ಸಿ.ಜಿ.ಕೆ ನೆನಪಿನ ಹವ್ಯಾಸಿ ನಾಟಕೋತ್ಸವ-2017: ಕಾರ್ಯಕ್ರಮಗಳ ವಿವರ
ಭಾರತೀಯ ರಂಗಭೂಮಿಯಲ್ಲಿ ಕನ್ನಡ ಹವ್ಯಾಸಿ ರಂಗಭೂಮಿಯು ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದೆ. ಈವರೆಗೂ ಅನೇಕ ವೈವಿದ್ಯಮಯವಾದ ಸೃಜನಶೀಲ ಪ್ರತಿಭೆಗಳು ಹಾಗೂ ಅನೇಕ ಹವ್ಯಾಸಿ ರಂಗ ತಂಡಗಳು ವಿಶೇಷ ಪ್ರಯೋಗಗಳನ್ನು ನೀಡುತ್ತಾ ಬಂದಿವೆ. ನಾಡಿನಾದ್ಯಂತ ನೂರಾರು ಹವ್ಯಾಸಿ ತಂಡಗಳು ವೈವಿದ್ಯಮಯ ಸಾಂಸ್ಕøತಿಕ ಚಟುವಟಿಕೆಗಳನ್ನು ನಡೆಸುತ್ತಾ ಯುವಜನರು ಸಾಹಿತ್ಯಿಕ, ಸಾಂಸ್ಕøತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರಣಾ ಶಕ್ತಿಯಾಗಿ ಕೆಲಸ ಮಾಡುತ್ತಿವೆ. ಹೊಸ ಹೊಸ ರಂಗ ಪ್ರಯೋಗಗಳನ್ನು ಸಿದ್ಧಪಡಿಸಿ, ಸಾಧ್ಯವಾದಲೆಲ್ಲಾ ಪ್ರದರ್ಶಿಸುತ್ತ ಹವ್ಯಾಸಿ ರಂಗಭೂಮಿಯನ್ನು ಜೀವಂತವಾಗಿಟ್ಟಿವೆ. ಈ ಕಾರಣದಿಂದಾಗಿ ಮೈಸೂರು ರಂಗಾಯಣವು ಅನೇಕ ವರ್ಷಗಳಿಂದ ಹವ್ಯಾಸಿ ನಾಟಕೋತ್ಸವÀವನ್ನು ನಡೆಸುತ್ತ ಬಂದಿದೆ. ನಾಡಿನ ವಿವಿಧ ಜಿಲ್ಲೆಗಳ ಆಸುಪಾಸಿನಲ್ಲಿ ನಡೆಯುತ್ತಿರುವ ವಿನೂತನ ರಂಗ ಸಾಧ್ಯತೆಗಳನ್ನು ಗಮನಿಸುತ್ತ ಹೊಸ ಪ್ರಯತ್ನ ಹಾಗೂ ಪ್ರಯೋಗಗಳನ್ನು ಗುರುತಿಸಿ ಪ್ರೋತ್ಸಾಹಿಸಲು ವೇದಿಕೆಯನ್ನು ನೀಡುವುದೇ ಈ ರಂಗೋತ್ಸವದ ಮೂಲ ಆಶಯವಾಗಿದೆ. ಈ ಬಾರಿಯೂ ಹವ್ಯಾಸಿ ನಾಟಕೋತ್ಸವವನ್ನು ರಂಗಭೂಮಿಯನ್ನು ಜನಪರ ಚಳುವಳಿಯನ್ನಾಗಿ ರೂಪಿಸಿದ ರಂಗಚೇತನ ಪ್ರೊ. ಸಿ.ಜಿ. ಕೃಷ್ಣಸ್ವಾಮಿ (ಸಿ.ಜಿ.ಕೆ) ರವರ ಹೆಸರಿನಲ್ಲಿ ನಡೆಸಲಾಗುತ್ತಿದೆ. 2017 ಮೇ 14 ರಿಂದ ಜೂನ್ 25 ರವರೆಗೆ ಪ್ರತಿ ಭಾನುವಾರಗಳಂದು ನಾಡಿನ ಬೇರೆ ಬೇರೆ ಜಿಲ್ಲೆಗಳ ಹವ್ಯಾಸಿ ತಂಡಗಳು ಸಿ.ಜಿ.ಕೆ ನೆನಪಿನ ಹವ್ಯಾಸಿ ನಾಟಕೋತ್ಸವದಲ್ಲಿ ನಾಟಕಗಳನ್ನು ಪ್ರದರ್ಶಿಸಲಿವೆ. ಹವ್ಯಾಸಿ ನಾಟಕೋತ್ಸವದ ಉದ್ಘಾಟನಾ ಸಮಾರಂಭವನ್ನು 2017 ಮೇ 14 ರಂದು ಸಂಜೆ 6.00ಕ್ಕೆ ಭೂಮಿಗೀತ ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ. ಈ ನಾಟಕೋತ್ಸವದ ಉದ್ಘಾಟನೆಯನ್ನು ಮೈಸೂರಿನ ಹಿರಿಯ ರಂಗಕರ್ಮಿಗಳಾದ ಶ್ರೀಮತಿ ಹರಿಪ್ರಸಾದ್ ರವರು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೈಸೂರಿನ ಹವ್ಯಾಸಿ ರಂಗಕರ್ಮಿಗಳ ವೇದಿಕೆಯ ಅಧ್ಯಕ್ಷರಾದ ಶ್ರೀ ಹೆಚ್.ಎಸ್. ಸುರೇಶ್ ಬಾಬು ರವರು ಆಗಮಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬೆಂಗಳೂರು ಮತ್ತು ಮೈಸೂರು ರಂಗಾಯಣದ ಮಾನ್ಯ ನಿರ್ದೇಶಕರಾದ ಶ್ರೀಮತಿ ಎಂ.ಎಸ್. ಅರ್ಚನಾ ರವರು ಈ ಕಾರ್ಯಕ್ರಮದ ಅಧ್ಯಕ್ಷ್ಯತೆಯನ್ನು ವಹಿಸಲಿದ್ದಾರೆ. ರಂಗಾಯಣದ ಉಪ ನಿರ್ದೇಶಕರಾದ ಶ್ರೀಮತಿ ನಿರ್ಮಲಾ ಮಠಪತಿ ಹಾಗೂ ಹವ್ಯಾಸಿ ನಾಟಕೋತ್ಸವದ ಸಂಚಾಲಕರಾದ ಶ್ರೀ ಅರಸೀಕೆರೆ ಯೋಗಾನಂದರವರು ಉಪಸ್ಥಿತರಿರುವರು.
