ರಂಗಾಯಣ ಬೆಳ್ಳಿ ರಂಗಪಯಣ

ರಂಗಾಯಣಕ್ಕೆ ೨೫ವರ್ಷ ತುಂಬಿದ ಹಿನ್ನೆಲೆಯಲ್ಲಿ ಈ ವರ್ಷ ರಂಗಾಯಣ ೨೫ ಬೆಳ್ಳಿ ರಂಗ ಪಯಣ ಉದ್ಘಾಟನಾ ಕಾರ್ಯಕ್ರಮವನ್ನು ದಿನಾಂಕ: ೧೨.೮.೨೦೧೫ ರಂದು ಹಮ್ಮಿಕೊಂಡಿದ್ದು ಇದರ ಉದ್ಘಾಟನೆಯನ್ನು  ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ, ಇವರು ನೆರವೇರಿಸಿಕೊಡಲಿದ್ದಾರೆ. ಸಮಾರಂಭದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಸಚಿವರು ಸೇರಿದಂತೆ ಇತರೆ ಇಲಾಖೆಯ ಮಂತ್ರಿಗಳು, ಶಾಸಕರು, ನಾಡಿನ ಖ್ಯಾತ ಸಾಹಿತಿಗಳು, ರಂಗತಜ್ಞರು ಭಾಗವಹಿಸುವ ನಿರೀಕ್ಷೆಯಿದೆ. ಇದೇ ಸಂದರ್ಭದಲ್ಲಿ ರಂಗಾಯಣದ ಸಂಸ್ಥಾಪಕರಾದ ಶ್ರೀಯುತ ಬಿ.ವಿ.ಕಾರಂತರ ಹೆಸರಿನಲ್ಲಿ ಕರ್ನಾಟಕ ಸರ್ಕಾರ ಈ ವರ್ಷದಿಂದ ಕೊಡಮಾಡುತ್ತಿರುವ ಶ್ರೀ ಬಿ.ವಿ.ಕಾರಂತ ರಂಗ ಪ್ರಶಸ್ತಿ ಪ್ರದಾನ ಸಮಾರಂಭವೂ ರಂಗಾಯಣದಲ್ಲಿ ನಡೆಯಲಿದೆ.

ಈ ಬೆಳ್ಳಿ ರಂಗಪಯಣ ಕಾರ್ಯಕ್ರಮದ ಅಂಗವಾಗಿ ದಿನಾಂಕ ೧೨ ರಿಂದ ೧೬ರ ತನಕ ಬೀದಿನಾಟಕ, ರಂಗಾಯಣದ ರಂಗನಾಟಕಗಳ ಪ್ರದರ್ಶನ, ಮತ್ತು ನಾಡಸಿರಿ ಜಾನಪದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ತಾವುಗಳು ಐದೂ ದಿನವು ನಮ್ಮೊಟ್ಟಿಗೆ ಇದ್ದು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ದಯಮಾಡಿ ಬನ್ನಿ.

12.08.2015 - ಸಂಸ್ಕಾರ

ಸಂಗೀತ-ನಿರ್ದೇಶನ : ಹೆಚ್. ಜನಾರ್ಧನ್ (ಜನ್ನಿ)
ರಂಗರೂಪ – ಸಹ ನಿರ್ದೇಶನ : ಮಾಯಸಂದ್ರ ಕೃಷ್ಣಪ್ರಸಾದ್
ರಂಗ ವಿನ್ಯಾಸ : ಎಚ್.ಕೆ. ದ್ವಾರಕಾನಾಥ್
ರಂಗರೂಪ : ಓ.ಎಲ್. ನಾಗಭೂಷಣ ಸ್ವಾಮಿ

ಟಿಕೆಟ್‌ಗಳಿಗಾಗಿ ರಂಗಾಯಣ ಕಛೇರಿಯನ್ನು ಸಂಪರ್ಕಿಸಿ.  ದೂರವಾಣಿ ಸಂಖ್ಯೆ : 0821-2512639 ಅಥವಾ ಆನ್ಲೈನ್ ಟಿಕೆಟ್‌ಗಾಗಿ  www.bookmyshow.com

