ಚೆಕ್‌ಮೇಟ್ – Checkmate

ನಿರ್ದೇಶನ : ಶ್ರೀ ಅನೂಪ್ ಜೋಶಿ (ಬಂಟಿ)
ಮರಾಠಿ ಮೂಲ : ಯೋಗೇಶ್ ಸೋಮನ್
ಹಿಂದಿ ರೂಪಾಂತರ : ಪ್ರಶಾಂತ್ ಕಿರ್‌ವಾಡ್ಕರ್
ಕನ್ನಡ ಭಾಷಾಂತರ : ಡಾ. ತಿಪ್ಪೇಸ್ವಾಮಿ
ವಿನ್ಯಾಸ : ಹೆಚ್.ಕೆ. ದ್ವಾರಕಾನಾಥ್
ಸಂಗೀತ : ಶ್ರೀನಿವಾಸ ಭಟ್ (ಚೀನಿ)

ನಾಟಕದ ಸಾರಂಶ :

ಭಾರತದ ಆಧುನಿಕ ರಂಗಭೂಮಿಯ ಸಂದರ್ಭದಲ್ಲಿ ಮರಾಠಿ ರಂಗಭೂಮಿಯ ನಾಟಕಗಳು, ಅವುಗಳ ವಸ್ತು ವಿಷಯಕ್ಕೆ ಸಂಬಂಧಿಸಿದಂತೆ, ಇಡೀ ದೇಶದಲ್ಲೇ ತನ್ನದೇ ಆದ ಛಾಪನ್ನು ಮೂಡಿಸಿದೆ. ಪೌರಾಣಿಕ, ಐತಿಹಾಸಿಕ, ರಾಜಕೀಯ, ಸಾಮಾಜಿಕ, ಸಾಂಸಾರಿಕ… ವಿಭಿನ್ನ ವಸ್ತು ವಿಷಯಗಳನ್ನು ಕುರಿತು ನಾಟಕಗಳು, ಮರಾಠಿ ಸಾಹಿತ್ಯದಲ್ಲಿ ವಿಪುಲವಾಗಿದ್ದು, ಅಲ್ಲಿನ ವೃತ್ತಿ ರಂಗಭೂಮಿ, ಹವ್ಯಾಸಿ ರಂಗಭೂಮಿಗಳು ಈ ನಾಟಕಗಳನ್ನು ಯಶಸ್ವಿಯಾಗಿ ಪ್ರದರ್ಶಿಸುತ್ತಾ ಜನಮನ್ನಣೆ ಗಳಿಸಿವೆ. ಈ ಹಿನ್ನೆಲೆಯಲ್ಲಿ ಪತ್ತೇದಾರಿ ಪ್ರಕಾರವು ಮರಾಠಿ ನಾಟಕಕಾರರ ಬರವಣಿಗೆಯಿಂದ ಹೊರತಾಗಿಲ್ಲ. ಮರಾಠಿ ನಾಟಕಗಳು, ಈಗಾಗಲೇ ಕನ್ನಡಕ್ಕೆ ರೂಪಾಂತರಗೊಂಡು ಯಶಸ್ವಿಯಾಗಿ ಪ್ರದರ್ಶನ ಕಂಡಿರುವುದಾದರೂ ಪತ್ತೇದಾರಿ ನಾಟಕವೊಂದು ಕನ್ನಡಕ್ಕೆ ಬರುತ್ತಿರುವುದು ಬಹುಶಃ ಇದೇ ಮೊದಲು.

