ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ -2015  ಜಗದ ಜಾನಪದ ಬಹುಮುಖಿ ಶೇಕ್‌ಸ್ಪಿಯರ್

bahuroopi_logo ನಿರ್ದೇಶಕ ಆಶಯ ನುಡಿ,
ಗ್ರಾಮಭಾರತ ಅತ್ಯಂತ ಸತ್ವಶಾಲಿಯಾಗಿರುವುದನ್ನು ಕನ್ನಡ ಸಾಹಿತ್ಯ ಸಾಂಸ್ಕೃತಿಕ ಹಿನ್ನಲೆಯಲ್ಲಿ ನಾವು ಮನಗಂಡಿದ್ದೇವೆ. ಆದ್ದರಿಂದಲೇ ಜನ ಮಾನಸದ ನಡೆ-ನುಡಿಯಲ್ಲಿ ಕಂಡುಬರುವ ಪರಿಪರಿಯಾದ ಪಾರಂಪರೆಯ ಲೋಕವನ್ನು ಕನ್ನಡ ಸಾಹಿತ್ಯ ಸಮರ್ಥವಾಗಿ ಪ್ರತಿಷ್ಠಾಪಿಸಿದೆ. ಮನುಷ್ಯನ ಬದುಕಿನ ರೂಪಾಂತರಗಳನ್ನು ಜನರ ನುಡಿಗಟ್ಟುಗಳಲ್ಲಿ ಮರುರೂಪಿಸುತ್ತಾ ನೋಡುಗರನ್ನು ಸದಾ ಎಚ್ಚರಿಸುತ್ತಾ ಕಥೆಯ ಓಟದೊಂದಿಗೆ ರೂಪಿತಗೊಳ್ಳುವ ಪಾತ್ರಗಳ ತೀವ್ರ ಸ್ಥಿತಿಗತಿಯ ಆಕರ್ಷಿಕ ನಾಟಕೀರಣದೊಂದಿಗೆ ಜನರ ನುಡಿಗಟ್ಟುಗಳನ್ನು ಸೂಕ್ಷ್ಮವಾಗಿ ಕೇಳಿಸಿಕೊಂಡು ತೀರಾ ಕೃತಕವಾಗಲು ಬಿಡದೇ ಭಾಷೆಯನ್ನು ಕಲೆಯಾಗಿಸುವ ಎಚ್ಚರವನ್ನು ವಹಿಸುತ್ತಿದ್ದ ವಿವೇಕ ತೋರಿದವನು ಜಗದ ಜಾನಪದ ಬಹುಮುಖಿ ಶೇಕ್‌ಸ್ಪಿಯರ್. ಶೇಕ್‌ಸ್ಪಿಯರ್ ರಚಿಸಿದ ನಾಟಕಗಳ ಕಥಾವಸ್ತು ಘಟನಾವಳಿಗಳು ಪಾತ್ರಗಳ ಬೆಳವಣಿಗೆ ಬದುಕಿನ ಗಾಢ ಮೂಲತತ್ತ್ವಗಳನ್ನು ಹಬ್ಬಿಸಿದ ಮನುಷ್ಯರ ನಂಬಿಕೆ ಮೂಢನಂಬಿಕೆಗಳೆರಡಕ್ಕೂ ಅವನ ನಾಟಕಗಳಲ್ಲಿ ಸ್ಥಳವಿದೆ. ಪ್ರೀತಿ, ದ್ವೇಷ, ಆಗಲಿಕೆ, ಮಿಲನ, ಸಾವು, ಕಾದಾಟ, ಅತಿಯಾಸೆ, ಕಾಮ, ಕ್ರೌರ್ಯದ ತ್ರೀವ ಭಾವನೆಗಳು ಅತಿರೇಕದ ವರ್ತನೆಗಳು ಗಂಡು ಹೆಣ್ಣುಗಳ ಚಿತ್ರವಿಚಿತ್ರ ವಿಕೃತ ಭಾವನೆಗಳು ಊಹಾತೀತ ವರ್ತನೆಗಳನ್ನು ಪ್ರಕಟಗೊಳಿಸುತ್ತಾ ಒಂದು ಕಡೆ ನಂಬಿಕೆ ಎದ್ದು ಕಂಡರೆ, ಮತ್ತೊಂದೆಡೆ ಅದನ್ನು ಪ್ರರೀಕ್ಷಿಸುವ ಪ್ರಶ್ನಿಸುವ ಆತ್ಮಶೋಧನೆಗೊಳಪಡಿಸುವ ನೋಟಕ್ರಮಗಳು ಕಲೆಯು ಪ್ರಕೃತಿಯಷ್ಟು ಸಹಜವಾಗುತ್ತಾ ಮಾಗುತ್ತಾ ಹೋಗುವ ತಾತ್ತ್ವಿಕ ಚಿಂತನೆಯನ್ನು ಮಂಡಿಸುವ ಈ ಮಹಾಕವಿ, ಬುದ್ಧನ ಆದರ್ಶದಾರಿಯಲ್ಲಿ ಸಾಗುತ್ತಾ ಜಗತ್ತಿನ ನಮ್ಮೊಡಲ್ಹತ್ತಿರದ ಆತ್ಮಗಳಲ್ಲಿ ಆತ್ಮೀಯವಾಗಿ ನಮ್ಮೊಳಗಿನ ನಮ್ಮ ಶೇಕ್‌ಸ್ಪಿಯರ್ ಆಗುತ್ತಾನೆ. ರೂಪರೂಪಗಳನ್ನು ದಾಟಿದವನು ನಾಮಕೋಟಿಗಳನು ಮೀಟಿದವನು ಎಲ್ಲಿಯೂ ನಿಲ್ಲದವನು ಮನೆಯನ್ನೆಂದೂ ಕಟ್ಟದವನು ಕೊನೆಯೆಂದೂ ಮುಟ್ಟದೇ ಆನಂತನಾದವನು ಈ ಶೇಕ್‌ಸ್ಪಿಯರ್. ನೆನಪಿನಂಗಳಕ್ಕೆ ರಂಗಾಯಣ ತನ್ನ 12ನೇ ವರ್ಷದ ಬಹುರೂಪಿಯನ್ನು ತಮ್ಮೆಡೆಗೆ ಧಾವಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ.

