ನವರಾತ್ರಿ ರಂಗೋತ್ಸವ 2016

 

ಮೈಸೂರು ವಿಶ್ವವಿಖ್ಯಾತ ಪಾರಂಪರಿಕ ದಸರಾ ಹಬ್ಬ ನಮ್ಮ ಜನರ ನಾಡಹಬ್ಬ. ಗ್ರಾಮೀಣ ಸಂಸ್ಕೃತಿಯ ಒಡಲಾಳದ ನಮ್ಮ ಹಬ್ಬ, ಉತ್ಸವ, ಆಚರಣೆಗಳು ಜನ ಸಾಮಾನ್ಯರ ದುಃಖ ದುಮ್ಮಾನಗಳ ನಿವಾರಣೆಯತ್ತ ಆತ್ಮಬಲವನ್ನು ತುಂಬುವ ಬದುಕಿನ ಹಾದಿಗೆ ವಿಶ್ವಾಸ ಮೂಡಿಸುವ ನಂಬಿಕೆಯನ್ನು ಸದೃಢಗೊಳಿಸುವ ಸಂಸ್ಕೃತಿಯಲ್ಲಿ ಬೆಳೆದಿದೆ. ಈ ಹಾದಿಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಮೈಸೂರು ರಂಗಾಯಣದಲ್ಲಿ ಜಿಲ್ಲಾಡಳಿತದ ಸಹಕಾರದೊಂದಿಗೆ ಆಡಂಭರವಿಲ್ಲದ ಪ್ರಕೃತಿ ಸಂರಕ್ಷಣೆಯ ಸಂದೇಶದಡಿಯಲ್ಲಿ ಹಸಿರು ದಸರಾವನ್ನು ಆಚರಿಸುವುದರ ಮೂಲಕ ಪ್ರಸ್ತುತ ಜನರನ್ನು ಕಾಡುತ್ತಿರುವ ನೀರಿನ ಸಮಸ್ಯೆ ಬಗೆಹರಿಯಬೇಕು. ಸಮೃದ್ಧ ಮಳೆಯಾಗಬೇಕು. ಫಲವತ್ತಾದ ಬೆಳೆಯಾಗಬೇಕು ಅದಕ್ಕಾಗಿ ನಾವೆಲ್ಲಾ ಐಕ್ಯತಾ ಭಾವದಿಂದ ಪ್ರಕೃತಿ ಸಂರಕ್ಷಣೆ ಮಾಡಬೇಕು. ಬದುಕಿನುದ್ದಕ್ಕೂ ಹಸಿರು ಮಾನವನ ಉಸಿರಾಗಿ ಸಮಾನತೆ, ಭಾವೈಕ್ಯತೆಯತ್ತ ಸಮಾಜ ಸದೃಢಗೊಳ್ಳಬೇಕೆಂಬ ಆಶಯ ಹೊತ್ತ ರಂಗಾಯಣವು ಈ ಬಾರಿ ವಿಶೇಷವಾಗಿ ಯುವಜನ ವಿದ್ಯಾರ್ಥಿಗಳಲ್ಲಿ ಪ್ರಾಕೃತಿಕ ಮನೋಭಾವ ಬೆಳೆಸಲೋಸುಗ ಅವರಿಗೆಂದೇ ಸಿದ್ಧಗೊಳಿಸಿದ ಅರ್ಥಪೂರ್ಣವಾದ ಹಸಿರು ದಸರಾ ರಂಗೋತ್ಸವವನ್ನು ಆಯೋಜಿಸಲಾಗಿದೆ.

