರಗಳಲ್ಲಿ ಪ್ರದರ್ಶಿತವಾಗಿವೆ. ಹಾಗೆಯೇ, ಮರಾಠಿ, ಗುಜರಾತಿ, ಉರ್ದು, ಹಿಂದಿ, ಮತ್ತು ಬಂಗಾಳಿ ನಾಟಕಗಳು ಕನ್ನಡೀಕರಣಗೊಂಡು ಪ್ರದರ್ಶನವಾಗಿವೆ. ಕನ್ನಯ ಲಾಲ್, ಹಬೀಬ್ ತನ್ವಿರ್, ಬಹುರುಲ್ ಇಸ್ಲಾಂ, ಕ್ರಿಶ್ಚಿಯನ್ ಸ್ಟುಕುಲ್, ವ್ಯಾಶಿಲಿಯೋಸ್ ಕಲಿಟ್ಸಿಸ್, ಫ್ರಿಟ್ಸ್ ಬೆನವಿಟ್ಸ್, ಹಾಗೂ ಉವೆ ಜೆನ್ಸ್ ಜೆನ್‌ಸೆನ್ ಇವರ ನಿರ್ದೇಶನದಲ್ಲಿ ಪ್ರದರ್ಶಿತಗೊಂಡ ನಾಟಕಗಳು ರಂಗಾಯಣಕ್ಕೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮನ್ನಣೆಯನ್ನು ತಂದುಕೊಟ್ಟಿವೆ.

ಕುವೆಂಪು, ಗಿರೀಶ್ ಕಾರ್ನಾಡ್, ಮಾಸ್ತಿ, ಶ್ರೀರಂಗ, ಲಂಕೇಶ್, ಪೂರ್ಣಚಂದ್ರ ತೇಜಸ್ವಿ, ಸಂಸ, ಮತ್ತು ಬೀಚಿ ಅವರ ಕೃತಿಗಳು ಇಲ್ಲಿ ಪ್ರದರ್ಶಿತವಾಗಿವೆ. ಈಗಾಗಲೇ ತಿಳಿಸಿದಂತೆ ಪುಸ್ತಕ ಬಿಡುಗಡೆಗೆ ರಂಗಾಯಣ (ವಿಶೇಷವಾಗಿ ಶ್ರೀರಂಗ) ಹೇಳಿ ಮಾಡಿಸಿದ ಸ್ಥಳವಾಗಿದೆ. ಬರಹಗಾರರು, ಓದುಗರು, ಹಾಗೂ ಸಾಂಸ್ಕೃತಿಕವಾಗಿ ವಿಕಸಿತ ಮನಸ್ಸುಳ್ಳ ಪ್ರತಿಯೊಬ್ಬ ಮೈಸೂರಿಗರೂ ಈ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾಗುತ್ತಾರೆ. ಆಗಿಂದಾಗ್ಯೆ ರಂಗಾಯಣದಲ್ಲಿ ವ್ಯಕ್ತಿ ಪರಿಚಯದ ಕಾರ್ಯಕ್ರಮಗಳೂ ನಡೆಯುತ್ತಿರುತ್ತವೆ.

ಜನರ ಪ್ರಜ್ಞೆಯಲ್ಲಿ ನಮ್ಮ ಸುತ್ತಮುತ್ತಲು ಏನು ನಡೆಯುತ್ತಿದೆ ಎಂಬುದನ್ನು ಊರುವುದಕ್ಕೆ ಇಂತಹ ಕಾರ್ಯಕ್ರಮಗಳು ಅತ್ಯಂತ ಸಹಕಾರಿ. ಪುಸ್ತಕ ಪ್ರಕಟಣೆಯೂ ಸಹ ರಂಗಾಯಣದ ಚಟುವಟಿಕೆಗಳ ಒಂದು ಮುಖ್ಯ ಭಾಗ. ವಿಶೇಷವಾಗಿ ರಂಗಭೂಮಿಗೆ ಸಂಬಂಧಿಸಿದ ಹೊತ್ತಿಗೆಗಳನ್ನು ಹೊರತರುವಲ್ಲಿ ರಂಗಾಯಣ ಕೆಲಸ ಮಾಡುತ್ತಿದೆ.