ಬಹುಮುಖಿ ಸಂಸ್ಕೃತಿಯ ಒಳಹುಗಳ ಹುಡುಕಾಟದಲ್ಲಿ ತೊಡಗಿರುವ ರಂಗಾಯಣ 13.1.2015 ರಿಂದ 18.1.2015 ರವರೆಗೆ ಜಗದ ಜಾನಪದ ಬಹುಮುಖಿ ಶೇಕ್‌ಸ್ಪಿಯರ್ ರಾಷ್ಟ್ರೀಯ ನಾಟಕೋತ್ಸವನ್ನು ನಡೆಸುತ್ತಿರುವುದು ಹೆಮ್ಮೆಯ ವಿಷಯವಾಗುತ್ತಾ ಭಾರತೀಯ ರಂಗಭೂಮಿಯ ಚರಿತ್ರೆಯಲ್ಲಿ ದಾಖಲೆಯಾಗಲಿದೆ. ರಂಗಾಯಣಕ್ಕೆ ೨೫ ವರ್ಷ ತುಂಬಿದ ಈ ಸಂದರ್ಭದಲ್ಲಿ ಬೆಳ್ಳಿಹಬ್ಬ ಆಚರಿಸುವ ಅಂಗವಾಗಿ ಶೇಕ್‌ಸ್ಪಿಯರ್ ೪೫೦ ವರ್ಷದ ನೆನಪಿನ ಬೃಹತ್ ಪ್ರಮಾಣದಲ್ಲಿ ಕಾರ್ಯಕ್ರಮವಾಗಿ ಇದನ್ನು ನಡೆಸುತ್ತಿದ್ದು, ಇದೇ ಹಾದಿಯಲ್ಲಿ ನಾಡಿನಾದ್ಯಂತ ರಂಗಚಳುವಳಿಯನ್ನು ರೂಪಿಸುವ ಯೋಜನೆಗಳು ಸಿದ್ಧಗೊಳ್ಳುತ್ತಿವೆ. ಪ್ರಬುದ್ಧ ಹಿರಿಯ ಕಲಾವಿದರನ್ನು ಒಳಗೊಂಡ ಪ್ರತಿಷ್ಠತ ರಂಗಸಂಸ್ಥೆಯಾದ ರಂಗಾಯಣವು ಕರ್ನಾಟಕ ಸರ್ಕಾರದ ಸಂಪೂರ್ಣ ಸಹಕಾರದೊಂದಿಗೆ ರಂಗಸಮಾಜದ ಮಾರ್ಗದರ್ಶನದೊಂದಿಗೆ ಪ್ರಸ್ತುತ ಎದುರುಗೊಂಡಿರುವ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತಾ ಶ್ರೀ ಬಿ.ವಿ.ಕಾರಂತರ ವಸ್ತು ಸಂಗ್ರಹಾಲಯದ ಸ್ಥಾಪನೆ ವಲಯ ನಾಟಕೋತ್ಸವಗಳು, ಜಿಲ್ಲಾ ತರಬೇತಿ ಶಿಬಿರಗಳು ಮಕ್ಕಳು ಮತ್ತು ಯುವ ಜನರನ್ನ ರಂಗಯೋಜನೆಗಳೊಂದಿಗೆ ರಂಗಾಯಣ ಮುನ್ನುಡಿಯನ್ನು ಬರೆಯಲು ಹೊರಟಿದೆ. ಸರ್ಕಾರ ರಂಗಾಯಣದ ಅವಶ್ಯಕತೆಗಳನ್ನು ಮನಗಂಡು ಅವುಗಳ ಪರಿಹಾರ ಮಾರ್ಗೋಪಾಯೋಪಾದಿಯಲ್ಲಿ ರಂಗಾಯಣದ ಪ್ರಗತಿಗೆ ಪೂರಕವಾಗಿ ಕಾರ್ಯೋಮುಖವಾಗಿ ಸಾಧ್ಯವಾಗಿಸುತ್ತದೆಂಬುದು ನಮ್ಮೆಲ್ಲರ ನಂಬಿಕೆಯಾಗಿದೆ. ಬನ್ನಿ ಜಗದ ಜಾನಪದ ಶೇಕ್‌ಸ್ಪಿಯರ್‌ನತ್ತ ಸಾಗೋಣ….

ಹೆಚ್. ಜನಾರ್ಧನ (ಜನ್ನಿ)
ನಿರ್ದೇಶಕರು, ರಂಗಾಯಣ

ಕಾರ್ಯಕ್ರಮಗಳ ಪಟ್ಟಿ

13th ಜನವರಿ 2015 ಕಾರ್ಯಕ್ರಮದ ವಿವರಗಳು

10.00 AM

ಬೀದಿ ನಾಟಕಗಳ ಚಾಲನೆ

ಸ್ಥಳ : ಕಿಂದರಿಜೋಗಿ ಆವರಣ
ಶ್ರೀ ಪಿ. ಗಂಗಾಧರಸ್ವಾಮಿ
ಹಿರಿಯ ರಂಗ ನಿರ್ದೇಶಕರು, ಮೈಸೂರು.

11.00 AM

ಬಹುರೂಪಿ ಚಲನಚಿತ್ರೋತ್ಸವ – 2015 ಉದ್ಘಾಟನಾ ಸಮಾರಂಭ

ಸ್ಥಳ : ಶ್ರೀರಂಗ, ರಂಗಾಯಣ
ಉದ್ಘಾಟನಾ :
ಶ್ರೀ. ಎಸ್.ವಿ. ರಾಜೇಂದ್ರಸಿಂಗ್ ಬಾಬು
ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ಅಕಾಡೆಮಿ, ಬೆಂಗಳೂರು
ಅಧ್ಯಕ್ಷರು
ಶ್ರೀ ಹೆಚ್. ಜನಾರ್ಧನ್ (ಜನ್ನಿ)
ನಿರ್ದೇಶಕರು, ರಂಗಾಯಣ, ಮೈಸೂರು

11.45 AM: ಚಲನ ಚಿತ್ರ

ದಿ ಟೇಮಿಂಗ್ ಆಫ್ ದಿ ಶ್ರ್ಯೂ

(ಇಂಗ್ಲೀಷ್) 122 ನಿಮಿಷಗಳು
ನಿರ್ದೇಶಕ : ಫ್ರಾಂಕೋ ಝೆಫ್ರಿಲಿ
ಸ್ಥಳ : ಶ್ರೀರಂಗ, ರಂಗಾಯಣ
ಹೆಚ್ಚಿನ ವಿವರಗಳಿಗಾಗಿ

