ರಂಗಾಯಣದ ನಿರ್ದೇಶಕರು

ಶ್ರೀ ಅಡ್ಡಂಡ ಸಿ. ಕಾರ್ಯಪ್ಪ

ಕರ್ನಾಟಕ ಸರ್ಕಾರದ ಪ್ರತಿಷ್ಠಿತ ರಂಗಸಂಸ್ಥೆಯಾಗಿರುವ ರಂಗಾಯಣ ಮೈಸೂರಿನ ನಿರ್ದೇಶಕರಾಗಿರುವ ಶ್ರೀ ಅಡ್ಡಂಡ ಸಿ ಕಾರ್ಯಪ್ಪ ದಕ್ಷಿಣದ ಕಾಶ್ಮೀರ ಎಂದೇ ಹೆಸರುವಾಸಿಯಾದ ಕೊಡಗು ಜಿಲ್ಲೆಯವರು. ಅಡ್ಡಂಡ ಚೆಂಗಪ್ಪ ಮತ್ತು ಅಡ್ಡಂಡ ತಂಗಮ್ಮ ರವರ ಪುತ್ರರಾದ ಶ್ರೀ ಕಾರ್ಯಪ್ಪ ನವರು ಹುಟ್ಟಿದ್ದು 1961 ರಲ್ಲಿ ಬಾಲ್ಯದಿಂದಲೂ ರಂಗಭೂಮಿ ಹಾಗೂ ಸಾಹಿತ್ಯದ ಬಗ್ಗೆ ತೀವ್ರವಾದ ಒಲವು ಬೆಳೆಸಿಕೊಂಡಿದ್ದ ಶ್ರೀ ಕಾರ್ಯಪ್ಪನವರು ತಮ್ಮ ಬಿ.ಎ. ಪದವಿಯ ನಂತರ ನೀನಾಸಂ ರಂಗಶಿಕ್ಷಣದಲ್ಲಿ ರಂಗಭೂಮಿ ಕುರಿತಂತೆ ತರಬೇತಿ ಪಡೆದು ಸುಮಾರು ಹತ್ತು ವರ್ಷಗಳ ಕಾಲ ಸೃಷ್ಠಿ ಕೊಡವ ರಂಗ ಎಂಬ ತಮ್ಮದೇ ಒಂದು ರೆಪರ್ಟರಿ ರಂಗತಂಡವನ್ನು ಕಟ್ಟಿ ಕೊಡವ ಮತ್ತು ಕನ್ನಡ ಭಾಷೆಯಲ್ಲಿ ನಾಡಿನಾದ್ಯಂತ ನಾಟಕ ಪ್ರದರ್ಶನಗಳನ್ನು ನೀಡಿದವರು. ಮ್ಯಾಕ್‌ಬೆತ್, ಹ್ಯಾಮ್ಲೆಟ್, ಕಿಂಗ್‌ಲಿಯರ್, ಈಡಿಪಸ್, ದಂಗೆ ಮುಂಚಿನ ದಿನಗಳು, ಅರುಂಧತಿ ಆಲಾಪ, ತಬರನ ಕಥೆ ಮುಂತಾದ 20ಕ್ಕೂ ಹೆಚ್ಚು ಕನ್ನಡ ನಾಟಕಗಳನ್ನು ನಿರ್ದೇಶಿಸಿರುವ ಶ್ರೀ ಕಾರ್ಯಪ್ಪನವರು ಸುಮಾರು 20 ಕ್ಕೂ ಹೆಚ್ಚು ಕೊಡವ ನಾಟಕಗಳು, ಮಕ್ಕಳ ನಾಟಕಗಳು ಮತ್ತು ಬೀದಿನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ.

> ಹೆಚ್ಚಿನ ವಿವರಗಳಿಗಾಗಿ

ರಂಗಾಯಣದ ಹಿಂದಿನ ನಿರ್ದೇಶಕರು

ಶ್ರೀಮತಿ ಭಾಗಿರಥಿ ಬಾಯಿ

2017-2019

ಹೆಚ್. ಜನಾರ್ಧನ (ಜನ್ನಿ)
2013- 2016
ಶ್ರೀ ರಾಜಾರಾಮ್
2011 – 2013
ಶ್ರೀ ಲಿಂಗದೇವರು ಹಳೆಮನೆ
2009 – 2010
ಶ್ರೀಮತಿ ಬಿ. ಜಯಶ್ರೀ
2008 – 2009
ಶ್ರೀ ಚಿದಂಬರರಾವ್ ಜಂಬೆ
2004 – 2008
ಶ್ರೀ ಪ್ರಸನ್ನ
2002 – 2004

 

ಶ್ರೀ ಬಸವಲಿಂಗಯ್ಯ
1997 – 2002