ನವರಾತ್ರಿ ರಂಗೋತ್ಸವ 2018
ಈ ಬಾರಿಯೂ ಕೂಡ ದಸರಾ ಮಹೋತ್ಸವದ ಸಂದರ್ಭ ರಂಗಾಯಣದಲ್ಲಿ ನವರಾತ್ರಿ ರಂಗೋತ್ಸವವನ್ನು 2018 ಅಕ್ಟೋಬರ್ 10 ರಿಂದ 18 ರವರೆಗೆ ರಂಗಾಯಣದ ವನರಂಗದಲ್ಲಿ ನಡೆಯಲಿದೆ. ಈ ನಾಟಕೋತ್ಸವದಲ್ಲಿ ರಂಗಾಯಣದ ಹಿರಿಯ ಕಲಾವಿದರಿಂದ ಚೆಕ್ಮೇಟ್, ರಂಗಾಯಣದ ಸಂಚಾರಿ ರಂಗಘಟಕದ ಕಲಾವಿದರಿಂದ ಪುಂಟಿಲಾ ಮತ್ತು ರೆಕ್ಸ್ ಅವರ್ಸ್ ಡೈನೋ ಏಕಾಂಗಿ ಪಯಣ ಎಂಬ ಪಪೆಟ್ ಪ್ರದರ್ಶನ, ರಂಗಾಯಣದ ಭಾರತೀಯ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳಿಂದ ಕುವೆಂಪು ಅವರ ಚಂದ್ರಹಾಸ ನಾಟಕ ಮತ್ತು ಕಾಲೇಜು ವಿದ್ಯಾರ್ಥಿಗಳಿಂದ ನಾಟಕಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ನವರಾತ್ರಿ ರಂಗೋತ್ಸವದ ಈ ಸಂದರ್ಭದಲ್ಲಿ ನಾಡಿನ ಖ್ಯಾತ ಸಾಹಿತಿಗಳು ಹಾಗೂ ಚಿತ್ರಕಲಾವಿದರು ಆದ ಶ್ರೀ ಚಂದ್ರಕಾಂತ ಕುಸನೂರು ಅವರ ಅಮೂರ್ತ ಸಂಭ್ರಮ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಹಳೆಯ ಗ್ರಾಮೋಫೋನ್ ಮತ್ತು ರೆಕಾರ್ಡ್ ಪ್ಲೇಟ್ಗಳ ಪ್ರದರ್ಶನವನ್ನು ಸಹ ಆಯೋಜಿಸಲಾಗಿದೆ. ಜೊತೆಗೆ ಎಂದಿನಂತೆ ನಾಡಿನ 9 ಜನ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಗೌರವಿಸಿ, ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು 2018 ಅಕ್ಟೋಬರ್ 10 ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರಾದ ಡಾ. ಜಯಮಾಲ ಅವರು ನೆರವೇರಿಸಲಿದ್ದಾರೆ.
ನವರಾತ್ರಿ ರಂಗೋತ್ಸವ ಮತ್ತು ಸಾಧಕರಿಗೆ ಸನ್ಮಾನ
2018 ಅಕ್ಟೋಬರ್ 10 ರಿಂದ 18
ಶ್ರೀ ಕೊಟ್ರೇಶ ಹಿರೇಮಠಉದ್ಘಾಟನಾ ಸಮಾರಂಭ
ದಿ: 10-10-2018, ಸ್ಥಳ: ಭೂಮಿಗೀತ, ಸಂಜೆ : 6:00 ಕ್ಕೆ
ನಾಟಕೋತ್ಸವ ಉದ್ಘಾಟನೆ
ಶ್ರೀಮತಿ ಜಯಮಾಲಾ
ಸನ್ಮಾನ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಚಿವರು,
ಕರ್ನಾಟಕ ಸರ್ಕಾರ, ಬೆಂಗಳೂರು.
ಮುಖ್ಯ ಅತಿಥಿಗಳು
ಡಾ. ಮೂಡ್ನಾಕೂಡು ಚಿನ್ನಸ್ವಾಮಿ
ಹಿರಿಯ ಕವಿಗಳು, ಚಿಂತಕರು, ಬೆಂಗಳೂರು
ಶ್ರೀ ಎನ್.ಆರ್. ವಿಶುಕುಮಾರ್
ಮಾನ್ಯ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು.
ಅಧ್ಯಕ್ಷತೆ
ಶ್ರೀಮತಿ ಭಾಗೀರಥಿ ಬಾಯಿ
ನಿರ್ದೇಶಕರು, ರಂಗಾಯಣ, ಮೈಸೂರು
ಸರ್ವರಿಗೂ ಆದರದ ಸ್ವಾಗತ
ವಿ.ಎನ್. ಮಲ್ಲಿಕಾರ್ಜುನಸ್ವಾಮಿ
ಜಂಟಿ ನಿರ್ದೇಶಕರು
ರಂಗಾಯಣ, ಮೈಸೂರು
ಎಸ್. ರಾಮನಾಥ
ಸಂತೋಷ್ಕುಮಾರ್ ಕುಸನೂರು
ಸಂಚಾಲಕರು
ನವರಾತ್ರಿ ರಂಗೋತ್ಸವ-2018
10-10-2018