12.00 PM

ಶೇಕ್‌ಸ್ಪಿಯರ್ ವಸ್ತು ಪ್ರದರ್ಶನ ಉದ್ಘಾಟನೆ

ಸ್ಥಳ: ಕಲಾಮಂದಿರದ ಸುಚಿತ್ರಾ ಆರ್ಟ್ ಗ್ಯಾಲರಿ
ಸಂಗ್ರಹ : ಪ್ರೊ. ಬಿ.ಎನ್. ಬಾಲಾಜಿ ಮೈಸೂರು
ಉದ್ಘಾಟನಾ :
ಡಾ. ಕೆ.ವೈ. ನಾರಾಯಣಸ್ವಾಮಿ
ನಾಟಕಕಾರರು ಹಾಗೂ ರಂಗಸಮಾಜದ ಸದಸ್ಯರು, ಬೆಂಗಳೂರು.

5.00 PM

ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ – 2015 ಉದ್ಘಾಟನಾ ಸಮಾರಂಭ

ಸ್ಥಳ : ವನರಂಗ, ರಂಗಾಯಣ
ಪ್ರಾಸ್ತಾವಿಕ ನುಡಿ :

ಶ್ರೀ ಹೆಚ್. ಜನಾರ್ಧನ್ (ಜನ್ನಿ)

ನಿರ್ದೇಶಕರು, ರಂಗಾಯಣ, ಮೈಸೂರು
ಉದ್ಘಾಟನೆ :

ಶ್ರೀ ನಾಸಿರುದ್ದೀನ್ ಷಾ

ಖ್ಯಾತ ರಂಗಭೂಮಿ ಹಾಗೂ ಚಲನಚಿತ್ರ ನಟರು, ನಿರ್ದೇಶಕರು, ಮುಂಬಯಿ.
ಮುಖ್ಯ ಅತಿಥಿಗಳು :

ಸನ್ಮಾನ್ಯ ಶ್ರೀ ವಿ. ಶ್ರೀನಿವಾಸಪ್ರಸಾದ್

ಮಾನ್ಯ ಕಂದಾಯ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು. ಕರ್ನಾಟಕ ಸರ್ಕಾರ

ಸನ್ಮಾನ್ಯ ಶ್ರೀಮತಿ ಉಮಾಶ್ರೀ

ಮಾನ್ಯ ಸಚಿವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬೆಂಗಳೂರು. ಕರ್ನಾಟಕ ಸರ್ಕಾರ

ಶ್ರೀ ಪ್ರಕಾಶ್‌ರಾಜ್

ಖ್ಯಾತ ರಂಗಭೂಮಿ ಹಾಗೂ ಚಲನಚಿತ್ರ ನಟರು, ನಿರ್ದೇಶಕರು.
ಅಧ್ಯಕ್ಷತೆ :

ಶ್ರೀ ವಾಸು

ಮಾನ್ಯ ಶಾಸಕರು, ಚಾಮರಾಜಕ್ಷೇತ್ರ, ಮೈಸೂರು.

5-30 PM

ಬೀದಿ ನಾಟಕ

ಸ್ಥಳ : ವನರಂಗ
ರಂಗತಂಡ-ಜನಮನ

07.00 PM: ನಾಟಕ

ನಾಟಕ :ಬೀಸ್ಟ್ಲಿ ಟೇಲ್ಸ್

(ಇಂಗ್ಲೀಷ್)
ವಿಕ್ರಂ ಸೇಠ್ ಮತ್ತು ಜೇಮ್ಸ್ ಥರ್ಬರ್ ರವರ ಕವನಗಳು ಮತ್ತು ಸಣ್ಣಕಥೆಗಳ ಸಂಗ್ರಹ
ನಿರ್ದೇಶನ : ನಾಸಿರುದ್ದೀನ್ ಷಾ
ತಂಡ: ಮೋಟ್ಲಿ ತಂಡ, ಮುಂಬೈ.
ಸ್ಥಳ : ಕಲಾಮಂದಿರ
ಹೆಚ್ಚಿನ ವಿವರಗಳಿಗಾಗಿ

14th ಜನವರಿ 2015 ಕಾರ್ಯಕ್ರಮದ ವಿವರಗಳು

10.30 AM: ಚಲನ ಚಿತ್ರ

ಚಲನ ಚಿತ್ರ : ಇನ್ ಸರ್ಚ್ ಆಫ್ ಶೇಕ್‌ಸ್ಪಿಯರ್ 1

(ಇಂಗ್ಲಿಷ್) 59 ನಿಮಿಷಗಳು
ನಿರ್ದೇಶಕ : ಮೈಕೆಲ್ ವುಡ್
ಸ್ಥಳ : ಶ್ರೀರಂಗ, ರಂಗಾಯಣ
ಹೆಚ್ಚಿನ ವಿವರಗಳಿಗಾಗಿ

11.45 AM: ಚಲನ ಚಿತ್ರ

ಚಲನ ಚಿತ್ರ : ರಾನ್

(ಜಪಾನಿ) 162 ನಿಮಿಷಗಳು
ನಿರ್ದೇಶಕ : ಅಕಿರ ಕುರಸೋವ
ಸ್ಥಳ : ಶ್ರೀರಂಗ, ರಂಗಾಯಣ
ಹೆಚ್ಚಿನ ವಿವರಗಳಿಗಾಗಿ

03.45 PM : ಚಲನ ಚಿತ್ರ

ಚಲನ ಚಿತ್ರ : ಒಥೆಲೋ

(ಇಂಗ್ಲಿಷ್) 91 ನಿಮಿಷಗಳು
ನಿರ್ದೇಶಕ : ಆರ್ಸನ್ ವೆಲ್ಲೆಸ್
ಸ್ಥಳ : ಶ್ರೀರಂಗ, ರಂಗಾಯಣ
ಹೆಚ್ಚಿನ ವಿವರಗಳಿಗಾಗಿ

04.00 PM: ನಾಟಕ

ನಾಟಕ : ಶೇಕ್‌ಸ್ಪಿಯರ್ ಮಹಾಕವಿಯ ಹ್ಯಾಮ್ಲೆಟ್

(ಕನ್ನಡ)
ಅನುವಾದ / ನಿರ್ದೇಶನ: ಪ್ರಸನ್ನ
ತಂಡ: ರಂಗಾಯಣ ರೆಪರ್ಟರಿ, ಮೈಸೂರು
ಸ್ಥಳ : ಭೂಮಿಗೀತ, ರಂಗಮಂದಿರ
ಹೆಚ್ಚಿನ ವಿವರಗಳಿಗಾಗಿ

