ಭಾಗೀರಥಿ ಬಾಯಿ ಕದಂ

ಶ್ರೀಮತಿ ಭಾಗೀರಥಿ ಬಾಯಿ ಕದಂ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಗಾವಡಗೆರೆಯಲ್ಲಿ 1963 ರಲ್ಲಿ ಜನಿಸಿದರು.

ಅವರು ಕರ್ನಾಟಕದ ನೀನಾಸಂನಿಂದ ಡ್ರಮಾಟಿಕ್ಸ್‍ನಿಂದ ಡಿಪೆÇ್ಲಮಾ ಪಡೆದರು. ಅವರು ನಟನೆಯಲ್ಲಿ ವಿಶೇಷವಾಗಿ ಪರಿಣತಿಯೊಡನೆ ನವದೆಹಲಿಯ ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾದಿಂದ ಪದವಿ ಪಡೆದರು.

1991-92 ರಲ್ಲಿ ಮಹಿಳಾ ಪಾತ್ರದ ಏಕ ಅಭಿನಯದ ಅಂದರೆ ಶಕುಂತಲಾ, ಗಾಂಧಾರಿ ಮತ್ತು ಮಲ್ಲಿಕಾ ಪಾತ್ರಾಭಿನಯದ ಯೋಜನೆಯಲ್ಲಿ ಎನ್‍ಎಸ್‍ಡಿ ಯಿಂದ ಫೆಲೋಶಿಪ್ ಪಡೆದರು. ಅವರು 1986-87 ಮತ್ತು 1990-91 ರಲ್ಲಿ ನೀನಾಸಂ ರೆಪರ್ಟರಿ (ಸಂಚಾರಿ ರಂಗಭೂಮಿ) ಯಲ್ಲಿ ನಟಿಸಿದರು.

ಅವರು ಕನ್ನಡ, ಅಸ್ಸಾಮಿ, ಹಿಂದಿ ಮತ್ತು ಇಂಗ್ಲಿಷ್ ಮುಂತಾದ ವಿವಿಧ ಭಾಷೆಗಳಲ್ಲಿ 65 ಕ್ಕಿಂತ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಅವುಗಳ ಪೈಕಿ ಪ್ರಮುಖವೆಂದರೆ, ನಳ ದಮಯಂತಿ, ಮಿಸ್ ಜೂಲಿ, ಟ್ವೆಲ್ಫ್ತ್ ನೈಟ್, ಸೊಹ್ರಾಬ್ ರುಸ್ತುಂ, ಶಾಂತತಾ ಕೋರ್ಟ್ ಚಾಲೂ ಅಹೆ, ಹ್ಯಾಮ್ಲೆಟ್, ದ ಫಾದರ್, ಅಂತರ್ ಯಾತ್ರ, ಜಾತ್ರಾ, ಆಷಾಡ್ ಕಾ ಏಕ್ ದಿನ್, ಅಪೇಕ್ಷಾ, ಸೀ ಗಲ್, ಮಧ್ಯವರ್ತಿನ್, ಕಮಲಾ ದೇವಿ ಚಟ್ಟೋಪಾಧ್ಯಾಯ ಇತ್ಯಾದಿ.
1992-93 ರಲ್ಲಿ ಅವರು ಲಂಡನ್‍ನ ‘ತಾರಾ ಆರ್ಟ್’ ಸಂಸ್ಥೆ ಸೇರಿ ‘ಹೀರ್ ರಾಂಝಾ’ ನಾಟಕದ ಪ್ರದರ್ಶನವನ್ನು ಇಂಗ್ಲೆಂಡ್ ಹಾಗೂ ಜಪಾನಿನಲ್ಲಿ ಮಾಡಿರುತ್ತಾರೆ.

ಅಸ್ಸಾಮ್‍ನ ಗುವಾಹತಿಯ ಸೀಗಲ್ ಥಿಯೇಟರ್ ಅಕ್ಯಾಡೆಮಿಯ ಪ್ರಾಂಶುಪಾಲರಾಗಿ 1995 ರಿಂದ 2016 ರ ವರೆಗೆ ಕರ್ತವ್ಯ ನಿರ್ವಹಿಸಿದ್ದಾರೆ.

ಅವರು ಅನೇಕ ನಾಟಕಗಳನ್ನು ವಿನ್ಯಾಸಗೊಳಿಸಿದ್ದಾರೆ ಮತ್ತು ನಿರ್ದೇಶಿಸಿದ್ದಾರೆ-ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮಿ, ಅಂತಿಗೊನೆ, ತುಘಲಕ್, ಸರಸಮ್ಮನ ಸಮಾಧಿ, ಸಾಂಬಶಿವ ಪ್ರಹಸನ, ಪುಂಟಿಲಾ ಮತ್ತು ಅವನ ಮನುಷ್ಯ ಮಟ್ಟಿ, ಕಮಾಲಾದೇವಿ ಚಟ್ಟೋಪಾಧ್ಯಾಯ, ದ ಲೆಸನ್, ಜೂಲಿಯಸ್ ಸೀಸರ್, ಲೆಹರೋನ್ ಕೆ ರಾಜಹನ್ಸ, ಆಷಾಢ್ ಕೇ ಏಕ್ ದಿನ ಇತ್ಯಾದಿ.

