ಚಿತರ್ಪಟ ರಾಮಾಯಣ

Date 19-01-2016 | 3.30 PM | Bhoomigeetha | Language : Kannada | Chitrapata Ramayana | Playwright : H S Venkateshamurthy | Design & Direction : Manjunath L Badiger | Music : Gajanana Hegade

ನಾಟಕದ ಬಗ್ಗೆ:
ಡಾ. ಎಚ್ ಎಸ್ ವೆಂಕಟೇಶಮೂತಿರ್ಯವರ ನಾಟಕ “ಚಿತರ್ಪಟ ರಾಮಾಯಣ”, ವಾಲ್ಮೀಕಿ ರಾಮಾಯಣದ ಕತೆಯಲ್ಲ. ಇದೊಂದು
ಜಾನಪದೀಯ ರಾಮಾಯಣ. ಹೆಳವನಕಟೆಟ್ ಗಿರಿಯಮಮ್ನ ಕಾವ್ಯವೊಂದರಲ್ಲಿ ಇದರ ಕೆಲವು ಮೂಲರೇಖೆಗಳಿವೆ. ಎಲ್ಲಮ್ಮ ದೇವಿಯ
ಭಕ್ತರಾದ ಭೂತೆಯರು, ಚಿತ್ರಪಟಗಳನ್ನು ತೋರಿಸಿ, ಜಾನಪದ ಶೈಲಿಯ ನೃತ್ಯ-ಗೀತೆಗಳ ಮೂಲಕ ಕತೆಯನ್ನು ಪ್ರದರ್ಶಿಸುವ
ಶೈಲಿಯನ್ನು ಈ ನಾಟಕದಲ್ಲಿ ಲೇಖಕರು ಅಳವಡಿಸಿಕೊಂಡಿದ್ದಾರೆ.

ಪರ್ಸುತ್ತತ್ತ ನಾಟಕ, ಅಯೋಧ್ಯೆಯಲ್ಲಿ ರಾಮ ಪಟಾಟ್ಭಿಷೇಕದ ನಂತರದ ಒಂದು ಕಾಲ್ಪನಿಕ ಸನ್ನಿವೇಶವನ್ನು
ಚಿತ್ರಿಸುತ್ತದೆ. ಇಲ್ಲಿ ಸೀತೆಯ ಅಂತಃಪುರದಲ್ಲಿ, ಚಂದ್ರನಖಿಯ ಕುಟಿಲತೆಯಿಂದ ರಾವಣ ಕಾಣಿಸಿಕೊಳ್ಳುತ್ತಾನೆ. ಅವನು ಅಲ್ಲಿ ಹೇಗೆ ಕಾಣಿಸಿಕೊಂಡ?,
ಈ ಚಂದ್ರನಖಿ ಯಾರು?, ರಾಮ ರಾವಣರ ನಡುವೆ ಮತ್ತೆ ಯುದ್ದ ನಡೆಯುತ್ತದೆಯೇ?… ಇವೇ ಮುಂತಾದ ಪ್ರಶ್ನೆಗಳನ್ನು ಈ ಪ್ರಯೋಗ ರಂಗದ ಮೇಲೆ ಬಿಡಿಸುತ್ತಾ
ಹೋಗುತ್ತದೆ.

“ಕತ್ತಲ ಹರಿಸಿ ಬೆಳಕ ತೋರಿಸೋದಾ ಕಥೀ ಗುರಿ ಆಗ್ತದಾ…..”

ಸ್ತ್ರೀಯರ ಮೇಲೆ ಪರ್ತಿದಿನ ನಡೆಯುವ ಅತ್ಯಾಚಾರದ ಹಿನ್ನೆಲೆಯಲ್ಲಿ, ಪುರುಷನನ್ನು ಸ್ತ್ರೀ ನೋಡುವ ದೃಷ್ಟಿ, ಸ್ತ್ರೀಯನ್ನು ಪುರುಷ
ನೋಡಬೇಕಾದ ದೃಷ್ಟಿ, ಸ್ತ್ರೀ ಅಭಿವ್ಯಕ್ತಿ ಸ್ವಾತಂತ್ಯ್ರ ಮತ್ತು ಎಲ್ಲಕಿಂತ ಹೆಚ್ಚಾಗಿ ತಾಯಿ ಮತ್ತು ಮಗುವಿನ
ಸಂಬಧವನ್ನು ಅವಲೋಕಿಸುವ ಹಾಗೆ ಈ ರಂಗಕೃತಿ ಪ್ರೇಕ್ಷಕನನ್ನು ಪ್ರೇರೇಪಿಸುತ್ತದೆ.