ಹೆಚ್ಚಿನ ವಿವರಗಳಿಗಾಗಿ

 

13.08.2015 - ಚೆಕ್ ಮೇಟ್

ನಿರ್ದೇಶನ : ಶ್ರೀ ಅನೂಪ್ ಜೋಶಿ (ಬಂಟಿ)
ಮರಾಠಿ ಮೂಲ : ಯೋಗೇಶ್ ಸೋಮನ್
ಹಿಂದಿ ರೂಪಾಂತರ : ಪ್ರಶಾಂತ್ ಕಿರ್‌ವಾಡ್ಕರ್
ಕನ್ನಡ ಭಾಷಾಂತರ : ಡಾ. ತಿಪ್ಪೇಸ್ವಾಮಿ
ವಿನ್ಯಾಸ : ಹೆಚ್.ಕೆ. ದ್ವಾರಕಾನಾಥ್
ಸಂಗೀತ : ಶ್ರೀನಿವಾಸ ಭಟ್ (ಚೀನಿ)

ಟಿಕೆಟ್‌ಗಳಿಗಾಗಿ ರಂಗಾಯಣ ಕಛೇರಿಯನ್ನು ಸಂಪರ್ಕಿಸಿ.  ದೂರವಾಣಿ ಸಂಖ್ಯೆ : 0821-2512639 ಅಥವಾ ಆನ್ಲೈನ್ ಟಿಕೆಟ್‌ಗಾಗಿ  www.bookmyshow.com

ಹೆಚ್ಚಿನ ವಿವರಗಳಿಗಾಗಿ

 

14.08.2015 - ಚಿರೆಬಂದಿ ವಾಡೆ

ಮರಾಠಿ ಮೂಲ : ಮಹೇಶ್ ಎಲ್‌ಕುಂಚ್‌ವಾರ್
ಕನ್ನಡಕ್ಕೆ : ಮಾರುತಿ ಶಾನಭಾಗ್
ಸಂಗೀತ : ಶ್ರೀನಿವಾಸ್ ಭಟ್
ವಿನ್ಯಾಸ : ಹೆಚ್.ಕೆ. ದ್ವಾರಕಾನಾಥ್
ನಿರ್ದೇಶನ : ಪ್ರಮೀಳಾ ಬೆಂಗ್ರೆ

ಟಿಕೆಟ್‌ಗಳಿಗಾಗಿ ರಂಗಾಯಣ ಕಛೇರಿಯನ್ನು ಸಂಪರ್ಕಿಸಿ.  ದೂರವಾಣಿ ಸಂಖ್ಯೆ : 0821-2512639 ಅಥವಾ ಆನ್ಲೈನ್ ಟಿಕೆಟ್‌ಗಾಗಿ  www.bookmyshow.com

ಹೆಚ್ಚಿನ ವಿವರಗಳಿಗಾಗಿ

 

15.08.2015 - ಪುಗಳೇಂದಿ ಪ್ರಹಸನ

ರಚನೆ : ಎಸ್. ರಾಮನಾಥ
ಕಾರ್‍ಲೋ ಗೋಲ್ಡೋನಿಯ
ಸರ್ವಂಟ್ ಆಫ್ ಟೂ ಮಾಸ್ಟರ್‍ಸ್ ಆಧಾರಿತ
ನಿರ್ದೇಶನ : ಪ್ರಸನ್ನ

ಟಿಕೆಟ್‌ಗಳಿಗಾಗಿ ರಂಗಾಯಣ ಕಛೇರಿಯನ್ನು ಸಂಪರ್ಕಿಸಿ.  ದೂರವಾಣಿ ಸಂಖ್ಯೆ : 0821-2512639 ಅಥವಾ ಆನ್ಲೈನ್ ಟಿಕೆಟ್‌ಗಾಗಿ  www.bookmyshow.com