‘ಪರಿಕರ’ ರಂಗಾಯಣ ಕೆಲವು ವರ್ಷಗಳ ಹಿಂದೆ ಹೊರತಂದ ನಿಯತಕಾಲಿಕೆ. ನಿಯತವಾಗಿ ಬೆಳಕು ಕಾಣದಿದ್ದರೂ ತಾನಿದ್ದಷ್ಟು ದಿನ ‘ಪರಿಕರ’ ರಂಗಭೂಮಿ ಹಾಗೂ ನಾಟಕ ಪ್ರದರ್ಶನಗಳಿಗೆ ಸಂಬಂಧಿಸಿದ ಹಲವು ಉಪಯುಕ್ತ ಪ್ರಬಂಧಗಳು ಮತ್ತು ಮಾಹಿತಿಯನ್ನು ಪ್ರಕಟಿಸಿ ಸಂಶೋಧಕರಿಗೆ ಒದಗಿ ಬರುವ ದಾಖಲೆಯಾಗಿ ಉಳಿದಿದೆ.

ಒಟ್ಟಿನಲ್ಲಿ, ರಂಗಾಯಣ ಕರ್ನಾಟಕದ ಸಾಂಸ್ಕೃತಿಕ ಭೂಪಟದಲ್ಲಿ ಒಂದು ಮಹತ್ವದ ಸ್ಥಾನವನ್ನು ಪಡೆದುಕೊಂಡಿರುವುದಲ್ಲದೆ ಕಲೆಯ ಕ್ಷೇತ್ರದಲ್ಲಿ ಹೊಸ ಶಕೆಯ ಆರಂಭಕ್ಕೆ ಕಾರಣವಾಗಿದೆ. ಮೈಸೂರು ಸಾಂಸ್ಕೃತಿಕ ನಗರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹಿನ್ನೆಲೆಯಲ್ಲಿ ಅದರ ಆಯಾಮವನ್ನು ಹೆಚ್ಚಿಸುವಲ್ಲಿ ರಂಗಾಯಣ ಬಹು ಮಹತ್ವದ ಭೂಮಿಕೆಯನ್ನು ನಿಭಾಯಿಸುತ್ತಿದೆ.

ಚಂದ್ರಹಾಸ

ಚಂದ್ರಹಾಸ

ಶಿಖರ ಸೂರ್ಯ

ಶಿಖರ ಸೂರ್ಯ

ಏನ್ ಹುಚ್ಚೂರೀ.. ಯಾಕ್ಹಿಂಗಾಡ್ತೀರಿ

ಏನ್ ಹುಚ್ಚೂರೀ.. ಯಾಕ್ಹಿಂಗಾಡ್ತೀರಿ

ಗೋರ

ಗೋರ

ಸದಾರಮಾ ನಾಟಕಂ

ಸದಾರಮಾ ನಾಟಕಂ

ಮಲೆಗಳಲ್ಲಿ ಮದುಮಗಳು

ಮಲೆಗಳಲ್ಲಿ ಮದುಮಗಳು

ಶಬ್ದ ನಿಶ್ಶಬ್ದಗಳ ನಡುವೆ

ಶಬ್ದ ನಿಶ್ಶಬ್ದಗಳ ನಡುವೆ

ಕೇಳು ಜನಮೇಜಯ

ಕೇಳು ಜನಮೇಜಯ

ಚಿರೇಬಂದಿ ವಾಡೆ

ಚಿರೇಬಂದಿ ವಾಡೆ

ಚಕ್ ಮೇಟ್

ಚಕ್ ಮೇಟ್

ಸ್ವಾತಂತ್ಯ್ರ ಸೂರಿ

ಸ್ವಾತಂತ್ಯ್ರ ಸೂರಿ

ಅಪ್ಸರೆ

ಅಪ್ಸರೆ

ಬೀchi : ಬುಲೆಟ್ಸ್

ಬೀchi : ಬುಲೆಟ್ಸ್

ಸೀಗಲ್

ಸೀಗಲ್

ಕದಡಿದ ನೀರು

ಕದಡಿದ ನೀರು

ತುಘಲಕ್

ತುಘಲಕ್

ಕನಸೇ ಕನಸು

ಕನಸೇ ಕನಸು

ಓ… ಲಿಯರ್‍!

ಓ… ಲಿಯರ್‍!