ಪ್ರಸ್ತುತ ಚೆಕ್‌ಮೇಟ್ Behind every great fortune there lies a crime ಎನ್ನುವ ಮಾತನ್ನು ಆಧರಿಸಿದೆ. ದಂಪತಿಗಳು ಬದುಕಿನ ಏಕತಾನತೆಯ ಲಯದಿಂದ ಬಿಡುಗಡೆಗೊಂಡು ಥ್ರಿಲ್, ಕಿಕ್, ಪಾಶ್, ಜೀವನದ ಬೆನ್ನು ಹತ್ತಿ ಕೊಲೆ ಮತ್ತು ಲಕ್ಷಾಂತರ ರೂಪಾಯಿಗಳನ್ನು ಲಪಟಾಯಿಸಿ, ಭೋಗಜೀವನದ ಬಾಗಿಲಿನ ಕೊನೆಯ ಮೆಟ್ಟಿಲಲ್ಲಿ ನಿಂತಿರುವ ಹೊತ್ತಿನಲ್ಲಿ ಈ ನಾಟಕ ಪ್ರಾರಂಭವಾಗಿ, ಅತ್ಯಂತ ಎಚ್ಚರಿಕೆಯಿಂದ, ಅಸಾಧ್ಯ ಬುದ್ಧಿವಂತಿಕೆಯಿಂದ ಬಯಲಿಗೆಳೆಯುತ್ತದೆ. ಪೋಲೀಸ್ ಇಲಾಖೆ ತನ್ನ ಕರ್ತವ್ಯ ಪ್ರಜ್ಞೆ ಸಾಮರ್ಥ್ಯದ ಬಗ್ಗೆ ಮಂದಿಗೆ ಹೇಳಿ ಹೆಮ್ಮೆ ಪಡಬಹುದಾದಂತಹ ನಾಟಕವಿದು.

ಪ್ರತಿ ಅಂಕ, ಪ್ರತಿ ದೃಶ್ಯ, ಪ್ರತಿ ಮಾತು, ಪ್ರತಿ ಚಲನೆಯನ್ನೂ ಈ ನಾಟಕದಲ್ಲಿ ಅತ್ಯಂತ ಎಚ್ಚರಿಕೆಯಿಂದ ಹೆಣೆಯಲಾಗಿದೆ. ಪ್ರಸ್ತುತ ಸಮಾಜದಲ್ಲಿ ಕಾನೂನು ಕಟ್ಟಲೆಗಳನ್ನು ಮೀರಿ ದುರಾಸೆಯನ್ನು ಹತ್ತಿಕ್ಕಲಾಗದೆ ಅಪರಾಧಿಗಳಾಗಿ ತಲೆಯೆತ್ತಿ ನಡೆಯಲು ಬಯಸುವ ಮಂದಿಗೇನೂ ಕೊರತೆಯಿಲ್ಲ. ಇಂಥಹ ಮಂದಿಯ ನೆತ್ತಿಯ ಮೇಲೆ ಪೋಲೀಸ್ ಇಲಾಖೆಯ ಹದ್ದಿನ ಕಣ್ಣು ಸದಾ ಜಾಗೃತವಾಗಿರುತ್ತದೆ ಎಂಬುದನ್ನು ಮನದಟ್ಟು ಮಾಡಿಕೊಡುವ ನಾಟಕ ಚೆಕ್‌ಮೇಟ್.

Direction : Anoop Joshi
Original Script (Marathi) : Yogesh Soman
Hindi Translation : Prashanth Khirwadkar
Kannada Translation: Dr. Tippeswamy
Design : H.K. Dwarakanath
Music : Shrinivas Bhat (Cheeni)

ABOUT THE PLAY :

The original Marathi play ‘Checkmate’ is based on the say ‘Behind every great fortune there lies a crime’. The couple Nachiketh and Nandini frustrated out of mundane life falls behind life full of kick, thrill and poshness. During this course the couple lies, loot and kill, in order to obtain the desired wealth.

The police lay trap that out beats the cunningness of the wrong doers and bring them to the books. Every act, every scene and each dialogue of Checkmate is very carefully woven to show how people unshamefully live, violating laws without an iota of guilt.

The series of nail biting scenes eventually leads to establish that the criminals wouldn’t go unpunished.