ಹೆಚ್ಚಿನ ವಿವರಗಳಿಗಾಗಿ

 

16.08.2015 - ಸಂಸ್ಕಾರ

ಸಂಗೀತ-ನಿರ್ದೇಶನ : ಹೆಚ್. ಜನಾರ್ಧನ್ (ಜನ್ನಿ)
ರಂಗರೂಪ – ಸಹ ನಿರ್ದೇಶನ : ಮಾಯಸಂದ್ರ ಕೃಷ್ಣಪ್ರಸಾದ್
ರಂಗ ವಿನ್ಯಾಸ : ಎಚ್.ಕೆ. ದ್ವಾರಕಾನಾಥ್
ರಂಗರೂಪ : ಓ.ಎಲ್. ನಾಗಭೂಷಣ ಸ್ವಾಮಿ

ಟಿಕೆಟ್‌ಗಳಿಗಾಗಿ ರಂಗಾಯಣ ಕಛೇರಿಯನ್ನು ಸಂಪರ್ಕಿಸಿ.  ದೂರವಾಣಿ ಸಂಖ್ಯೆ : 0821-2512639 ಅಥವಾ ಆನ್ಲೈನ್ ಟಿಕೆಟ್‌ಗಾಗಿ  www.bookmyshow.com

ಹೆಚ್ಚಿನ ವಿವರಗಳಿಗಾಗಿ

 

ಪ್ರಸ್ತುತ ವಸ್ತು ವಿಷಯಾಧಾರಿತ ಬೀದಿನಾಟಕಗಳು
ಪ್ರತಿದಿನ ಸಂಜೆ ೪.೦೦ ರಿಂದ ೫.೦೦ ರವರಗೆ

 

ಜಾನಪದ ಸಿರಿ ಕಾರ್ಯಕ್ರಮಗಳ ಸರಮಲೆ
ಪ್ರತಿದಿನ ಸಂಜೆ ೫.೦೦ ರಿಂದ ೬.೦೦ ರವರಗೆ
ಸ್ಥಳ: ವನರಂಗ

ಬಿ.ವಿ. ಕಾರಂತ ಪ್ರಶಸ್ತಿ

ರಂಗಭೂಮಿಯು ಸದಾ ವರ್ತಮಾನದ ತಲ್ಲಣಗಳಿಗೆ ಸ್ಪಂದಿಸುತ್ತಾ ತನ್ನ ಸೃಜನಶೀಲ ಪ್ರಯೋಗಗಳ ಮೂಲಕ ವರ್ತಮಾನದ ಸಮಾಜಕ್ಕೆ ಐತಿಹಾಸಿಕ, ಪೌರಾಣಿಕ ವಿಷಯವಸ್ತುಗಳ ಮೂಲಕ ಸಾಮಾಜಿಕ ಮೌಲ್ಯಗಳನ್ನು ಪುನರುಚ್ಚರಿಸುತ್ತ ಜಾಗೃತ ಸಮಾಜಕ್ಕೆ ಕಾರಣವಾಗಿದೆ.

ರಂಗಭೂಮಿಯ ಸಾಧಕರಿಗೆ ಸರ್ಕಾರವು ಪ್ರತಿ ವರ್ಷ ಗುಬ್ಬಿ ವೀರಣ್ಣ ಪ್ರಶಸ್ತಿ ನೀಡುತ್ತ ಬಂದಿದೆ. ರಂಗಭೂಮಿಯ ವ್ಯಾಪ್ತಿ ಮತ್ತು ವಿಸ್ತಾರದ ಹಿನ್ನೆಲೆಯಲ್ಲಿ ಹೆಚ್ಚು ಹೆಚ್ಚು ವೃತ್ತಿ ರಂಗಭೂಮಿಯ ಕಲಾವಿದರಿಗೇ ಪ್ರಶಸ್ತಿ ನೀಡಲಾಗುತ್ತಿತ್ತು. ಹೆಚ್ಚಿನ ಸಾಧಕರನ್ನು ಗುರುತಿಸಲನುವಾಗುವಂತೆ ಹವ್ಯಾಸಿ ರಂಗಭೂಮಿಗೆ ವಿಶೇಷ ಪ್ರಶಸ್ತಿಯೊಂದನ್ನು ಸ್ಥಾಪಿಸಲು ಸರ್ಕಾರವು ತೀರ್ಮಾನಿಸಿತು.