ಮಂಡ್ಯ ಜಿಲ್ಲೆಯೂ ಸೇರಿದಂತೆ, ಮೈಸೂರು ಜಿಲ್ಲೆಯ, ಹುಣಸೂರು, ಟಿ. ನರಸೀಪುರ ಸೇರಿ ೧೧ ಕಾಲೇಜುಗಳ ಸುಮಾರು ೫೦೦ ಜನ ಯುವ ಕಲಾವಿದರು ತಮ್ಮ ಕಾಲೇಜಿನಲ್ಲಿ ರಂಗಾಯಣವು ನಡೆಸಿದ ಒಂದು ತಿಂಗಳ ರಂಗ ತರಬೇತಿ ಶಿಬಿರದಲ್ಲಿ ಭಾಗವಹಿಸಿ, ಸಿದ್ಧಪಡಿಸಿದ ನಾಟಕಗಳು ೨೦೧೬ ಸೆಪ್ಟೆಂಬರ್ ೨೮ ರಿಂದ ಅಕ್ಟೋಬರ್ ೧೦ ರವರೆಗೆ ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿವೆ.

೨೦೧೬ ಸೆಪ್ಟೆಂಬರ್ ೨೮ ರಂದು ಸಂಜೆ ೫.೩೦ಕ್ಕೆ ರಂಗಾಯಣದ ’ಬಿದಿರಂಗ’ ವೇದಿಕೆಯಲ್ಲಿ ’ಶೂನ್ಯ’ ತಂಡದವರಿಂದ ಐಕ್ಯತೆ ಎಂಬ ಸೃಜನಶೀಲ ಸಂಗೀತ ಕಾರ್ಯಕ್ರಮಕ್ಕೆ ನಮ್ಮ ನಾಡು ಕಂಡ ಹಿರಿಯ ರಂಗ ನಿರ್ದೇಶಕರಾದ ಶ್ರೀ ಪ್ರಸನ್ನ ರವರು ಚಾಲನೆ ನೀಡುವುದರ ಮೂಲಕ ರಂಗೋತ್ಸವ ಪ್ರಾರಂಭವಾಗುತ್ತದೆ. ದಿನಾಂಕ:೦೧-೧೦-೨೦೧೬ ರಂದು ವಿದ್ಯುಕ್ತವಾಗಿ ದಸರಾ ರಂಗೋತ್ಸವ ಗಣ್ಯರಿಂದ ಮಧ್ಯಾಹ್ನ ೪.೦೦ ಗಂಟೆಗೆ ಉದ್ಘಾಟನೆಗೊಳ್ಳಲಿದೆ. ನಂತರ ಪ್ರತಿದಿನ ಸಂಜೆ ೬.೩೦ಕ್ಕೆ ರಂಗಾಯಣದ ಮಹತ್ವದ ೨ ನಾಟಕಗಳನ್ನೊಳಗೊಂಡಂತೆ ಪ್ರದರ್ಶನಗಳು ನಡೆಯುತ್ತವೆ. ಹಸಿರು ದಸರಾ ಸಾಂಸ್ಕೃತಿಕವಾಗಿ ಜನಾಕರ್ಷಣೆಯಿಂದ ಕಂಗೊಳಿಸುವಂತೆ ರಂಗಾಯಣದ ಆವರಣ ಸಜ್ಜುಗೊಂಡಿದ್ದು, ಸೃಜನಾತ್ಮಕ ವಿನ್ಯಾಸದೊಂದಿಗೆ ಸಿದ್ದಗೊಂಡಿದೆ. ಇದಕ್ಕೆ ಪೂರಕವಾಗಿ ವಿವಿಧ ಮಹತ್ವದ ವಸ್ತುಪ್ರದರ್ಶನಗಳನ್ನು ಏರ್ಪಡಿಸಿದ್ದು, ರಂಗಾಯಣದ ’ಕುಟೀರ’ದಲ್ಲಿ ಪಾರಂಪರಿಕ ದೀಪಗಳ ಪ್ರದರ್ಶನ, ಶ್ರೀರಂಗದಲ್ಲಿ ’ಗೊಂಬೆಗಳ ಪ್ರದರ್ಶನ’ ಲಂಕೇಶ್ ಗ್ಯಾಲರಿಯಲ್ಲಿ ಬುಡಕಟ್ಟು ಜನರ ಸಂಸ್ಕೃತಿಯನ್ನು ಬಿಂಬಿಸುವ ಭಿತ್ತಿಚಿತ್ರ ಪ್ರದರ್ಶನ ಹಾಗೂ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ಸಹಯೋಗದೊಂದಿಗೆ ಪ್ರತಿದಿನ ಪ್ರಬುದ್ಧವಾದ ಜನಪದ ತಂಡಗಳಿಂದ ನೃತ್ಯಗಳನ್ನು ನಾಡಹಬ್ಬದ ಪ್ರಯುಕ್ತ ಜನರಿಗಾಗಿ ಆಯೋಜಿಸಲಾಗಿದೆ. ಹಸಿರು ದಸರಾ ಜನರ ಸುಖಕರ ಬದುಕು ಸಮೃದ್ಧಿ ನೀಡಲೆಂಬ ಆಶಯದಿಂದ ರಂಗಾಯಣ ಈ ಎಲ್ಲಾ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುತ್ತಿದೆ.

