ಹಸಿದ ಕಲ್ಲುಗಳು

ನಿರ್ದೇಶನ ಮತ್ತು ಸಂಗೀತ : ಹೈಸ್ನಾಂ ತೋಂಬಾ | ಬೆಳಕು : ಮಂಜು ಕೊಡಗು | ಅನುವಾದ : ಎಸ್. ರಾಮನಾಥ ರಂಗಾಯಣ | ಮೂಲ : ರವಿಂದ್ರನಾಥ ಠಾಗೂರ್ | ದಿನಾಂಕ : 17 ಮೇ 2015 

ನಾಟಕದ ಬಗ್ಗೆ

ನಿಜಾಮರ ಪ್ರತಿನಿಧಿಯಾದ ಟ್ಯಾಕ್ಸ್ ಕಲೆಕ್ಟರ್ ಒಮ್ಮೆ ಹಳೆಯ ಮತ್ತು ಶಿಥಿಲ ಅರಮನೆಯೊಂದರಲ್ಲಿ ಕಾವಲುಗಾರನ ಎಚ್ಚರಿಕೆಯನ್ನು ಧಿಕ್ಕರಿಸಿ ಅಲ್ಲೇ ಉಳಿಯಲು ನಿರ್ಧರಿಸುತ್ತಾನೆ. ಅಲ್ಲಿಯ ವಾಸ್ತುಶಿಲ್ಪದ ಮೋಡಿಗೊಳಗಾಗಿ, ಅರೇಬಿಯನ್ ನೈಟ್ಸ್‌ನ ಪರ್ಶಿಯನ್ ಕನ್ಯೆಯರನ್ನು ತಮಾಷೆಗೆಂದು ನೆನಪಿಸಿಕೊಳ್ಳುತ್ತಲೇ ತನ್ನ ಕಲ್ಪನಾ ಲೋಕದಲ್ಲಿ ನಿಜವೆನ್ನುವಂತೆ ಬೆರೆತು ಹೋಗುತ್ತಾನೆ. ಅಲ್ಲಿನ ಸ್ತ್ರೀರೂಪಿ ಕಲ್ಲಿನ ಪ್ರತಿಮೆಗಳು ರಾತ್ರಿಯಾಗುತ್ತಿದ್ದಂತೆ ಜೀವ ತಳೆದು ಮಾಯಾಂಗನೆಯರಂತಾಗಿ ಅವನನ್ನು ಉನ್ಮತ್ತತೆಯಲ್ಲಿ ಮುಳುಗಿಸುತ್ತವೆ. ರಂಜನೆಯ ನೆಪದಲ್ಲಿ ಒಂದೊಂದು ಸ್ತ್ರೀರೂಪಿ ಪ್ರತಿಮೆಯು ಒಂದೊಂದು ಯಾತನಾಮಯ ಅನುಭವಗಳನ್ನು ಹಂಚಿಕೊಳ್ಳುತ್ತಾ, ಸಹಿಸಲಾಗದ ತಮ್ಮ ಹೆಣ್ಣು ಜೀವದ ನೋವುಗಳನ್ನು ಬಿಚ್ಚಿಡುತ್ತ, ಗಂಡಸಿನ ಕಲ್ಪನಾಲೋಕದಲ್ಲಿ ನಿರ್ಮಾಣಗೊಂಡ ತಮ್ಮ ನಿಜ ಜಗತ್ತಿನ ಕರಾಳತೆಯನ್ನು ಕಾಣಿಸುತ್ತಾ ಹೋಗುತ್ತವೆ.

ಪಾತ್ರವರ್ಗ

ಪ್ರತಿಮೆಗಳು : ಅಕ್ಷತಾ ಆರ್, ಬಿಂದು ರಕ್ಷದಿ, ರಾಧಾರಾಣಿ
ಭದ್ರಲೋಕ್ : ಸಿದ್ಧಾರ್ಥ ಮಾಧ್ಯಮಿಕ
ಕರೀಂಖಾನ್ : ಯೋಗೇಶ್ ಮರಿಯಮ್ಮನಳ್ಳಿ
ಮೆಹರ್ ಅಲಿ : ಪಣಪಿಲ ಉಮೇಶ್‌
ಬಾದ್‌ಷಹಾ : ಮೋಹನ್ ಶೇಣಿ
ಕಾಫ್ರಿ : ಸೂರಜ್ ಬಿ.ಆರ್