ಅದರಂತೆ ಸರ್ಕಾರವು ೨೦೧೪ನೇ ಸಾಲಿನಿಂದ ಹವ್ಯಾಸಿ ರಂಗಭೂಮಿಯ ಸಾಧಕರಿಗೆ ಬಿ.ವಿ. ಕಾರಂತ ಪ್ರಶಸ್ತಿ ಸ್ಥಾಪಿಸಿದ್ದು, ಹವ್ಯಾಸಿ ರಂಗಭೂಮಿಯ ನಿರ್ದೇಶಕರು, ನಾಟಕಕಾರರು, ನಟ/ನಟಿ, ರಂಗ ಸಂಗೀತ ತಜ್ಞರನ್ನು ಮತ್ತು ತಂತ್ರಜ್ಞರನ್ನು ಗುರುತಿಸಿ ಪ್ರಶಸ್ತಿ ನೀಡಲು ತೀರ್ಮಾನಿಸಿದೆ.

ಆಧುನಿಕ ಭಾರತೀಯ ರಂಗಭೂಮಿಯ ಹರಿಕಾರರಲ್ಲಿ ಒಬ್ಬರಾದ ಬಾಬುಕೋಡಿ ವೆಂಕಟರಮಣ ಕಾರಂತರು, ಕನ್ನಡ ರಂಗಭೂಮಿಯ ಮಟ್ಟಿಗೆ ಕರ್ನಾಟಕಕ್ಕೆ ರೆಪರ್ಟರಿ ಪರಿಕಲ್ಪನೆಯನ್ನು ಮರು ಸೃಷ್ಟಿಸಿದವರು. ಅವರ ಕಲ್ಪನೆಯ ಕೂಸಾದ ’ರಂಗಾಯಣ’ ಇಂದು ರಂಗ ಜಗತ್ತಿನಾದ್ಯಂತ ತನ್ನ ವಿಶಿಷ್ಟ ಪ್ರಯೋಗಗಳ ಮೂಲಕ ಮನೆಮಾತಾಗಿದೆ. ಬಿ.ವಿ. ಕಾರಂತರ ಪ್ರಶಸ್ತಿಯನ್ನು ಮೈಸೂರು ರಂಗಾಯಣ ನಡೆಸುವ ವರ್ಷದ ಮಹತ್ವದ ಬಹುರೂಪಿ ಬೃಹತ್ ಕಾರ್ಯಕ್ರಮದ ಸಂದರ್ಭದಲ್ಲಿ ಕೊಡಮಾಡಬೇಕೆಂದು ನಿರ್ಣಯಿಸಲಾಗಿದೆ.

ಬಿ.ವಿ. ಕಾರಂತರು ಬೆಂಗಳೂರಿನಲ್ಲಿ ಬೆನಕ ತಂಡವನ್ನು ಆರಂಭಿಸಿದರು. ಮಧ್ಯಪ್ರದೇಶದ ಭೋಪಾಲ್‌ನಲ್ಲಿ ರಂಗಮಂಡಲವನ್ನು ಆರಂಭಿಸಿದರು. ರಾಷ್ಟ್ರೀಯ ನಾಟಕ ಶಾಲೆಯ ಪ್ರಥಮ ವರ್ಷದ ವಿದ್ಯಾರ್ಥಿಯಾಗಿ, ನಂತರ ಅದೇ ನಾಟಕ ಶಾಲೆಯ ನಿರ್ದೇಶಕರಾಗಿ, ಭಾರತೀಯ ರಂಗಭೂಮಿಗೆ ಹೊಸ ಹರಹು ಮತ್ತು ವ್ಯಾಪ್ತಿ – ವಿಸ್ತಾರಗಳನ್ನು ದೊರಕಿಸಿಕೊಟ್ಟವರು.