ನಿರ್ದೇಶಕರ ಬಗ್ಗೆ :

ಶ್ರೀ ಅನೂಪ್ ಜೋಶಿ (ಬಂಟಿ)
ರಂಗನಿರ್ದೇಶಕರಾದ ಶ್ರೀ ಅನೂಪ್ ಜೋಶಿ (ಬಂಟಿ) ಮಧ್ಯಪ್ರದೇಶದ ಭೋಪಾಲ್ ಪಟ್ಟಣದವರು. ೧೯೮೩ ರಿಂದ ೧೯೮೬ರ ವರೆಗೆ ಭೋಪಾಲ್ ಪಟ್ಟಣದ ಹವ್ಯಾಸಿ ರಂಗತಂಡಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಇವರು ೧೯೮೬ ರಿಂದ ಮಧ್ಯಪ್ರದೇಶದ ಪ್ರತಿಷ್ಠಿತ ಸಾಂಸ್ಕೃತಿಕ ಸಂಸ್ಥೆಯಾದ ಶ್ರೀ ಬಿ.ವಿ. ಕಾರಂತರು ಸ್ಥಾಪಿಸಿದ ಭಾರತ್ ಭವನ್‌ದ ’ರಂಗಮಂಡಲ್’ ನಲ್ಲಿ ಕಲಾವಿದರಾಗಿ ೨೦೦೧ ರ ವರೆಗೆ ಸೇವೆಸಲ್ಲಿಸಿದ್ದಾರೆ. ಶ್ರೀ ಬಿ.ವಿ. ಕಾರಂತ, ಬ್ಯಾರಿ ಜಾನ್, ಅಲಕ್‌ನಂದನ್, ಬನ್ಸಿಕೌಲ್, ಪ್ರಿಟ್ಜ್ ಬೆನವಿಟ್ಜ್, ಜಾನ್ ಮಾರ್ಟಿನ್, ರುದ್ರಪ್ರಸಾದ್ ಸೇನ್ ಗುಪ್ತ, ಹಬೀಬ್ ತನ್ವೀರ್, ಬಿ.ಎಂ. ಶಾ, ವಿಭಾ ಮಿಶ್ರ ಮುಂತಾದ ಖ್ಯಾತನಾಮರ ನಾಟಕಗಳಲ್ಲಿ ದುಡಿದಿರುವ ಅನೂಪ್ ಜೋಷಿ ರಂಗಮಂಡಲ್‌ನ ಘಾಸೀರಾಂ ಕೊತ್ವಾಲ್, ದೋ ಕಸ್ತಿಯೋಂಕಾ ಸವಾರ್ (ಸರ್ವೆಂ ಆಫ್ ಟೂ ಮಾಸ್ಟರ್‍ಸ್), ಮಾಲವಿಕಾಗ್ನಿ ಮಿತ್ರ, ಮಹಾನಿರ್ವಾಣ್, ಹಯವದನ, ಸ್ಕಂದಗುಪ್ತ, ಪೈಸೆ ಫೇಕ್ ತಮಾಶಾ ದೇಖ್ (ತ್ರೀ ಪೆನ್ನಿ ಒಪೆರಾ), ಇನ್ಸಾಫ್ ಕ ಘೇರಾ (ಕಕೇಶಿಯನ್ ಚಾಕ್‌ಸರ್ಕಲ್), ಅಂಧಯುಗ, ಓಲಿಸ್‌ಮೆ ಪ್ರಕಟ್ ಕೃಪಾಲ್ ದೀನದಯಾಲ, ಶಾಕುಂತಲಾ ಕಿ ಅಂಗೂಟಿ, ಶಸ್ತ್ರ ಸಂತಾನ್, ಪರಿಂದೋಕಿ ಸಭಾ (ಕಾನ್ಫರೆನ್ಸ್ ಆಫ್ ದಿ ಬರ್ಡ್ಸ್), ಸೀಡಿಯಾನ್, ಜನಮೇಜಯ ಕ ನಾಗಯಜ್ಞ, ಯಹೂದಿ ಕಿ ಲಡಕಿ, ತುಮ್ ಸಾದತ್ ಹಸನ್ ಮಾಂಟೋ ಹೋ, ಸರಾಯ್ ಕೆ ಮಾಲ್ಕಿನ್, ದಲ್‌ದಲ್, ಬಲಿ ಕಿ ಬಕರಾ, ಅಲಿಬಾಬಾ, ಬೀಬಿಯೋನ್ ಕ ಮದರಸಾ, ಮಿಸ್ಟರ್ ತಪಸ್, ದುಹಾಯಿ ಲುಕ್‌ಮನ್ (ಮಾಕ್‌ಡಾಕ್ಟರ್), ತೊ ಸಮ್ ಪುರುಷ್ ನ ಮೌಸಮ್ ನಾರಿ (ಟೇಮಿಂಗ್ ಆಫ್ ದಿ ಶ್ರೂ), ಚಂದಾ ಬೇಡ್ನಿ, ಕಂಜೂಸ್, ದ್ರೌಪದಿ, ಮೋಚಿ ಕಿ ಅನೂ ಬೀವಿ, ಗರಮ್‌ಕೋಟ್, ಮುದ್ರಾ ರಾಕ್ಷಸ್, ಉನ್ಕೆ ಹಿಸ್ಸೆ ಕ ಪ್ರೇಮ್‌ಗಳಲ್ಲಿ ಅಭಿನಯಿಸಿದ್ದಾರೆ. ಮುಖವಾಡ ತಯಾರಿಕೆ, ಬೆಳಕು ವಿನ್ಯಾಸ, ರಂಗಸಜ್ಜಿಕೆ, ಸಂಗೀತ ಎಲ್ಲಾ ವಿಭಾಗಗಳಲ್ಲೂ ಸೃಜನಶೀಲರಾಗಿ ದುಡಿದಿರುವ ಇವರು ೨೦೦೧ ರಿಂದ ನಾಟಕ ನಿರ್ದೇಶನದಲ್ಲಿ ಆಸಕ್ತಿಹೊಂದಿ ಹಲವಾರು ಯಶಸ್ವೀ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಇವರು ನಿರ್ದೇಶಿಸಿದ ಸಬ್‌ಕಿಗೋಲಿ, ಕಾಶ್ಮೀರ್, ಚಾರ್‌ಟಾಂಗೆ, ನಾಟಕಗಳು ದೇಶದ ಪ್ರಮುಖ ನಗರಗಳಲ್ಲಿ ಪ್ರದರ್ಶನಗೊಂಡಿವೆ. ಚಲನಚಿತ್ರ, ದೂರದರ್ಶನ ಮಾಧ್ಯಮಗಳಲ್ಲೂ ಆಸಕ್ತಿಹೊಂದಿರುವ ಇವರು ಹಲವಾರು ಸಾಕ್ಷ್ಯಚಿತ್ರ ಮತ್ತು ಕಥಾ ಚಿತ್ರಗಳಲ್ಲೂಊ ದುಡಿದಿದ್ದಾರೆ. ಪ್ರಸ್ತುತ ರಂಗಾಯಣಕ್ಕಾಗಿ ಮೂಲ ಮರಾಠಿ ನಾಟಕಗಳಾದ ಸ್ವಾತಂತ್ರ್ಯ ಸೂರು ಮತ್ತು ಚೆಕ್‌ಮೇಟ್ ನಾಟಕಗಳನ್ನು ನಿರ್ದೇಶಿಸಿದ್ದಾರೆ.