ಶ್ರೀ ಕೊಟ್ರೇಶ ಹಿರೇಮಠ
ಮಾದರಿ ಶಿಕ್ಷಕ
ಚೆಕ್ಮೇಟ್
ರಚನೆ : ಪ್ರಶಾಂತ್ ಕಿರ್ವಾಡ್ಕರ್
ಕನ್ನಡಕ್ಕೆ : ಡಾ. ತಿಪ್ಪೇಸ್ವಾಮಿ
ನಿರ್ದೇಶನ : ಅನೂಪ್ಜೋಶಿ (ಬಂಟಿ)
ರಂಗಾಯಣ ರೆಪರ್ಟರಿ, ಮೈಸೂರು
11-10-2018

ಶ್ರೀ ಮೂರ್ತಿ ದೇರಾಜೆ
ಮಕ್ಕಳ ರಂಗಕರ್ಮಿ
ಇದಿತಾಯಿ
ರಚನೆ: ಮಂಜುನಾಥ ಬೆಳಕೆರೆ
ನಿರ್ದೇಶನ : ಕಾರ್ತಿಕ್ ಎಸ್
ಕಾಲೇಜು : ಅಮೃತ ವಿದ್ಯಾಪೀಠಂ,
ಬೋಗಾದಿ ರಸ್ತೆ, ಮೈಸೂರು
12-10-2018

ಶ್ರೀ ಆಟೋ ರಾಜ
ಅನಾಥರ ಆಶ್ರಯದಾತ
ಮಲಾಲ ಅಲ್ಲಾ
ರಚನೆ: ಬೊಳುವಾರು ಮಹಮದ್ ಕುಂಞಿ
ನಿರ್ದೇಶನ : ಮೈಮ್ ರಮೇಶ್
ಕಾಲೇಜು: ಎನ್.ಐ.ಇ. ಕಾಲೇಜು, ಮೈಸೂರು
13-10-2018

ಶ್ರೀಮತಿ ಕವಿತಾ ಉಮಾಶಂಕರ್ ಮಿಶ್ರಾ
ತೋಟಗಾರಿಕೆಯ ಶ್ರೀಗಂಧ
14-10-2018
ಅಗ್ನಿ ಮತ್ತು ಮಳೆ
ರಚನೆ: ಗಿರೀಶ್ ಕಾರ್ನಾಡ್
ನಿರ್ದೇಶನ : ಅಮಿತ್ ಜೆ ರೆಡ್ಡಿ
ಕಾಲೇಜು: ಮಹಾರಾಜ ಕಾಲೇಜು, ಮೈಸೂರು
14-10-2018