ದಸರಾ 2016 ನಾಟಕೋತ್ಸವ

2016  ಸೆಪ್ಟೆಂಬರ್ 28 ರಿಂದ ‌ಅಕ್ಟೋಬರ್ ೧೦ ರವರೆಗೆ 

28 ಸೆಪ್ಟೆಂಬರ್‍ 2016

ಅಜ್ಞಾತ ಕನಸುತಗಳು

ಮಹಾಜನ ಪದವಿ ಕಾಲೇಜು

ನಿರ್ದೇಶನ : ಶ್ರೀ ಕಾರ್ತಿಕ್ ಎಸ್

29 ಸೆಪ್ಟೆಂಬರ್‍ 2016

ಸ್ರೀ ಎಂದರೆ ಅಷ್ಟೇಸಾಕೇ

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹುಣಸೂರು

ನಿರ್ದೇಶನ : ಕುಮಾರಿ ಶಿಲ್ಪಾ ಎಸ್

30 ಸೆಪ್ಟೆಂಬರ್ 2016

ಗೆಜ್ಜೆಲಟ್ಟಿ

ಪಿ.ಆರ್.ಎಂ.ವಿಜಯಾ ಪ್ರಥಮ ಕಾಲೇಜು, ಟಿ. ನರಸಿಪುರ

ನಿರ್ದೇಶನ : ಶ್ರೀ ಶಿವು ಯಾಚನಹಳ್ಳಿ

01 ಅಕ್ಟೋಬರ್‍ 2016

ಮಹಾಮಾಯಿ

ರಂಗಾಯಣ

ನಿರ್ದೇಶನ :ಶ್ರೀ ಹೆಚ್. ಜನಾರ್ಧನ್ (ಜನ್ನಿ)  