ಕರ್ನಾಟಕ ಸರ್ಕಾರವು ೨೦೧೪ನೆಯ ಸಾಲಿನಿಂದ ಸ್ಥಾಪಿಸಲಾದ ಹವ್ಯಾಸಿ ರಂಗಭೂಮಿ ಕ್ಷೇತ್ರದಲ್ಲಿನ ವಿಶಿಷ್ಟ ಸಾಧಕರಿಗೆ ಕೊಡಮಾಡುವ ಬಿ.ವಿ. ಕಾರಂತ ಪ್ರಶಸ್ತಿಯನ್ನು ಕನ್ನಡ ನಾಡಿನ ಜನತೆಯ ಪರವಾಗಿ ಶ್ರೀ ವಿ. ರಾಮಮೂರ್ತಿ ಅವರಿಗೆ ನೀಡಿ ಗೌರವಿಸಲು ಹರ್ಷಿಸುತ್ತದೆ.

ವಿ. ರಾಮಮೂರ್ತಿ

ramamurthyವಿ. ರಾಮಮೂರ್ತಿ ಅವರು ರಂಗಭೂಮಿಯ ಹಿರಿಯ ಅನುಭವಿ ಮತ್ತು ಸೃಜನಶೀಲ ತಂತ್ರಜ್ಞರಲ್ಲಿ ಒಬ್ಬರು. ಭಾರತೀಯ ರಂಗಭೂಮಿ ಮತ್ತು ರಂಗ ಪ್ರದರ್ಶನಗಳಲ್ಲಿ ನಾವೀನ್ಯತೆಯನ್ನು ತಂದವರು. ವಿಶೇಷವಾಗಿ ಹವ್ಯಾಸಿ ರಂಗಭೂಮಿಯಲ್ಲಿ ಹೊಸ ಸಾಧ್ಯತೆಗಳನ್ನು ಕಲಾವಿದರಿಗೆ ಪರಿಚಯಿಸಿದವರು. ತಮ್ಮ ಎಂಭತ್ತರ ಇಳಿ ವಯಸ್ಸಿನಲ್ಲಿಯೂ ಬತ್ತದ ಉತ್ಸಾಹದಿಂದ ರಂಗಭೂಮಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿರುವ ವಿ. ರಾಮಮೂರ್ತಿ ಅವರು ಕನ್ನಡ ರಂಗಭೂಮಿಯ ಅನನ್ಯತೆಗೆ ಸಾಕ್ಷಿ.