ಈ ಬಾರಿಯ ಹವ್ಯಾಸಿ ರಂಗೋತ್ಸವದಲ್ಲಿ ಈ ಕೆಳಕಂಡ 7 ನಾಟಕಗಳ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿದೆ
ಕಾರ್ಯಕ್ರಮಗಳ ಪಟ್ಟಿ
14th ಮೇ 2017 ಒಂದಾನೊಂದು ಕಾಲದಲ್ಲಿ
ಒಂದಾನೊಂದು ಕಾಲದಲ್ಲಿ
ರಚನೆ :ಗಿರೀಶ್ ಕಾರ್ನಾಡ್, ಕೃಷ್ಣ ಬಸರೂರು
ನಿರ್ದೇಶನ : ರಾಜಗುರು ಹೊಸಕೋಟಿ
ತಂಡ : ರಂಗಪಯಣ, ಬೆಂಗಳೂರು
21st ಮೇ 2017 ಮುದ್ರಾರಾಕ್ಷಸ
ಮುದ್ರಾರಾಕ್ಷಸ
ರಚನೆ :ವಿಶಾಖದತ್ತ
ಕನ್ನಡಕ್ಕೆ :ಡಾ. ಸಿದ್ದಲಿಂಗಪಟ್ಟಣ ಶೆಟ್ಟಿ
ನಿರ್ದೇಶನ :ವಿದ್ದು ಉಚ್ಛಿಲ್
ತಂಡ : ಸುಮನಸಾ ಕೊಡವೂರು
28th ಮೇ 2017 ಪ್ರಜಾರಾಜ
ಪ್ರಜಾರಾಜ
ರಚನೆ : ಡಾ. ಸುಜಾತ ಅಕ್ಕಿ
ನಿರ್ದೇಶನ : ದಿನೇಶ್ ಚಮ್ಮಾಳಿಗೆ
ತಂಡ : ಪ್ರಜ್ಞಾಟ್ರಸ್ಟ್, ಮೈಸೂರು
04th ಜೂನ್ 2017 ಒಬ್ಬಳು
ಒಬ್ಬಳು
ಮೂಲ : ದಾರಿಯೋಫೋ ಮತ್ತು ಫ್ರಾಂಕೋ ರವರ ‘ಎ ವುಮೆನ್ ಅಲೋನ್’ ನಾಟಕ ಆಧಾರಿತ
ನಿರ್ದೇಶನ : ಡಿ. ಪ್ರಸನ್ನಕುಮಾರ್
ತಂಡ : ಚಾನಲ್ ಥಿಯೇಟರ್, ಪಾಂಡವಪುರ.
11th ಜೂನ್ 2017 ರಮಾಬಾಯಿ ಅಂಬೇಡ್ಕರ್
ರಮಾಬಾಯಿ ಅಂಬೇಡ್ಕರ್
ಮೂಲ: ಡಾ. ಹೆಚ್.ಟಿ. ಪೋತೆ ರವರ ಕಾದಂಬರಿ ‘ರಮಾಯಿ’ ನಾಟಕ ಆಧಾರಿತ
ನಿರ್ದೇಶನ : ಹಿಪ್ಪರಗಿ ಸಿದ್ದರಾಮ
ತಂಡ : ಗಣಕರಂಗ, ಧಾರವಾಡ
18th ಜೂನ್ 2017 ಚಿತ್ರಾ
ಚಿತ್ರಾ
ಮೂಲ : ರವೀಂದ್ರನಾಥ ಟಾಗೋರ್
ಅನುವಾದ : ಸುಧಾ ಆಡುಕಳ
ನಿರ್ದೇಶನ : ಡಾ. ಶ್ರೀಪಾದಭಟ್
ತಂಡ : ನೃತ್ಯ ನಿಕೇತನ, ಉಡುಪಿ
25th ಜೂನ್ 2017 ಬಹುಮುಖಿ
ಬಹುಮುಖಿ
ರಚನೆ : ವಿವೇಕ ಶಾನಭಾಗ
ನಿರ್ದೇಶನ : ಮೇಘ ಸಮೀರ
ತಂಡ : ನಟನ, ಮೈಸೂರು
02nd ಜುಲೈ 2017 ರಕ್ತವರ್ಣೆ
ರಕ್ತವರ್ಣೆ
ರಚನೆ : ಬೇಲೂರು ರಘುನಂದನ್
ವಿನ್ಯಾಸ ಮತ್ತು ನಿರ್ದೇಶನ: ದಾಕ್ಷಾಯಿಣಿ ಭಟ್
ತಂಡ : ದೃಶ್ಯರಂಗ ತಂಡ, ಬೆಂಗಳೂರು