5.00 PM:

ಜಾನಪದೋತ್ಸವ ಉದ್ಘಾಟನಾ ಸಮಾರಂಭ

ಸ್ಥಳ: ವನರಂಗ
ಉದ್ಘಾಟನೆ :
ಡಾ. ಕೃಷ್ಣಮೂರ್ತಿ ಹನೂರು
ಖ್ಯಾತ ಜಾನಪದ ವಿದ್ವಾಂಸರು, ಮೈಸೂರು.
ಪ್ರಾಸ್ತಾವಿಕ ನುಡಿ :
ಶ್ರೀ ಹೆಚ್. ಜನಾರ್ಧನ್ (ಜನ್ನಿ)
ನಿರ್ದೇಶಕರು, ರಂಗಾಯಣ, ಮೈಸೂರು.
ಅಧ್ಯಕ್ಷತೆ :
ಶ್ರೀ ಪಿಚ್ಚಳ್ಳಿ ಶ್ರೀನಿವಾಸ್
ಅಧ್ಯಕ್ಷರು, ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು.

5-30 PM

ಬೀದಿ ನಾಟಕ

ಸ್ಥಳ : ವನರಂಗ
ರಂಗತಂಡ – ರಂಗಹೆಜ್ಜೆ

07.00 PM: ನಾಟಕ

ನಾಟಕ : ರಕ್ತರಾತ್ರಿ

(ಕನ್ನಡ)
ರಚನೆ: ಕರ್ನಾಟಕ ಶೇಕ್‌ಸ್ಪಿಯರ್ ಶ್ರೀ ಕಂದಗಲ್ ಹನುಮಂತ ರಾಯರು
ನಿರ್ದೇಶನ : ನಾಡೋಜ ಬೆಳಗಲಿ ವೀರಣ್ಣ
ತಂಡ: ನಾಟಕ ಕಲಾಮಿತ್ರ ಮಂಡಲಿ, ಬಳ್ಳಾರಿ
ಸ್ಥಳ : ಕಲಾಮಂದಿರ
ಹೆಚ್ಚಿನ ವಿವರಗಳಿಗಾಗಿ

ಜನಪದ ಉತ್ಸವ

ತಮಟೆ ವಾದನ ಶ್ರೀ ಎ.ಎಂ. ಮಂಜುನಾಥ್ ಮತ್ತು ತಂಡ ಹೊಸಹಳ್ಳಿ ಅಗ್ರಹಾರ, ಕೋಲಾರ ಜಿಲ್ಲೆ.
ಮಹಿಳಾ ವೀರಗಾಸೆ ಶ್ರೀ ಅರುಣಾ ಎಲ್.ಎಂ. ಮತ್ತು ತಂಡ ತರಿಕೆರೆ ತಾ, ಚಿಕ್ಕಮಗಳೂರು ಜಿಲ್ಲೆ.
ಕಂಗೀಲು ನೃತ್ಯ ಶ್ರೀ ಗಣೇಶ್ ಗಂಗೊಳ್ಳಿ ಮತ್ತು ತಂಡ ಕುಂದಾಪುರ ತಾ, ಉಡುಪಿ ಜಿಲ್ಲೆ.
ಜಾನಪದ ಗಾಯನ ಶ್ರೀ ಬಸವಲಿಂಗಯ್ಯ ಹಿರೇಮಠ ಮತ್ತು ತಂಡ ಸಪ್ತಾಪುರ, ಧಾರವಾಡ ಜಿಲ್ಲೆ.
ಡೊಳ್ಳು ಕುಣಿತ ಶ್ರೀಮತಿ ದಾಕ್ಷಾಯಿಣಿ ಮತ್ತು ತಂಡ ಸಾಗರ ತಾ. ಶಿವಮೊಗ್ಗ ಜಿಲ್ಲೆ.

15th ಜನವರಿ 2015 ಕಾರ್ಯಕ್ರಮದ ವಿವರಗಳು

10.30 AM: ಚಲನ ಚಿತ್ರ

ಚಲನ ಚಿತ್ರ : ಇನ್ ಸರ್ಚ್ ಆಫ್ ಶೇಕ್‌ಸ್ಪಿಯರ್ 2

(ಇಂಗ್ಲಿಷ್) 59 ನಿಮಿಷಗಳು
ನಿರ್ದೇಶಕ : ಮೈಕೆಲ್ ವುಡ್
ಸ್ಥಳ : ಶ್ರೀರಂಗ, ರಂಗಾಯಣ
ಹೆಚ್ಚಿನ ವಿವರಗಳಿಗಾಗಿ

11.45 AM: ಚಲನ ಚಿತ್ರ

ಚಲನ ಚಿತ್ರ : ಟೈಟಸ್

(ಇಂಗ್ಲಿಷ್) 162 ನಿಮಿಷಗಳು
ನಿರ್ದೇಶಕ : ಜ್ಯೂಲಿ ಟಾಯ್‌ಮೋರ್
ಸ್ಥಳ : ಶ್ರೀರಂಗ, ರಂಗಾಯಣ
ಹೆಚ್ಚಿನ ವಿವರಗಳಿಗಾಗಿ

03.45 PM : ಚಲನ ಚಿತ್ರ

ಚಲನ ಚಿತ್ರ : ಮ್ಯಾಕ್‌ಬೆತ್

(ಇಂಗ್ಲಿಷ್) 83 ನಿಮಿಷಗಳು
ನಿರ್ದೇಶಕ : ರೋಮನ್ ಪೊಲೋನ್‌ಸ್ಕಿ
ಸ್ಥಳ : ಶ್ರೀರಂಗ, ರಂಗಾಯಣ
ಹೆಚ್ಚಿನ ವಿವರಗಳಿಗಾಗಿ