02 ಅಕ್ಟೋಬರ್‍ 2016

ಧನ್ವತಂರಿ ಚಿಕಿತ್ಸೆ

ನಟರಾಜ ಪದವಿ ಪೂರ್ವ ಮಹಿಳಾ ಕಾಲೇಜು ನಿರ್ದೇಶನ : ಶ್ರೀ ಪ್ರವೀಣ ಬೆಳ್ಳಿ

 03 ಅಕ್ಟೋಬರ್‍ 2016

ಕುರುಡು ಕಾಂಚಾಣ

ಸರಕಾರಿ ಪ್ರಥಮ ದರ್ಜೆ ಕಾಲೇಜು ಬಿಳಿಕೆರೆ

ನಿರ್ದೇಶನ : ಶ್ರೀ ಶ್ರೀಕಾಂತ, ಶ್ರೀ ವಿನೋದ ಹೀರೆಮಠ

 04 ಅಕ್ಟೋಬರ್‍ 2016

ಬೆಂದ ಕಾಳು ಆನ್ ಟೋಸ್ಟ್

ಸೆಂಟ್ ಫಿಲೋಮಿನಾ ಪದವಿ ಕಾಲೇಜು

ನಿರ್ದೇಶನ : ಶ್ರೀ ಅಮಿತ್ ಜೆ. ರೆಡ್ಡಿ

 05 ಅಕ್ಟೋಬರ್‍ 2016

ಗೊಂಬೆ ರಾವಣ

ಟ್ಯಾಲೆಂಟ್ ಎಜುಕೇಷನ್ ಟ್ರಷ್ಟ, ಹುಣಸೂರು

ನಿರ್ದೇಶನ : ಶ್ರೀ ಕಾರ್ತಿಕ್ ಉಪಮನ್ಯು

 06 ಅಕ್ಟೋಬರ್‍ 2016

ಗಿರಿಜಾ ಕಲ್ಯಾಣ

ಬಾಸುದೇವ ಸೋಮಾನಿ ಪದವಿ ಕಾಲೇಜು

ನಿರ್ದೇಶನ : ಶ್ರೀ ವಿಕಾಸ ಚಂದ್ರ

07 ಅಕ್ಟೋಬರ್‍ 2016

ಕಳ್ಳರ ಸಂತೆ

ಪಿ.ಇ.ಎಸ್ ಪದವಿ ಕಾಲೇಜು, ಮಂಡ್ಯ

ನಿರ್ದೇಶನ : ಶ್ರೀ ರವಿಕುಮಾರ ಕೆ

 

 08 ಅಕ್ಟೋಬರ್‍ 2016

ಬಿಟ್ಟ ಪಯಣವ ಬಿಡದೆ

ಎಂ.ಎಂ.ಕೆ. ಮತ್ತು ಎಸ್.ಡಿ.ಎಂ ಮಹಿಳಾ ಮಹಾಸಭಾ

ನಿರ್ದೇಶನ : ಶ್ರೀ ವಿಕ್ರಮ್ ಜಿ. ಟಿ  

 

 09 ಅಕ್ಟೋಬರ್‍ 2016

ಸೆವಂತಿಗೆ ಪ್ರಸಂಗ

ಅರಸು ಪ್ರಥಮ ದರ್ಜೆ  ಕಾಲೇಜು, ಹುಣಸೂರು

ನಿರ್ದೇಶನ : ಶ್ರೀ ಶರತ್ ಎಸ್.  

 

 

10 ಅಕ್ಟೋಬರ್‍ 2016

ಕತ್ತಲೆ ಬೆಳಕು

ರಂಗಾಯಣ

ನಿರ್ದೇಶನ : ಶ್ರೀ ಬಿ.ವಿ.ಕಾರಂತ

 

ಸಾಧಕರಿಗೆ ಸನ್ಮಾನ ಸಮಾರಂಭ

ಶ್ರೀ ಎಚ್.ಎಂ. ರಂಗಯ್ಯ, ತುಮಕೂರು300-X-200ನಟ, ನಿರ್ದೇಶಕ, ರಂಗ ಸಂಘಟಕರು

ಶ್ರೀಮತಿ ಎಸ್. ಮಾಲತಿ, ಸಾಗರ300-X-200ನಿರ್ದೇಶನ, ನಟನೆ

08-10-2016

ಶ್ರೀ ಅಬ್ದುಲ್,

ಹೊಸಪೇಟೆ

ರಂಗ ಸಂಘಟಕರು

09-10-2016

ಶ್ರೀ ಕೃಷ್ಣಮೂರ್ತಿ,

ಅಜ್ಜಂಪುರ

ಪತ್ರಿಕೆ ಸಂಗ್ರಹ, ರಂಗಭೂಮಿ

10-10-2016

 

ಶ್ರೀಮತಿ ಶೀಲಾಸ್ವಾಮಿ,

ಮೈಸೂರು

ರಂಗ ನಟಿ