ನವರಾತ್ರಿ ರಂಗೋತ್ಸವ 2015

ಜಾಗತೀಕರಣದ ಭೀಕರ ಹೊಡೆತದಿಂದಾಗಿ ಭಾರತದ ಇನ್ನಿತರ ಭಾಗಗಳ ರೈತರಂತೆ ಕನ್ನಡನಾಡಿನ ರೈತರೂ ಕಂಗೆಟ್ಟಿದ್ದಾರೆ. ಅನ್ನ ಕೊಡುವ ರೈತ ಅಸಹಾಯಕನಾಗಿದ್ದಾನೆ. ಪ್ರಕೃತಿಯ ಕಣ್ಣಾಮುಚ್ಚಾಲೆಗಳ ನಡುವೆಯೂ ತನ್ನ ಕೃಷಿ ಬದುಕನ್ನು ತೂಗಿಸುತ್ತಿದ್ದ ರೈತ ಇವತ್ತು ತನ್ನ ಆಳದ ಆತ್ಮವಿಶ್ವಾಸವನ್ನು ಕಳೆದುಕೊಂಡಿದ್ದಾನೆ. ರೈತರ ಆತ್ಮಹತ್ಯೆಯ ಸರಣಿ ಕೇವಲ ರೈತರನ್ನಷ್ಟೇ ಅಲ್ಲ, ಇಡೀ ಸಮಾಜ ಹಾಗೂ ಕನ್ನಡ ಸಂಸ್ಕೃತಿಯನ್ನೇ ಹೊಸ ಬಿಕ್ಕಟ್ಟಿನ ಅಂಚಿಗೆ ತಂದು ನಿಲ್ಲಿಸಿದೆ; ಎಲ್ಲರೊಳಗೆ ಅಪಾರ ಆತಂಕವನ್ನು ಸೃಷ್ಟಿಸಿದೆ.

ಇಂಥ ಸ್ಥಿತಿಯಲ್ಲಿ ದುಃಖಿ ರೈತರ ಪರವಾಗಿ ನಿಲ್ಲುವುದು, ಅವರಿಗೆ ಸಾಂತ್ವನ ಹೇಳುವುದು, ಅವರಲ್ಲಿ ಬದುಕಿನ ಕಸುವನ್ನು ಮರಳಿ ತುಂಬುವುದು, ಅವರಿಗೆ ಇಂಬಾಗಿ ನಿಲ್ಲುವುದು ಎಲ್ಲ ಕಲಾವಿದರು, ಸಾಹಿತಿಗಳು ಹಾಗೂ ಸಂಘಟನೆಗಳ ಕರ್ತವ್ಯ ಎಂದು ರಂಗಾಯಣ ನಂಬುತ್ತದೆ. ಈ ನಿಟ್ಟಿನಲ್ಲಿ ’ರೈತರ ಕಡೆಗೆ ರಂಗಾಯಣದ ನಡಿಗೆ’-ರೈತಮುಖಿ ಜಾಥಾ ದಿನಾಂಕ:೧೩-೧೦-೨೦೧೫ ರಿಂದ ೨೧-೧೦-೨೦೧೫ ರವರೆಗೆ ಮೈಸೂರು ಜಿಲ್ಲಾಡಳಿತದ ಸಹಕಾರದೊಂದಿಗೆ ಮೈಸೂರು ಜಿಲ್ಲೆಯ ಎಲ್ಲಾ ತಾಲ್ಲೂಕಿನ ಹೋಬಳಿ ಹಾಗೂ ಗ್ರಾಮೀಣ ಭಾಗಗಳಲ್ಲಿ, ಅದರಲ್ಲೂ ಮುಖ್ಯವಾಗಿ ರೈತರು ಆತ್ಮಹತ್ಯೆಗೆ ತುತ್ತಾದ ಪ್ರದೇಶಗಳಲ್ಲಿ ರಂಗಾಯಣ ರೈತ, ದಲಿತ ಸಂಘಟನೆಗಳೊಡಗೂಡಿ ಹಾಡು, ಬೀದಿ ನಾಟಕ, ಚಿಂತನೆ, ಸಂವಾದಗಳ ಮೂಲಕ ರೈತರೊಡನೆ ಆತ್ಮೀಯವಾಗಿ ಮಾತಾಡಲಿದೆ. ಜಾಥಾದ ಭಾಗವಾಗಿ, ಪ್ರತಿದಿನ ಸಂಜೆ ರಂಗಾಯಣದ ಆವರಣದಲ್ಲಿ ಪ್ರಯೋಗಶೀಲ ಕೃಷಿಯ ವಿವಿಧ ಬಗೆಯ ವಸ್ತುಪ್ರದರ್ಶನದ ಜೊತೆಗೆ ರಂಗಾಯಣದಲ್ಲಿ ನಿರ್ಮಿಸಿರುವ ಮಾದರಿಗ್ರಾಮದ ನಡುವೆ ಇರುವ ಬಿದಿರಂಗ ವೇದಿಕೆಯಲ್ಲಿ ರೈತ ಸಾಧಕರು ಹಾಗೂ ಕೃಷಿಯಲ್ಲಿ ಹೊಸ ಹಾದಿ ಹುಡುಕುತ್ತಿರುವವರ ಕೃಷಿಪ್ರಯೋಗಶೀಲರ ಜೊತೆ ಸಂವಾದ ಹಾಗೂ ಗೌರವ ಸಮರ್ಪಣೆಯ ಕಾರ್ಯಕ್ರಮಗಳು ನಡೆಯಲಿವೆ.