04.00 PM: ನಾಟಕ

ನಾಟಕ : ಆಯದಾನ್

(ಮರಾಠಿ)
ಉರ್ಮಿಳಾ ಪವಾರರ ಜೀವನ ಚರಿತ್ರೆ ಆಧಾರಿತ ನಾಟಕ
ನಿರ್ದೇಶನ : ಸುಷಮಾ ದೇಶಪಾಂಡೆ
ತಂಡ : ಅವಿಷ್ಕಾರ್ ಮತ್ತು ಅಂಜೇರ್ ತಂಡ, ಪುಣೆ
ಸ್ಥಳ : ಭೂಮಿಗೀತ ರಂಗಮಂದಿರ
ಹೆಚ್ಚಿನ ವಿವರಗಳಿಗಾಗಿ

5-30 PM

ಬೀದಿ ನಾಟಕ

ಸ್ಥಳ : ವನರಂಗ
ರಂಗತಂಡ-ಪರಸ್ಪರ

07.00 PM: ನಾಟಕ

ನಾಟಕ : ಮಾರನಾಯಕ

(ಕನ್ನಡ)
ರಂಗರೂಪ : ಪ್ರೊ. ಹೆಚ್.ಎಸ್. ಶಿವಪ್ರಕಾಶ್
ನಿರ್ದೇಶನ : ಹುಲುಗಪ್ಪ ಕಟ್ಟೀಮನಿ
ಪ್ರಸ್ತುತಿ : ಸಂಕಲ್ಪ, ಮೈಸೂರು ಮತ್ತು ಕೇಂದ್ರ ಕಾರಾಗೃಹ ಇಲಾಖೆ ಬೆಂಗಳೂರು
ತಂಡ: ಕೇಂದ್ರ ಕಾರಾಗೃಹ ಮೈಸೂರು ನಿವಾಸಿಗಳು
ಸ್ಥಳ : ಕಲಾಮಂದಿರ
ಹೆಚ್ಚಿನ ವಿವರಗಳಿಗಾಗಿ

ಜನಪದ ಉತ್ಸವ

ಪೂಜಾ ಕುಣಿತ ಶ್ರೀ ಕೆ.ಪಿ. ದೇವರಾಜ್ ಮತ್ತು ತಂಡ ಕಾರಸವಾಡಿ ಗ್ರಾಮ, ಮಂಡ್ಯ ಜಿಲ್ಲೆ.
ಜಗ್ಗಲಿಗೆ ಶ್ರೀ ಕಲ್ಲಪ್ಪ ಕಂಬಾರ್ ಮತ್ತು ತಂಡ ಹುಬ್ಬಳ್ಳಿ ತಾ., ಧಾರವಾಡ ಜಿಲ್ಲೆ.
ಕರಗ ಕುಣಿತ ಶ್ರೀ ಚೂಡಪ್ಪ ಮತ್ತು ತಂಡ ಆನೇಕಲ್ ತಾ., ಬೆಂಗಳೂರು ಜಿಲ್ಲೆ.
ನೀಲಗಾರರ ಮೇಳ ಶ್ರೀ ಕೈಲಾಸಮೂರ್ತಿ ಮತ್ತು ತಂಡ ಕೊಳ್ಳೇಗಾಲ ತಾ. ಚಾಮರಾಜನಗರ ಜಿಲ್ಲೆ.
ಕೋಲಾಟ ಶ್ರೀ ಟಿ. ಸಂಪಂಗಿರಾಮಯ್ಯ ಮತ್ತು ತಂಡ ಕಾಳಹಸ್ತಿ ಗ್ರಾಮ, ಕೋಲಾರ ಜಿಲ್ಲೆ.

16th ಜನವರಿ 2015 ಕಾರ್ಯಕ್ರಮದ ವಿವರಗಳು

10.30 AM: ಚಲನ ಚಿತ್ರ

ಚಲನ ಚಿತ್ರ : ಇನ್ ಸರ್ಚ್ ಆಫ್ ಶೇಕ್‌ಸ್ಪಿಯರ್ 3

(ಇಂಗ್ಲಿಷ್) 59 ನಿಮಿಷಗಳು
ನಿರ್ದೇಶಕ : ಮೈಕೆಲ್ ವುಡ್
ಸ್ಥಳ : ಶ್ರೀರಂಗ, ರಂಗಾಯಣ
ಹೆಚ್ಚಿನ ವಿವರಗಳಿಗಾಗಿ

11.45 AM: ಚಲನ ಚಿತ್ರ

ಚಲನ ಚಿತ್ರ : ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್

(ಇಂಗ್ಲಿಷ್) 112 ನಿಮಿಷಗಳು
ನಿರ್ದೇಶಕ : ಜಎಲಿಜಾ ಮೋಷಿನ್‌ಸ್ಕಿ
ಸ್ಥಳ : ಶ್ರೀರಂಗ, ರಂಗಾಯಣ
ಹೆಚ್ಚಿನ ವಿವರಗಳಿಗಾಗಿ

03.45 PM : ಚಲನ ಚಿತ್ರ

ಚಲನ ಚಿತ್ರ : ಅಂಗೂರ್

(ಹಿಂದಿ) 141 ನಿಮಿಷಗಳು
ನಿರ್ದೇಶಕ : ಗುಲ್ಜಾರ್
ಸ್ಥಳ : ಶ್ರೀರಂಗ, ರಂಗಾಯಣ
ಹೆಚ್ಚಿನ ವಿವರಗಳಿಗಾಗಿ

04.00 PM: ನಾಟಕ

ನಾಟಕ : ಹಸಿವು ಕನಸು

(ಕನ್ನಡ)
ರಚನೆ: ದು. ಸರಸ್ವತಿ ಮತ್ತು ದೀಪಕ್ ಶ್ರೀನಿವಾಸನ್
ನಿರ್ದೇಶನ : ದೀಪಕ್ ಶ್ರೀನಿವಾಸನ್
ತಂಡ: ಪ್ರಕೃತಿ ಕಲಾ ತಂಡ ಮತ್ತು ರಂಗ ನಿರಂತರ ತಂಡ, ಬೆಂಗಳೂರು
ಸ್ಥಳ : ಭೂಮಿಗೀತ ರಂಗಮಂದಿರ
ಹೆಚ್ಚಿನ ವಿವರಗಳಿಗಾಗಿ

