ಚಿರೇಬಂದಿ ವಾಡೆ – CHIREBANDI WADE

ಮರಾಠಿ ಮೂಲ : ಮಹೇಶ್ ಎಲ್‌ಕುಂಚ್‌ವಾರ್
ಕನ್ನಡಕ್ಕೆ : ಮಾರುತಿ ಶಾನಭಾಗ್
ಸಂಗೀತ : ಶ್ರೀನಿವಾಸ್ ಭಟ್
ವಿನ್ಯಾಸ : ಹೆಚ್.ಕೆ. ದ್ವಾರಕಾನಾಥ್
ನಿರ್ದೇಶನ : ಪ್ರಮೀಳಾ ಬೆಂಗ್ರೆ

ನಾಟಕದ ಸಾರಂಶ :

ಧರಣ ಗಾಂವಕರ್ ದೇಶಪಾಂಡೆ ಮನೆತನ ವಿದರ್ಭದಲ್ಲಿಯ ಒಂದು ಸಣ್ಣ ಹಳ್ಳಿಯಲ್ಲಿನ ದೊಡ್ಡ ಮನೆತನ. ಈ ವರೆಗೆ ಮನೆ ನಡೆಸುತ್ತಾ ಬಂದಿದ್ದ ಮನೆ ಹಿರಿಯ ವೆಂಕಟೇಶನ ( ತಾತ್ಯಾ’ ಎಂದು ನಾಟಕದುದ್ದಕ್ಕೂ ಕರೆಯಲ್ಪಡುವ, ರಂಗದ ಮೇಲೆ ಒಮ್ಮೆಯೂ ಕಾಣಿಸಿಕೊಳ್ಳದೇ, ನಾಟಕದುದ್ದಕ್ಕೂ ತನ್ನ ಅಸ್ತಿತ್ವವನ್ನು ತೋರುತ್ತ , ಅಗೋಚರ ಪ್ರಭಾವವನ್ನು ಬೀರುತ್ತಲೇ ಇರುವ ಪಾತ್ರ.) ಸಾವಿನೊಂದಿಗೆ ನಾಟಕ ಪ್ರಾರಂಭವಾಗುತ್ತದೆ. ಈ ಸಾವಿನ ದಿನಕರ್ಮ- ಕ್ರಿಯಾವಿಧಿಗಳ ಎಂಟುದಿನಗಳ ಸಮಯ ಮಾತ್ರ ನಾಟಕದ ಕಾಲ. ಈ ಎಂಟು ದಿನಗಳ ಸಮಯದಲ್ಲಿಯೇ ನಮ್ಮೆದುರು ಅನಾವರಣಗೊಳ್ಳುವ ಸಂಬಂಧ ಸೂಕ್ಷ್ಮಗಳು, ಒಳಬಿಗಿಗಳು, ಪಟ್ಟು ಬೇಗುದಿಗಳು ನಾಟಕವನ್ನು ಸ್ವಾಭಾವಿಕವಾಗಿಯೇ ಅತ್ಯಂತ ಸಂಕೀರ್ಣವಾಗಿಸಿವೆ. ಹಳ್ಳಿಗಳಿಂದ ಮಕ್ಕಳನ್ನು ನೌಕರಿಯ ಆಮಿಷವನ್ನೊಡ್ಡಿ ತಮ್ಮತ್ತ ಸೆಳೆಯುವ ನಗರಗಳು; ಹಳ್ಳಿಗಳಿಂದ ಭದ್ರತೆಯನ್ನೋ, ಐಷಾರಾಮಿಯನ್ನೋ ಬಯಸಿ ಹೊರಹೊರಟವರು ಇತ್ತ ಹಳ್ಳಿಗೆ ಹೊರಗಿನವರೇ ಆಗಿಬಿಟ್ಟು, ಅತ್ತ ನಗರಕ್ಕೂ ಸೇರದೇ ಮಧ್ಯದಲ್ಲಿ ಎಲ್ಲೋ ಉಳಿದು ತಮ್ಮ ಅಸ್ತಿತ್ವವನ್ನು ಕಳೆದುಕೊಂಡು ನಲುಗುವ ಪರಿ ಬೆಚ್ಚಿಸುತ್ತದೆ.

ಆಸ್ತಿ ಯಾವುದು..? ಬಂಗಾರ ಎಂದರೇನು..? ಸಂತತಿ ಎಂದರೇನು..? ಸಂಬಂಧಗಳ ಸ್ವರೂಪವೇನು..? ಪರಂಪರೆ ಯಾವುದು..? ಎಂಬಂತಹ ಅನೇಕ ತಾತ್ವಿಕ ಪ್ರಶ್ನೆಗಳು ನಾಟಕದಲ್ಲಿ ನಿಷ್ಕರ್ಷೆಗೆ ಒಳಗೊಳ್ಳುವ ಗಳಿಗೆಗಳನ್ನು ಎಲ್‌ಕುಂಚ್‌ವಾರ್ ಅತ್ಯಂತ ಕಲಾತ್ಮಕವಾಗಿ ನಿರ್ವಹಿಸಿ ಕಲಾವಿದನ ಸೂಕ್ಷ್ಮಜ್ಞತೆಯನ್ನು ಮೆರೆದಿದ್ದಾರೆ. ಇಲ್ಲಿ ಕಾಣಸಿಗುವ ಪ್ರತಿ ಪಾತ್ರವೂ ನಾವು ಕಂಡ ನಮ್ಮ ಸುತ್ತಲಿನ ಬದುಕಿನ ಸ್ಥಿತಿಗಳ, ನಾವು ಕಳೆದುಕೊಳ್ಳುತ್ತಿರುವ ನಮ್ಮ ಹಿರಿಯರು ಬದುಕಿದ ಘನತೆವೆತ್ತ ವಿನ್ಯಾಸಗಳ, ಮೌಲ್ಯಗಳ, ಅಷ್ಟೇ ಅಲ್ಲದೇ, ನಾವು ಹೊಸದಾಗಿ ಪಡೆದುಕೊಳ್ಳುತ್ತಿರುವ ಬದುಕಿ ಮುಗಿಸಲೇಬೇಕಾದ ಅನಿವಾರ್‍ಯ, ಅಸಮಂಜಸ, ಅತಾರ್ಕಿಕ, ಅಸಂಗತ ರೀತಿಗಳ ಸಂಕೇತಗಳಾಗಿಬಿಡುತ್ತವೆ. ಹಾಳು ಬಿದ್ದಿರುವ ಮತ್ತೂ ಹಾಳಾಗುತ್ತಲೇ ಹೋಗುವ ವಾಡೆ, ಬಲಹೀನ ವ್ಯವಸ್ಥೆಯನ್ನು ಧ್ವನಿಸಿದರೆ, ಬಂಗಾರ, ನಿಜದಬದುಕಿನ ನಿಜಮೌಲ್ಯವನ್ನು ಬೇರೆ ಬೇರೆ ಅರ್ಥಗಳಲ್ಲಿ ಹಿಡಿದಿಡುತ್ತದೆ.

