ಸಿ.ಜಿ.ಕೆ ನೆನಪಿನ ಹವ್ಯಾಸಿ ನಾಟಕೋತ್ಸವ-2017

ಭಾರತೀಯ ರಂಗಭೂಮಿಯಲ್ಲಿ ಕನ್ನಡ ಹವ್ಯಾಸಿ ರಂಗಭೂಮಿಯು ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದೆ. ಈವರೆಗೂ ಅನೇಕ ವೈವಿದ್ಯಮಯವಾದ ಸೃಜನಶೀಲ ಪ್ರತಿಭೆಗಳು ಹಾಗೂ ಅನೇಕ ಹವ್ಯಾಸಿ ರಂಗ ತಂಡಗಳು ವಿಶೇಷ ಪ್ರಯೋಗಗಳನ್ನು ನೀಡುತ್ತಾ ಬಂದಿವೆ. ನಾಡಿನಾದ್ಯಂತ ನೂರಾರು ಹವ್ಯಾಸಿ ತಂಡಗಳು ವೈವಿದ್ಯಮಯ ಸಾಂಸ್ಕøತಿಕ ಚಟುವಟಿಕೆಗಳನ್ನು ನಡೆಸುತ್ತಾ ಯುವಜನರು ಸಾಹಿತ್ಯಿಕ, ಸಾಂಸ್ಕøತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರಣಾ ಶಕ್ತಿಯಾಗಿ ಕೆಲಸ ಮಾಡುತ್ತಿವೆ. ಹೊಸ ಹೊಸ ರಂಗ ಪ್ರಯೋಗಗಳನ್ನು ಸಿದ್ಧಪಡಿಸಿ, ಸಾಧ್ಯವಾದಲೆಲ್ಲಾ ಪ್ರದರ್ಶಿಸುತ್ತ ಹವ್ಯಾಸಿ ರಂಗಭೂಮಿಯನ್ನು ಜೀವಂತವಾಗಿಟ್ಟಿವೆ. ಈ ಕಾರಣದಿಂದಾಗಿ ಮೈಸೂರು ರಂಗಾಯಣವು ಅನೇಕ ವರ್ಷಗಳಿಂದ ಹವ್ಯಾಸಿ ನಾಟಕೋತ್ಸವÀವನ್ನು ನಡೆಸುತ್ತ ಬಂದಿದೆ. ನಾಡಿನ ವಿವಿಧ ಜಿಲ್ಲೆಗಳ ಆಸುಪಾಸಿನಲ್ಲಿ ನಡೆಯುತ್ತಿರುವ ವಿನೂತನ ರಂಗ ಸಾಧ್ಯತೆಗಳನ್ನು ಗಮನಿಸುತ್ತ ಹೊಸ ಪ್ರಯತ್ನ ಹಾಗೂ ಪ್ರಯೋಗಗಳನ್ನು ಗುರುತಿಸಿ ಪ್ರೋತ್ಸಾಹಿಸಲು ವೇದಿಕೆಯನ್ನು ನೀಡುವುದೇ ಈ ರಂಗೋತ್ಸವದ ಮೂಲ ಆಶಯವಾಗಿದೆ. ಈ ಬಾರಿಯೂ ಹವ್ಯಾಸಿ ನಾಟಕೋತ್ಸವವನ್ನು ರಂಗಭೂಮಿಯನ್ನು ಜನಪರ ಚಳುವಳಿಯನ್ನಾಗಿ ರೂಪಿಸಿದ ರಂಗಚೇತನ ಪ್ರೊ. ಸಿ.ಜಿ. ಕೃಷ್ಣಸ್ವಾಮಿ (ಸಿ.ಜಿ.ಕೆ) ರವರ ಹೆಸರಿನಲ್ಲಿ ನಡೆಸಲಾಗುತ್ತಿದೆ. 2017 ಮೇ 14 ರಿಂದ ಜೂನ್ 25 ರವರೆಗೆ ಪ್ರತಿ ಭಾನುವಾರಗಳಂದು ನಾಡಿನ ಬೇರೆ ಬೇರೆ ಜಿಲ್ಲೆಗಳ ಹವ್ಯಾಸಿ ತಂಡಗಳು ಸಿ.ಜಿ.ಕೆ ನೆನಪಿನ ಹವ್ಯಾಸಿ ನಾಟಕೋತ್ಸವದಲ್ಲಿ ನಾಟಕಗಳನ್ನು ಪ್ರದರ್ಶಿಸಲಿವೆ. ಹವ್ಯಾಸಿ ನಾಟಕೋತ್ಸವದ ಉದ್ಘಾಟನಾ ಸಮಾರಂಭವನ್ನು 2017 ಮೇ 14 ರಂದು ಸಂಜೆ 6.00ಕ್ಕೆ ಭೂಮಿಗೀತ ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ. ಈ ನಾಟಕೋತ್ಸವದ ಉದ್ಘಾಟನೆಯನ್ನು ಮೈಸೂರಿನ ಹಿರಿಯ ರಂಗಕರ್ಮಿಗಳಾದ ಶ್ರೀಮತಿ ಹರಿಪ್ರಸಾದ್ ರವರು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೈಸೂರಿನ ಹವ್ಯಾಸಿ ರಂಗಕರ್ಮಿಗಳ ವೇದಿಕೆಯ ಅಧ್ಯಕ್ಷರಾದ ಶ್ರೀ ಹೆಚ್.ಎಸ್. ಸುರೇಶ್ ಬಾಬು ರವರು ಆಗಮಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬೆಂಗಳೂರು ಮತ್ತು ಮೈಸೂರು ರಂಗಾಯಣದ ಮಾನ್ಯ ನಿರ್ದೇಶಕರಾದ ಶ್ರೀಮತಿ ಎಂ.ಎಸ್. ಅರ್ಚನಾ ರವರು ಈ ಕಾರ್ಯಕ್ರಮದ ಅಧ್ಯಕ್ಷ್ಯತೆಯನ್ನು ವಹಿಸಲಿದ್ದಾರೆ. ರಂಗಾಯಣದ ಉಪ ನಿರ್ದೇಶಕರಾದ ಶ್ರೀಮತಿ ನಿರ್ಮಲಾ ಮಠಪತಿ ಹಾಗೂ ಹವ್ಯಾಸಿ ನಾಟಕೋತ್ಸವದ ಸಂಚಾಲಕರಾದ ಶ್ರೀ ಅರಸೀಕೆರೆ ಯೋಗಾನಂದರವರು ಉಪಸ್ಥಿತರಿರುವರು.