5-30 PM

ಬೀದಿ ನಾಟಕ

ಸ್ಥಳ : ವನರಂಗ
ರಂಗತಂಡ-ಏಕತಾರಿ

07.00 PM: ನಾಟಕ

ನಾಟಕ : ಕಸುಮಾಲ್ ಸಪ್ನೋ

(ರಾಜಸ್ಥಾನಿ)
ರೂಪಾಂತರ : ಇಪ್ಸಿತ ಚಕ್ರವರ್ತಿ ಸಿಂಗ್
ನಿರ್ದೇಶನ : ಅಜೀತ್ ಸಿಂಗ್ ಪಾಲವತ್
ತಂಡ: ಉಜಾಗರ್ ಡ್ರಾಮಾಟಿಕ್ ಅಸೋಸಿಯೇಷನ್, ಜೈಪುರ್
ಸ್ಥಳ : ಕಲಾಮಂದಿರ
ಹೆಚ್ಚಿನ ವಿವರಗಳಿಗಾಗಿ

ಜನಪದ ಉತ್ಸವ

ಹಾಲಕ್ಕಿ ಸುಗ್ಗಿ ಕುಣಿತ ಶ್ರೀ ಲಕ್ಷ್ಮಣ್ ಮತ್ತು ತಂಡ ಹೊನ್ನಾವರ ತಾ. ಉತ್ತರ ಕನ್ನಡ ಜಿಲ್ಲೆ.
ಗೊಂದಲಿಗರ ಮೇಳ ಶ್ರೀ ವೆಂಕಪ್ಪ ಅಂಬಾಜಿ ಸುಗತೇಕರ ನವನಗರ, ಬಾಗಲಕೋಟೆ ಜಿಲ್ಲೆ.
ತಾಸಾರಾ ರಂಡೋಲ್ ಶ್ರೀ ಹೆಚ್.ವಿ. ಶಿಕಾರಿ ರಾಮು ಮತ್ತು ತಂಡ ಕಂಪ್ಲಿ, ಬಳ್ಳಾರಿ ಜಿಲ್ಲೆ.
ಕಂಸಾಳೆ ಶ್ರೀ ಮಹದೇವ ಮತ್ತು ತಂಡ ಮೈಸೂರು ಜಿಲ್ಲೆ .
ಜನಪದ ಗಾಯನ ಶ್ರೀ ಡಿ.ಆರ್. ರಾಜಪ್ಪ ಕೋಲಾರ ಜಿಲ್ಲೆ .

17th ಜನವರಿ 2015 ಕಾರ್ಯಕ್ರಮದ ವಿವರಗಳು

10.30 AM: ಚಲನ ಚಿತ್ರ

ಚಲನ ಚಿತ್ರ : ಶೇಕ್‌ಸ್ಪಿಯರ್ ಅನ್‌ಕವರ್‍ಡ್ – ಹ್ಯಾಮ್ಲೆಟ್

(ಇಂಗ್ಲಿಷ್) 59 ನಿಮಿಷಗಳು
ನಿರ್ದೇಶಕ : ರಿಚರ್ಡ್ ಡೆಂಟನ್
ಸ್ಥಳ : ಶ್ರೀರಂಗ, ರಂಗಾಯಣ
ಹೆಚ್ಚಿನ ವಿವರಗಳಿಗಾಗಿ

10.30 AM: ಉದ್ಘಾಟನಾ ಸಮಾರಂಭ

ರಾಷ್ಟ್ರೀಯ ವಿಚಾರ ಸಂಕಿರಣ

ಆವರಣ : ಕಲಾಮಂದಿರದ ಮಿನಿ ಥಿಯೇಟರ್
ಆರಂಭ ಗೀತೆ : ಚಿಂತನ್ ವಿಕಾಸ್
ಖ್ಯಾತ ಗಾಯಕರು, ಬೆಂಗಳೂರು
ಪ್ರಾಸ್ಥಾವಿಕ ನುಡಿ : ಶ್ರೀ ಹೆಚ್. ಜನಾರ್ಧನ್
ನಿರ್ದೇಶಕರು, ರಂಗಾಯಣ, ಮೈಸೂರು
ಆಶಯ ನುಡಿ : ಪ್ರೋ. ರಾಜೇಂದ್ರ ಚೆನ್ನಿ
ಚಿಂತಕರು ಹಾಗೂ ವಿಮರ್ಶಕರು, ಶಿವಮೊಗ್ಗ
ಅಧ್ಯಕ್ಷತೆ : ಪ್ರೋ. ಜಿ.ಕೆ. ಗೋವಿಂದರಾವ್
ಚಿಂತಕರು, ನಟರು, ರಂಗಸಮಾಜದ ಸದಸ್ಯರು, ಬೆಂಗಳೂರು

11.45 AM: ಚಲನ ಚಿತ್ರ

ಚಲನ ಚಿತ್ರ : ರೋಮಿಯೋ & ಜ್ಯೂಲಿಯಟ್

(ಇಂಗ್ಲಿಷ್) 168 ನಿಮಿಷಗಳು
ನಿರ್ದೇಶಕ : ಆಲ್ವಿನ್ ಆಲ್ವಿನ್ ರ್ರಾ‍ಕಾಪ್
ಸ್ಥಳ : ಶ್ರೀರಂಗ, ರಂಗಾಯಣ
ಹೆಚ್ಚಿನ ವಿವರಗಳಿಗಾಗಿ

12.10 PM: ಗೋಷ್ಠಿ : 1

ವಿಷಯ : ಶೇಕ್‌ಸ್ಪಿಯರ್‍ : ಸೃಜನಶೀಲ ಅನುಸಂಧಾನ

ನಾಟಕಕಾರನ ನೋಟ : ಶ್ರೀ ಪ್ರಸನ್ನ
ನಾಟಕಕಾರರು ಹಾಗೂ ನಿರ್ದೇಶಕರು, ಹೆಗ್ಗೋಡು
ರಂಗನೋಟ : ಪ್ರೋ. ಎಸ್.ಆರ್‍. ರಮೇಶ್
ರಂಗ ನಿರ್ದೇಶಕರು, ಮೈಸೂರು
ನಟನ ನೋಟ : ಶ್ರೀ ಋತ್ವಿಕ್ ಸಿಂಹ
ನಟರು ಹಾಗೂ ನಿರ್ದೇಶಕರು, ಬೆಂಗಳೂರು
ನಟಿಯ ನೋಟ : ಶ್ರೀಮತಿ ಕೆ. ಆರ್‍. ನಂದಿನಿ
ರಂಗಾಯಣದ ಹಿರಿಯ ಕಲಾವಿದರು, ಮೈಸೂರು.

