ಹವ್ಯಾಸಿ ನಾಟಕೋತ್ಸವ 2016 : ಕಾರ್ಯಕ್ರಮಗಳ ವಿವರ
ಭಾರತೀಯ ರಂಗಭೂಮಿಯಲ್ಲಿ ಕನ್ನಡ ಹವ್ಯಾಸಿ ರಂಗಭೂಮಿಯು ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದೆ. ಈವರೆಗೂ ಅನೇಕ ವೈವಿದ್ಯಮಯವಾದ ಸೃಜನಶೀಲ ಪ್ರತಿಭೆಗಳು ಹಾಗೂ ಪ್ರಯೋಗಗಳನ್ನು ನೀಡಿ, ತನ್ನ ಹಿರಿಮೆಯನ್ನು ಹೆಚ್ಚಿಸಿಕೊಂಡಿದೆ. ಹತ್ತಾರು ಪ್ರಬುದ್ಧ ನಾಟಕಗಳಲ್ಲದೆ ಪ್ರಮುಖ ಕಾದಂಬರಿಗಳು, ಕಥೆಗಳು ರಂಗರೂಪ ತಾಳಿದೆ. ಪ್ರವೃತ್ತಿಗಾಗಿ ರಂಗಕ್ರಿಯೆಯಲ್ಲಿ ತೊಡಗಿಸಿಕೊಂಡ ಅನೇಕ ಪ್ರತಿಭಾವಂತರು ರಂಗಭೂಮಿಯನ್ನೇ ವೃತ್ತಿಯನ್ನಾಗಿಸಿಕೊಂಡು ಹೆಸರಾಂತ ನಾಟಕಕಾರರಾಗಿ, ನಿರ್ದೇಶಕರಾಗಿ, ನಟರಾಗಿ, ತಂತ್ರಜ್ಞರಾಗಿ, ರಂಗಕರ್ಮಿಗಳಾಗಿ ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅನೇಕರು ರಂಗಭೂಮಿಯಿಂದ ಚಲನಚಿತ್ರ ಕ್ಷೇತ್ರಕ್ಕೆ ಪಯಣಿಸಿ ಹೆಸರು ಮಾಡಿದ್ದಾರೆ. ಕನ್ನಡ ಸಂಸ್ಕೃತಿಯ ಪ್ರತಿಪಾದಕನಂತೆ ಹವ್ಯಾಸಿ ರಂಗಭೂಮಿ ಪಾತ್ರವಹಿಸಿದೆ. ಅದರಿಂದಾಗಿ ನಾಡಿನಾದ್ಯಂತ ನೂರಾರು ಹವ್ಯಾಸಿ ತಂಡಗಳು ವೈವಿದ್ಯಮಯ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಾ ಯುವಜನರು ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರಣಾ ಶಕ್ತಿಯಾಗಿ ಕೆಲಸ ಮಾಡಿದೆ. ಇಂದು ಅನೇಕ ಜಿಲ್ಲೆಗಳಲ್ಲಿ, ತಾಲ್ಲೂಕು ಕೇಂದ್ರಗಳಲ್ಲಿ, ಹಳ್ಳಿಗಳಲ್ಲಿ ಸಣ್ಣ ಸಣ್ಣ ಹವ್ಯಾಸಿ ತಂಡಗಳನ್ನು ಕಟ್ಟಿಕೊಂಡು ಸ್ಥಳೀಯ ಸಂಪನ್ಮೂಲದೊಂದಿಗೆ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತ ರಂಗಕ್ರಿಯೆಯಲ್ಲಿ ತೊಡಗಿಸಿಕೊಂಡಿವೆ. ಹೊಸ ಹೊಸ ರಂಗ ಪ್ರಯೋಗಗಳನ್ನು ಸಿದ್ಧಪಡಿಸಿ, ಸಾಧ್ಯವಾದಲೆಲ್ಲಾ ಪ್ರದರ್ಶಿಸುತ್ತ ಹವ್ಯಾಸಿ ರಂಗಭೂಮಿಯನ್ನು ಜೀವಂತಗೊಳಿಸಿದೆ. ಈ ಕಾರಣದಿಂದಾಗಿ ರಂಗಾಯಣ ಮೈಸೂರು ಅನೇಕ ವರ್ಷಗಳಿಂದ ಹವ್ಯಾಸಿ ರಂಗೋತ್ಸವವನ್ನು ನಡೆಸುತ್ತ ಬಂದಿದೆ. ನಾಡಿನ ವಿವಿಧ ಜಿಲ್ಲೆಗಳ ಆಸುಪಾಸಿನಲ್ಲಿ ನಡೆಯುತ್ತಿರುವ ವಿನೂತನ ರಂಗ ಸಾಧ್ಯತೆಗಳನ್ನು ಗಮನಿಸುತ್ತ ಹೊಸ ಪ್ರಯತ್ನ ಹಾಗೂ ಪ್ರಯೋಗಗಳನ್ನು ಗುರುತಿಸಿ ಪ್ರೋತ್ಸಾಹಿಸಲು ವೇದಿಕೆಯನ್ನು ನೀಡಿ, ಕಾರ್ಯ ವಿಸ್ತರಣೆಗೆ ಪ್ರೇರಣೆ ನೀಡುವುದೇ ಈ ರಂಗೋತ್ಸವದ ಮೂಲ ಆಶಯವಾಗಿದೆ. ಈ ಬಾರಿಯ ಹವ್ಯಾಸಿ ರಂಗೋತ್ಸವದಲ್ಲಿ ಈ ಸಾಲಿನಲ್ಲಿ ಕಂಡ ಕ್ರಿಯಾಶೀಲ ತಂಡಗಳು, ಕ್ರಿಯಾಶೀಲ ನಿರ್ದೇಶಕರು, ಹೊಸ ಪ್ರಯೋಗಗಳನ್ನು ಗಮನದಲ್ಲಿಟ್ಟುಕೊಂಡು 2016 ಮೇ 15 ರಿಂದ ಜೂನ್ 19 ರವರೆಗೆ ಪ್ರತಿ ಭಾನುವಾರ ಹವ್ಯಾಸಿ ರಂಗೋತ್ಸವವನ್ನು ರಂಗಾಯಣವು ಹಮ್ಮಿಕೊಂಡಿದೆ. ಈ ಮೂಲಕ ಹವ್ಯಾಸಿ ರಂಗಭೂಮಿ ತನ್ನ ಚಟುವಟಿಕೆಗಳನ್ನು ವಿಸ್ತರಿಸಲೆಂದು ರಂಗಾಯಣ ಹರ್ಷಿಸುತ್ತದೆ. ಈ ಬಾರಿಯ ಹವ್ಯಾಸಿ ರಂಗೋತ್ಸವದಲ್ಲಿ ಈ ಕೆಳಕಂಡ 6 ನಾಟಕಗಳ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮಗಳ ಪಟ್ಟಿ
15th ಮೇ 2015 ದಾರಾಶಿಕೊ
22th ಮೇ 2015 ಉದ್ಧಾರ
29th ಮೇ 2016 ದಲಿತ ಭಾರತ ಕಥನ
4th ಜೂನ್ 2016 ಹಳ್ಳ ಕೊಳ್ಳ ನೀರು ಮತ್ತು ಪಾತ್ರಧಾರಿಣಿ
ಹಳ್ಳ ಕೊಳ್ಳ ನೀರು ಮತ್ತು ಪಾತ್ರಧಾರಿಣಿ
ನಿರ್ದೇಶನ : ಶಿವಾನಂದ ಇಂಗಳೇಶ್ವರ
ತಂಡ : ದಿನಕರ (ದೆಹಲಿ ನಗರ ಕನ್ನಡ ಕಲಾವಿದರ ರಂಗ).
5th ಜೂನ್ 2016 ರಕ್ತರಾತ್ರಿ
ರಕ್ತರಾತ್ರಿ
ನಿರ್ದೇಶನ : ಶಿವಾನಂದ ಇಂಗಳೇಶ್ವರ
ತಂಡ : ದಿನಕರ (ದೆಹಲಿ ನಗರ ಕನ್ನಡ ಕಲಾವಿದರ ರಂಗ).
12th ಜೂನ್ 2016 ಬುದ್ಧ ಪ್ರಬುದ್ಧ
19th ಜೂನ್ 2016 ಅಗ್ನಿ ಔರ್ ಬರ್ಖಾ (ಹಿಂದಿ)
ಅಗ್ನಿ ಔರ್ ಬರ್ಖಾ (ಹಿಂದಿ)
ನಿರ್ದೇಶನ : ರಾಣಿ ಬಲ್ಬೀರ್ ಕೌರ್
ತಂಡ : ಠಾಗೂರ್ ಥಿಯೇಟರ್ ಸೊಸೈಟಿ, ಚಂಡಿಗಢ್