೧೯೩೫ ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ವಿ. ರಾಮಮೂರ್ತಿ ಅವರ ರಂಗಭೂಮಿಯ ನಂಟು ೧೯೫೨ ರಷ್ಟು ಹಿಂದಿನದು. ಜೀವನೋಪಾಯಕ್ಕಾಗಿ ಉದ್ಯೋಗಿಯಾಗಿದ್ದ ಐಟಿಐ ಸಂಸ್ಥೆಯ ಉದ್ಯೋಗವನ್ನು ತ್ಯಜಿಸಿ ೧೯೫೯ರಲ್ಲಿ ಅಬ್ರಾಹಂ ಅಲ್ಕಾಜಿ ನಿರ್ದೇಶಕರಾಗಿದ್ದ ಏಶಿಯನ್ ಸ್ಕೂಲ್ ಆಫ್ ಥಿಯೇಟರ್ ಎಂದು ಹೆಸರಾಗಿದ್ದು, ನಂತರ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಸಂಸ್ಥೆಯ ಪ್ರಥಮ ವರ್ಷದ ವಿದ್ಯಾರ್ಥಿಯಾಗಿ ಪದವಿ ಪಡೆದವರು ರಾಮಮೂರ್ತಿ. ನ್ಯೂಯಾರ್ಕಿನ ಹವಾಯಿ ವಿಶ್ವವಿದ್ಯಾಲಯದ ಇನ್‌ಸ್ಟಿಟ್ಯೂಟ್ ಆಫ್ ಥಿಯೇಟರ್‌ನಲ್ಲಿ ರಂಗಭೂಮಿಯ ತಂತ್ರಜ್ಞಾನದ ಸಾಧ್ಯತೆಗಳ ಉನ್ನತ ಶಿಕ್ಷಣ ಪಡೆದರು. ಆಗ ಅಲ್ಲಿಯ ಸುಪ್ರಸಿದ್ಧ ನಾಟಕ ಪ್ರದರ್ಶನಗಳಿಗೆ ರಾಮಮೂರ್ತಿ ರಂಗಸಜ್ಜಿಕೆ ಸಂಯೋಜನೆ ಮತ್ತು ಬೆಳಕಿನ ವಿನ್ಯಾಸ ಕಾರ್ಯವನ್ನು ನಿರ್ವಹಿಸಿದರು. ರವೀಂದ್ರ ಕಲಾಕ್ಷೇತ್ರವೂ ಸೇರಿದಂತೆ ನಾಡಿನ ಹಲವು ರಂಗಮಂದಿರಗಳ ಬೆಳಕು ಮತ್ತು ಧ್ವನಿ ವಿನ್ಯಾಸಗಳನ್ನು ಮಾಡಿಕೊಟ್ಟವರು ವಿ. ರಾಮಮೂರ್ತಿ ಅವರು.

ತಾಯ್ನಾಡಿಗೆ ಮರಳಿದ ಮೇಲೆ ರಾಮಮೂರ್ತಿ ಬಿಡುವಿಲ್ಲದೆ ರಂಗಭೂಮಿಯ ಎಲ್ಲ ವಿಭಾಗಗಳಲ್ಲೂ ದುಡಿಯತೊಡಗಿದರು. ಅಲ್ಲದೆ ಅನೇಕ ರಾಷ್ಟ್ರೀಯ, ಅಂತರರಾಷ್ಟ್ರೀಯ ರಂಗಸಂಬಂಧಿ ಸಂಸ್ಥೆಗಳಿಗೆ ಬೆಳಕಿನ ಸಂಯೋಜನೆಯ ಪರಿಣತರಾಗಿ, ಅತಿಥಿ ಉಪನ್ಯಾಸಕರಾಗಿ ಹಲವು ವಿಶ್ವವಿದ್ಯಾಲಯಗಳಿಗೆ ತಮ್ಮ ಅನುಭವವನ್ನು ಧಾರೆ ಎರೆದಿದ್ದಾರೆ. ಅವರ ಕ್ರಿಯಾಶೀಲ ರಂಗ ತಾಂತ್ರಿಕತೆ ರಂಗಜಗತ್ತನ್ನು ಶ್ರೀಮಂತಗೊಳಿಸಿದೆ. ಸ್ನೇಹಭಾವ ಮತ್ತು ರಂಗಪ್ರೇಮವನ್ನು ಉಳಿಸಿಕೊಂಡ ಮಹನೀಯರು ಅಂದಿನ ಶಿಸ್ತು, ಸಮಯಪಾಲನೆಯನ್ನು ಇಂದಿಗೂ ಮುಂದುವರಿಸುತ್ತ ಬಂದವರು. ರಂಗಭೂಮಿಯ ಕೆಲಸ ಎಂದರೆ ಸದಾ ಹುರುಪಿನಿಂದ ತೋಳೇರಿಸಿ ನಿಲ್ಲುವ ಈ ಅನನ್ಯ ರಂಗಕರ್ಮಿಯನ್ನು ನಾಡಿನ ಹಲವು ಗೌರವ ಪುರಸ್ಕಾರಗಳು ಅರಸಿ ಬಂದಿವೆ.
ಶ್ರೀ ವಿ. ರಾಮಮೂರ್ತಿಯವರಿಗೆ ಪ್ರೀತಿಯ ಅಭಿನಂದನೆಗಳು.