ABOUT THE DIRECTOR:

ANOOP JOSHI (BUNTY)
Anoop Joshi ws born in 1968 in Bhopal, Madhya Pradwh, a science graduate, Anoop Joshi has worked in amateur theatre groups of Bhopal from 1983 to 1986. From 1986 to 2001 he has worked with Rang Mandal ( Theatre Repertory) Bharath Bhavan as an actor and Backstage artist. During this period he acted in moe than 25 plays which include Ghasiram Kotwal, Do Kashtiyo Ka Sawar (Servant of Two Masters), Malavikagnimitra, Mahanirvan, Hayavadan, Skhandgupt, Paisa phek Tamash Dekh (Three Penny Opera), Insaf Ka Ghera (Cockkeshian Chal Circle), Andhayug, Olis Main Efigenia (Efigenia in Olis), Try Ki Aurate (Trojen Women), Agmemnon, Shakuntala, Football, Bhaya Prakat Kripala Dindyala, Shakuntala Ki Angoothi, Shastra Santaan, Prindo Ki Sabha (Conference of the Birds), Seediyan, Janmejaya ka Naagyagya, Yahoodi ki Ladki, Tum Saadat Hasan Manto Ho, Saray ki Malkin, Dldal, Bali ka Bakara, Alibaba, Biblyon ka Madarasa, Mr. Tapas, Duhai Lukman (Mock Doctor), to sam purush Na Mou Sam Nari (Taming of the Shrew), Chanda Bedni, Kanjoos, Draupade Mochi ki Anookhi Bivi, Garam kot, Mudra Rakshas, Unke Hisse ka Prem etc.

At present as free-lance artest has directed a number of plays which includes Such Ki Goli, Kashmir, Chaar Taange, Mukti Doot, Savaal aur Swapna, Chandamama ki Jai, Arth Dosh, Monalisa ki Muskan, Arakthkshan, Swatantra Suri.

During his theatre career he participated in many workshops both on backstage and acting conducted under the expert guidance of B.V. Karanth, Beri John, Alakhnandan, Bansi Kaul, Fritz Benevitz, John Martin, Rudraprasad Sen Gupta, Haviv Tanveer, B.M. Shah, M.K. Raina, George Lavada, Sankhya Evotombi, Sudhir Kulkarni, Rakesh Bidua, Ram Prasad Mishra, Vibha Mishra, Juvan Manjualve,etc.
Apart from theatre he has worked fom many documentary and feature films of reknowned film directors like Maniratnam, Vishal Bharadwaj, Sudhir Mishra, Kukoo Kohli, etc.

ರಂಗದ ಮೇಲೆ :

ನಚಿಕೇತ : ಹುಲಗಪ್ಪ ಕಟ್ಟೀಮನಿ
ನಂದಿನಿ : ಗೀತಾ ಮೋಂಟಡ್ಕ
ಸತ್ಯಶೀಲ ಸತ್ಯ : ಪ್ರಶಾಂತ ಹಿರೇಮಠ

ON STAGE:

Nachiketa : Hulugappa Kattimani
Nandini : Geetha Montadka
Sathysheela Sathya : Prashanth Hiremath

ರಂಗದ ಹಿಂದೆ :

ಬೆಳಕು : ಮಹೇಶ್ ಕಲ್ಲತ್ತಿ
ರಂಗಸಜ್ಜಿಕೆ, ಪರಿಕರ, ಪ್ರಸಾಧನ : ಪುಟ್ಟಣ್ಣ, ಪ್ರಶಾಂತ ಹಿರೇಮಠ, ಹುಲಗಪ್ಪ ಕಟ್ಟೀಮನಿ
ವಸ್ತ್ರಾಲಂಕಾರ : ಗೀತಾ ಮೋಂಟಡ್ಕ
ರಂಗನಿರ್ವಹಣೆ : ಎಸ್.ರಾಮನಾಥ

BACK STAGE:

Lights : Mahesh Kallatti
Sets, Properties, Makeup : Puttanna, Hulugappa Kattimani, Prashanth Hiremath
Costume : Geetha Montadka
Stage Manager : S.Ramanatha