ಹೀಗೊಂದು ಪ್ರಣಯ ಪ್ರಸಂಗ

ಹೀಗೊಂದು ಪ್ರಣಯ ಪ್ರಸಂಗ

ಹ್ಯಾಮ್ಲೆಟ್

ಹ್ಯಾಮ್ಲೆಟ್

ದೊರೆ ಈಡಿಪಸ್

ದೊರೆ ಈಡಿಪಸ್

ಸದ್ದು..! ವಿಚಾರಣೆ ನಡೆಯುತ್ತಿದೆ…

ಸದ್ದು..! ವಿಚಾರಣೆ ನಡೆಯುತ್ತಿದೆ…

ಬಹುರೂಪಿ ಕಾವ್ಯಾಭಿನಯ

ಬಹುರೂಪಿ ಕಾವ್ಯಾಭಿನಯ

ಕಾವ್ಯ ಸಂಚಯ

ಕಾವ್ಯ ಸಂಚಯ

ಪೋಲೀಸರಿದ್ದಾರೆ ಎಚ್ಚರಿಕೆ

ಪೋಲೀಸರಿದ್ದಾರೆ ಎಚ್ಚರಿಕೆ

ಕೃಷ್ಣೇಗೌಡನ ಆನೆ

ಕೃಷ್ಣೇಗೌಡನ ಆನೆ

ಕಲ್ಲರಳಿ ಹೂವಾಗಿ

ಕಲ್ಲರಳಿ ಹೂವಾಗಿ

ಸರಸಮ್ಮನ ಸಮಾಧಿ

ಸರಸಮ್ಮನ ಸಮಾಧಿ

ಕಥಾರಂಗ

ಕಥಾರಂಗ

ಧರ್ಮಪುರಿ ಬಳಪದ ವೃತ್ತ

ಧರ್ಮಪುರಿ ಬಳಪದ ವೃತ್ತ

ಮಟಾಶ್‌ರಾಜ

ಮಟಾಶ್‌ರಾಜ

ಪುಗಳೆಂದಿ ಪ್ರಹಸನ

ಪುಗಳೆಂದಿ ಪ್ರಹಸನ

ಶೂದ್ರ ತಪಸ್ವಿ

ಶೂದ್ರ ತಪಸ್ವಿ

ಟಿಪ್ಪುವಿನ ಕನಸುಗಳು

ಟಿಪ್ಪುವಿನ ಕನಸುಗಳು

ಒಥೆಲೋ

ಒಥೆಲೋ

ಭಟ್ಟರ ಮಗಳು ಮಂಜುಳಾ

ಭಟ್ಟರ ಮಗಳು ಮಂಜುಳಾ

ಅಗ್ನಿವರ್ಣ

ಅಗ್ನಿವರ್ಣ

ಸಿರಿಸಂಪಿಗೆ

ಸಿರಿಸಂಪಿಗೆ

ಗುಣಮುಖ

ಗುಣಮುಖ

ಗುಂಡೇಗೌಡನ ಚರಿತ್ರೆ

ಗುಂಡೇಗೌಡನ ಚರಿತ್ರೆ

ಎ ಮಿಡ್ ಸಮ್ಮರ್‍ ನೈಟ್ಸ್ ಡ್ರೀಮ್

ಎ ಮಿಡ್ ಸಮ್ಮರ್‍ ನೈಟ್ಸ್ ಡ್ರೀಮ್

ಪ್ರತಿ ಶೋಧ

ಪ್ರತಿ ಶೋಧ

ತಲೆದಂಡ

ತಲೆದಂಡ

ಜಗದೇಕ ವೀರನ ಕಥೆ

ಜಗದೇಕ ವೀರನ ಕಥೆ

ಶ್ರೀರಂಗ ನಾಟಕೋತ್ಸವ

ಶ್ರೀರಂಗ ನಾಟಕೋತ್ಸವ

ಕತ್ತಲೆ ಬೆಳಕು

ಕತ್ತಲೆ ಬೆಳಕು

ಎತ್ತ ಹಾರಿದೆ ಹಂಸ…

ಎತ್ತ ಹಾರಿದೆ ಹಂಸ…

ರೋಡು

ರೋಡು

ಖುಷೀ ದಿನಗಳು

ಖುಷೀ ದಿನಗಳು

ಅಲೆಗಳಲ್ಲಿ ರಾಜಹಂಸಗಳು

ಅಲೆಗಳಲ್ಲಿ ರಾಜಹಂಸಗಳು