 

ಅವರು ಪಿಂಜೊರಾರ್ ವಿದ್ಯಾಲಯ್, ರೋಜಾ, ಗೀತ್ ಗಾತೆ ಗಾತೆ, ಮಿಲನ್ ಮಾಲಾ, ಭೂತೋರ್ ಕೋಟ್, ಕಿನ್ನರ ಯೋಗಿ ಮುಂತಾದವನ್ನು ಮಕ್ಕಳಿಗಾಗಿ ನಿರ್ದೇಶಿಸಿದ್ದಾರೆ.

ಅವರು ಭಾರತ ಸರ್ಕಾರದ ವಿಶೇಷ ಚೇತನ ಮಕ್ಕಳೊಡನೆ ಕೆಲಸ ಮಾಡಿದ್ದಕ್ಕಾಗಿ ಕಿರಿಯ ಮತ್ತು ಹಿರಿಯ ಫೆಲೋಶಿಪ್ ಸ್ವೀಕರಿಸಿದರು ಮತ್ತು ವಿಶೇಷ ಚೇತನ ಮಕ್ಕಳಿಗಾಗಿ ಕೋಲ ಕೌರಿರ್ ಗಾನ್, ಬುದ್ಧುರಾಮ್, ಆಲಿಬಾಬ ಚಾಲೀಸ್ ಚೋರ್, ಬೋಬಾರ್ ಸಂತಾನ್, ಗಿಲ್ಹೇರಿ ರಾಮಾಯಣ ಮುಂತಾದ ನಾಟಕಗಳನ್ನು ನಿರ್ದೇಶಿಸಿದರು.

ಅವರು ಕನ್ನಡದಿಂದ ಅಸ್ಸಾಮಿ ಭಾಷೆಗೆ ಕೆಲವು ನಾಟಕಗಳನ್ನು ಮತ್ತು ಲೇಖನಗಳನ್ನು ಅನುವಾದಿಸಿದರು-ಪಿಂಜಾರ ವಿದ್ಯಾಲಯ, ಶಕುಂತಲೆಯೊಂದಿಗೆ ಒಂದು ಅಪರಾಹ್ನ, ಹೆಡ್ಡಾಯಣ, ಸಾಂಬಶಿವ ಪ್ರಹಸನ, ಮೂಕನ ಮಕ್ಕಳು, ಕಿಂದರ ಜೋಗಿ, ತದ್ರೂಪಿ, ಜೊತೆಗಿರುವನು ಚಂದಿರ, ಕನಕದಾಸ ಅಧ್ಯಯನ ಕೇಂದ್ರದ ವತಿಯಿಂದ ಸಂತ ಕನಕದಾಸ ಮತ್ತು ಕುವೆಂಪು ಭಾಷಾ ಭಾರತಿ ಕೇಂದ್ರದ ವತಿಯಿಂದ ಕುವೆಂಪು ಅವರ ಐದು ಪ್ರಬಂಧಗಳನ್ನು ಅನುವಾದಿಸಿದ್ದಾರೆ.

ಅವರು ಅಸ್ಸಾಮಿ ಭಾಶೆಯಿಂದ ಕನ್ನಡಕ್ಕೆ ಜಾತ್ರಾ, ಮಧ್ಯಬರ್ತಿನಿ ಮುಂತಾದ ನಾಟಕಗಳನ್ನು ಅನುವಾದ ಮಾಡಿದ್ದಾರೆ.

ಅವರು ಅನೇಕ ಕನ್ನಡ, ಅಸ್ಸಾಮಿ ಮತ್ತು ಹಿಂದಿ ಭಾಷೆಯ ಅನೇಕ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಅವರು 44 ನೇ ರಾಷ್ಟ್ರೀಯ ಚಲನಚಿತ್ರೋತ್ಸವ 1997 ರಲ್ಲಿ ಅಸ್ಸಾಮಿ ಚಲನಚಿತ್ರ ಅಡಾಜ್ಯ ದಲ್ಲಿ ಅಭಿನಯಕ್ಕಾಗಿ ವಿಶೇಷ ಜ್ಯೂರಿ ಮೆನ್ಷನ್ ಅನ್ನು ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸಿದರು.

ಅವರು ಭಾರತೀಯ ರಂಗಭೂಮಿಗೆ 2007 ರಲ್ಲಿ ಅವರ ಕೊಡುಗೆಗಾಗಿ ಕರ್ನಾಟಕ ಸರ್ಕಾರದಿಂದ ಸ್ವರ್ಣ ಜಯಂತಿ ಪ್ರಶಸ್ತಿ 2015 ಅನ್ನು ಸ್ವೀಕರಿಸಿದರು.

ಅವರು ಕರ್ನಾmಕ ಸರ್ಕಾರದಿಂದ 2016 ರಲ್ಲಿ ‘ಅಗಾಸಿ ಪಾರ್ಲರ್’ ಚಲನಚಿತ್ರಕ್ಕಾಗಿ ಬೆಂಬಲ ಪಾತ್ರದಲ್ಲಿ ಶ್ರೇಷ್ಟ ಅಭಿನೇತ್ರಿ ಪ್ರಶಸ್ತಿಯನ್ನು ಸ್ವೀಕರಿಸಿದರು.

ಅವರು ‘ರೋಡೋರ್ ಚಿಟ್ಟಿ.’ ಚಲನಚಿತ್ರಕ್ಕಾಗಿ ಶ್ರೇಷ್ಟ ಅಭಿನೇತ್ರಿ ಪ್ರಶಸ್ತಿಯನ್ನು ಲೋನಾವಲ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 2016 ರಲ್ಲಿ ಸ್ವೀಕರಿಸಿದರು.