12.30 PM: ಗೋಷ್ಠಿ : 2

ವಿಷಯ : ಶೇಕ್‌ಸ್ಪಿಯರ್‍ ನಾಟಕಗಳಲ್ಲಿ ಪ್ರಭುತ್ವ ಮತ್ತು ರಾಜಕಾರಣ

ಮಂಡನೆ : ಪ್ರೋ. ಓ.ಎಲ್. ನಾಗಭೂಷಣಸ್ವಾಮಿ
ಚಿಂತಕರು ಹಾಗೂ ವಿಮರ್ಶಕರು ಬೆಂಗಳೂರು
ವಿಷಯ : ಶೇಕ್ಸ್ಪಿಯರ್ ನಾಟಕಗಳಲ್ಲಿ ಸ್ತ್ರೀಲೋಕ

03.45 PM : ಚಲನ ಚಿತ್ರ

ಚಲನ ಚಿತ್ರ : ಉಲ್ಟಾ ಪಲ್ಟಾ

(ಕನ್ನಡ) 138 ನಿಮಿಷಗಳು
ನಿರ್ದೇಶಕ : ಎನ್.ಎಸ್. ಶಂಕರ್
ಸ್ಥಳ : ಶ್ರೀರಂಗ, ರಂಗಾಯಣ
ಹೆಚ್ಚಿನ ವಿವರಗಳಿಗಾಗಿ

04.00 PM: ನಾಟಕ

ನಾಟಕ : ನಮ್ಮ ಸಂಸಾರ

(ಕನ್ನಡ)
ರಚನೆ: ರಘುನಂದನ ಮತ್ತು ಓಂ ಚೆರಿ ನಾರಾಯಣ ಪಿಳ್ಳೆ
ವಿನ್ಯಾಸ / ನಿರ್ದೇಶನ : ರಘುನಂದನ
ತಂಡ : ನೀನಾಸಂ , ಹೆಗ್ಗೋಡು
ಸ್ಥಳ : ಭೂಮಿಗೀತ ರಂಗಮಂದಿರ
ಹೆಚ್ಚಿನ ವಿವರಗಳಿಗಾಗಿ

5-30 PM

ಬೀದಿ ನಾಟಕ

ಸ್ಥಳ : ವನರಂಗ
ರಂಗತಂಡ – ರಂಗಸಂಗಮ

07.00 PM: ನಾಟಕ

ನಾಟಕ : ಫಾಲ್ ಆಫ್ ಎ ಕಿಂಗ್

ಶೇಕ್ಸ್ಪಿಯರ್ನ ಕಿಂಗ್ಲಿಯರ್ ಆಧಾರಿತ ಬುರ್ಹಾ ಮನೋಹಾ ಬಾಬೆ ದೇಶ್ನಾಯ್
(ಅಸ್ಸಾಮಿ)
ನಿರ್ದೇಶನ : ಪಲಾಷ್ ಪ್ರೊತಿಮ್ ಮೆಕ್
ತಂಡ: ಓಮ್ನಿ ಫ್ಲೇಮ್ ದಿ ಆರ್ಟ್ ಸೊಸೈಟಿ, ದಿಬ್ರುಗರ್, ಅಸ್ಸಾಂ
ಸ್ಥಳ : ಕಲಾಮಂದಿರ
ಹೆಚ್ಚಿನ ವಿವರಗಳಿಗಾಗಿ

18th ಜನವರಿ 2015 ಕಾರ್ಯಕ್ರಮದ ವಿವರಗಳು

10.30 AM: ಚಲನ ಚಿತ್ರ

ಚಲನ ಚಿತ್ರ : ಶೇಕ್‌ಸ್ಪಿಯರ್ ಇನ್ ಕಾಬೂಲ್

(ಇಂಗ್ಲಿಷ್) 45 ನಿಮಿಷಗಳು
ಹ್ಯಾರಿಯಟ್ ಷಾಕ್ರಾಸ್
ಸ್ಥಳ : ಶ್ರೀರಂಗ, ರಂಗಾಯಣ
ಹೆಚ್ಚಿನ ವಿವರಗಳಿಗಾಗಿ

10.30 AM: ಗೋಷ್ಠಿ : 3

ವಿಷಯ : ಶಶೇಕ್ಸ್ಪಿಯರ್ ಕನ್ನಡೀಕರಣ

ಮಂಡನೆ : ಪ್ರೊ. ಕೆ.ಎಸ್. ಭಗವಾನ್
ಸಂಸ್ಕೃತಿ ಚಿಂತಕರು, ಮೈಸೂರು

ವಿಷಯ : ಶಶೇಕ್ಸ್ಪಿಯರ್ ಮತ್ತು ಸಿನಿಮಾ

ಮಂಡನೆ : ಶ್ರೀ ಬಿ. ಸುರೇಶ್
ರಂಗಭೂಮಿ ಹಾಗೂ ಚಲನಚಿತ್ರ ನಿರ್ದೇಶಕರು, ಬೆಂಗಳೂರು.

11.45 AM: ಚಲನ ಚಿತ್ರ

ಚಲನ ಚಿತ್ರ : ಶೇಕ್‌ಸ್ಪಿಯರ್ ವಾಲಾ

(ಇಂಗ್ಲಿಷ್) 118 ನಿಮಿಷಗಳು
ನಿರ್ದೇಶಕ : ಮರ್ಚೆಂಟ್ ಐವರಿ
ಸ್ಥಳ : ಶ್ರೀರಂಗ, ರಂಗಾಯಣ
ಹೆಚ್ಚಿನ ವಿವರಗಳಿಗಾಗಿ

11.45 PM: ಗೋಷ್ಠಿ : 4

ವಿಷಯ : ಶೇಕ್ಸ್ಪಿಯರ್ ನಾಟಕಗಳ ಸಮಕಾಲೀನ ಓದು

ಮಂಡನೆ : ಶ್ರೀಮತಿ ಸುಮಾ ಎಂಬಾರ್
ವಿಮರ್ಶಕರು, ಮೈಸೂರು.
ಪ್ರೊ. ಸಿ. ನಾಗಣ್ಣ
ಲೇಖಕರು, ಮೈಸೂರು.