ಬನ್ನಿ, ಅನ್ನ ಕೊಡುವ ರೈತರ ಬೆನ್ನಿಗೆ ನಿಲ್ಲೋಣ. ರೈತರ ಎಣೆಯಿಲ್ಲದ ದುಃಖದಲ್ಲಿ ಭಾಗಿಯಾಗೋಣ. ರೈತರಲ್ಲಿ ಆತ್ಮವಿಶ್ವಾಸ ತುಂಬೋಣ. ರೈತ ಉಳಿದರೆ ಮಾತ್ರ ದೇಶ ಉಳಿದೀತು ಎಂಬ ಸತ್ಯವನ್ನು ಎಲ್ಲೆಡೆ ಸಾರೋಣ.

 

ಗೌರವ ಸಮರ್ಪಣೆ

ಬದುಕಿನ ಬೇರೆ ಬೇರೆ ಕ್ಷೇತ್ರಗಳಲ್ಲಿ, ಸಮಾಜದ ಸ್ವಾಸ್ಥ್ಯಕ್ಕಾಗಿ ಮತ್ತು ಏಳ್ಗೆಗಾಗಿ ನಿಸ್ವಾರ್ಥದಿಂದ ಕೆಲಸಮಾಡಿದ ಒಂಭತ್ತು ಧೀಮಂತ ವ್ಯಕ್ತಿಗಳನ್ನು ನವರಾತ್ರಿ ರಂಗೋತ್ಸವದ ಒಂಭತ್ತು ದಿನಗಳಲ್ಲ್ಲಿ ಸನ್ಮಾನಿಸಲಾಗುತ್ತದೆ. ಈ ಮಹಾನುಭವರು ಪ್ರಸಿದ್ಧಿಯಿಂದ ದೂರವಿರುವ ಹಾಗೂ ಯಾವಾಗಲೂ ಸಮಾಜಸೇವೆಯೇ ಬದುಕಿನ ಪರಿಯನ್ನಾಗಿ ಹೊಂದಿದವರಾಗಿರುತ್ತಾರೆ.

 

ದಸರಾ 2015 ರೈತ ಚಿತ್ರೋತ್ಸವ

2015 ಅಕ್ಟೋಬರ್‍ ೧೩ ರಿಂದ ೨೧ ರವರೆಗೆ ರೈತರ ಕಡೆಗೆ ರಂಗಾಯಣದ ನಡಿಗೆ

13 ಅಕ್ಟೋಬರ್‍ 2015

ಚೋಮನ ದುಡಿ

ನಿರ್ದೇಶನ : ಬಿ.ವಿ.ಕಾರಂತ

14 ಅಕ್ಟೋಬರ್‍ 2015

ಭೂತಯ್ಯನ ಮಗ ಅಯ್ಯ

ನಿರ್ದೇಶನ : ಎಸ್ ಸಿದ್ದಲಿಂಗಯ್ಯ

15 ಅಕ್ಟೋಬರ್‍ 2015

ಚಂದವಳ್ಳಿಯ ತೋಟ

ನಿರ್ದೇಶನ : ಟಿ.ವಿ. ಸಿಂಗ್‌ಠಾಕೂರ್‍

16 ಅಕ್ಟೋಬರ್‍ 2015

ಬರ

ನಿರ್ದೇಶನ : ಎಂ.ಎಸ್. ಸತ್ಯು

17 ಅಕ್ಟೋಬರ್‍ 2015

ಮಾತಾಡ್‌ ಮಾತಾಡ್ ಮಲ್ಲಿಗೆ

ನಿರ್ದೇಶನ : ನಾಗತಿಹಳ್ಳಿ ಚಂದ್ರಶೇಖರ್‍

18 ಅಕ್ಟೋಬರ್‍ 2015

ಮಣ್ಣಿನ ಮಗ

ನಿರ್ದೇಶನ : ಗೀತಪ್ರಿಯ

19 ಅಕ್ಟೋಬರ್‍ 2015

ಸಂಕ್ರಾಂತಿ

ನಿರ್ದೇಶನ : ಎನ್.ಆರ್‍. ನಂಜುಡೇಗೌಡ

20 ಅಕ್ಟೋಬರ್‍ 2015

ನಮ್ಮೂರು

ನಿರ್ದೇಶನ : ಸಿ.ವಿ. ಶಿವಶಂಕರ

21 ಅಕ್ಟೋಬರ್‍ 2015

ಬಂಗಾರದ ಮನುಷ್ಯ

ನಿರ್ದೇಶನ : ಎಸ್. ಸಿದ್ದಲಿಂಗಯ್ಯ