ಶ್ರೀ ಜಿ.ಕೆ. ರತ್ನಾಕರ
ಗುಡ್ಡಗಾಡಿನ ವಿದ್ಯುಜ್ಜನಕ
ಚಂದ್ರಹಾಸ
ರಚನೆ : ಕುವೆಂಪು
ಸಂಗೀತ ಮತ್ತು ನಿರ್ದೇಶನ : ದಿಗ್ವಿಜಯ
ತಂಡ: ಭಾರತೀಯ ರಂಗಶಿಕ್ಷಣ ಕೇಂದ್ರ,
ರಂಗಾಯಣ, ಮೈಸೂರು
15-10-2018

ಶ್ರೀಮತಿ ರಾಜಮ್ಮ
ಪೋಸ್ಟ್ಮಾರ್ಟಂ ಪ್ರವೀಣೆ
ಸೋರುತಿಹುದು ಸಂಬಂಧ
ರಚನೆ: ಮಹಾಂತೇಶ್ ರಾಮದುರ್ಗ
ಶ್ರೀ ಪ್ರವೀಣ್ ಬೆಳ್ಳಿ
ಬದರಿ ಪ್ರಸಾದ್ ಜಿ ಪದವಿ ಪೂರ್ವ ಕಾಲೇಜು, ಮೈಸೂರು
16-10-2018

ಶ್ರೀ ಶೇಖ್ ಹಬೀಬ್ ಉಲ್ ಹಕ್
ದೃಷ್ಠಿ ಹೀನತೆ ಮೀರಿದ ದರ್ಶನ ಸಾಧಕ
ಪುಂಟಿಲಾ
ರಚನೆ : ಬರ್ಟೋಲ್ಟ್ ಬ್ರೆಕ್ಟ್
ನಿರ್ದೇಶನ : ಆಶಿಷ್ ಪಾಠಕ್
ಸಂಚಾರಿ ರಂಗಘಟಕ (ಮಿನಿ ರೆಪರ್ಟರಿ),
ರಂಗಾಯಣ, ಮೈಸೂರು
17-10-2018

ಶ್ರೀಮತಿ ಬಿ.ಎಸ್. ಮಂಜುಳಮ್ಮ
ದಣಿವರಿಯದ ರಂಗನಟಿ
ಇಲಿ ಮಡಕೆ
ಮೂಲ: ಟಿ.ಕೆ. ದಯಾನಂದ್
ರಚನೆ : ಯತೀಶ್ ಎನ್ ಕೊಳ್ಳೇಗಾಲ
ನಿರ್ದೇಶನ : ಜೀವನ್ಕುಮಾರ್ ಬಿ ಹೆಗ್ಗೋಡು
ಕಾಲೇಜು: ಜೆ.ಎಸ್.ಎಸ್. ಪದವಿ ಕಾಲೇಜು,
ಊಟಿ ರಸ್ತೆ, ಮೈಸೂರು
18-10-2018

ಶ್ರೀಮತಿ ಚಂದಮ್ಮ ಗೋಳಾ
ಕೆರೆಗೆ ಮರುಜೀವ ನೀಡಿದ ದಿಟ್ಟೆ
ರೆಕ್ಸ್ ಅವರ್ಸ್
ಡೈನೋ ಏಕಾಂಗಿ ಪಯಣ
ಪಪೆಟ್ ತಯಾರಿಕೆ ಮತ್ತು ನಿರ್ದೇಶನ : ಶ್ರವಣಕುಮಾರ್
ಪಪೆಟ್ ತಯಾರಿಕೆ ಸಹಾಯ :ಗಗನ್ಕುಮಾರ್, ಸಮರ್ಥ ಪಿ.ಎಂ
ತಂಡ: ಸಂಚಾರಿ ರಂಗಘಟಕ, ರಂಗಾಯಣ, ಮೈಸೂರು
ಸರ್ವರಿಗೂ ಆದರದ ಸ್ವಾಗತ
ಗೀತಾ ಎಂ.ಎಸ್, ಎಸ್. ರಾಮು, ಪ್ರಶಾಂತ್ ಹಿರೇಮಠ
ಸಂಚಾಲಕರು, ಸನ್ಮಾನ ಸಮಿತಿ, ನವರಾತ್ರಿ ರಂಗೋತ್ಸವ-2018