ಈ ನಾಟಕದ ಪ್ರಯೋಗದಲ್ಲಿ ಅಭಿನಯದ ಹೊಸ ಸಾಧ್ಯತೆಗಳ ಬಗ್ಗೆ ಹುಡುಕಾಟ ನಡೆಸಲಾಗಿದೆ. ಭಾಷೆ ಹಾಗೂ ಸಾಂಪರ್ದಾಯಿಕ
ಕಲೆಗಳ ಮೂಲಕ ಸತ್ವಶಾಲಿ ಕಾವ್ಯಾತ್ಮಕ ಅಭಿನಯದ ಅಭಿವ್ಯಕ್ತಿ ಸಾಧ್ಯವೇ ಎಂಬುದೇ ನಮ್ಮ ಪಯತ್ನವಾಗಿದೆ.

ಲೇಖಕರ ಬಗ್ಗೆ:
ಡಾ. ಎಚ್ ಎಸ್ ವೆಂಕಟೇಶಮೂರ್ತಿಯವರು ಕವಿಗಳಾಗಿ ಮತ್ತು ನಾಟಕಕಾರರಾಗಿ ನಾಡಿಗೆ ಹೆಚ್ಚು ಪರಿಚಿತರು. ಇದುವರೆಗೆ
ಇವರ ಹದಿನೈದಕ್ಕಿಂತಲೂ ಹೆಚ್ಚಿನ ಕವನ ಸಂಕಲನಗಳು ಪ್ರಕಟವಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಣೆಯಾಗಿದೆ.
ಇವರು ಬರೆದಿರುವ ಪ್ರಮುಖ ನಾಟಕಗಳು, ’ಅಳಿಲು ರಾಮಾಯಣ’, ’ಹೂವಿ’, ’ಸುಣ್ಣದ ಸುತ್ತು’,
’ಕಂಸಾಯಣ’, ’ಕುಣಿ ಕುಣಿ ನವಿಲೆ’, ’ಅಗ್ನಿವರ್ಣ’, ’ಊರ್ಮಿಳೆ’, ’ಉರಿಯ ಉಯ್ಯಾಲೆ’, ’ಆಹತ’ ಇತ್ಯಾದಿ.
ಮಕ್ಕಳ ಸಾಹಿತ್ಯಕ್ಕಾಗಿ ಇವರು ನೀಡಿರುವ ಕೊಡುಗೆಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರ
ಮತ್ತು’ಕುಮಾರವ್ಯಾಸ ಕಥಾಂಥರ’ ಕೃತಿಗೆ ವಿ.ಎಂ.ಇನಾಂದಾರ್ ಸ್ಮಾರಕ ಪ್ರಶಸ್ತಿಯಿಂದ ಇವರು ಪುರಸ್ಕೃತರಾಗಿದ್ದಾರೆ.

ನಿರ್ದೇಶಕರ ಬಗ್ಗೆ:
ಮಂಜುನಾಥ್ ಎಲ್ ಬಡಿಗೇರ ಇವರು ನೀನಾಸಂ ರಂಗಶಿಕ್ಷಣ ಕೇಂದ್ರದ ಪದವೀಧರರಾಗಿದ್ದು, ತಿರುಗಾಟದಲ್ಲಿ
ನಟರಾಗಿ, ನಿರ್ದೇಶಕರಾಗಿ ದುಡಿದಿದ್ದಾರೆ. ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಶಾಸ್ತ್ರೀಯವಾಗಿ ಯಕ್ಷಗಾನವನ್ನು ಅಭ್ಯಾಸ
ಮಾಡಿರುವ ಇವರು ರಾಮನಗರದ ಜಾನಪದ ಲೋಕದಲ್ಲಿ ಜಾನಪದ ಡಿಪ್ಲೊಮಾ ಮಾಡಿರುತ್ತಾರೆ. ಪ್ರಸ್ತುತ
ಬೆಂಗಳೂರಿನ ಸಮಷ್ಟಿ ತಂಡದಲ್ಲಿ ನಟರಾಗಿ, ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದುವರೆಗೆ ಇವರು
ಹರಿಣಾಭಿಸರಣ, ಮಿಸ್. ಸದಾರಮೆ, ಬೊಮ್ಮನಹಳ್ಳಿಯ ಕಿಂದರಿ ಜೋಗಿ, ಕಥನ, ಸಾಫಲ್ಯ, ಪರಿತ್ಯಕ್ತ, ಸತ್ಯಾಗ್ರಹ, ಕೈದಿ,
ಸಾಂಬಶಿವ ಪ್ರಹಸನ, ಚಿತ್ರಪಟ ರಾಮಾಯಣ, ದಶಾನನ ಸ್ವಪ್ನ ಸಿದ್ಧಿ, ಸೀತಾ ಸ್ವಯಂವರ,
ಪ್ರಮೀಳಾರ್ಜುನೀಯಂ, ಚಿರಕುಮಾರ ಸಭಾ, ವಿಶಾಕೇ, ಮುಂತಾದ ನಾಟಕಗಳನ್ನು ನಿರ್ದೇಶಿಸಿದ್ದಾರೆ.