Original Marathi Play : Mahesh Elkunchwar
Kannada Translation : Maruti Shanbhag
Music : Shreenivas Bhat
Design : H.K. Dwarakanath
Direction : Prameela Bengre

ABOUT THE PLAY

‘Dharan Gaonkar Deshapande’ family is a huge family in a small village of Vidarbha. The play opens with the death of Venkatesha or Tatya – so called by his children, the head of the family. The happenings of the play stretches over eight days after the death. In these eight days the intricacies and the tightness of the relationships in a family opens up in front of us very artistically. Rural population migrating to cities in search of livelihood, security and luxury finally end up neither belonging to the rural past nor the urban present. The picturisation of these realities astonishes us.

Elkunchwar questions one about the real wealth, gold, siblings, relationships, heritage, in a very artistic way and proves himself a sensitive artist. The characters that we see here are from the context of our life around, the dignified compositions of our elders past living that we have lost, of the values and also become the symbols of inevitable, abstract, absurd, illogical, disproportionate living which we are acquiring newly. The Wada, which is shattered already and is still falling apart, becomes a symbol of poor system and gold symbolizes true values of true living are discussed in different levels in the play.

ರಂಗದ ಮೇಲೆ :

ಅಜ್ಜಿ : ನಂದಿನಿ. ಕೆ.ಆರ್.
ತಾಯಿ : ಪ್ರಮೀಳಾ ಬೇಂಗ್ರೆ
ಅತ್ತಿಗೆ : ಸರೋಜ ಹೆಗಡೆ
ಪ್ರಭಾ : ಶಶಿಕಲಾ ಬಿ.ಎನ್.
ರಂಜೂ : ಮೀನಾಕ್ಷಿ
ಚಂದೂ : ನೂರ್ ಅಹಮ್ಮದ್ ಶೇಖ್
ಭಾಸ್ಕರ : ಪ್ರಶಾಂತ್ ಹಿರೇಮಠ್
ಸುಧೀರ : ಹುಲಗಪ್ಪ ಕಟ್ಟೀಮನಿ
ಅಚಿಜಲಿ : ಗೀತಾ ಎಂ.ಎಸ್.
ಪರಾಗ : ಬಸವರಾಜ್ ಕಾಂಬ್ಳೆ

ರಂಗದ ಹಿಂದೆ :

ರಂಗಸಜ್ಜಿಕೆ : ಗೀತಾ ಎಂ.ಎಸ್., ನಂದಿನಿ ಕೆ.ಆರ್., ಜನಾರ್ಧನ್
ಬೆಳಕು ನಿರ್ವಹಣೆ : ಮಹೇಶ್ ಕಲ್ಲತ್ತಿ
ವಸ್ತ್ರಗಳು : ಹುಲಗಪ್ಪ ಕಟ್ಟೀಮನಿ
ಬಡಗಿ : ಜನಾರ್ಧನ
ರಂಗ ಪರಿಕರ : ಸರೋಜ ಹೆಗಡೆ, ಬಸವರಾಜ್ ಕಾಂಬ್ಳೆ
ಪ್ರಸಾಧನ : ನೂರ್ ಅಹಮ್ಮದ್ ಶೇಖ್
ಪರಿಚಯ ಪತ್ರ : ಪ್ರಶಾಂತ್ ಹಿರೇಮಠ್
ಸಂಗೀತ ಸಾಂಗತ್ಯ: ಅಂಜುಸಿಂಗ್
ರಂಗ ನಿರ್ವಹಣೆ : ಶಶಿಕಲಾ ಬಿ.ಎನ್

ON THE STAGE :

Ajji : Nandini.K.R.
Mother : Pramila Bengre
Attige : Saroja Hegde
Prabha : Shashikala. B.N.
Ranju : Meenakshi
Chandu : Noor Ahmed Shaikh
Bhaskara : Prashanth Hiremath
Sudheera : Hulugappa Kattimani
Anjali : Geetha M.S.
Paraga : Basavaraj Kamble

BEHIND THE STAGE :

Sets : Geetha M.S., Nandini K.R., Janardhan
Lighting Design : Mahesh Kallatti
Costume Designing : Hulugappa Kattimani
Props : Saroja Hegde, Basavaraj Kamble
Makeup : Noor Ahmed Shaikh
Boucher : Prashanth Hiremath
Stage Management : Shashikala B.N.
Direction : Prameela Bengre