2.00 PM: ಸಂವಾದ ಗೋಷ್ಟಿ

ವಿಷಯ : ಶೇಕ್ಸ್ಪಿಯರ್ ಮತ್ತು ಕನ್ನಡ ಸಂಸ್ಕೃತಿ

ಸಂವಾದ ಚಾಲನೆ : ಡಾ. ನಟರಾಜ್ ಹುಳಿಯಾರ್
ಲೇಖಕರು, ಬೆಂಗಳೂರು.
ಸಂವಾದದಲ್ಲಿ
ಡಾ. ಕೆ.ಸಿ. ಶಿವಾರೆಡ್ಡಿ, ತೀರ್ಥಹಳ್ಳಿ.
ಶ್ರೀ ಶ್ರೀನಿವಾಸ ಪ್ರಭು, ಬೆಂಗಳೂರು.
ಶ್ರೀ ನಟರಾಜ್ ಹೊನ್ನವಳ್ಳಿ, ಸಾಣೇಹಳ್ಳಿ.
ಶ್ರೀ ಗುಡಿಹಳ್ಳಿ ನಾಗರಾಜ್, ಬೆಂಗಳೂರು.
ಶ್ರೀ ಶ್ರೀಪಾದಭಟ್, ಶಿರಸಿ.
ಪ್ರೊ. ಬಾಲಾಜಿ, ಮೈಸೂರು.
ಶ್ರೀ ಗಣೇಶ್ ಹೆಗ್ಗೋಡು
ಶ್ರೀ ಹೆಚ್.ಎಸ್. ಉಮೇಶ್, ಮೈಸೂರು

03.45 PM : ಚಲನ ಚಿತ್ರ

ಚಲನ ಚಿತ್ರ : ಬಹದ್ದೂರ್ ಗಂಡು

(ಕನ್ನಡ) 144 ನಿಮಿಷಗಳು
ನಿರ್ದೇಶಕ : ಎ.ವಿ. ಶೇಷಗಿರಿ ರಾವ್
ಸ್ಥಳ : ಶ್ರೀರಂಗ, ರಂಗಾಯಣ
ಹೆಚ್ಚಿನ ವಿವರಗಳಿಗಾಗಿ

04.00 PM: ನಾಟಕ

ನಾಟಕ : ಶೇಕ್ಸ್ಪಿಯರ್ ಮನೆಗೆ ಬಂದ

(ಕನ್ನಡ)
ರಚನೆ: ಡಾ. ನಟರಾಜ್ ಹುಳಿಯಾರ್
ನಿರ್ದೇಶನ : ನಟರಾಜ್ ಹೊನ್ನವಳ್ಳಿ
ತಂಡ: ಥಿಯೇಟರ್ ತತ್ಕಾಲ್, ಬೆಂಗಳೂರು.
ಸ್ಥಳ : ಭೂಮಿಗೀತ ರಂಗಮಂದಿರ
ಹೆಚ್ಚಿನ ವಿವರಗಳಿಗಾಗಿ

4.15 PM: ವಿಚಾರ ಸಂಕಿರಣ ಸಮಾರೋಪ

ಸಮಾರೋಪ ನುಡಿ : ನಮ್ಮ ಶೇಕ್ಸ್ಪಿಯರ್

ಸಮಾರೋಪ ನುಡಿ: ನಮ್ಮ ಶೇಕ್ಸ್ಪಿಯರ್
ಪ್ರೊ. ಹೆಚ್.ಎಸ್. ಶಿವಪ್ರಕಾಶ್
ಕವಿ ಹಾಗೂ ನಾಟಕಕಾರರು, ನವದೆಹಲಿ
ಸಂಚಾಲಕರು: ಶ್ರೀ ಎಂ.ಸಿ. ಕೃಷ್ಣಪ್ರಸಾದ್ ಮತ್ತು ಶ್ರೀ ಪ್ರಶಾಂತ್ ಹಿರೇಮಠ್
ಸಂಯೋಜನೆ – ಮಾರ್ಗದರ್ಶನ : ಡಾ. ನಟರಾಜ್ ಹುಳಿಯಾರ್

5.00 PM: ಸಮಾರೋಪ ಸಮಾರಂಭ

ಸ್ಥಳ : ವನರಂಗ
ಸಮಾರೋಪ ನುಡಿ :
ಶ್ರೀಮತಿ ಅರುಂಧತಿ ನಾಗ್
ಖ್ಯಾತ ರಂಗಭೂಮಿ ಹಾಗೂ ಚಲನಚಿತ್ರ ನಟಿ, ಬೆಂಗಳೂರು.
ಮುಖ್ಯ ಅತಿಥಿಗಳು : ಡಾ. ಎನ್. ನಾಗಾಂಬಿಕಾದೇವಿ ಭಾ.ಆ.ಸೇ
ಮಾನ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು.
ಅಧ್ಯಕ್ಷತೆ : ಶ್ರೀ ಹೆಚ್. ಜನಾರ್ದನ್ (ಜನ್ನಿ)
ನಿರ್ದೇಶಕರು, ರಂಗಾಯಣ, ಮೈಸೂರು.

5-30 PM

ಬೀದಿ ನಾಟಕ

ಸ್ಥಳ : ವನರಂಗ
ರಂಗತಂಡ – ನೆಲೆ ಹಿನ್ನೆಲೆ

07.00 PM: ನಾಟಕ

ನಾಟಕ : ಧಾಂ ಧೂಂ ಸುಂಟರಗಾಳಿ

ಶೇಕ್ಸ್ಪಿಯರ್ ಮಹಾಕವಿಯ ದ ಟೆಂಪೆಸ್ಟ್ ಆಧಾರಿತ
(ಕನ್ನಡ)
ಕನ್ನಡಕ್ಕೆ : ವೈದೇಹಿ
ನಿರ್ದೇಶನ : ಜೀವನರಾಂ, ಸುಳ್ಯ
ತಂಡ: ನಟನ, ಮೈಸೂರು
ಸ್ಥಳ : ಕಲಾಮಂದಿರ
ಹೆಚ್ಚಿನ ವಿವರಗಳಿಗಾಗಿ

ಇಡೀ ದಿನದ ಕಾರ್ಯಕ್ರಮಗಳು

posters ಭಿತ್ತಿಚಿತ್ರ ಪ್ರದರ್ಶನ
crafts

ಕರಕುಶಲ ವಸ್ತುಪ್ರದರ್ಶನ ಹಾಗೂ ಮಾರಾಟ
booksಪುಸ್ತಕ ಪ್ರದರ್ಶನ ಹಾಗೂ ಮಾರಾಟ