ಸಹ ನಿರ್ದೇಶಕರ ಬಗ್ಗೆ:
ಶ್ವೇತಾ ಎಸ್, ಇವರು ನೀನಾಸಂ ಪದವೀಧರರಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ರಂಗಭೂಮಿ, ಯಕ್ಷಗಾನ, ಚಲನಚಿತ್ರ ಹೀಗೇ
ಹಲವಾರು ಕ್ಷೇತ್ರದಲ್ಲಿ ತೊಡಗಿಸಿಕೊಂಡು ಓಡಿಸ್ಸಿ ನೃತ್ಯಾಭ್ಯಾಸ ಮಾಡುತ್ತಿದ್ದಾರೆ. ಪ್ರಸ್ತುತ
ಪ್ರಯೋಗದಲ್ಲಿ ಸಹನಿರ್ದೇಶಕರಾಗಿ, ಜೊತೆಗೆ ನಟನೆ ಮತ್ತು ವಸ್ತ್ರವಿನ್ಯಾಸವನ್ನು ಮಾಡಿರುತ್ತಾರೆ.

ತಂಡದ ಬಗ್ಗೆ :
ಸಮಷ್ಟಿ ತಂಡವು ೨೦೦೦ ದಲ್ಲಿ ಹುಟ್ಟಿಕೊಂಡ ತಂಡ. ಹೊಸ ಪ್ರತಿಭೆಗಳನ್ನು ಹುಡುಕಿ ಅವರಲ್ಲಿ ರಂಗಾಸಕ್ತಿಯನ್ನು
ಬೆಳೆಸುವುದು ಇದರ ಉದ್ದೇಶ.
ಈವರೆಗೆ ನಮ್ಮ ತಂಡವು ’ಆ?ಡದ ಒಂದು ದಿನ’, ’ಸಾಂಬಶಿವ ಪ್ರಹಸನ’, ’ಮೃಚ್ಛಕಟಿಕ’, ’ಹದ್ದು ಮೀರಿದ
ಹಾದಿ’,’ಅಲೆಗಳಲ್ಲಿ ರಾಜಹಂಸಗಳು’, ’ಹರಿಣಾಭಿಸರಣ’, ’ಕಥನ’, ’ಮಿಸ್. ಸದಾರಮೆ’ ‘ಕಥೆ ಹೇಳತೀವಿ’
’ಸಾಫಲ್ಯ’, ’ಅವಾಂತರ’, ’ಶಾಂಡಿಲ್ಯ ಪ್ರಹಸನ’ ’ನಾಯೀಕತೆ’, ’ಪ್ರಮೀಳಾರ್ಜುನೀಯಂ’, ’ಚಿರಕುಮಾರ ಸಭಾ’,
’ವಿಶಾಕೇ’ ಮುಂತಾದ ನಾಟಕಗಳನ್ನು ಯಶಸ್ವಿಯಾಗಿ ರಂಗಕ್ಕೆ ತಂದಿದೆ. ಇದಲ್ಲದೇ ನೀನಾಸಂನ ’ಪ್ರಯಾಣ’ ತಂಡದ
’ಕರ್ಣಾದರ್ಶ’ ಮತ್ತು ’ಕೊಳಲು ಭೂಮಿಗೀತ’ ಹಾಗೂ ’ಜನಮನದಾಟ’ ತಂಡದ ’ರಹಸ್ಯ ವಿಶ್ವ ಮತ್ತು ತಬರನ ಕಥೆ’,
’ಬಾಬಾ ಸಾಹೇಬ್ ಅಂಬೇಡ್ಕರ್’ ’ಸೂರ್ಯನ ಕುದುರೆ’ ನಾಟಕಗಳ ಪ್ರದರ್ಶನಗಳನ್ನು ಆಯೋಜಿಸಿರುತ್ತದೆ.
ಸದಸ್ಯರ ಸಾಹಿತ್ಯಾಸಕ್ತಿಯನ್ನು ಹೆಚ್ಚಿಸಲು ಪ್ರತೀ ವಾರ ಸಾಹಿತ್ಯ ಸಂಜೆ ಕಾರ್ಯಕ್ರಮವನ್ನೂ ನಡೆಸಿಕೊಂಡು ಬರುತ್ತಿದೆ.