
ಶ್ರೀ ಎ.ಕೆ. ಚೇತನ್ ಮತ್ತು ಶ್ರೀಮತಿ ಲತಾ
ಇವರ ಕೃಷಿ ಕುಶಲತೆಯನ್ನು ಕಂಡು ದಕ್ಷಿಣ ಆಫ್ರಿಕಾದ ರೂವಾಂಡ ದೇಶವು ಮೊದಲಿಗೆ ೫೦ ಎಕರೆ ಜಮೀನಿನಲ್ಲಿ ಭತ್ತ ಬೆಳೆಯಲು ಆಹ್ವಾನ ನೀಡಿ, ಅದರಲ್ಲಿ ಇವರು ಸಾಧಿಸಿದ ಯಶಸ್ಸನ್ನು ಕಂಡು ಈಗ ೩೫೦ ಎಕರೆ ಜಮೀನನ್ನು ನೀಡಿ ಭತ್ತ ಬೆಳೆಯಲು ಪ್ರೇರೇಪಿಸಿತು. ಹೊರ ದೇಶಗಳಿಂದ ಅಪಾರವಾದ ಹಣ ತೆತ್ತು, ರಾಸಾಯನಿಕ ಗೊಬ್ಬರಗಳನ್ನು ಆಮದು ಮಾಡಿಕೊಂಡು ಬೆಳೆ ಬೆಳೆಯುತ್ತಿದ್ದ ರೂವಾಂಡ ದೇಶದ ರೈತರ ಪಾಲಿಗೆ ಚೇತನ್ರ ಜೀವಾಮೃತ ಅಮೃತವಾಗಿದೆ.
ಪ್ರಸ್ತುತ ಈ ವರ್ಷ ಮತ್ತೂ ೩೫೦ ಎಕರೆಗಳಲ್ಲಿ ಭತ್ತ ಬೆಳೆಯಲು ರೂವಾಂಡ ದೇಶವು ಎ.ಕೆ. ಕಿರಣ್ರವರಿಗೆ ಆಹ್ವಾನ ನೀಡಿದೆ.
’ಸಾವಯವ ಕೃಷಿ, ಭೂಮಿಗೂ ಹಿತ ಮನುಷ್ಯನಿಗೂ ಸುಖ’ ಎಂದು ಬಲವಾಗಿ ನಂಬಿ ಕೃಷಿ ನಡೆಸುತ್ತಿರುವ ಪತಿಯ ಆಕಾಂಕ್ಷೆ, ಶ್ರದ್ಧೆ, ಶ್ರಮಕ್ಕೆ ಪೂರಕವಾಗಿ ಸ್ಪಂಧಿಸುತ್ತ ಬೇಸಾಯದ ಪ್ರತಿ ಹಂತದಲ್ಲೂ ಪತಿಯ ಭುಜಕ್ಕೆ ಭುಜ ಕೊಟ್ಟು ಪ್ರೋತ್ಸಾಹಿಸುತ್ತಿರುವವರು ಶ್ರೀ ಎ.ಕೆ. ಚೇತನ್ರವರ ಪತ್ನಿ ಶ್ರೀಮತಿ ಲತಾ.
ಪ್ರಸ್ತುತ ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ಅಂಗವಾಗಿ ರಂಗಾಯಣ ಆಯೋಜಿಸಿರುವ ನವರಾತ್ರಿ ರೈತೋತ್ಸವ-೨೦೧೫ರ ಕೃಷಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ದಿ: ೨೧.೧೦.೨೦೧೫ ರಂದು ಶ್ರೀ ಎ.ಕೆ. ಚೇತನ್ (ಕಿರಣ್) ಮತ್ತು ಶ್ರೀಮತಿ ಲತಾ ಕೃಷಿ ದಂಪತಿಗಳನ್ನು ಸನ್ಮಾನಿಸಿ, ಗೌರವಿಸಲು ರಂಗಾಯಣ ಹರ್ಷಿಸುತ್ತದೆ.